https://www.holidayextras.co.uk/images/holidayextras-blog/Alpamayo-Peru-Worlds-Most-Beautiful-Mountain.jpg

ಹಾಗೆ ಮಾತ್ ಮಾತಲ್ಲಿ ಹೇಳುವಾಗ ಕೇಳಿರ್ತೀವಿ, ಮಗ ಇದ್ರೆ ಖಡಕ್ಕಾಗಿ ಪರ್ವತ ನಿಂತಂಗ್ ನಿಲ್ಬೇಕು ಅಂತ, ಕಷ್ಟಾನ ಈ ಪರ್ವತಗಳ ರೀತೀನೇ ಎದುರಿಸಬೇಕು. ಪ್ರಪಂಚದಲ್ಲಿ ಎಷ್ಟೆಲ್ಲಾ ಪರ್ವತಗಳು ಇರಬಹುದು. ಅದ್ರಲ್ಲಿ ಟಾಪ್ ಸ್ಥಾನದಲ್ಲಿ ಇರುವ ಪರ್ವತಗಳ ಬಗ್ಗೆ ಇವತ್ತು ತಿಳ್ಕೊಳೋಣ ಬನ್ನಿ 

1. ಅನ್ನಪೂರ್ಣ್ ಐ – 8091 ಮೀ 

ನೇಪಾಳದ ಚೊ ಓಯೋ ಎಂಬ ಜಾಗದಲ್ಲಿದೆ. ಹತ್ತಲು ತುಂಬಾ ಕಷ್ಟ ಆಗೋ ಪರ್ವತಗಳಲ್ಲಿ ಇದೂ ಒಂದು 

summitpost.org

2. ನಂಗಾ ಪರ್ವತ – 8126 ಮೀ

ಇದನ್ನ ಅಲ್ಲಿನ ಜನ ಡೈಮಿರ್ ಅಂತಾನೂ ಡಿಯೋ ಮಿರ್ ಅಂತಾನೂ ಕರೀತಾರೆ. ಇದರ ಮೂಲ ಪಾಕಿಸ್ತಾನದ ದೌಲಾಗಿರಿ. ಇದನ್ನ ಹತ್ತಕ್ಕೆ ಹೋಗಿ ಸಿಕ್ಕಾಪಟ್ಟೆ ಜನ ಜನ ಜೀವ ಕಳ್ಕೊಂಡಿದಾರೆ, ಇದನ್ನ ಕಿಲ್ಲರ್ ಮೌಂಟೈನ್ ಅಂತಾನೂ ಕರೀತಾರೆ 

i2.wp.com

3. ಮನಸ್ಲು ಪರ್ವತ – 8163 ಮೀ

ನೇಪಾಳದ ಚೊ ಓಯೋ ಎಂಬ ಜಾಗದಲ್ಲಿದೆ. ಇದರ ಹೆಸರನ್ನ ಸಂಸ್ಕೃತದ ಮನಸ್ ಎಂಬ ಪದದಿಂದ ಬಂದಿದೆ. ಇದನ್ನ ಆ "Mountain of Spirit" ಅಂತ ಕರೀತಾರೆ 

d3hne3c382ip58.cloudfront.net

4. ದೌಲಾಗಿರಿ ಐ – 8167 ಮೀ 

ಇದೂ ನೇಪಾಳಕ್ಕೆ ಸೇರತ್ತೆ, ಇದೂ ಭಾಗ ಆಗಿತ್ತು. ಮೊದಲು ಇದನ್ನ ಸ್ವಿಟ್ಜರ್ಲ್ಯಾಂಡ್ ಆಕ್ರಮಿಸಿಕೊಂಡಿತು. ನಂತರ ಆಸ್ಟ್ರೇಲಿಯಾ, ನೇಪಾಳ ಹೀಗೆ ಒಬ್ಬರಾದಮೇಲೆ ಒಬ್ಬೊಬ್ಬರು ಆಕ್ರಮಿಸಿಕೊಂಡರು. 

upload.wikimedia.org

5. ಚೊ ಓಯೋ – 8188 ಮೀ

ಇದು ಮೌಂಟ್ ಎವರೆಸ್ಟಿನ ಒಂದು ಭಾಗ. ನೇಪಾಳ ಮತ್ತು ಚೀನಾಗೆ ಸೇರತ್ತೆ ಇದು. ಇರೋದ್ರಲ್ಲಿ ಸ್ವಲ್ಪ ಸುಲಭವಾಗಿ ಹತ್ತಬಹುದು ಅಂದ್ರೆ ಇದನ್ನೇ ಅಂತೆ

mountainprofessor.com

6. ಮಾಕಲು – 8485 ಮೀ

ಇದು ಭಾರತಕ್ಕೂ ಸೇರತ್ತೆ ಚೀನಾಗು ಸೇರತ್ತೆ. ಇದರ ಬುಡದಲ್ಲಿ ಒಂದು ಸುಂದರವಾದ ನದಿ ಇದೆ. ಪಕ್ಕಾ ಪಿರಮಿಡ್ ಆಕಾರದಲ್ಲಿ ಈ ಪರ್ವತ ಇದೆ. ಬೇರೆ ಪರ್ವತಗಳಿಗೆ ಹೋಲಿಸಿದರೆ ಇದನ್ನ ಹೊತ್ತೋಕೆ ಬರುವ ಜನ ಕಮ್ಮಿ 

bluetreks.com

7. ಲಾಟ್ಸ್ ಪರ್ವತ – 8516 ಮೀ

ಇದು ಕೂಡ ಮೌಂಟ್ ಎವರೆಸ್ಟಿಗೆ ಸೇರತ್ತೆ. ಚೀನಾ ಹಾಗು ನೇಪಾಳಕ್ಕೆ ಸೇರುತ್ತೆ ಇದು. ಕಳೆದ 50 ವರ್ಷದಲ್ಲಿ ಇದನ್ನ ಹತ್ತಕ್ಕೆ ಹೋಗಿ 20 ಜನ ಪ್ರಾಣ ಬಿಟ್ಟಿದ್ದಾರೆ.

greathimalaya.com

8. ಕಾಂಚನಜುಂಗಾ – 8586 ಮೀ

ಭಾರತಕ್ಕೆ ಹಾಗು ಸ್ವಲ್ಪ ನೇಪಾಳಕ್ಕೆ ಸೇರುತ್ತೆ ಈ ಪರ್ವತ, ಅತಿ ಎತ್ತರದ ಪರ್ವತಗಳಲ್ಲಿ ಮೂರನೇ ಸ್ಥಾನ ಇದಕ್ಕೆ. ಡಾರ್ಜಿಲಿಂಗ್ ಮತ್ತು ನೇಪಾಳದ ಜನ ಇದನ್ನ ಸುಮಾರು ವರ್ಷದಿಂದ ಪೂಜೆ ಮಾಡುತ್ತಾ ಬಂದಿದ್ದಾರೆ. ಇಲ್ಲಿ ಸಿನೆಮಾ ಶೂಟಿಂಗ್ ಕೂಡ ನಡೆದಿದೆ 

media.cntraveller.in

9. K2 – ಕಾರಾಕೋರಂ ರೇಂಜ್ – 8611 ಮೀ

ಮೌಂಟ್ ಗಾಡ್ವಿನ್ ಆಸ್ಟಿನ್ ಪರ್ವತ ಅಂತಾನೂ ಕರೀತಾರೆ. ಮೌಂಟ್ ಎವರೆಸ್ಟಿನ ನಂತರ ಇದೆ ಪರ್ವತ ಅತಿ ಎತ್ತರದ ಪರ್ವತ. ಚಳಿಗಾಲದಲ್ಲಿ ಇದನ್ನ ಯಾರು ಹತ್ತಿಲ್ಲ. ಈ ವಾತಾವರಣದಲ್ಲಿ ಬದುಕೋದು ಎಷ್ಟು ಕಷ್ಟ ಅಂದ್ರೆ, ಇಲ್ಲಿ ವಾಸ ಮಾಡಕ್ಕೆ ಶುರು ಮಾಡಿದರೆ ಪ್ರತಿ 4 ಗಂಟೆಗೆ ಒಬ್ಬ ಸಾಯ್ತಾನೆ. 

prod-upp-image-read.ft.com

10. ಮೌಂಟ್ ಎವರೆಸ್ಟ್ – 8848 ಮೀ

ಭೂಮಿಯ ಮೇಲೆ ಇರುವ ಅತಿ ಎತ್ತರದ ಪರ್ವತ ಇದು. ಈ ಪರ್ವತದಲ್ಲಿ ಸುಮಾರು ಹೆಣಗಳಿವೆ. ಕೆಲವೊಂದನ್ನ ಗುರುತುಗಳಾಗಿ ಬಳಸಿಕೊಳ್ಳಲಾಗಿದೆ. ಈ ಎತ್ತರದಲ್ಲಿ, ಈ ವಾತಾವರಣದಲ್ಲಿ ಪಾಚಿ ಬೆಳೆಯತ್ತ! (ಕೆಲವೊಂದು ಕಡೆ) ಇದನ್ನ ಬಿಟ್ಟು ಬೇರೆ ಯಾವ ಗಿಡ ಕೂಡ ಬೆಳೆಯಲು ಸಾಧ್ಯ ಇಲ್ಲ. ಹಿಮಾಲಯನ್ ಥಾರ್, ಹಿಮಾಲಯನ್ ಬ್ಲಾಕ್ ಬೇರ್, ಸ್ನೋ ಲೆಪರ್ಡ್, ಪಾಂಡಾ ಇಲ್ಲಿ ಮಾಮೂಲು  

history.com

ಸಾಧ್ಯವಾದ್ರೆ, ಅವಕಾಶ ಸಿಕ್ರೆ ಜೀವನದಲ್ಲಿ ಇದ್ರಲ್ಲಿ ಯಾವ್ದಾದ್ರು ಒಂದನ್ನ ಹತ್ತಿ ಬನ್ನಿ