ಮೈಸೂರಿನ ಜಗತ್ಪ್ರಸಿದ್ಧ ಅರಮನೆ ತೀರ ಇತ್ತೀಚಿನದು. ಅದನ್ನು ಕಟ್ಟಿ ಮುಗಿಸಿದ್ದು 1912ರಲ್ಲಿ ಎನ್ನುವುದು ನಿಜವಾದರೂ 1940ರಲ್ಲೂ ಅದನ್ನು ವಿಸ್ತರಿಸಲಾಗಿದೆ.

ಈಗಿನ ಅರಮನೆಯ ಮುಂಚೆ ಬೇರೆಯೇ ಒಂದು ಅರಮನೆ ಇತ್ತು. ಅದರ ತೀರ ಹಳೆಯ ಇತಿಹಾಸದ ಬಗ್ಗೆ ಈಗ ಹೆಚ್ಚು ಗೊತ್ತಿಲ್ಲ, ಆದರೆ 14ನೇ ಶತಮಾನದಲ್ಲಿ ಯದುರಾಯನವರು ಕಟ್ಟಿಸಿದ ಅದನ್ನು ಹಲವು ಬಾರಿ ಕೆಡವಿಸಿ ಮತ್ತೆ ಕಟ್ಟಿಸಿದ್ದರಂತೆ. ಹಾಗೆ ಮತ್ತೆ ಮತ್ತೆ ಕಟ್ಟಲ್ಪಟ್ಟ ಅರಮನೆಯ ಇತ್ತೀಚಿನ ಕತೆ ಹೀಗಿದೆ…

1. 1799ರಿಂದ 1868ವರೆಗೆ ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ ಅರಮನೆ ಇದಾಗಿತ್ತು

omp1-mysorepalace_gov_in.jpgmysorepalace

2. ಒಟ್ಟಾರೆ ಹಿಂದೂ ವಾಸ್ತುಶಿಲ್ಪದ ಈ ಕಟ್ಟಡಕ್ಕೆ ಮುಗಲ್ ಅಥವಾ ಪರ್ಶಿಯನ್ ಶೈಲಿಯ ಮರದ ಕಂಬಗಳಿದ್ದವು

1855ರಲ್ಲಿ ವಿಲಿಯಂ ಹೆನ್ರಿ ಪಿಗೂ ಅನ್ನೋನು ತೊಗೋಡ ಫೋಟೋ. ಕಂಬಗಳು ಮರದವು.
omp3-mysore_ind_in.jpgind

3. ನೆಲಮಟ್ಟದಲ್ಲಿ ರಾಜನ ಕುಟುಂಬ ವಾಸ ಮಾಡುತ್ತಿತ್ತು ಹಾಗೂ ಮಕ್ಕಳಿಗೆ ಆಟವಾಡುವ ಜಾಗವಿತ್ತು. ದರ್ಬಾರ್ ಇದ್ದಿದ್ದು ಒಂದನೇ ಮಹಡಿಯಲ್ಲಿ.

omp-outside-mysorepalace_gov_in.jpgmysorepalace

4. ದರ್ಬಾರು 65×65 ಅಡಿಯಿತ್ತು. ತಾರಸಿಯಲ್ಲಿ ಎತ್ತರಿಸಿದ ಗುಮ್ಮಟವೊಂದಿತ್ತು.

omp5-mysorepalace_gov_in.jpgmysorepalace

5. ಗಾರೆ ನೆಲ ಒಂದು ಬಿಟ್ಟರೆ ಮಿಕ್ಕಿದ್ದೆಲ್ಲ ಮರದಿಂದ ಮಾಡಿತ್ತು.

1880ರ ದಶಕದಲ್ಲಿ ನಿಕಲ್ಸನ್ & ಸನ್ಸ್, ಮದರಾಸು – ಇವರು ತೆಗೆದ ಚಿತ್ರ:

omp6-columbia_edu.jpgpritchett

6. 1897ರಲ್ಲಿ ರಾಜಕುಮಾರಿ ಜಯಲಕ್ಷಿಯಮ್ಮಣ್ಣಿಯ ಮದುವೆ ಸಂದರ್ಭದಲ್ಲಿ ಅಡುಗೆಮನೆಯಲ್ಲಿ ಒಂದು ಬೆಂಕಿ ಹತ್ತಿಕೊಂಡು ಹತೋಟಿ ಮೀರಿ ಇಡೀ ಅರಮನೆ ಸುಟ್ಟಿಹೋಯಿತು.

1881ರಲ್ಲಿ ಇಲಸ್ಟ್ರೇಟೆಡ್ ನ್ಯೂಸ್ (ಲಂಡನ್) ನಲ್ಲಿ ಪ್ರಕಟವಾದ ಚಿತ್ರ (ಬಣ್ಣ ಕೈಯಲ್ಲಿ ಹಚ್ಚಿರುವುದು):
omp7-wikimedia_commons_1881_illustrated_london_news.jpgpritchett

7. ಆದರೆ ಬೆಂಕಿಯಲ್ಲಿ ಆತ್ಮವಿಲಾಸ ಗಣಪತಿ ಗುಡಿಗೆ ಏನೂ ಆಗಲಿಲ್ಲ. ಅದನ್ನ ಹೊಸ ಅರಮನೆಯಲ್ಲಿ ಹಾಗೇ ಇಟ್ಟುಕೊಂಡಿದ್ದಾರೆ:

ಗುಡಿಯೊಳಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ರಾಜಮನೆತನದವರು ಮಾತ್ರ ಇಂದಿಗೂ ಪೂಜೆ ಮಾಡ್ತಾರೆ.

omp-ganesha-shrine-mysorepalace_gov_in.jpgmysorepalace

8. ಆಗ ಕೂಡಲೆ ರಾಣಿ ಲಕ್ಷೀವಿಲಾಸ ಸನ್ನಿಧಾನ ಅವರು ಎಂದಿಗೂ ಬೆಂಕಿಗೆ ಆಹುತಿಯಾಗದಂತಹ ಹೊಸ ಅರಮನೆ ಕಟ್ಟಲಿಕ್ಕೆ ಅಪ್ಪಣೆ ಕೊಟ್ಟರು.

ಅವರ ಅಪ್ಪಣೆಯಂತೆ ಇಂದಿಗೂ ಆ ಹೊಸ ಅರಮನೆ ಗಟ್ಟುಮುಟ್ಟಾಗಿ ನಿಂತಿದೆ…

060505_Mysore_Palace_asiapacifictours_in.jpgasiapacifictours