"ನಂದು, ನಂದು" ಅಂತ ಮಕ್ಕಳು ಆಟ ಆಡುವಾಗ ಎಲ್ಲ ತಮ್ಮದಾಗಿಸಿಕೊಳ್ಳೋದು ನೋಡಿದೀವಿ.

ಆದರೆ ಒಂದು ಮಗು ತಾನು ಒಬ್ಬಂಟಿಯಾಗಿದ್ದಾಗ ಏನು ಮಾಡುತ್ತೆ?

ಪಕ್ಕದಲ್ಲಿರೋರ ಪರ್ಸ್ ಬಿದ್ದರೆ ಅದು ಎತ್ತಿಕೊಂಡು ತಾನು ಇಟ್ಟುಕೊಳ್ಳತ್ತೋ ಅಥವಾ ಅವರಿಗೆ ಕೊಟ್ಟುಬಿಡುತ್ತೋ?

ಈ ಪ್ರಶ್ನೆಗಳ್ನ ಉತ್ತರಿಸಕ್ಕೆ ಜಪಾನ್ ರೆಡ್ ಕ್ರಾಸ್ ನವರು ಒಂದು ಪ್ರಯೋಗ ಮಾಡಿದಾರೆ.

ಸುಮಾರು ಮಕ್ಕಳ ಪಕ್ಕದಲ್ಲಿ ದೊಡ್ಡೋರು ಒಬ್ಬರು ನಿಂತುಕೊಂಡು ತಮ್ಮ ಪರ್ಸ್ ಬೀಳಿಸಿಕೊಳ್ತಾರೆ. ಆಗ ಪ್ರತಿಯೊಂದು ಮಗೂಗೂ ಅದನ್ನ ಗಮನಿಸುತ್ತ್ತೆ. ತನ್ನನ್ನ ಹೀಗೆ ಪ್ರಯೋಗಕ್ಕೆ ಒಳಪಡಿಸಿದಾರೆ ಅಂತ ಅದಕ್ಕೆ ಗೊತ್ತಿರಲ್ಲ:

ಇದನ್ನ ನೋಡಿದ ಪ್ರತಿಯೊಂದು ಮಗೂನೂ‌ ಏನು ಮಾಡ್ತು ಅಂತ ನೋಡಿ ಒಂಥರಾ ಸಂತೋಷವಾಗುತ್ತೆ!

ಇದೇನಿದು, ಹೀಗೆ ಬಿತ್ತಲ್ಲಾ ಅಂತ ಪ್ರತಿ ಮಗು ಒಮ್ಮೆ ದಿಟ್ಟಿಸಿ ನೋಡುತ್ತೆ:

ಕೆಲವು ಮಕ್ಕಳು ಅಲ್ಲಿ ಇಲ್ಲಿ ಹುಡುಕುತ್ತವೆ, ಯಾರದಿದು ಅಂತ. ಇನ್ನೂ ಕೆಲವು ಮಕ್ಕಳು ಪಕ್ಕದಲ್ಲಿರೋರಿಗೆ ಕೂಡಲೆ ಪರ್ಸ್ ಎತ್ತಿ ಕೊಡುತ್ತವೆ:

ಆದರೆ ಕೊನೆಗೆ ಪ್ರತಿಯೊಂದು ಮಗೂನೂ ನಾವು ದೊಡ್ಡೋರು ಏನು ಸರಿ ಅನ್ತೀವೋ ಅದನ್ನೇ ಮಾಡುತ್ತೆ: ಎತ್ತಿ ಬೀಳಿಸಿಕೊಂಡೋರಿಗೆ ಪರ್ಸ್ ಕೊಡುತ್ತೆ:

ಒಟ್ನಲ್ಲಿ ಮತ್ತೆ ಅದೇ ಸತ್ಯ: ಮಕ್ಕಳಿಂದ ದೊಡ್ಡೋರು ಕಲಿಯೋದು ಬಹಳ ಇದೆ. ಅದಕ್ಕೇ ಇರಬೇಕು ಇಂಥ ಪ್ರಯೋಗಗಳ್ನೆಲ್ಲ ಮಾಡೊದು!

ಇಲ್ಲಿ ನೋಡಿ, ಇಡೀ‌ ವೀಡಿಯೋ:

ಚಿತ್ರಗಳು: upworthy