http://en.bcdn.biz/Images/2018/1/31/ef6a6819-7fe9-4648-8d74-61ba69f0d3de.jpg

ಈ ಪ್ರೀತಿ, ಪ್ರೇಮುದ್ ವಿಚಾರ್ವಾಗಿ ಜಗತ್ತಿನ್ ಯಾವ್ಯಾವ ದೇಶ್ಗಳಲ್ಲಿ ಎಂತೆಂತಾ ಚಿತ್ರವಿಚಿತ್ರವಾದ್ ನಂಬ್ಕೆಗುಳ್ನ ಇಟ್ಕೊಂಡಿದ್ದಾರೆ ಅಂತ ಸ್ವಲ್ಪ ನೋಡೋಣ ಬನ್ನಿ…….

1. ಹೈತಿ ದೇಶದವರ್ ನಂಬ್ಕೆ ಪ್ರಕಾರ ಪೊರಕೆಗೂ ಪ್ರೀತಿಗೂ ಆಗ್ಬರಲ್ಲ

ಪೊರಕೆ ಹಿಡ್ಕೊಂಡ್ ಕಸ ಗುಡ್ಸೊವಂತಾ ಜನ್ರನ್ನ ಹೈತಿ ದೇಶುದ್ ಬ್ರಹ್ಮಚಾರಿಣಿಯರು ಎಷ್ಟು ಮಾತ್ರಕ್ಕೂ ಹತ್ರ ಸುಳಿಯೋಕ್ ಬಿಡಲ್ಲ.  ಇದುಕ್ಕೊಂದ್ ಕಾರ್ಣ ಇದೆ.  ಪೊರಕೆ ಕಡ್ಡೀ  ತುದಿಯೇನಾದ್ರೂ ತಮ್ ಶೂಗುಳ್ ಹತ್ರ ಬಂದ್ರೆ, ತಮ್ ಕನ್ಸಿನ್ ರಾಜ್ಕುಮಾರ್ರು ತಮ್ಮುನ್ನ ಸೆಳ್ಯೋವಂತಾ ರಸಾನುಭವಾನಾ ಎಂದಿಗೂನೂ ಅನುಭವಿಸೋಕ್ಕಾಗಲ್ಲ ಅನ್ನೋದು ಇಲ್ಲಿನ್ ಮದ್ವೆ ಆಗ್ದಿರೋ ಹೆಣ್ಮಕ್ಳು ನಂಬ್ಕೆ ಆಗಿದೆ.

i1.trekearth.com

2. ಸಿಕ್ಕಾಪಟ್ಟೆ ವಯಸ್ಸಿನ ಅಂತರ ಇದ್ರೆ ಅಶುಭ ಅನ್ನೋದು ಚೈನೀಯರ ನ೦ಬ್ಕೆ

ಚೀನಾ ದೇಶ್ದೋರ್ ನಂಬ್ಕೆ ಪ್ರಕಾರ, ಗಂಡು ಮತ್ತು ಹೆಣ್ಣುಗುಳ್ ನಡುವೆ ಮೂರು ಅಥ್ವಾ ಆರು ವರ್ಷಗುಳ್ ಅಂತರ ಇದ್ರೆ ಅದೊಂದು ಅನಾರೋಗ್ಯಕರವಾದ್ ಮದ್ವೆ ಅಥ್ವಾ ಅಮಂಗಳಕರವಾದ್ ಮದ್ವೆ ಅಂತಾ ಅನ್ನುಸ್ಕೊಳ್ಳತ್ತೆ.  ಹೀಗಾಗಿ, ಅಂತಹಾ ಅಮಂಗಲದಿಂದ ಪಾರಾಗೋದಕ್ಕೆ ಚೈನೀಯರು ಆದಷ್ಟರ್ಮಟ್ಟಿಗೆ, ಮದುವೆಯಾಗೋ ಗಂಡು ಮತ್ತೆ ಹೆಣ್ಣುಗುಳ್ ಮಧ್ಯೆ ನಾಲಕ್ಕು ಅಥ್ವಾ ಐದು ವರ್ಷಗುಳ್ ಅಂತ್ರ ಇರೋ ಹಾಗೆ ಸಾಧ್ಯವಾದಷ್ಟರ್ ಮಟ್ಟಿಗೆ ಕಾಳ್ಜಿ ಮಾಡ್ತಾರೆ.

abc.net.au

3. ಶೂಗಳಲ್ಲಿ ನಾಣ್ಯ ಸೇರ್ಸಿಟ್ರೆ ಮದ್ವೆ ವಿಚಾರ್ದಲ್ಲಿ ಒಳ್ಳೇದಾಗುತ್ತೆ ಅನ್ನೋದು ಸ್ವೀಡನ್ ದೇಶ್ದೋರ್ ನ೦ಬ್ಕೆ

ಮದ್ವೆ ವಿಚಾರುಕ್ ಬಂದಾಗ ಸ್ವೀಡನ್ ದೇಶುದ್ ಜನ್ರು ಯಾವುದರ್ ಬಗ್ಗೇನೇ ಆಗ್ಲಿ; ಅದು ಹಳೇದೋ, ಹೊಸಾದೋ, ಸಾಲ ಕೇಳಿ ತಂದಿದ್ದೋ, ಅಥ್ವಾ ನೀಲವರ್ಣದ್ದೋ ಅದ್ಯಾವುದುರ್ ಬಗ್ಗೇನೂ ತಲೆ ಕೆಡಿಸ್ಕೊಳ್ಳಲ್ಲ.  ಇದ್ರು ಬದ್ಲು, ಹೆಣ್ಣಿನ್ ತಂದೆತಾಯ್ಗಳು ತಮ್ ಮಗ್ಳು ಶೂಗುಳಲ್ಲಿ ಒಳ್ಳೇ ಅದೃಷ್ಟಾನಾ ತರೋವಂತಾ ಆಕರ್ಷಣೆಗುಳ್ನ ಇಟ್ಟಿರ್ಬೇಕೂಂತಾ ನಿರೀಕ್ಷೆ ಇರತ್ತೆ.  ಅಂತಾ ಆಕರ್ಷಣೆಗುಳು ಯಶಸ್ವಿಯಾಗಿರೋ ಮತ್ತೆ ಪ್ರೀತಿ, ಪ್ರೇಮ ತುಂಬ್ಕೊಂಡಿರೋ ವೈವಾಹಿಕ ಜೀವ್ನಕ್ಕೆ ಬುನಾದಿಯಾಗತ್ತೆ ಅನ್ನೋದು ಅಲ್ಲಿನ್ ನಂಬ್ಕೆ.  ಬಲಗಾಲಿನ್ ಶೂ ಒಳ್ಗೆ ತಾಯಿ ಹಾಕಿರೋ ಚಿನ್ನುದ್ ನಾಣ್ಯ ಇರ್ಬೇಕು ಮತ್ತೆ ಎಡ್ಗಾಲಿನ್ ಶೂ ಒಳ್ಗಡೆ ತಂದೆ ಹಾಕಿರೋ ಬೆಳ್ಳಿ ನಾಣ್ಯ ಇರ್ಬೇಕು.

en.bcdn.biz

4.  ಅರ್ಮೇನಿಯಾ ದೇಶದ ಕನ್ಯೆಯರು ಹಬ್ಬದ ದಿನ ಉಪ್ಪಿನ ಬ್ರೆಡ್ ತಿನ್ನೋದ್ರಿಂದ ಬಾಳಸಂಗಾತಿ ಸಿಗ್ತಾನೆ ಅನ್ನೋದು ನಂಬ್ಕೆ

ಒಂಟಿಯಾಗಿದ್ದು ವರಾನ್ವೇಷಣೆಯಲ್ಲಿರೋ ಅರ್ಮೇನಿಯಾ ದೇಶುದ್ ಕನ್ಯಾಮಣಿಗುಳು, ಸೈಂಟ್ ಸಾರ್ಗಿಸ್ ಹಬ್ಬದಾಚರಣೆ ಟೈಮಲ್ಲಿ ಉಪ್ಪುಗೂಡಿರೋ ಬ್ರೆಡ್ ತಿನ್ಬೇಕೂಂತಾ ಸಲಹೆ ಮಾಡ್ತಾರೆ.  ಆ ದೇಶುದ್ ನಂಬ್ಕೆ ಪ್ರಕಾರ, ಹಂಗ್ ಮಾಡೋದ್ರಿಂದ, ಆ ಕನ್ಯಾಮಣಿಗುಳಲ್ಲಿ ಒಂಥರದ್ದು ಮಾನ್ಸಿಕವಾದ್ ಕನ್ಸು ಬೀಳತ್ತೆ ಮತ್ತೆ ಆ ಕನ್ಸಲ್ಲಿ ಅವ್ರು ಮುಂದೆ ಮದುವೆಯಾಗೋ ಭಾವೀ ಗಂಡನ್ ಪರಿಚಯ ಮಾನ್ಸಿಕವಾಗಿ ಅವರಿಗಾಗತ್ತೆ; ಅರ್ಥಾತ್ ಅವ್ರ ಮನ್ಸಿಗೆ ಅವ್ರ ಗಂಡ ಆಗೋನು ಯಾರು ಅನ್ನೋ ಕಲ್ಪನೆ ಮೂಡುತ್ತೆ.  ಕನ್ಸಲ್ ಬರೋ ಭಾವೀ ಗಂಡನ್ನ ಅವ್ರು ಗುರ್ತು ಹಿಡೀತಾರೆ.  ಅದು ಹೇಗಂದ್ರೆ, ಉಪ್ಪಿರೋ ಬ್ರೆಡ್ ತಿಂದು, ಜಲಾಂಶ ಕಳ್ಕೊಂಡಿರೋ ಆ ಹುಡಿಗೀಗೆ, ಪುನ: ಅದುನ್ನ ತುಂಬುಸ್ಕೊಳ್ಳೋಕೆ ಅಂತಾ, ಆಕೆ ಮುಂದೆ ಮದುವೆಯಾಗ್ಬೇಕಾಗಿರೋ ಅದೇ ಹುಡುಗನೇ ಕನ್ಸಲ್ಲಿ ಬಂದು ಆಕೆಗೆ ನೀರನ್ನ ಕೊಡ್ತಾನೆ!

images-gmi-pmc.edge-generalmills.com

5.  ಬೆಸ ಸಂಖ್ಯೆಯಲ್ಲಿ ಹೂಗುಳ್ನ ಕೊಡೋದು ಮದುವೆ ವಿಚಾರ್ದಲ್ಲಿ ಶುಭಸೂಚಕ ಅಂತಾ ನಂಬ್ತಾರೆ ರಷ್ಯನ್ನರು

ಯಾರನ್ನ ಬಾಳಸಂಗಾತಿ ಆಗ್ಬೇಕೂಂತಾ ಬಯಸ್ತಾರೋ ಅಂತಾವ್ರಿಗೆ ಬೆಸ ಸಂಖ್ಯೆಯಲ್ಲಿ ಹೂಗುಳ್ನ ಕೊಡೋದು ಗೌರವ ಮತ್ತೆ ಮೆಚ್ಚುಗೆಯ ಸಂಕೇತ ಅಂತಾ ರಷ್ಯನ್ನರು ಅಂದ್ಕೋತಾರೆ.  ಇದುಕ್ಕೆ ತದ್ವಿರುದ್ಧವಾಗಿ ಸರಿ ಸಂಖ್ಯೆಯಲ್ಲಿ ಹೂಗುಳ್ನ ಕೊಡೋದು ರಷ್ಯನ್ನರ ಅಂತ್ಯ ಸಂಸ್ಕಾರದ ಒಂದ್ ಪದ್ಧತಿ.  ಹಿಂಗಾಗಿ, ಸರಿ ಸಂಖ್ಯೆಯಲ್ಲಿ ಹೂಗುಳ್ನ ಕೊಡೋದೂಂತಂದ್ರೆ ರಷ್ಯನ್ನರ ಪಾಲಿಗೆ ಅದು ಅಶುಭ ಸೂಚಕ ಅಂತ ಅರ್ಥ.

en.bcdn.biz

6. ಇಡೋ ಹೆಜ್ಜೆ ಮೇಲೆ ನಿಗಾ ಇರ್ಬೇಕು ಅನ್ನೋದು ಸ್ವೀಡನ್ ದೇಶ್ದೋರ್ ಬಲ್ವಾದ್ ನಂಬ್ಕೆ

ಸ್ವೀಡಿಷ್ ಭಾಷೇನಲ್ಲಿ ಕೊಳಕು ನೀರನ್ನ ಗುರ್ತ್ಸೋ ಪದ "ಎ" ಅಕ್ಷರ್ದಿಂದ ಆರಂಭ ಆಗತ್ತೆ ಮತ್ತ್ ಹಾಗೇನೇ ಪರಿಶುದ್ಧವಾದ್ ನೀರನ್ನ ಗುರ್ತ್ಸೋ ಪದ "ಕೆ" ಅಕ್ಷರ್ದಿಂದ ಆರಂಭವಾಗತ್ತೆ.  ಈ ದೃಷ್ಟಿಯಿಂದ ಹೇಳೋದಾದ್ರೆ ನಾವ್ಗುಳು ಈ "ಎ" ಅಕ್ಷರಾನಾ ಕೊಳಕು ನೀರು ಅಥ್ವಾ ಗಬ್ಬು ವಾಸ್ನೆ ಹೊಡೆಯೋ ನೀರಿನ್ ಜೊತೆ ತಳುಕು ಹಾಕ್ತೀವಿ ಮತ್ತೆ ಹಾಗೇನೇ "ಕೆ" ಅಕ್ಷರಾನಾ ಪರಿಶುದ್ಧವಾದ್ ನೀರ್ಗಿರೋ ಸಂಕೇತಾಕ್ಷರ ಅಂತಾ ಕಲ್ಪುಸ್ಕೋತೀವಿ ತಾನೇ ?  ಆದ್ರೆ, ಸ್ವೀಡನ್ ದೇಶುದ್ ಜನ್ಗುಳು ಈ ಅಕ್ಷರ್ಗುಳ್ನ ಕ್ರಮ್ವಾಗಿ ಪ್ರೇಮಭಗ್ನ (ವಿರಹ) ಮತ್ತೆ ಪ್ರೀತಿ, ಪ್ರೇಮ್ಗುಳ್ ಜೊತೆ ಗುರ್ತುಸ್ಕೋತಾರೆ.  ಹಿಂಗಾಗಿ, ಸ್ವೀಡನ್ ದೇಶುದ್ ಜನರ್ ದೃಷ್ಟೀನಲ್ಲಿ "ಕೆ" ಅಕ್ಷರದ್ ಮೇಲೆ ಕಾಲಿಡೋದು ಅಂದ್ರೆ ಅದು ನಿಮ್ಮುನ್ನ ಭಾಗ್ಯವಂತ್ರನ್ನಾಗ್ಸುತ್ತೆ ಮತ್ತೆ ಹಾಗೇನೇ "ಎ" ಅಕ್ಷರದ್ ಮೇಲೆ ಕಾಲಿಟ್ರೆ ನಿಮ್ ಪ್ರೇಮ ಜೀವ್ನ ಅಷ್ಟೇನೂ ಚೆನ್ನಾಗಿರಲ್ಲ ಅಂತ ಅರ್ಥೈಸಲ್ಪಡತ್ತೆ.

content.jdmagicbox.com

7.  ಬಾಳೆಗಿಡುದ್ ಜೊತೆ ಮದ್ವೆ ಮಾಡಿದ್ರೆ ದೋಷ ಪರಿಹಾರ ಅನ್ನೋದು ನಮ್ಮ ಭಾರತೀಯರ ನಂಬ್ಕೆ 

ಕುಜದೋಷವಿರೋ ಹುಡ್ಗೀರ್ ಜಾತ್ಕಾನಾ ಪರಿಶೀಲನೆ ಮಾಡುದ್ರೆ, ಶನಿ ಮತ್ತು ಮಂಗಳ ಗ್ರಹಗಳೆರಡೂನೂ ಲಗ್ನ, ಪ್ರೀತಿ, ಮತ್ತೆ ಸಂಬಂಧಗುಳ್ಗೆ ಸಂಬಂಧ ಪಟ್ ಹಾಗೆ ಏಳ್ನೇ ಮನೆಯಲ್ಲಿರ್ತಾವೆ.  ಈ ಸಂಗ್ತಿಯಂತೂ ಭಾಳಾ ಅಶುಭ ಅಂತಾ ಅಷ್ಟೇ ಅಲ್ಲ, ಜೊತೆಗೆ ಇದೊಂದು ದೊಡ್ಡ ದೋಷ ಅಥ್ವಾ ಒಂಥರಾ ಶಾಪದ ಹಾಗೆ ಅನ್ನೋ ನಂಬ್ಕೆ ನಮ್ಮ ಭಾರತೀಯರದ್ದಾಗಿದೆ.  ಈ ಕುಜದೋಷ ನಿವಾರಣೆಗೋಸ್ಕರ, ಅಂತಾ ಕುಜದೋಷ ಇರೋ ಹುಡ್ಗೀರು ಮೊದ್ಲು ಬಾಳೆಗಿಡಾನಾ ಮದ್ವೆ ಮಾಡ್ಕೋಬೇಕು.  ಹೀಗೆ ಒಂದ್ಸಲ ಆ ಹುಡ್ಗೀದ್ ಶಪಥ, ಶಾಪ, ದೋಷ್ಗುಳೇನುದ್ರೂ ನಿವಾರ್ಣೆ ಆದ್ ಮೇಲೆ ಆ ಬಾಳೆಗಿಡಾನಾ ಕಡುದ್ಬಿಡ್ತಾರೆ.  ಇದ್ರರ್ಥ, ಅಲ್ಲಿಗೇ ಆಕೆಗ್ ಅಂಟ್ಕೊಂಡಿದ್ ಶಾಪ, ದೋಷ್ಗುಳೆಲ್ಲಾ ನಿವಾರ್ಣೆ ಆದ್ವು ಅಂತಾ.  ಹೀಗೆ ದೋಷಾನಾ ನಿವಾರುಸ್ಕೊಂಡ್ ಮೇಲೆ ಆಕೆ ಯೋಗ್ಯ ಹುಡುಗುನ್ ಜೊತೆ ನೆಮ್ಮದಿಯಾಗ್ ಮದ್ವೆ ಮಾಡ್ಕೋಬೋದು.

content.jdmagicbox.com

8.  ಬೇಗ್ ಮದ್ವೆ ಆಗ್ಬೇಕೂಂತಾದ್ರೆ ಪ್ರೇಮಿಗುಳ್ ಮಧ್ಯೆ ಊಟುಕ್ಕೆ ಕೂತ್ಕೋಬೇಕು ಅನ್ನೋದು ರಷ್ಯನ್ನರ್ದು ಇನ್ನೊಂದ್ ನಂಬ್ಕೆ

ಒಂದ್ವೇಳೆ ನೀವು ಬ್ರಹ್ಮಚಾರಿಯೋ ಅಥ್ವಾ ಬ್ರಹ್ಮಚಾರಿಣಿಯೋ ಆಗಿದ್ರೆ, ಊಟುದ್ ಟೇಬಲ್ನಲ್ಲಿ ಇಬ್ರು ಪ್ರೇಮಿಗುಳ್ ಮಧ್ಯ ಕೂತ್ಕೋಳ್ಳೊವಂತಾ ಕುತೂಹಲ ನಿಮ್ಗಿರೋ ಸಾಧ್ಯತೆ ಇದೆ.  ಆದ್ರೆ, ರಷ್ಯನ್ನರ ನಂಬ್ಕೆ ಪ್ರಕಾರ, ನಿಮ್ಗೆ ಬರೀ ಅಂತಾ ಒಂದ್ ಕುತೂಹಲ ಅಷ್ಟೇ ಇದ್ರೆ ಸಾಲ್ದು, ಬದ್ಲಿಗೆ, ನೀವು ನಿಜ್ವಾಗ್ಲೂ ಹಂಗೇ ನಡ್ಕೋಬೇಕು.  ಒಂದ್ವೇಳೆ ನೀವು ಹಾಗೇನಾದ್ರೂ ಪ್ರೇಮಿಗುಳ್ ಮಧ್ಯೆ ಊಟುಕ್ ಕೂತ್ಕೊಳ್ದೇ ಬೇರೆ ಇನ್ಯಾವುದೋ ಮೂಲೇನಲ್ ಕೂತು ಊಟ ಮಾಡುದ್ರಿ ಅಂತಾದ್ರೆ, ಮುಂದಿನ್ ಏಳು ವರ್ಷಗಳ್ವರೆಗೆ ನಿಮುಗ್ ಮದ್ವೇನೇ ಆಗಲ್ಲ ಅನ್ನೋದು ರಷ್ಯನ್ನರ್ ನಂಬ್ಕೆ.

9. ಮದುಮಗ್ಳ ಅಂಗೈ ಗೋರಂಟಿಲಿ ಅಡಗಿರೋ ಮದುಮಗನ್ ಹೆಸ್ರ್ರು ಮದುಮಗನೇ ಪತ್ತೆ  ಮಾಡ್ಬೇಕು ಅನ್ನೋದು ಭಾರತೀಯರ ಇನ್ನೊಂದ್ ನಂಬ್ಕೆ 

ಮದ್ವೆ ಟೈಮ್ನಲ್ಲಿ ನಮ್ ಭಾರತೀಯ ಹೆಣ್ಮಕ್ಳು, ತಮ್ಮ ಅಂಗೈಗುಳ್ ಮೇಲೆ ಅಂದೆಂಥಾ ಸುಂದರ ಮತ್ತೆ ಅದ್ಭುತವಾಗಿರೋ ಮೆಹಂದಿ ಡಿಸೈನ್ಗುಳ್ನ ಹಾಕ್ಕೊಂಡಿರ್ತಾರೆ ಅನ್ನೋ ಸಂಗ್ತಿ ನಮ್ಗೆಲ್ಲಾರ್ಗೂನೂ ಗೊತ್ತೇ ಇದೆ ಅಲ್ವಾ ?    ಆದ್ರೆ, ಮದುಮಗುಳ್ ಕೈಮೇಲಿರೋ ಈ ಮೆಹಂದೀಗ್ ಸಂಬಂಧ್ಸಿರೋ ಹಾಗೆ ಭಾಳಾ ಜನುಕ್ಕೆ ಗೊತ್ತಿಲ್ದೇ ಇರೋ ವಿಷ್ಯ ಏನಪ್ಪಾ ಅಂದ್ರೆ, ಆಕೆ ಕೈಮೇಲಿರೋ ಆ ಕ್ಲಿಷ್ಟಕರವಾದ್ ಮೆಹಂದಿ ಡಿಸೈನ್ ಮಧ್ಯಾನೇ, ಆಕೆಯ ಭಾವೀ ಗಂಡನ್ ಹೆಸ್ರು ಅಡ್ಗಿರುತ್ತೆ.  ಮುಂದೆ ಆಕೆ ಕೈಹಿಡಿಯೋನು ಆಕೆಯ ಕೈಮೇಲಿರೋ ಅವನದ್ದೇ ಹೆಸ್ರನ್ನ ಅವ್ನಿಗೆ ಪತ್ತೆ ಹಚ್ಚೋಕೆ ಸಾಧ್ಯ ಆಗ್ಬೇಕು.  ಒಂದ್ವೇಳೆ ಹಾಗಾದ್ರೆ, ಅವ್ರಿಬ್ರ ದಾಂಪತ್ಯ ಜೀವ್ನ ಚೆನ್ನಾಗಿರತ್ತೆ ಅಂತಾ ಅದ್ರರ್ಥ.  ಹಾಗೊಂದ್ ವೇಳೆ ಆತನ್ಗೆ ಅದು ಸಾಧ್ಯ ಆಗ್ದೇ ಹೋದ್ರೆ, ಪರಿಹಾರದ್ ರೂಪ್ದಲ್ಲಿ, ಅವನು ತನ್ ಭಾವೀ ಪತ್ನಿಗೆ ಏನಾದ್ರೊಂದು ಉಡುಗೋರೇನಾ ಕೊಡ್ಬೇಕಾಗತ್ತೆ.

10. ಮದುವೆ ಗಂಡು, ತನ್ನ ಭಾವೀ ಮಾವ ಆಗೋನಿಗೆ ಉಡುಗೊರೆ ಕೊಡ್ಬೇಕು ಅನ್ನೋದು ಪಿಜಿ ದೇಶ್ದೋರ್ ನಂಬ್ಕೆ

ಪಿಜಿ ದೇಶ್ದಲ್ಲಿ, ಮದ್ವೆ ಪ್ರಸ್ತಾಪ ಮಾಡೋ ಟೈಮಲ್ಲಿ, ಹುಡುಗ್ನಾದೋನು ತನ್ ಭಾವೀ ಮಾವನಿಗೆ ಒಂದ್ ಉಡುಗೊರೆನಾ ಕೊಡ್ಬೇಕು ಅನ್ನೋ ನಿರೀಕ್ಷೆ ಇರತ್ತೆ.  ಉಡುಗೊರೆ ಅಂತಾ ಬೇರೆ ಏನುನ್ ಕೊಟ್ರೂನೂವೇ, ಅದರ್ ಜೊತೆಗೆ ತನ್ ಭಾವೀ ಮಾವ್ನಿಗೆ ಅತ್ಯಗತ್ಯವಾಗಿ ತಿಮಿಂಗಿಲುದ್ ಹಲ್ಲೊಂದುನ್ನ ಉಡುಗೊರೆಯಾಗ್ ಕೊಡ್ಲೇಬೇಕು ಅಂತಾ ಅಲ್ಲಿನ್ ನಂಬ್ಕೆ ಹೇಳತ್ತೆ.  ಹೀಗ್ ಮಾಡೋದ್ರಿಂದ ಮುಂದೆ ಆ ದಂಪತಿಗುಳ್ ದಾಂಪತ್ಯ ಜೀವ್ನಾ ಅನ್ನೋದು ವರ್ಷಾನುಗಟ್ಲೆ ಸುಖಮಯವಾಗಿರತ್ತೆ ಅನ್ನೋದು ಪಿಜಿಯನ್ನರ ನಂಬ್ಕೆ.

static01.nyt.com