ಪ್ರಧಾನಿ ಮೋದಿಯವರ ಮೇಣದ ಬೊಂಬೆಯನ್ನ ಮೆಡಾಮ್ ಟುಸ್ಸೋಡ್ಸ್ ಅವರ ಮ್ಯೂಸಿಯಂನಲ್ಲಿ ಮಾಡಿಡ್ತಾರಂತೆ.

ಅದರ ಬಗ್ಗೆನೇ ಮಾಡಿರೋ ಈ ವೀಡಿಯೋ ನೋಡಿ….

ಮೆಡಾಮ್ ಟುಸ್ಸೋಡ್ಸ್ ಔರ ಈ ಮ್ಯೂಸಿಯಮ್ಮಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡ್ದೋರ ಮೇಣದ ಬೊಂಬೆಯನ್ನ ನೂರಾರು ವರ್ಷಗಳಿಂದ ಮಾಡಿಡ್ತಾ ಬಂದಿದ್ದಾರೆ.

ಈ ಮ್ಯೂಸಿಯಮ್ಮಲ್ಲಿ ಈಗಾಗಲೆ ಇರೋ ಭಾರತೀಯರ ಬೊಂಬೆಗಳು ಅಂದ್ರೆ ಇವು:

1. ಮಹಾತ್ಮ ಗಾಂಧಿ

mahatma-gandhi-wax.jpgಮೂಲ

2. ಸಚಿನ್ ತೆಂಡೂಲ್ಕರ್

sachin-tendulkar-wax.jpgಮೂಲ

3. ಇಂದಿರಾ ಗಾಂಧಿ

indira-gandhi-wax.jpgಮೂಲ

4. ಅಮಿತಾಬ್ ಬಚ್ಚನ್

amitabh-wax.jpgಮೂಲ

5. ಐಶ್ವರ್ಯ ರೈ

aishwarya-wax.jpgಮೂಲ

6. ಶಾರುಕ್ ಖಾನ್

shahrukh-wax.jpgಮೂಲ

7. ಮಾಧುರಿ ದಿಕ್ಷಿತ್

Madhuri-Dixit-Nene-wax.jpgಮೂಲ

8. ಹ್ರುತಿಕ್ ರೋಶನ್

Hrithik-Roshan-wax.jpgಮೂಲ

9. ಕಟ್ರೀನಾ ಕೈಫ಼್

Katrina-Kaif-wax.jpgಮೂಲ

10. ಕರೀನಾ ಕಪೂರ್

kareena-kapoor-wax.jpgಮೂಲ

11. ಸಲ್ಮಾನ್ ಖಾನ್

salman-khan-wax.jpgಮೂಲ

ಇಲ್ಲೊಂದು ವಿಶೇಷ ಗಮನಿಸಿದ್ರಾ? ಮೇಲಿನ್ ಪಟ್ಟೀಲಿ ಎಲ್ಲಾ ಉತ್ತರ ಭಾರತದೋರು ಇಲ್ಲಾ ಬಾಲಿವುಡ್ನೋರೇ! ಕರ್ನಾಟಕದ ದಿಗ್ಗರಜರನ್ನ ಈ ಮೆಡೇಮ್ ಟುಸ್ಸಾಡ್ಸ್ ಮ್ಯೂಸಿಯಮ್ನೋರು ಯಾಕೆ ಗಮನಿಸಿಲ್ಲಾ ಅನ್ನೋ ಪ್ರಶ್ನೆ ಯಾವುದೇ ಒಬ್ಬ ಕನ್ನಡಿಗನಿಗೆ ಬಂದೇ ಬರುತ್ತೆ.

ನೀವೇ ಹೇಳಿ, ಮೇಲಿನೋರ ಜೊತೆ ಕೆಳಗಿನ ಕನ್ನಡಿಗ ಸಾಧಕರ ಬೊಂಬೆಗಳೂ ಇರಬೇಕು ತಾನೆ?

1. ವಿಶ್ವ ಮಾನವ ಸಂದೇಶ ಸಾರಿದ ರಸಋಷಿ ರಾಷ್ಟ್ರಕವಿ ಕುವೆಂಪು

ನಿಮ್ಗೊಂದು ವಿಷ್ಯ ಗೊತ್ತೋ ಇಲ್ವೋ… ಸಾಹಿತ್ಯ ಕ್ಷೇತ್ರದಲ್ಲಿ ಇವ್ರಿಗೆ ಸಿಕ್ಕಿರೋ ಅಷ್ಟು ಅವಾರ್ಡು ಇನ್ಯಾರಿಗೂ ಸಿಕ್ಕಿಲ್ಲ… ಅಂತಹ ಮೇರು ಸಾಧಕರು ಇವ್ರು

kuvempu-wax.jpgಮೂಲ

2. ಹಾಡು ನಟನೆಯ ಪ್ರತಿಭೆಯಿಂದ ಸುಮಾರು 50 ವರ್ಷ ಕಾಲ ಕೊಟ್ಯಂತರ ಜನರ ಮನರಂಜಿಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಇಂದೂ ರಾರಾಜಿಸುತ್ತಿರುವ ಚಿತ್ರರಂಗದ ಧೃವತಾರೆ ಡಾ. ರಾಜ್ ಕುಮಾರ್

raj-wax.jpgಮೂಲ

3. ಕನ್ನಡಿಗರ ಮನತುಂಬುವಂತಹ ನಟನೆ ನೀಡುತ್ತಾ 200 ಚಿತ್ರಗಳಲ್ಲಿ ನಾಯಕರಾಗಿ ನಮ್ಮನ್ನು 4 ದಶಕಗಳ ಕಾಲ ಮನರಂಜಿಸಿದ ಭಾರತೀಯ ಚಿತ್ರರಂಗದ ಮರೆಯದ ಮಾಣಿಕ್ಯ ಡಾ| ವಿಷ್ಣುವರ್ಧನ್

Vishnuvardhan-wax.jpgಮೂಲ

4. ಇನ್ನಿಂಗ್ಸ್ ಒಂದರಲ್ಲಿ ಹತ್ತೂ ವಿಕೆಟ್ ಕಬಳಿಸಿದ ವಿಶ್ವದ ಎರಡೇ ಸಾಧಕರಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ

anil-kumble-wax.jpgಮೂಲ

5. ಈ ಲೋಕವನ್ನೇ ಬಿಟ್ಟು 30 ವರ್ಷ ಆಗಿದ್ರೂ ಇನ್ನೂ ಹೊಸ ಹೊಸ ಅಭಿಮಾನಿಗಳನ್ನ ಪಡೀತಾನೇ ಇರೋ ನಮ್ ಶಂಕ್ರಣ್ಣ

shankarnag-wax.jpgಮೂಲ

6. ಸುಮಾರು 1500+ ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಎರಡನ್ನೂ ನೀಡಿರುವ ಅಪರೂಪದ ಪ್ರತಿಭೆ ನಾದಬ್ರಹ್ಮ ಹಂಸಲೇಖ

Hamsalekha-wax.jpgಮೂಲ

7. ಜೆಂಟಲ್‍ಮನ್ ಕ್ರಿಕೆಟರ್ ಅಂತ ಜಗತ್ತಿನೆಲ್ಲೆಡೆ ಕರೆಸಿಕೊಳ್ಳೋ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್

dravid-wax.jpgಮೂಲ

ನ್ಯಾಯ ಎಲ್ಲಿದೆ?

ಹೊರಚಿತ್ರ: bbc