https://s-media-cache-ak0.pinimg.com/564x/a0/35/8f/a0358ff1bf328b301e8569244da39a77.jpg

ಈಗಿನ ಜೀವನಶೈಲಿ ಬದ್ಲಾಗಿದೆ. ಕೂದಲು ಉದುರೋ ಸಮಸ್ಯೆ ಅಂತೂ ಸಾವಿರಾರು ಮಂದಿಗೆ ಆಗ್ತಾ ಇದೆ. ಅದು ಏನು? 20-30 ವಯಸ್ಸಿನೋರ್ಗೆಲ್ಲಾ ಕೂದ್ಲು ಉದುರ್ತಿದ್ಯಲ್ಲಾ ಅಂತ ಯೋಚ್ನೆ ಮಾಡೋಷ್ಟು!

ಪ್ಲ್ಯಾಸ್ಟಿಕ್ ಡಬ್ಬಿಗಳಲ್ಲಿ ಊಟ-ತಿಂಡಿ ಇಡೊದು, ಹಾಲಿನ್ ಪ್ಯಾಕೆಟಿಂದ ಹಿಡಿದು ನೀರಿನ ಬಾಟಲ್, ಮನೇಲಿ ಹಾಕ್ಸ್ಕೊಳ್ಳೊ ನೀರಿನ ಫಿಲ್ಟರ್ ಪ್ರತಿಯೊಂದು ನಮ್ಮ ಕೂದಲು ಮತ್ತೆ ಮೈ ಅರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರ್ತಿದೆ. 

ಪ್ಲ್ಯಾಸ್ಟಿಕ್ ಬಿಸ್ಫೆನಾಲ್-ಎ ಅನ್ನೋ ರಾಸಾಯನಿಕ ವಸ್ತುನ ಬಿಡುತ್ತೆ. ಪ್ಲ್ಯಾಸ್ಟಿಕ್ನಲ್ಲಿ ತಿಂದು ಕುಡಿದು ಮಾಡ್ದಾಗ ಇದು ನಮ್ಮ ಹೊಟ್ಟೆಗೆ ಬಂದು ಸೇರ್ಕೊಂಡು ರಕ್ತಕ್ಕೂ ಸೇರತ್ತೆ. 

ಇದರಿಂದ ಕ್ಯಾನ್ಸರು, ಹ್ರುದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರೋದು ಅಲ್ಲದೇ ಗಂಡಸರಲ್ಲಿ ಪುರುಶತ್ವನೇ ಕಮ್ಮಿ ಆಗುತ್ತಂತೆ!

ಜಿಂಕ್, ಕಾಪರ್, ಸೆಲೆನಿಯಂ ಸೂಕ್ಷ್ಮ ಪೋಷಕಾಂಶಗಳು ಕೂದಲು ಬೆಳೆಯಕ್ಕೆ ಬೇಕೇ ಬೇಕು. ಆದ್ರೆ ಪ್ಲ್ಯಾಸ್ಟಿಕ್ ಬಿಡೊ ನ್ಯಾನೋ ಕಣಗಳೀಂದ ಸಣ್ಣ ಕರುಳು ಅವನ್ನ ಹೀರ್ಕೊಳ್ಳೋ ಸಾಮರ್ಥ್ಯ ಕಳ್ಕೊಂಡ್ಬಿಡತ್ತೆ.

ನಮ್ಮ ಸಣ್ಣ ಕರುಳಿನ ಪೋಷಕಾಂಶಗಳನ್ನು ಹೀರಿಕೊಳ್ಳೋ "ಸೀಲಿಯಾಕ್ ಲೇಯರ್ನಲ್ಲಿ" ಈ ನ್ಯಾನೊ ಕಣಗಳು ಅಂಟಿಕೊಂಡು ಕೂತ್ಬಿಡತ್ತೆ. ಇದರಿಂದ ಏನಾಗತ್ತೆ? ನಮ್ಮ ಸಣ್ಣ ಕರುಳು ಪೋಷಕಾಂಶಗಳನ್ನ ಹೀರ್ಕೊಳ್ಳೊ ಸಾಮರ್ಥ್ಯ ಕಳ್ಕೊಂಡ್ಬಿಡತ್ತೆ. ದೇಹಕ್ಕೆ ಬೇಕಾದ್ದು ಸಿಗಲ್ಲ, ಕೂದಲಿಗೆ ಬೇಕಾದ್ದು ಸಿಗೋಲ್ಲ. 

ಅದಕ್ಕೆ ನೀರನ್ನ ತಾಮ್ರ ಅಥವಾ ಸ್ಟೀಲ್ ಪಾತ್ರೇಲಿ ಶೇಖರಣೆ ಮಾಡಿ ನೀರು ತೊಗೊಳ್ಳುವಾಗ ಜಾಸ್ತಿ ಕಲಕದೆ ಮೇಲಿಂದಾನೇ ತೊಗೊಂಡು ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೇದು.