ಬಲ್ಲವನೇ ಬಲ್ಲ ಪಾಲಕ್ ಸೊಪ್ಪಿನ ರುಚಿಯ!

healthybuddha-palak.jpghealthybuddha

ಈ ಪಾಲಾಕ್ ಸೊಪ್ಪಿನ ಸ್ಪೆಶಾಲಿಟಿ ಏನೂಂದ್ರೆ, ಇದ್ರಲ್ಲಿ ಎಲ್ಲಾ ಥರದ ತಿಂಡೀನೂ ಮಾಡ್ಬೋದು…

ಚಪಾತಿ, ರೊಟ್ಟಿ..

blogspot.palak_.jpgblogspot

ಗೊಜ್ಜು, ಪಲ್ಯ…

vimmysrecipeworld-palak.jpgvimmysrecipeworld

ಪಲಾವು

ohtastensee-palak.jpgohtastensee

ಪಾಲಾಕ್ ಪೂರಿ..

charuscuisine-palak.jpgcharuscuisine

ಪಾಲಾಕ್ ಬೋಂಡ

blogspot-palak.jpgblogspot

ಹೀಗೇ… ಎಲ್ಲಾ ಮಾಡ್ಬೋದು. ಅಕಸ್ಮಾತ್ ಯಾರಾದ್ರೂ ಮನೇಗ್ ಬರ್ತಾರೆ ಅಂತ ಸ್ಪೆಶಲ್ಲಾಗಿ ನಾರ್ತ್ ಇಂಡಿಯನ್ ಏನಾದ್ರೂ ಮಾಡ್ಬೇಕು ಅಂದ್ರೂ ಇದು ಸಕ್ಕತ್ ಸೊಪ್ಪು.

megabeth-palak.jpgmegabeth

ಇನ್ನು, ಇದು ಮೈಯ್ಯಿಗೆ ಯಾಕೆ ಒಳ್ಳೇದು ಅಂತ ನೋಡಿದ್ರೆ…

ನಂಬಿ ಬಿಡಿ, ಪಾಲಾಕ್ ಸೊಪ್ಪು ನಿಮ್ ಮಯ್ಯಲ್ಲಿರೋ ಎಲ್ಲಾ ಅಂಗಗಳಿಗೂ ಒಂದಲ್ಲಾ ಒಂದು ರೀತಿ ಒಳ್ಳೇದು ಮಾಡುತ್ತೆ.  ಹೇಗೆ ಅಂತ ಮುಂದೆ ಓದಿ:

1. ಪಾಲಾಕ್ ಸೊಪ್ಪಲ್ಲಿ "ಪ್ರೋಲೇಟ್" ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ…

drnibber-palak.jpgdrnibber

2. ಪಾಲಾಕ್ ಸೊಪ್ಪಲ್ಲಿರೋ "ಕ್ಯಾರೋಟಿನೈಡ್" ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕೊಲೆ ಮಾಡುತ್ತೆ ಅಲ್ಲದೇ ಮತ್ತೆ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರೋ ಹಾಗೆ ಮಾಡುತ್ತೆ…

abcnews-palak.jpgabcnews

3. ನಿಮ್ಮ ಅಂದವಾದ ಸೆಲ್ಫಿಯನ್ನು ಮುಖದ ಮೇಲಿನ ಮೊಡವೆ ಕೆಡಿಸುತ್ತಿದೆಯೇ? ಮುಖದ ಒಂದು ಕಡೆಗೆ ಒಂದು ಸೋಪು ಇನ್ನೊಂದು ಕಡೆಗೆ ಇನ್ನೊಂದು ಸೋಪು ಹಾಕೋದು ಬಿಡಿ, ಪಾಲಾಕ್ ತಗೊಳಿ. ಮುಖದಲ್ಲಿ ನೆರಿಗೆ ಬರೋದು, ಸುಕ್ಕಾಗೋದು ಎಲ್ಲಾ ತಡೆಯುತ್ತೆ ನಮ್ ಪಾಲಕ್ಕು.

indiatvnews-palak.jpgindiatvnews

4. ಚಿಕ್ ಚಿಕ್ ಹುಡುಗರೂ ಕನ್ನಡಕ ಹಾಕ್ಕೊಳ್ಳೋದು ನೋಡಿದ್ರೆ ಅಯ್ಯೋ ಅನ್ಸುತ್ ಅಲ್ವಾ? ನಿಮ್ ಮಕ್ಳಿಗೆ ಪಾಲಾಕ್ ಸೊಪ್ ಕೊಡಿ, ಸೈಟ್ ಪ್ರಾಬ್ಲಮ್ ಬರಲ್ಲ.

hubspot-palak.jpghubspot

5. ನರಗಳು ವೀಕಾದ್ರೆ, ಬೇರೆ ಬೇರೆ ನೋವುಗಳು ಬರುತ್ವೆ. ಚಿಕ್ಕೋರಾಗ್ಲಿ ದೊಡ್ಡೋರಾಗ್ಲಿ, ಪಾಲಾಕ್ ತಿಂದ್ರೆ ನರಗಳಿಗೆ ಶಕ್ತಿ ಬರುತ್ತೆ.

stylecraze-palak.jpgstylecraze

6. ಮೆಮೋರಿ ಪವರ್ ಜಾಸ್ತಿ ಮಾಡುವ ಶಕ್ತಿ ಪಾಲಾಕಿಗಿರುತ್ತೆ.

dumblittleman-palak.jpgdumblittleman

7. ಕೀಲು ನೋವಿಗೂ ಇರು ರಾಮಬಾಣ

drvicwellness-palak.jpgdrvicwellness

8. ನಿಮ್ ಮಯ್ಯಲ್ಲಿ ರಕ್ತ ಕಮ್ಮಿ ಇದ್ರೆ, ದಿನಾ ಪಾಲಾಕ್ ತಿಂತಾ ಬನ್ನಿ… ತಾನಾಗೆ ಸರಿಹೋಗುತ್ತೆ.

dailytech-palak.jpgdailytech

9. ಕೆಲವ್ರು ನೋಡಿ, ಮುಖದ ಚರ್ಮ ಬಿಗಿಯಾಗಿರುತ್ತೆ, ಫಳ ಫಳ ಅಂತ ಹೋಳೀತಿರ್ತಾರೆ. ಯಾಕೆ ಗೊತ್ತಾ? ಯಾಕಂದ್ರೆ ಹಾಗೆ ಹೊಳೆಯೋಕ್ಕೆ ಬೇಕಾದ ಎ ವಿಟಾಮಿನ್ ಅವರ್ ಮಯ್ಯಲ್ಲಿ ಜಾಸ್ತಿ ಇರುತ್ತೆ. ನಮ್ ಪಾಲಾಕಲ್ಲಿ ಎ ವಿಟಾಮಿನ್ ಸಿಕ್ಕಾಪಟ್ಟೆ ಇದೆ.

imbbpullzone-palak.jpgimbbpullzone

10. ಕ್ಯಾನ್ಸರ್ ಕಣಗಳನ್ನು ಸಹ ಕೊಲ್ಲಬಲ್ಲ ಪಾಲಾಕ್ ಅನ್ನೋ ದಿವ್ಯೌಷಧ ನಮ್ಮೂರಿನ ಬೀದಿ ಬೀದಿಲಿ ಮಾರ್ತಾರೆ ಅಂತ ಗೊತ್ತಾದ್ರೆ ಅಮೇರಿಕನ್ ಕ್ಯಾನ್ಸರ್ ರಿಸರ್ಚ್ ಇಸ್ಟಿಟ್ಯೂಟಿನವರಿಗೆ ಏನಾಗ್ಬೇಡ!

123rf-palak.jpg123rf

11.  ನಿಮಗೆ ಕೂದಲು ಉದರುತ್ತಿದೆಯೇ? ಬೆಳಿಗ್ಗೆ ಎದ್ ಕೂಡ್ಲೆ ಒಂದು ಲೋಟ ಪಾಲಾಕ್ ಸೊಪ್ಪಿನ್ ಜೂಸ್ ಕುಡೀರಿ. ಕೂದಲು ಉದುರೋದು ಕಮ್ಮಿ ಆಗುತ್ತೆ.

quicksearch-palak.jpgquicksearch

ಹೆಂಗೆ ನಮ್ ಪಾಲಾಕು?

masterfile-palak.jpgmasterfile

ಒಂದು ಕಂತೆ ಅಮೃತಕ್ಕೆ ಬರೀ ಐದರಿಂದ ಹತ್ತು ರೂಪಾಯಿ…. ಜಮಾಯಿಸಿ…!