http://www.nripulse.com/wp-content/uploads/2018/03/Jeff-Bezos-Ambani-e1520429121907.jpg

ನೀವ್ ಹಣದ ಹಿಂದೆ ಹೋದ್ರೆ ನಿಮ್ಗೆ ಹಣ ಸಿಗತ್ತೆ. ಆದ್ರೆ ನೀವ್ ನಿಮ್ ಜಾಣತನವನ್ನ ಉಪಯೋಗ್ಸದ್ರೆ ಶ್ರೀಮಂತರಾಗ್ತೀರಿ. ಉದಾಹರಣೆಗೆ ನಿಮ್ಮಲ್ಲಿ 4 ಸೇಬು ಹಣ್ಣಿದೆ. ಅದ್ರಿಂದ ನೀವ್ ಹಣ ಮಾಡ್ಬೇಕಂತಿದ್ರೆ ನೀವ್ ಎರಡು ವಿಧಾನಗಳನ್ನ ಉಪಯೋಗ್ಸತೀರಿ. ಒಂದು ,  ನೀವ್ ಅದ್ನ ಇನ್ನೊಬ್ಬರಿಗೆ ಮಾರಬಿಟ್ಟು ಹಣ ಇಸ್ಕೊಳ್ತೀರಿ. ಅದೇ ನೀವು ನಿಮ್ ಜಾಣತನವನ್ನ ಬಳ್ಸದ್ರೆ ಜಾಸ್ತಿ ಹಣವನ್ನ ಗಳ್ಸಬಹುದು. ಹೇಗೆಂದ್ರೆ ಆ ಸೇಬುಹಣ್ಣನ್ನ ಬಳ್ಸಕೊಂಡು ಜ್ಯೂಸ್ ಮಾಡಿ ಮಾರಾಟಮಾಡಿ.  ಇದೇ ನೋಡಿ ದಿನನಿತ್ಯ ದುಡಿದು ಹಣ ಗಳ್ಸೋನಿಗೂ ಗಳ್ಸಿದ ಹಣವನ್ನ ಜಾಣತನದಿಂದ ಹೂಡಿಕೆ ಮಾಡೋನಿಗೂ ಇರೋ ವ್ಯತ್ಯಾಸ. ಅದೇನೇ ಇರ್ಲಿ ಈ ಪೋರ್ಬ್ಸ್ ಅನ್ನೋ ಮ್ಯಾಗಜೀನ್ ಇದೆಯಲ್ಲ ಅದು ವರ್ಷ ವರ್ಷ ಜಗತ್ತಿನ ದೊಡ್ಡ್ ಶ್ರೀಮಂತರು ಯಾರೆಲ್ಲ ಅಂತ ಪಟ್ಟಿ ಮಾಡ್ತಾ ಹೋಗ್ತಾರೆ. ಅದೇ ತರ ಈ ವರ್ಷ ಕೂಡಾ ಅವ್ರು ಪಟ್ಟಿ ಮಾಡಿದ್ದಾರೆ. 

ಜಾಕ್‌ಮಾಗಿಂತ ನಮ್ ಮುಕೇಶ್ ಅಂಬಾನಿ ಶ್ರೀಮಂತರಂತೆ. 

ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಕಳೆದ 8 ವರ್ಷಗಳಿಂದಲೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾನಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜೊತೆಗೆ ಚೀನಾದ ಜಾಕ್‌ಮಾ ಅವರನ್ನು ಹಿಂದಿಕ್ಕಿರುವ ಅಂಬಾನಿ 33ನೇ ಸ್ಥಾನದಿಂದ ಈ ವರ್ಷ 19ನೇ ಸ್ಥಾನದಲ್ಲಿದ್ದಾರೆ. 

ಸಾವಿರಾರು ಕೋಟಿ ವಂಚನೆ ಪ್ರಕರಣದಲ್ಲಿ ದೇಶಬಿಟ್ಟು ಹೋಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಕೈಬಿಡಲಾಗಿದೆ.

mojemoj.com

ಬಾಲಕೃಷ್ಣಗೆ 274ನೇ ಸ್ಥಾನ

ಪಂತಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರು ಆಸ್ತಿ ಭಾರೀ ಹೆಚ್ಚಳವಾಗಿದೆ. ಈ ವರ್ಷದ ಸಿರಿವಂತರ ಪಟ್ಟಿಯಲ್ಲಿ ಪಂತಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ 274ನೇ ಸ್ಥಾನದಲ್ಲಿದ್ದಾರೆ. 

blogs-images.forbes.com
 

2018ರ ಫೆಬ್ರುವರಿ 9ರ ವರೆಗಿನ ಷೇರುಗಳ ಮೌಲ್ಯವನ್ನು ಆಧರಿಸಿ ಸಿರಿವಂತರ ಪಟ್ಟಿ ತಯಾರಿಸಿದ್ದು ಅಂತ ಫೋರ್ಬ್ಸ್‌ ತಿಳಿಸಿದೆ.

10 ) ಲ್ಯಾರಿ ಎಲಿಸನ್ 

ಒರ್ಸೆಲ್ ಸಾಫ್ಟವೇರ್ ಸಂಸ್ಥೆಯನ್ನ 1977 ರಲ್ಲಿ ಸ್ಥಾಪನೆ ಮಾಡಿದ ಲ್ಯಾರಿ ಎಲಿಸನ್ 2014 ರಲ್ಲಿ ಆ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಹುದ್ದೆಯನ್ನ ತ್ಯಜಿಸಿ , ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕೆಲ್ಸ ಮಾಡ್ತಾ ಇದ್ದಾರೆ. ಇವರ ಒಟ್ಟು ಆಸ್ತಿ 58.5 ಬಿಲಿಯನ್ ಅಮೇರಿಕನ್  ಡಾಲರ್. 

cdn.ndtv.com

9) ಡೇವಿಡ್ ಕೋಚ್ 

ಕೋಚ್ ಇಂಡಸ್ಟ್ರಿಸನ ಪಾಲುದಾರರಾಗಿರೋ ಇವರು ಸುಮಾರು 60 ಬಿಲಿಯನ್ ಅಮೇರಿಕನ್  ಡಾಲರನ ಒಡೆಯರು. ಈ ಕೋಚ್ ಇಂಡಸ್ಟಿಸ್ ಪೈಪಲೈನ್ ಮತ್ತೆ ರಸಗೊಬ್ಬರಗಳನ್ನ ಉತ್ಪಾದನೆ ಮತ್ತೆ ಮಾರಾಟ ಮಾಡೋ ಕಂಪನಿ. 

s.newsweek.com

8) ಚಾರ್ಲ್ಸ್ ಕೋಚ್ 

ಇವ್ರು ಡೇವಿಡ್ ಕೋಚ್ ಸಹೋದರ. ಮೇಲೇ ಹೇಳಿದ ಹಾಗೇ ಇವ್ರದ್ದು ಅದೇ ಬಿಸಿನೆಸ್. ಇವ್ರ ಗಳಿಕೆ ಕೂಡ ಅಷ್ಟೇ. 

static.ijreview.com

7) ಕಾರ್ಲೋಸ್ ಸ್ಲಿಮ್ ಮತ್ತು ಕುಟುಂಬ 

ಮೆಕ್ಸಿಕೋದ ಟೆಲಿಕಾಂ ದಿಗ್ಗಜ ಇವ್ರೇ. ಮೆಕ್ಸಿಕೋದಲ್ಲಿರೋ ಟೆಲಿಕಾಂ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ಕೇಳ್ ಬರೋ ಹೆಸ್ರು  ಟೆಲ್ ಮೆಕ್ಸ್ ಅನ್ನೋ ಕಂಪನಿಯದ್ದೇ. ಇವ್ರ ಒಟ್ಟು ಆಸ್ತಿ 67.1 ಬಿಲಿಯನ್ ಅಮೇರಿಕನ್  ಡಾಲರನ ಒಡೆಯರು. 

mas-mexico.com.mx

6) ಅಮಾನಿಕೋ ಒರ್ಟೆಗಾ 

ಇಂಡಿಟೆಕ್ ಅನ್ನೋ ಅಲಂಕಾರಿಕ ವಸ್ತುಗಳ ಕಂಪನಿಯ ಒಡೆಯರು ಇವ್ರು. ಇದ್ನ ಇವ್ರು 1975ರಲ್ಲೇ ತಮ್ಮ ಮಾಜಿ ಹೆಂಡ್ತಿಯ ಜೊತೆ ಸೇರ್ಕೊಂಡು ಸ್ಥಾಪನೆ ಮಾಡಿದ್ರು. 60 ಪ್ರತಿಶತ ಕಂಪನಿಯ ಶೇರು ಇವ್ರ ಹೆಸರಲ್ಲೇ ಇದೆ. ಡಿವಿಡೆಂಡ್ ಮೂಲಕ ಇವ್ರು ಸುಮಾರು 400 ಮಿಲಿಯನ್ ಅಮೇರಿಕನ್ ಡಾಲರನ್ನ ಪ್ರತಿವರ್ಷ ಸಂಪಾದಿಸ್ತಾ ಇದ್ದಾರಂತೆ. 

okdiario.com

5) ಮಾರ್ಕ್ ಜುಕರಬರ್ಗ್

ಇವ್ರ ಬಗ್ಗೆ ಹೇಳ್ಬೇಕಂತಿಲ್ಲ. ಫೇಸ್ಬುಕ್ ಸಂಸ್ಥಾಪಕರು. 19ನೇ ವಯಸ್ಸಲ್ಲೇ ಈ ಸಾಮಾಜಿಕ ಜಾಲತಾಣವನ್ನ ಆರಂಭಿಸಿ ಇವತ್ತಿಗೂ ಕೂಡಾ ಎಲ್ಲಾ ಸಮುದಾಯವನ್ನ ತನ್ನತ್ತ ಸೆಳೆಯೋದ್ರಲ್ಲಿ ಯಶಸ್ವಿಯಾದ ವ್ಯಕ್ತಿ. ಇವ್ರ ಒಟ್ಟು ಆಸ್ತಿ 71 ಬಿಲಿಯನ್ ಅಮೇರಿಕನ್  ಡಾಲರ್. 

train2game.files.wordpress.com

4) ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ

ರುಚಿ ತಯಾರಕ ಕಂಪನಿಯನ್ನ ಹುಟ್ಟು ಹಾಕಿದ್ದ ಈ ಬರ್ನಾರ್ಡ್ ಅರ್ನಾಲ್ಟ್ ಸುಮಾರು 72 ಬಿಲಿಯನ್ ಅಮೇರಿಕನ್  ಡಾಲರನ್ನ ಸಂಪಾದಿಸಿದ್ದಾರೆ. ಲೂಯಿಸ್ ವೆಟ್ಟಾನ್ ಮತ್ತು ಸೆಫೋರಾ ಹೆಸರಿನ ಉತ್ಪನ್ನಗಳು ಇವ್ರಗೆ ಸಂಬಂಧಿಸಿದ್ದು. 

luxe.net

3) ವಾರನ್ ಬಫೆಟ್ 

ಜಗತ್ತು ಕಂಡ ಅತ್ಯಂತ ಯಶ್ವಸಿ ಹೂಡಿಕೆದಾರ ಅಂದ್ರೆ ಇವ್ರೇ . ಬರ್ಕ್ ಷೈರ್ ಹಾಥ ವೇ ಕಂಪನಿಯ ಮುಖ್ಯಸ್ಥರಾಗಿರೋ ಇವ್ರು ಸುಮಾರು 84 ಬಿಲಿಯನ್ ಅಮೇರಿಕನ್  ಡಾಲರನ್ನ ಸಂಪಾದಿಸಿದ್ದಾರೆ.  

bitconnect.pt

2) ಬಿಲ್ ಗೇಟ್ಸ್ 

ಶಾಕ್ ಆಗ್ಬೇಡಿ.  18 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಬಿಲಿಗೇಟ್ಸ್ ಅವರು ಈ ವರ್ಷ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಮೈಕ್ರೋಸಾಫ್ಟ್ ಅನ್ನೋ ಬ್ರಹತ್ ಕಂಪನಿಯ ಒಡೆಯರಾಗಿರೋ ಇವ್ರು ಸಂಪಾದಿಸಿದ್ದು ಬರೋಬ್ಬರಿ 90 ಬಿಲಿಯನ್ ಅಮೇರಿಕನ್  ಡಾಲರ್. 

keddr.com

1) ಜೆಫ್ ಬೆಜೊಸ್

ಮೊದಲ ಶತ ಕೋಟ್ಯಧಿಪತಿ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇವ್ರ ಒಟ್ಟು ಆಸ್ತಿ 112 ಬಿಲಿಯನ್ ಅಮೇರಿಕನ್  ಡಾಲರ್. 

cdn01.vulcanpost.com
ನೋಡಿದ್ದಿರಲ್ಲ ಇವ್ರು ಇಷ್ಟು ಹಣ ಸಂಪಾದಿಸಿದ್ರೂ ಇವ್ರ ಜೀವ್ನ ಮಾತ್ರ ಸರಳವಾಗೇ ಇರತ್ತೆ. ಇವ್ರು ಐಷಾರಾಮಿ ಜೀವನಕ್ಕೆ ಎನಾದ್ರೂ ತಗಲಾಕ್ಕಂಡಿದ್ರೆ ಇವತ್ತು ಇವ್ರಗಳ ಹೆಸ್ರು ಈ ಪಟ್ಟಿಯಲ್ಲಿ ಬರ್ತಾ ಇರ್ಲಿಲ್ಲವಾಗಿತ್ತು ನೆನಪಿರ್ಲಿ. ನಮ್ ಕುಂದಾಪ್ರದ ಕಡೆ ಒಂದ್ ಮಾತ್ ಹೇಳ್ತಾರೆ " ಹಡ್ಗನ್ನ ತುಂಬೋಕ್ ಹೋದವ್ನ್ ಬಂದ ಆದ್ರೆ ಹೊಟ್ಟೆ ತುಂಬೋಕ್ಕೋದನ್ ಬರ್ಲೇ ಇಲ್ಲ" ಇದ್ನೆ ಇನ್ನೊಂದ್ ರೀತಿಯಲ್ಲಿ ಹೇಳ್ಬೇಕಂದ್ರೆ ಕೂತು ಉಣ್ಣೋನಿಗೆ ಕುಡಿಕೆ ಹೊನ್ನಿದ್ರೂ ಸಾಲಲ್ಲ ಅಂತ. 

ಮೂಲ: forbes.com