https://files.brightside.me/files/news/part_11/110505/278605-36-1000-1007453893-1474623434.jpg

ವಯಸ್ಸಾಗ್ತಿದ್ದಂಗೇ ಪ್ರಪಂಚದಲ್ಲಿ ಒಂಥರಾ ಆಸಕ್ತಿ ಕಡಿಮೆ ಆಗ್ತಾ ಬರುತ್ತೆ… ಆದರೆ ಇಲ್ಲಿರೋ ಫೋಟೋಗಳ್ನ ಒಂದ್ಸಲ ನೋಡಿ, ಒಳ್ಳೇ ಮಕ್ಕಳ ತರಹ ಕುತೂಹಲ ತುಂಬಿಕೊಳ್ಳುತ್ತೆ. ಇಲ್ಲಿರೋ ಫೋಟೋಗಳನ್ನ ನೋಡ್ತಿದ್ರೆ ಇಂತ ಜಾಗಾನೂ ಇದೀಯಾ ಅಂದ್ಕೋತೀವಿ… ಹೌದು ನಿಜವಾಗ್ಲೂ ಇದ್ದಾವೆ. ಯಾವ್ದೊ ಫಿಲಂಗೆ ಸೆಟ್ ಹಾಕ್ದಂಗೆ ಕಾಣೋ ಈ ಜಾಗಗಳು ಇರೋದು ನಮ್ ಭೂಮಿ ಮೇಲೇನೆ. ಕೆಲವನ್ನ ನೋಡ್ತಿದ್ರೆ ಸ್ವರ್ಗ ಅಂದ್ರೆ ಇದೇನಾ ಅನ್ಸತ್ತೆ. ಇನ್ ಕೆಲವಂತೂ ಪೇಂಟಿಂಗ್ ತರ ಕಾಣ್ತಾವೆ. ಏನೇ ಆಗ್ಲಿ ಈ ಜಾಗಗಳು ನಿಜವಾಗ್ಲೂ ಇದ್ದಾವೆ ಅಂದ್ರೆ ನಂಬಕ್ಕೇ ಆಗಲ್ಲ.

1. ಲಸ್ಸೇನ್ ವಾಲ್ಕೆನೋ ಪಾರ್ಕ್, ಯುಎಸ್ಎ

ನೋಡೋದಕ್ಕೆ ಯಾರೋ ಪೇಂಟಿಂಗ್ ಮಾಡ್ತಂಗೆ ಕಾಣೋ ಇದು ಉತ್ತರ ಕ್ಯಾಲಿಫೋರ್ನಿಯಾದಲ್ಲಿದೆ. ನಿಧಾನಕ್ಕೆ ಲಾವಾರಸ ಮೇಲೆ ಬಂದು ಈ ರೀತಿ ಸುಂದರ ಜಾಗಾನ ನಿರ್ಮಿಸಿದೆ. ಸಾಮಾನ್ಯವಾಗಿ ಜ್ವಾಲಾಮುಖಿ ಅಂದ್ರೆ ಭಯ ಆಗುತ್ತೆ. ಆದ್ರೆ ಇಲ್ಲಿನ ನೋಟಾನೇ ಬೇರೆ. 

2. ಐಸ್-ಲ್ಯಾಂಡಲ್ಲಿರೋ 'ಜೋಕುಲ್ ಔರ್ಲಾನ್' ಅನ್ನೋ ನೀರ್ಗಲ್ಲಿನ ಕೊಳ ಇದು

ಅಟ್ಲಾಂಟಿಕ್ ಸಮುದ್ರದಿಂದ ಬರುವ ನೀರ್ಗಲ್ಲುಗಳಿಂದ ನಿರ್ಮಾಣ ಆಗಿರೋ ಜಾಗ ಇದು. ಇದು ಐಸ್‌ಲ್ಯಾಂಡಿನಲ್ಲಿದೆ. ಇದ್ರ ಉದ್ದ 1.5 ಕಿ.ಮೀ, ಆಳ 200 ಮೀ. ಇದೆ. 

3. ಚಿಲಿ ದೇಶದ ಪಟಗೋನಿಯಾದಲ್ಲಿರೋ ಮಾರ್ಬಲ್ ಗುಹೆಗಳು

ನೋಡ್ತಿದ್ರೆ ಆಯಿಲ್ ಪೇಂಟಿಂಗ್ ತರ ಕಾಣುತ್ತೆ. ಆದರೆ ಇದು ಮಾರ್ಬಲ್‌ಗಳಿಂದ ನಿರ್ಮಾಣ ಆಗಿರೋ ಗುಹೆ. ನೀರಿನ ಅಲೆಗಳು ತಾಗಿತಾಗಿ 6,0000 ವರ್ಷಗಳಲ್ಲಿ ಈ ರೀತಿ ಸುಂದರವಾಗಿರೋ ಗುಹೇನೆ ಕಡೆದುಬಿಟ್ಟಿವೆ. ಮಾರ್ಬಲ್ ಕೆಥೆಡ್ರಲ್ ಅಂತಲೂ ಇದನ್ನ ಕರೀತಾರೆ. 

4. ಬ್ರೆಜಿಲ್ನ ಅಮೆಜಾನ ನದಿ ಬಳಿ ಇರೋ ಅನವಿಲ್‌ಹನಾಸ್ ನ್ಯಾಶನಲ್ ಪಾರ್ಕ್

ಅಮೆಜಾನ್ ನದಿನೇ ಒಂದು ರಮ್ಯವಾದಂತಹ ಜಾಗ. ಇನ್ನು ಅದರ ಸುತ್ತಮುತ್ತ ಇರೋ ಜಾಗಗಳೂ ಅಷ್ಟೇ ಕಣ್ಣಿಗೆ ಹಬ್ಬ ಇದ್ದಂಗೆ ಇರ್ತಾವೆ. ಆ ತರಹದ್ದೇ ಜಾಗ ಇದು. 

5. ಐಸ್‌‍ಲ್ಯಾಂಡಿನ ರಿವರ್ ವ್ಯೂ

6. ಫ್ಲೈ ಗ್ಲೇಸಿಯರ್, ಯುಎಸ್ಎ

ಯುಎಸ್ಎದ ನೇವಾಡದಲ್ಲಿದೆ. ಇದು ಮನುಷ್ಯ ನಿರ್ಮಿಸಿರೋ ಅಂತ ನೀರ್ಗಲ್ಲು. 5 ಅಡಿ ಎತ್ತರ, 12 ಅಡಿ ಅಗಲ ಇದೆ. 

7. ಜಪಾನ್ ಕಾಡಲ್ಲಿ ಮಿಂಚು ಹುಳುಗಳ ಚಿತ್ತಾರ

8. ಬೊಲಿವಿಯಾದ ಸಾಲ್ಟ್ ಫ್ಲ್ಯಾಟ್ – ಸಲಾರ್ ಡಿ ಯೂನಿ

ಜಗತ್ತಿನ ಅತಿದೊಡ್ಡ ಸಾಲ್ಟ್ ಫ್ಲ್ಯಾಟ್ ಇದು. ಇದರ ವಿಸ್ತೀರ್ಣ 10, 582 ಚದರ ಕಿ.ಮೀಗಳಷ್ಟಿದೆ. ನೆಲ ಯಾವುದೋ ಆಕಾಶ ಯಾವ್ದೋ ಅನ್ನೋ ತರಹ ಕಾಣುತ್ತದೆ. 

9. ಚೈನಾನಲ್ಲಿರೋ ರೈನ್ ಬೋ ಮೌಂಟೇನ್

ಕಾಮನಬಿಲ್ಲಿನಂತೆ ಸುಂದರವಾಗಿರೋ ಈ ರೀತಿಯ ಬೆಟ್ಟಗಳಿರೋದು ಚೈನಾದ ಝಾಂಗೆ ಡನ್‌ಕ್ಸಿಯಾ ಅನ್ನೋ ಜಾಗದಲ್ಲಿ. ಪ್ರಕೃತಿ ಇದನ್ನ ನಿರ್ಮಿಸೋಕೆ ತಗೊಂಡಿದ್ದು 240 ಲಕ್ಷ ವರ್ಷ. ಮಿನರಲ್ ಪದರಗಳು ಒಂದರ ಮೇಲೊಂದು ಕೂತ ಕಾರಣ ಈ ರೀತಿ ಕಾಣ್ತಾವೆ. 

10. ವೆನುಜುವೆಲಾದ ಮೌಂಟ್ ರೊರೈಮಾ

ಇದನ್ನ ಮೊದಲು 1596ರಲ್ಲಿ ಸರ್ ವಾಲ್ಟರ್ ರಲೇಗ್ ಅನ್ನೋವ್ರು ಕಂಡುಹಿಡಿದ್ರು. ಇದು 31 ಚ.ಕಿ.ಮೀವರೆಗೂ ಹಬ್ಬಿದೆ. 

11. ಆಂಟೆಲೋಪ್ ಕ್ಯಾನ್‌ಯಾನ್ (ಕಂದಕ), ಯುಎಸ್ಎ

ಇದು ಅರಿಜೋನಾದ ಪೇಜ್ ಪ್ರದೇಶದಲ್ಲಿದೆ. ಇದರ ಅಳ 120 ಅಡಿ ಇದೆ. ಸುಣ್ಣದ ಕಲ್ಲಿನಿಂದ ಆಗಿರೋ ಅಂತ ರಚನೆ ಇದು.  ಫೋಟೋಗ್ರಾಫರುಗಳ ನೆಚ್ಚಿನ ಜಾಗ ಇದು. 

12. ಮಡಗಾಸ್ಕರ್‌ನಲ್ಲಿರೋ ಸ್ಟೋನ್ ಫಾರೆಸ್ಟ್ – ಸಿಂಜಿ ಡಿ ಬೆಮರಾಹ

ಲೈಮ್‌ಸ್ಟೋನ್‌ಗಳಿಂದ ರಚನೆ ಆಗಿರೋ ಬೆಟ್ಟಗಳಿವು. ಇಲ್ಲಿ ಬರಿಗಾಲಲ್ಲಿ ನಡಿಯೋದು ಕಷ್ಟ. ಮಲಗಾಸಿ ಭಾಷೆಯಲ್ಲಿ ಸಿಂಜಿ ಅಂದ್ರೆ ಬರಿಗಾಲಲ್ಲಿ ಓಡಾಡೋಕೆ ಆಗಲ್ಲ ಎಂದರ್ಥ ಅಂತೆ. 

13. ಇಥಿಯೋಫಿಯಾದ ಡಲ್ಲೋಲ್ ಜ್ವಾಲಾಮುಖಿ

ಈ ಜ್ವಾಲಾಮುಖಿ 1926ರಲ್ಲಿ ಉಕ್ಕಿಹರಿದಾಗ ಕಾಲಕ್ರಮೇಣ ನಿರ್ಮಾಣ ಆಗಿರೋ ಅಂತ ಪ್ರದೇಶ ಇದು. ಸಲ್ಫರ್ ಮತ್ತೆ ರಂಜಕ ಸೇರಿಕೊಂಡು ಈ ರೀತಿಯ ಬಣ್ಣಕ್ಕೆ ಕಾರಣವಾಗಿದೆ. 

14. ನ್ಯೂಜಿಲೆಂಡಿನ ಗುಹೆಯೊಂದರಲ್ಲಿ ಮಿಣುಕು ಹುಳುಗಳ ನರ್ತನ

15. ಆಸ್ಟ್ರೇಲಿಯಾದ ಪಿಂಕ್ ಲೇಕ್

ಇದೊಂದು ಉಪ್ಪು ನೀರಿನ ಸರೋವರ. ಸಾಮಾನ್ಯವಾಗಿ ಇದು ಪಿಂಕ್ ಕಲರಲ್ಲಿ ಕಾಣಲ್ಲ. ಆದ್ರೆ ಹಸಿರು ಪಾಚಿ ಈ ರೀತಿ ಬದಲಾಗೋದ್ರಿಂದ ನೀರು ನಸುಗೆಂಪು ಬಣ್ಣದಲ್ಲಿ ಕಾಣುತ್ತೆ. 

16. ಬಹಮಾಸ್‌ನ ಎಕ್ಸುಮಾಸ್‌ನಲ್ಲಿರೋ ನಾರ್ಮನ್ಸ್ ಕೇಗೆ ಫ್ಲೈಟ್ ಬಿದ್ದಾಗ

ಬಹಮಾಸ್‌ನ ಒಂದು ಸಣ್ಣ ದ್ವೀಪ ಇದು. ಡ್ರಗ್ ಸ್ಮಗ್ಲಿಂಗ್‌ಗೆ ಈ ಜಾಗ ತುಂಬಾ ಫೇಮಸ್. 

17. ಬ್ರೈಡೆಡ್ ರಿವರ್, ಐಸ್‌ಲ್ಯಾಂಡ್

18. ತಾಂಜಾನೇಯಾದ ಲೇಕ್ ನಾಟ್ರನ್

ಇದೊಂದು ಉಪ್ಪು ಮತ್ತೆ ಸೋಡಾ ಲೇಕ್ ಅಂತ್ಲೇ ಪ್ರಸಿದ್ಧಿ. ಇದು ಕೀನ್ಯಾ ಗಡಿಪ್ರದೇಶಕ್ಕೆ ಹತ್ತಿರದಲ್ಲಿದೆ. ಇದರ ಒಟ್ಟು ವಿಸ್ತೀರ್ಣ 1040 ಚದರ ಕಿ.ಮೀ.  

19. ಚೈನಾದ ಟಿಯಾಂಜಿ ಬೆಟ್ಟಗಳು

ಮಾರ್ಬಲ್‍ಗಳಿಂದ ರಚನೆ ಆಗಿರೋ ಬೆಟ್ಟಗಳಿವು. ಇಲ್ಲಿರೋ ಬೆಟ್ಟಗಳನ್ನು ನೋಡಕ್ಕೆ ರೋಪ್ ವೇ ಹಾಕಿದ್ದಾರೆ. ಇವು 67 ಚದರ ಕಿ.ಮೀಗಳ ತನಕ ಹಬ್ಬಿಕೊಂಡಿವೆ. ಇಲ್ಲಿರೋ ಅತಿ ಎತ್ತರದ ಪರ್ವತ 1,262 ಮೀಟರ್ ಇದೆ.

20. ಮೆಕ್ಸಿಕೋದ ಕ್ರಿಸ್ಟಲ್ ಗುಹೆ – ನೈಕ ಮೈನ್

ಇಲ್ಲಿ ಸೀಸ, ಜಿಂಕ್ ಮತ್ತೆ ಬೆಳ್ಳಿಯ ಗಣಿಗಳಿವೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಸೆಲೆನೈಟ್ ಹರಳುಗಳು ಸಿಗುತ್ತವೆ. ಇಲ್ಲಿನ ಗುಹೆಗಳನ್ನ ಅಧ್ಯಯ ಮಾಡೋದು ಕಷ್ಟ. ವಿಶೇಷ ಉಡುಪು ಮತ್ತೆ ಆಕ್ಸಿಜನ್ ಚೀಲಗಳು ಇರ್ಲೇಬೇಕು. ಇಲ್ಲಾ ಅಂದ್ರೆ ಉಸಿರುಗಟ್ಟಿ ಸಾಯೋ ಅಂತ ಪರಿಸ್ಥಿತಿ ಇದೆ.