https://www.youtube.com/watch?v=s3s838owcOY

ಹುಡುಗರು ಹುಡುಗೀರ ಹಿಂದೆ ಹೋಗೋದು ಮಾಮೂಲು… ಆದ್ರೆ ಹುಡ್ಗೀರು ಹುಡುಗರ ಹಿಂದೆ ಹೋಗಲ್ಲ ಅನ್ಕೊಂಡಿದೀರಾ? ಇಲ್ಲ ತಾನೇ? ಕೆಳಗೆ ಕೊಟ್ಟಿರೋ ರೀತೀಲಿ ನಡ್ಕೊಳೋ ಹುಡುಗರ ಹಿಂದೆ ಹುಡುಗೀರು ತಾವೇ ಬರ್ತಾರೆ…

1. ಮೊದಲನೇ ಭೇಟಿ ಸರಿಯಾಗಿ ನಿಭಾಯಿಸಬೇಕು

ಮುಕ್ಕಾಲ್ವಾಸಿ ಹುಡುಗರು ಮೊದಲನೇ ಭೇಟೀಲೇ ಎಡವಟ್ಟು ಮಾಡ್ಕೋತಾರೆ. ಒಂದು ಹುಡುಗಿ ಜೊತೆ ಏನೂ ಮಾತಾಡಲ್ಲ ಇಲ್ಲ ಏನೇನೋ ಮಾತಾಡ್ತಾರೆ. ಸರಿಯಾಗಿ ಆತ್ಮವಿಶ್ವಾಸದಿಂದ ಮಾತಾಡಬೇಕು. ಪೆದ್ದು ಥರ ಏನೇನೋ ಮಾತಾಡಬೇಡಿ. ನಿಮ್ಮ ಬಗ್ಗೆ ಜಾಸ್ತಿ ವಿಚಾರ ಹೇಳಬೇಡಿ. ನಿಮ್ಮ ಬಗ್ಗೆ ಇನ್ನು ತಿಳ್ಕೊಬೇಕು ಅನ್ನೋ ಕುತೂಹಲ ಹುಡುಗೀಗೆ ಬರಬೇಕು, ಹಾಗೆ ಮಾತಾಡಿ.

ಮೂಲ

2. ನಿಮ್ಮ ಬಗ್ಗೆ ಅವಳಿಗೆ ಆಸಕ್ತಿ ಬರೋ ಥರ ನಡ್ಕೋಬೇಕು

ಹೇಗಪ್ಪಾ ಇವಳನ್ನ ಒಲಿಸಿಕೊಳ್ಳೋದು ಅಂತ ಯೋಚ್ನೆ ಮಾಡ್ತಾ ಜಾಸ್ತಿ ಕಷ್ಟ ಪಡಬೇಡಿ. ಸಿಕ್ಕಾಪಟ್ಟೆ ಆತುರ ಬೇಡ. ಆರಾಮಾಗಿ ನಿಮ್ಮ ಕೆಲಸ ಆಯ್ತು ನೀವಾಯ್ತು ಅಂತ ಕೆಲವೊಮ್ಮೆ ಗ್ಯಾಪ್ ಕೊಡಿ, ನಿಮ್ಮ ಬಗ್ಗೆ ಜಾಸ್ತಿ ಮಾಹಿತಿ ಬಿಟ್ಟುಕೊಡದೆ ಸಣ್ಣ ಸಣ್ಣ ಸುಳಿವು ಬಿಟ್ಟು ಕೊಡಿ ಇದರಿಂದ ಹುಡುಗೀಗೆ ನಿಮ್ಮ ಮೇಲೆ ಆಸಕ್ತಿ, ಕುತೂಹಲ ಜಾಸ್ತಿ ಆಗತ್ತೆ.  

3. ಸರಿಯಾದ ಸಮಯಕ್ಕೆ ಸರಿಯಾದ ಪ್ರಶ್ನೆ ಕೇಳಬೇಕು 

ಹೆಡ್ಡರ ಥರ ಏನೇನೋ ಪ್ರಶ್ನೆ ಕೇಳಬೇಡಿ. ಉದಾಹರಣೆಗೆ ನಿಮಗೆ ಇದಕ್ಕೆ ಮುಂಚೆ ಎಷ್ಟು ಜನ ಬಾಯ್ ಫ್ರೆಂಡ್ ಇದ್ರು, ಹೀಗೆಲ್ಲ ಕೇಳಬೇಡಿ. ಚೆನ್ನಾಗಿ ಮಾತಾಡಿಸಿ, ಪ್ರಶ್ನೆ ಕೇಳೋದೇ ಆದ್ರೆ ಸರಿಯಾಆಗಿರೋ ಪ್ರಶ್ನೆ ಕೇಳಿ, ನಿಮಗೆ ಯಾವ ತರದ ಹಾಡು ಇಷ್ಟ, ನಿಮ್ಮ ಇಷ್ಟವಾದ ತಿಂಡಿ ಯಾವ್ದು ಹೀಗೆ. ಈ ಥರ ಮಾತಾಡ್ತಾ ಹೋದ್ರೆ ಸಂಬಂಧದಲ್ಲಿ ಒಂದು ಹೊಸ ಫ್ಲೋ ಸಿಗತ್ತೆ.  

4. ಸಣ್ಣ ಸಣ್ಣ ವಿಷಯಕ್ಕೂ ಗಮನ ಕೊಡಬೇಕು  

ದಿನಾ ಗುಲಾಬಿ ಹೂವು ಕೊಡೋದು, ದಿನ ನೀನು ಚೆನ್ನಾಗಿ ಕಾಣ್ತಿದೀಯ ಅನ್ನೋದು ಇವೆಲ್ಲ ಅಷ್ಟಾಗಿ ಇಷ್ಟ ಆಗಲ್ಲ ಹುಡುಗೀರಿಗೆ. ಅದರ ಬದಲು ಹುಡುಗಿ ಹಾಕಿರೋ ಬಟ್ಟೆ ನಿಮಗೆ ನಿಮ್ಮ ಇಷ್ಟವಾದ ಪ್ರೇಮ ಕಥೆ ಬಗ್ಗೆ ಹೇಗೆ ನೆನಪು ಮಾಡಿತು ಅಂತ ಹೇಳಿ, ಅವಳು ನಿಮ್ಮ ಜೊತೆ ಇಲ್ಲದೆ ಇರುವಾಗ ನೀವು ಅವಳನ್ನ ಯಾವ ರೀತಿ ಮಿಸ್ ಮಾಡ್ಕೋತೀರಾ, ಅಥವಾ ನಿಮ್ಮ ಇಮ್ಯಾಜಿನೇಶನ್ ಅಲ್ಲಿ ಅವಳು ಹೇಗೆ ಅಂತ ವರ್ಣಿಸಿ. ಹೀಗ್ ಮಾಡಿ ಅದ್ಯಾಕ್ ನಿಮ್ಮ್ ಹಿಂದೆ ಬರಲ್ಲ ನಾವು ನೋಡ್ತೀವಿ.

ಮೂಲ

5. ಯಾವಾಗಲೂ ಅವಳ ಹಿಂದೇನೆ ಸುತ್ತಬಾರದು

ಅತೀ ಆದ್ರೆ ಅಮೃತಾನು ವಿಷ ಆಗತ್ತೆ, ಹುಡುಗೀರಿಗೆ ಸದಾ ಅಂಟಿಕೊಂಡೇ ಇರೋವ್ರು ಇಷ್ಟ ಆಗಲ್ಲ. ಸ್ವಲ್ಪ ಅವ್ರು ನಿಮ್ಮನ್ನ ಮಿಸ್ ಮಾಡ್ಕೊಳೋ ಫೀಲ್ ಹುಡುಗೀರಿಗೆ ಬರಬೇಕು. ಹತ್ರ ಇರಬೇಕು ಆದ್ರೆ ದೂರಾನು ಇರಬೇಕು. ಹೀಗೆ ಇದ್ದಾಗ ಹೆಣ್ಣು ಮಕ್ಕಳು ಬೇಗ ಹುಡುಗರ ಹಿಂದೆ ಬೀಳ್ತಾರೆ 

6. ಕೆಲವೊಮ್ಮೆ ಬೇಕು ಅಂತಾನೇ ದೂರ ಉಳೀಬೇಕು

ಹುಡುಗಿಯನ್ನು ನೀವು ಹೋತೀಳಿಗೆ ಕರೀತೀರಾ, ಆಚೆ ಸುತ್ತಾಡಕ್ಕೆ ಕರೀತೀರಾ ಆದ್ರೆ ಬರಲ್ಲ ಅಂದಿರ್ತಾರೆ. ಪದೇ ಪದೇ  ಬಾ ಹೋಗಣ ಬಾ ಹೋಗಣ ಅಂತ ಕರೆಯಬೇಡಿ. ಸುಮ್ಮನೆ ಸೈಲೆಂಟ್ ಆಗಿ ಇದ್ದುಬಿಡಿ. ಹಾಗೆ ಹುಡುಗಿ ನಿಮ್ಮನ್ನ ಹೊರಗೆ ಕರೆದಾಗ, ನೋಡ್ತೀನಿ ಬರಕ್ಕೆ ಪ್ರಾಯ್ಟ್ನ ಮಾಡಿತೀನಿ ಅಂತ ಹೇಳಿ. ಒಂದೆರಡು ಸರಿ ದೂರ ಇರಿ, ಹೋಗಬೇಡಿ. ಹಾಗಂತ ಜಾಸ್ತಿ ಹಿಂಗೇ ಮಾಡ್ಬೇಡಿ.. ಅಮೇಲಿ ನಿಮ್ಮ ಗತಿ ಅದೋಗತಿ. 

ಮೂಲ

7. ಕಾಮಿಡಿ ಮಾಬೇಕು ಆದರೆ ಕಾಲೆಳೀಬಾರ್ದು

ಆಗಾಗ ಕಾಮಿಡಿ ಮಾಡಿ ಹುಡುಗೀನ ನಗಾಡಿಸಿ. ಹುಡುಗಿ ನಿಮ್ಮ ಜೋಕಿಗೆ ನಕ್ಕರೆ ಪಕ್ಕ ಬಿದ್ದಂಗೆ. ಹುಷಾರಪ್ಪ ಕಾಮಿಡಿಗು, ಕಾಲೆಳೆಯಕ್ಕು ವ್ಯತ್ಯಾಸ ತಿಳ್ಕೊಳಿ. ಯಾವುದೇ ಕಾರಣಕ್ಕೂ ಹುಡುಗೀನ ಅಪಹಾಸ್ಯ ಮಾಡಬೇಡಿ. 

ಮೂಲ

8. ಎಲ್ಲಾ ಬಾಯಿ ಬಿಡಬಾರದು, ಕೆಲವೊಂದು ವಿಚಾರ ಮುಚ್ಚಿಡಬೇಕು

ಎಲ್ಲ ವಿಚಾರಾನು ಹೇಳಬೇಕು ಅನ್ನೋದು ಸತ್ಯ, ಆದ್ರೆ ಎಲ್ಲದನ್ನು ಹೇಳಿ ತೆರೆದ ಪುಸ್ತಕದಂತೆ ಆಗಬೇಡಿ. ಹುಡುಗೀರಿಗೆ ಕೆಲವೊಮ್ಮೆ 'ಪತ್ತೇದಾರಿ ಪ್ರತಿಭ' ಆಗುವ ಅವಕಾಶ ಕೊಡಿ. ಕೆಲವೊಂದನ್ನ ತಾನಾಗೇ ತಿಳ್ಕೊಂಡಾಗ ಹೆಣ್ಣುಮಕ್ಕಳಿಗೆ ಖುಷಿ ಜಾಸ್ತಿ. ಹೀಗೆ ಆದಾಗ ನಿಮ್ಮ ಮೇಲೆ ಆಸಕ್ತೀನೂ ಜಾಸ್ತಿ ಆಗತ್ತೆ . ಹಾಗಂತ ಎಲ್ಲದನ್ನು ಮುಚ್ಚಿಡಬೇಡಿ ಮಾರ್ರೆ, ರಾದಾಂತ ಆಗಿಬಿಡುತ್ತೆ. 

9. ಯಾವಾಗಲೂ ನೀವೇ ಅವಳ ಹಿಂದೆ ಹೋಗಬಾರದು

ಮೇಲೆ ಕೊಟ್ಟಿರೋ ಎಲ್ಲ ವಿಷಯಾನು ಫಾಲೋ ಮಾಡಿ ಹುಡುಗೀರು ನಿಮ್ಮ ಹಿಂದೆ ಬರೋಹಾಗೆ ಮಾಡಿಕೊಳ್ಳಿ. ಯಾವಾಗ್ಲೂ ನೀವು ಬೆನ್ನ ಹಿಂದಿರೋ ಬೇತಾಳದ ಹಾಗೆ ಹೋಗಬೇಡಿ. ಕಾಲ ಬದಲಾಗಿದೆ, ಹುಡುಗರ ಹಿಂದೆ ಹುಡುಗೀರು ಬೀಳ್ತಾರೆ ಇನ್ನಮೇಲೆ.

ಮೂಲ