https://thelogicalindian.com/wp-content/uploads/2017/06/humansofmumbai_web-750x500.jpg

ಅವನ ಕಥೆ ಅವನ ಬಾಯಲ್ಲೇ ಕೇಳಿ…

ನಾನು ಸುಹಾಸ್ ಮೋಹಿತೆ. ನಾನು ಹತ್ತನೇ ಕ್ಲಾಸ್ ಫೇಲು…

“ನನಗಿದ್ದ ಕನಸುಗಳಿಗೇನೂ ಕಮ್ಮಿ ಇರ್ಲಿಲ್ಲ. ಕೂದ್ಲು, ಗಡ್ಡ-ಮೀಸೆ ಬೋಳಿಸೋದು ನಮ್ಮ ಜನಾಂಗದೋರ ಕೆಲಸ. ನಮ್ಮ ತಾತ, ಮುತ್ತಾತ ಎಲ್ರೂ ತಲತಲಾಂತರದಿಂದ ಇದೇ ಕೆಲಸ ಮಾಡ್ಕೊಂಡು ಬಂದೋರು. ನನಗೂ ಇದೇ ಕಟ್ಟಿಟ್ಟ ಬುತ್ತಿ ಅನ್ನೋದು ನಂಗೆ ಚನ್ನಾಗಿ ಗೊತ್ತಿತ್ತು. ಸಾಮಾನ್ಯವಾಗಿರೋ ಹೇರ್ ಕಟ್ ಮಾಡ್ಕೊಂಡು, ಗಡ್ಡ ಬೋಳಿಸ್ಕೊಂಡಿರೋದಕ್ಕಷ್ಟೇ ನನ್ನ ಜೀವನ ಸೀಮಿತವಾಗೋದು ನಂಗಿಷ್ಟ ಇರ್ಲಿಲ್ಲ.”

ನಾನು ರತ್ನಗಿರಿಯಿಂದ ಮುಂಬೈಗೆ ಮೊದಲ್ನೇ ಸರ್ತಿ ಬಂದಿದ್ದು 10 ವರ್ಷದ ಹಿಂದೆ…

“ನನ್ನ ಸಂಬಂಧಿಕರ ಮದ್ವೇಗೆ.  ನಿಜ ಹೇಳ್ಬೇಕಂದ್ರೆ, ಈ ಮದ್ವೆ ನಂಗೆ ಇಲ್ಲಿಗ್ ಬರಕ್ಕೆ ಒಂದು ನೆಪ ಮಾತ್ರ. ನಾನಿಲ್ಲಿಗೆ ನನ್ನ ಕನಸ್ನ ನನಸು ಮಾಡ್ಕೋಳಕ್ಕೆ, ನನಗೆ ಅಂತ ಒಂದು ಹೆಸರು ಸಂಪಾದ್ಸಕ್ಕೆ ಬಂದಿದ್ದೆ. ಮದ್ವೆ ಮುಗಿದ್ಮೇಲೆ, ನನ್ನ ಮನೆಯೋರೆಲ್ಲ ಊರಿಗ್ ಹೊರಟ್ರು. ನಾನಿಲ್ಲೇ ಉಳ್ಕೊಂಡು, ಒಂದ್ ಪಾರ್ಲರ್ರಲ್ಲಿ ಕೆಲಸ ಹುಡ್ಕೊಂಡೆ. ನಂಗೆ ದೊಡ್ಡ ದೊಡ್ಡ ಫಿಲಂ ಸ್ಟಾರ್ಗಳಿಗೆ ಹೇರ್ ಡ್ರೆಸರ್ ಆಗ್ಬೇಕು ಅನ್ನೋ ಮಹತ್ವಾಕಾಂಕ್ಷೆ ಇತ್ತು”

ಮೂಲ

ನನ್ನ ಅಣ್ಣ- ತಮ್ಮಂದ್ರೆಲ್ಲ ನನ್ನ ಆಡ್ಕೊಂಡ್ ನಗಕ್ಕೆ ಶುರು ಮಾಡಿದ್ರು…

” ಹಿಂದೀನೇ ಮಾತಾಡಕ್ಕೆ ಬರ್ದೇ ಇರೋ ನೀನು ಅಲ್ಲಿ ಬದುಕಕ್ಕಾಗುತ್ತಾ? ದೊಡ್ಡ ಹೆಸರು ಮಾಡೋದೆಲ್ಲಾ ಕನಸಿನ ಮಾತು ” ಅಂದ್ರು. ಆದ್ರೂ ನಾನು ಧೈರ್ಯಗೆಡಲಿಲ್ಲ. ಬಾಂಬೇಗೆ ಬಂದಂತೂ ಆಗಿದೆ. ಕಷ್ಟಪಟ್ಟು ಕೆಲಸ ಮಾಡ್ತೀನಿ… ಇದರ ಮೇಲೆ ದೇವರಿಗೆ ಬಿಟ್ಟಿದ್ದು… ಹುಟ್ಸಿದ್ ದೇವ್ರು ಹುಲ್ಲ್ ಮೇಯಿಸ್ತಾನೆ ಅಂತ ಮುಂದುವರ್ದೆ. ಕಷ್ಟಪಟ್ಟು ಕೆಲಸ ಮಾಡ್ದೆ. ದುಡ್ಡು ಸಂಪಾದ್ನೆ ಮಾಡಕ್ಕಲ್ಲ… ಕೆಲಸ ಕಲಿಯಕ್ಕೆ! ನಂಗೆ ಬರೋ ದುಡ್ಡು ಯಾವ್ದಕ್ಕೂ ಸಾಲ್ತಿರ್ಲಿಲ್ಲ.

3 ತಿಂಗಳು ಸತತವಾಗಿ ಬೀದಿ ಮೇಲೆ ಸ್ನಾನ ಮಾಡಿದ್ದೀನಿ. ಆಗ ನನ್ನ ತಲೆ ಮೇಲೆ ಸೂರಿಲ್ಲದಿದ್ರೂ…

“ಕೈಯ್ಯಲ್ಲಿ ಬಿಡಿಗಾಸಿಲ್ಲದಿದ್ರೂ ಮುಂದೊಂದಿನ ನನ್ನ ಪರಿಸ್ಥಿತಿ ಬದಲಾಗೇ ಆಗುತ್ತೆ ಅಂತ ನನ್ನ ಮನಸ್ಸು ಹೇಳ್ತಿತ್ತು. ನಂಗೂ ಒಳ್ಳೆ ದಿನ ಬಂದೇ ಬರತ್ತೆ ಅನ್ನೋ ಅಚಲವಾದ ನಂಬಿಕೆ ಇತ್ತು.”

ಹಿಂಗೇ ಜೀವ್ನ ನಡೀತಿತ್ತು…

“ಒಂದು ದೊಡ್ಡ ಸಲೂನಿಂದ ಇಂಟರ್ವ್ಯೂಗೆ ಕರುದ್ರು. ಇಂಟರ್ವ್ಯೂಗೆ ನಾನು ಹಾಕೊಂಡು ಹೋಗ್ತಿರೋ ಬಟ್ಟೆ ನೋಡ್ಕೊಂಡು ನನಗಲ್ಲಿ ಖಂಡಿತಾ ಕೆಲಸ ಕೊಡಲ್ಲ ಅಂತ ಅನ್ಕೊಂಡೇ ಹೋದೆ. ದೇವರ ದಯೆಯಿಂದ, ಅವರು ನನ್ನ ಬಟ್ಟೆಗಿಂತ ನನ್ನ ಕೆಲಸದಲ್ಲಿರೋ ಕುಶಲತೆ ನೋಡಿ ಕೆಲಸಕ್ಕೆ ತಗೊಂಡ್ರು. ಆ ನನ್ನ ಬಾಸ್ ಮತ್ತು ಜೊತೇಲಿ ಕೆಲಸ ಮಾಡೋರಿಂದ ನಾನು ತುಂಬಾ ಕಲಿತ್ಕೊಂಡೆ… ಹಿಂದಿಯಿಂದ ಹೇರ್ ಸ್ಟೈಲಿಂಗ್ ವರ್ಗೂ!”

ಸಲೂನ್ಗೆ ಬರ್ತಿದ್ದ ಫಾರಿನರ್ಗಳನ್ನ ನೋಡ್ನೋಡೇ ಇಂಗ್ಲಿಷ್ ಕಲಿತೆ…

” ನಂಗೆ ಜೀವನ್ದಲ್ಲಿ ಮುಂದೆ ಬರ್ಬೇಕು ಅನ್ನೋ ಛಲ ಎಷ್ಟಿತ್ತು ಅಂದ್ರೆ, ನನ್ನ ಸಲೂನ್ಗೆ ಬರ್ತಿದ್ದ ಫಾರಿನರ್ಗಳನ್ನ ನೋಡ್ನೋಡೇ ಇಂಗ್ಲಿಷ್ ಕಲುತ್ಕೊಂಡೆ. ಇದು ನಾನು ಕೆಲಸ ಮಾಡಕ್ಕೆ ಇಷ್ಟಪಡೋ ಸಿನಿಮಾ ಕ್ಷೇತ್ರದಲ್ಲೂ ಎಷ್ಟು ಮುಖ್ಯ ಅಂತ ನಂಗೆ ಚನ್ನಾಗಿ ಗೊತ್ತಿತ್ತು. ಇವಾಗ ಇಂಗ್ಲಿಷ್ ಕೂಡ ಪಟಪಟ ಅಂತ ಮಾತಾಡ್ತೀನಿ ಗೊತ್ತಾ?”

ಈಗ ದೀಪಿಕಾ ಪಡುಕೋಣೆ ಅಂತಾ ದೊಡ್ಡ ದೊಡ್ಡ ಸ್ಟಾರ್ಗಳಿಗೆ ಹೇರ್ ಸ್ಟಲ್ ಮಾಡ್ತೀನಿ…

“ಬೀದೀಲಿ ಸ್ನಾನ ಮಾಡ್ತಿದ್ದೋನೀಗ ನಂಗೆ ಅಂತ ಈ ಊರಲ್ಲಿ ಒಂದು ಸ್ವಂತ ಮನೆ ಮಾಡ್ಕೊಂಡಿದ್ದೀನಿ! ಬಿಡಿಗಾಸಿಲ್ದೇ ಈ ಊರಿಗೆ ಬಂದೋನೀಗ ಹಳ್ಳೀಲಿರೋ ನನ್ನ ಅಮ್ಮ- ಅಪ್ಪಂಗೆ, ಅಣ್ಣ- ತಮ್ಮಂದ್ರಿಗೆ ಸಹಾಯ ಮಾಡ್ತಿದ್ದೀನಿ. ದೊಡ್ಡ ದೊಡ್ಡ ಮ್ಯಾಗ್ ಝೈನ್ ಫೋಟೋಶೂಟಿಗೆ ಹೇರ್ ಸ್ಟೈಲ್ ಮಾಡಕ್ಕೆ ನನ್ನ ಕರಿಸ್ತಾರೆ.

ನನ್ನೆಲ್ಲಾ ಕನಸೂ ನನಸಾಯ್ತು!

“ಈಗ ನಂಗೆ 33 ವರ್ಷ. ಇಲ್ಲೀವರ್ಗೂ ನಾನು ನಡೆದು ಬಂದಿರೋ ದಾರಿ ನೆನುಸ್ಕೊಂಡ್ರೆ ನಂಗೇ ಖುಷಿ, ಹೆಮ್ಮೆ ಎಲ್ಲಾ ಒಟ್ಟಿಗೆ ಆಗುತ್ತೆ. ನಾನು 11 ವರ್ಷದೋನಿದ್ದಾಗ, ಪ್ರತಿ ಭಾನುವಾರ ನನ್ನ ಚಿಕ್ಕಪ್ಪನತ್ರ ಕಟ್ಟಿಂಗ್ ಕಲ್ತ್ಕೊಳಕ್ಕೆ ಹೋಗ್ತಿದ್ದೆ. ಈಗ ಸ್ವಲ್ಪ ದಿನದ ಹಿಂದೆ ತಾನೆ, ಒಂದು ದೊಡ್ಡ ಮದ್ವೇಗೆ ಮೇಕಪ್ ಕಾಂಟ್ರಾಕ್ಟ್ ಮೇಲೆ ಯೂರೋಪಿಗೆ ಹೋಗ್ಬಂದೆ.”

ಇದೆಲ್ಲಾ ಸಾಧ್ಯ ಆಗಿದ್ದು, ನನ್ನ ಮೇಲೆ ನಂಗಿದ್ದ ನಂಬಿಕೆಯಿಂದ.

ನಂಗೇ ನನ್ಮೇಲೆ ಅಷ್ಟೊಂದು ನಂಬಿಕೆ ಇದ್ದಿದ್ರಿಂದ… ಬೇರೆಯೋರೂ ನನ್ನಾ, ನನ್ನ ಕೆಲಸಾನ ನಂಬ್ಲೇಬೇಕಾಯ್ತು!”