https://antekante.com/sites/default/files/images/fruit_juice_weight_loss.jpg

ತೂಕ ಕಮ್ಮಿ ಮಾಡ್ಕೊಳೋದಕ್ಕಾಗಲಿ,ನಮ್ಮ ದೇಹದಲ್ಲಿನ ನೀರಿನಂಶ ಕಾಪಾಡ್ಕೊಳೋದಕ್ಕಾಗಲಿ, ನಮ್ಮ ದೇಹದಲ್ಲಿರೋ ವಿಷದ ಪದಾರ್ಥಗಳನ್ನ ಹೊರ ಹಾಕೋದಕ್ಕಾಗಲಿ ಹೆಚ್ಚು ಹೆಚ್ಚು ನೀರು ಕುಡಿಯೋದೇ ಒಳ್ಳೆ ಉಪಾಯ. ಅದ್ರಲ್ಲೂ ಬರಿ ನೀರು ಕುಡಿಯೋದಕ್ಕಿಂತ ಪ್ರತಿ ದಿನ ಬೆಳಗ್ಗೆ ಈ ಕೆಳಗೆ ಹೇಳಿರೋ 4 ರೀತಿಯ ನೀರು ಮಾಡ್ಕೊಂಡು ಕುಡಿದು ದಿನ ಶುರು ಮಾಡಿದ್ರೆ ದಿನ ಪೂರ್ತಿ ನಿಮ್ಮ ಆರೋಗ್ಯ ಚೆನ್ನಾಗೆ ಇರುತ್ತೆ.

1. ಶುಂಠಿ, ಮಾವಿನಕಾಯಿ ನೀರು.

ಈ ನೀರಿನ ರುಚಿ ಅದ್ಭುತವಾಗಿರುತ್ತೆ ಕಣ್ರೀ. ಈ ಮಾವಿನ ಕಾಯಿ/ ಹಣ್ಣು ಹಾಗೂ ಶುಂಠಿಯ ಕಾಂಬಿನೇಶನ್ ಇರೋ ನೀರು ನಮ್ಮ ದೇಹದ ಮೆಟಬಾಲಿಸಂ ಹೆಚ್ಚಾಗಿಸುತ್ತೆ. ಇದೊಂದು ಅಮೃತದಂಥಾ ಪಾನೀಯ ಅಂತಾನೆ ಹೇಳಬಹುದು.

ಇದನ್ನ ಮಾಡೋದು ತುಂಬಾನೇ ಸುಲಭ

ಇದೆಲ್ಲ ಬೇಕು

ಶುಂಠಿ -1 ಇಂಚು ಶುಂಟಿಯನ್ನ ಸಿಪ್ಪೆ ತೆಗದು ಕತ್ತರಿಸಿಟ್ಟುಕೊಂಡಿದ್ದು

ಮಾವಿನಕಾಯಿ – 1 ಕಪ್

ಹೀಗೆ ಮಾಡಿ

1 ಲೀಟರ್ ನೀರಿಗೆ ಹಚ್ಚಿಟ್ಟಿರೋ ಶುಂಠಿ ಹಾಗೂ ಮಾವಿನ ಕಾಯನ್ನು ಸೇರಿಸಿ. ರಾತ್ರಿ ಪೂರಾ ಫ್ರಿಡ್ಜ್ ನಲ್ಲಿಡಿ. ಬೆಳಗ್ಗೆ ನೀವು ಕುಡಿಯಲು ಬೇಕಾಗಿರೋ ಅಮೃತ ನಿಮಗಾಗಿ ರೆಡಿ.

homebliss.in

2. ನಿಂಬೆ, ಸೌತೆ ಹಾಗೂ ಪುದೀನಾ ನೀರು.

ನಿಂಬೆ, ಸೌತೆ ಹಾಗೂ ಪುದೀನಾ ನೀರು ತುಂಬಾ ಉರಿಬಿಸಿಲಿನ ದಿನಗಳಲ್ಲಿ ಕುಡಿಯೋದಕ್ಕೆ ಒಳ್ಳೇದು. ಸೌತೆಕಾಯಿಯ ಸ್ವಲ್ಪ ಕಹಿ ಅಂಶ ಇದ್ರೂನು ನಿಂಬೆಯ ಹುಳಿ ಹಾಗೆ ಪುದೀನಾದ ತಾಜಾತನ ಈ ನೀರಿಗೆ ತುಂಬಾನೇ ರುಚಿ ಕೊಡುತ್ತೆ.

ಇವಿಷ್ಟು ಬೇಕು

ನಿಂಬೆ ಹಣ್ಣು – 1 ಹಚ್ಚಿದ್ದು

ಸೌತೆ ಕಾಯಿ – 1 ಹಚ್ಚಿದ್ದು

ಪುದೀನಾ  – 5 ಎಲೆಗಳು

ಹೀಗೆ ಮಾಡಿ

ಈ  ಎಲ್ಲ ಪದಾರ್ಥಗಳನ್ನ 1 ಲೀಟರ್ ನೀರಿಗೆ ಸೇರಿಸಿ, ರಾತ್ರಿ ಪೂರ್ತಿ ಫ್ರಿಡ್ಜ್ ನಲ್ಲಿಡಿ. ಬೆಳಗ್ಗೆ ಎದ್ದು ಕುಡಿಯಿರಿ.

eatingrichly.com

3. ನಿಂಬೆ, ಶುಂಠಿ ನೀರು.

ನಮ್ಮ ದೇಹ ಶುದ್ಧೀಕರಿಸಿ, ನಮ್ಮ ಭಾವನೆ ಉತ್ತಮಗೊಳಿಸೋ ಮೂಲಕ ನಮ್ಮ ಆರೋಗ್ಯ ಕಾಪಾಡೋದಕ್ಕೆ ಹೇಳಿ ಮಾಡಿಸಿದಂತ ನೀರು ಇದು. ನಿಂಬೆ ಸ್ವಾಭಾವಿಕವಾಗಿ ಸಿಹಿ ಕೊಟ್ರೆ ಶುಂಠಿ ಸೇರಿಸೋದ್ರಿಂದ ಒಳ್ಳೆ ರುಚಿ, ಸುವಾಸನೇನೂ ಕೊಡುತ್ತೆ. ಅಷ್ಟೇ ಅಲ್ಲ ಶುಂಠಿ ವಾಕರಿಕೆ, ಮಲ ಬದ್ಧತೆ, ನೋವುಗಳನ್ನ ಓಡಿಸೋದಲ್ದೆ ಹಸಿವನ್ನೂ ಹೆಚ್ಚಿಸುತ್ತೆ.

ಬೇಕಾಗಿರೋದು

ನಿಂಬೆ ಹಣ್ಣು – 2

ಶುಂಠಿ

ಹೀಗೆ ಮಾಡ್ಬೇಕು

ಒಂದು ಲೀಟರ್ ನೀರಿಗೆ 2 ನಿಂಬೆಹಣ್ಣು ಹಾಗೆ ಸ್ವಲ್ಪ ಶುಂಠಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಸೇರಿಸಿ, ರಾತ್ರಿ ಪೂರ್ತಿ ಫ್ರಿಡ್ಜ್ ನಲ್ಲಿಟ್ಟು ಬೆಳಗ್ಗೆ ಕುಡಿಯಲು ಇದು ರೆಡಿ.

eatme.eu

4. ಸೇಬು, ದಾಲ್ಚಿನ್ನಿ ನೀರು.

ದೇಹದ ಶುದ್ಧೀಕರಣದ ವಿಷಯಕ್ಕೆ ಬಂದಾಗ ಸೇಬು, ದಾಲ್ಚಿನ್ನಿ ನೀರು ಕೂಡ ಅಷ್ಟೇ ಒಳ್ಳೇದು ಅಂತ ಹೆಸರು ಮಾಡಿದೆ. ರುಚಿ ಅದ್ಭುತವಾಗಿರೋದಲ್ಲದೆ ಇದರಲ್ಲಿ ಔಷಧೀಯ ಗುಣಗಳೂ ಹೆಚ್ಚು. BP ಹತೋಟಿಲಿಡುತ್ತೆ, ಕ್ಯಾನ್ಸರ್ ಬೆಳೆಯದ ಹಾಗೆ ತಡೆಯುತ್ತೆ ಅಷ್ಟೇ ಎಲ್ಲ ಹೃದಯ ಸಂಬಂಧಿ ಕಾಯಿಲೆಗೂ ಒಳ್ಳೆ ಪರಿಹಾರ.

ಬೇಕಾಗಿರೋದು

ಸೇಬು – ಸಣ್ಣಗೆ/ ತೆಳ್ಳಗೆ ಹಚ್ಚಿದ್ದು

ದಾಲ್ಚಿನ್ನಿ/ ಚಕ್ಕೆ – ಚಕ್ಕೆ ಹಾಗೆ ಉಪಯೋಗಿಸಿ, ಪುಡಿ ಮಾಡ್ಬೇಡಿ.

ಹೀಗ್ ಮಾಡಿ

1 ಲೀಟರ್ ನೀರಿಗೆ ಸೇಬಿನ ತುಂಡು ಹಾಗೂ ಚಕ್ಕೆ ಕಡ್ಡಿಯನ್ನ ಹಾಕಿ ರಾತ್ರಿ ಇಡೀ ಇಟ್ಟು ಬೆಳಗ್ಗೆ ಕುಡಿಯಿರಿ.

blog.grabon.in

ಒಂದುಸಲ ಕುಡಿಯೋದಕ್ಕೆ ಶುರು ಮಾಡಿದ್ಮೇಲೆ ಮಾರ್ಕೆಟ್ಟಲ್ಲಿ ಸಿಗೋ ಕೂಲ್ ಡ್ರಿಂಕ್ಸ್ ಖಂಡಿತಾ ಇಷ್ಟ ಆಗಲ್ಲ.