https://c1.staticflickr.com/3/2775/4277508707_5a0d561e2e_b.jpg

ಯಾರಾದ್ರೂ ಏನಾದ್ರೂ ಅಂದ್ರೆ ಬೇಗ ಮನಸ್ಸಿಗೆ ಹಚ್ಕೊಳ್ತೀರಾ? ಬೇಗ ಸಿಟ್ಟು ಬರೋದು ,ಬೇಗ ಬೇಜಾರಾಗೋದು, ಬೇಗ ಖುಷಿಯಾಗೋದು ಇಂಥದ್ದೆಲ್ಲ ಆಗುತ್ತಾ ನಿಮ್ಗೆ? ನನ್ನ ತರ ಇರೋವ್ರು ಪ್ರಪಂಚದಲ್ಲಿ ಯಾರೂ ಇಲ್ಲ ಅನ್ಸುತ್ತಾ? ನಂಗೆ ಯಾರೂ ಬೇಗ ಹತ್ತಿರ ಆಗಲ್ಲ ಅನ್ಸುತ್ತಾ? ಇದೆಲ್ಲ ಸುಮ್ಸಮ್ನೆ ಅನ್ಸಲ್ಲಾ. ಜೊತೆಗೆ ಹೀಗೆ ಅನ್ಸುತ್ತೆ ಅಂತ ನೀವು ಬೇಜಾರು ಮಾಡ್ಕೊಳ್ಳೋ ಅವಶ್ಯಕತೆ ಕೂಡ ಇಲ್ಲ. ಯಾಕಂದ್ರೆ ವಿಜ್ಞಾನದ ಪ್ರಕಾರ ಹೀಗೆಲ್ಲ ಆದ್ರೆ, ಅದ್ರ ಅರ್ಥ ನೀವು ತುಂಬ ಸೂಕ್ಷ್ಮ ಮನಸ್ಸುಳ್ಳ ವ್ಯಕ್ತಿ ಅಂತ ಅರ್ಥ ಅಂತೆ.

ಈತರ ಮನಸ್ಸು ಇರೋದು ಎಲ್ಲ ಸರ್ತಿನೂ ಒಳ್ಳೇದಲ್ಲ. ಇದ್ರಿಂದ ಎಷ್ಟು ಒಳ್ಳೇದಾಗುತ್ತೆ, ಅಷ್ಟೇ ಮನಸ್ಸಿನ ಮೇಲೆ ಜನರ ಮೇಲೆ ಕೆಟ್ಟ ಪರಿಣಾಮ ಕೂಡ ಆಗುತ್ತಂತೆ. ಹಾಗಂದ್ರೆ ನಿಮ್ಮ ಮನಸ್ಸು ಕೂಡ ಅತೀ ಸೂಕ್ಷ್ಮನಾ? ಹೇಗೆ ತಿಳ್ಕೊಳ್ಳೋದು ಅಂತೀರಾ? ನಾವು ಕೆಲವು ಟಿಪ್ಸ್ ಕೊಟ್ಟಿದ್ದೀವಿ..ನಿಮಗೆ ಮ್ಯಾಚ್ ಆಗುತ್ತಾ ನೋಡಿ ಒಂದ್ಸಲ..

1 ) ಯಾರ್ಗಾದ್ರೂ ಧೈರ್ಯವಾಗಿ ಇಲ್ಲ ಅಂತ ಹೇಳಕ್ಕೆ ನಿಮ್ಗೆ ಮನಸ್ಸು ಒಪ್ಪಲ್ಲ.

ಇಲ್ಲ ಅನ್ನಕ್ಕೆ ಮನ್ಸು ಒಪ್ಪಲ್ಲ ಅಂದ್ರೆ, ಯಾರಾದ್ರೂ ಏನೋ ಕೇಳ್ತಾರೆ ನಿಮ್ಗೆ. ಅದನ್ನ ಮಾಡಕ್ಕೆ ನಿಮ್ಗೆ ಮನಸ್ಸು ನಿಜವಾಗ್ಲೂ ಇರಲ್ಲ.. ಆದ್ರೆ ನೀವೇನಾದ್ರೂ ಇಲ್ಲ ಅಂದ್ರೆ ಎದ್ರಿಗಿರೋ ವ್ಯಕ್ತಿಗೆ ಬೇಜಾರಾಗುತ್ತೆ. ಅದನ್ನ ನೆನೆಸ್ಕೊಂಡು ನಿಮ್ಗೆ ಇಷ್ಟ ಇಲ್ದಿದ್ರೂ ಆ ಕೆಲಸ ಮಾಡಕ್ಕೆ ಮನಸ್ಸು ಮಾಡ್ತಿರಾ..ಅಲ್ಲಿಗೆ ನಿಮ್ಮ ಮನಸ್ಸಿನ ಬಲಿ ಆಗುತ್ತೆ ಅಷ್ಟೇ ವಿನಃ ನಿಮ್ಗೆ ಸಂತೋಷ ಅಂತೂ ಅಷ್ಟಕ್ಕಷ್ಟೇ.

1.bp.blogspot.com

2 ) ನಿಮ್ಮ ಮನಸ್ಸಿನ ಭಾವನೆಗಳನ್ನ ಹತೋಟೀಲಿ ಇಟ್ಕೊಳ್ಳೋದು ನಿಮ್ಗೇ ಕಷ್ಟ.

ನಿಮಗೆ ಯಾವದೇ ಭಾವನೆಗಳನ್ನೂ ತಡ್ಕೊಳ್ಳೋದು ಕಷ್ಟ ಆಗುತ್ತೆ. ನಿಮ್ಮ ಮನಸ್ಸಿನ ಭಾವನೆಗಳು ನೀರಿನಂತೆ ಹರೀತಾ ಇರುತ್ತೆ. ನೀವು ಯಾವ್ದೋ ಪುಸ್ತಕ ಓಡಿತ ಇರ್ಬೇಕಾದ್ರೆ, ತಿಂಡಿ ತಿನ್ಬೇಕಾದ್ರೆ, ಸುಮ್ನೆ ಕೂತ್ಕೊಂಡಾಗ, ಪ್ರಯಾಣ ಮಾಡ್ತಾ ಇರ್ಬೇಕಾದ್ರೆ, ನಿಮ್ಮ ಮನಸ್ಸಿನ ಭಾವನೆಗಳು ಒಂದೇಸಲ ಉಕ್ಕಿ ಹರಿಯಕ್ಕೆ ಶುರು ಆಗುತ್ತೆ ಆಮೇಲೆ ಇವುಗಳ ಮೇಲೆ ನಿಮ್ಗೆ ನಿಯಂತ್ರಣ ಕೂಡ ಇರಲ್ಲ.
ಆದ್ರೆ ಈಥರ ಆಗುತ್ತೆ ಅಂತ ತುಂಬ ಬೇಜಾರಾಗೋ ಅವಶ್ಯಕತೆ ಇಲ್ಲ..ನಿಮ್ಮನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳೋವ್ರು , ಹೇಗಿದ್ರೂ ಅರ್ಥ ಮಾಡ್ಕೊಳ್ತಾರೆ ಬಿಡಿ.

news-images.vice.com

3 ) ಎಲ್ಲ ವಿಷಯದಲ್ಲೂ ಏನೋ ತಪ್ಪಿದೆ ಅಂತ ನಿಮ್ಗೆ ಅನ್ನಿಸ್ತಾ ಇರುತ್ತೆ.

 ಈ ಸಿಕ್ಸ್ತ್ ಸೆನ್ಸ್, ಅದೂ ಇದೂ ಅಂತೆಲ್ಲ ಹೇಳ್ತಾರಲ್ಲ, ಅದು ನಿಮ್ಗೆ ಸ್ವಲ್ಪ ಜಾಸ್ತಿನೇ ಜಾಗೃತವಾಗಿರುತ್ತೆ. ಉದಾಹರಣೆಗೆ ನಿಮ್ಮ ಫ್ರೆಂಡ್ ಏನೋ ದುಃಖದಲ್ಲಿ ಇರ್ತಾಳೆ , ಆದ್ರೂ ನಿಮ್ಮ ಮುಂದೆ ನಾನು ಆರಾಮಾಗಿದ್ದೀನಿ ಅಂತ ಹೇಳ್ಬಹುದು. ಆದ್ರೂ ನಿಮ್ಗೆ ಮನಸ್ಸಿನ ಮೂಲೆಯಲ್ಲೆಲ್ಲೂ ಅವ್ಳು ಹೇಳ್ತಿರೋದು ಸುಳ್ಳು ಅನ್ನೋದು ಗೊತ್ತಿರುತ್ತೆ. ಈಥರದ ಸೂಕ್ಷ್ಮಗಳು ನಿಮ್ಗೆ ಬಹಳ ಬೇಗ ಅರ್ಥ ಆಗುತ್ತೆ.

i.ndtvimg.com

4) ನೀವು ಯಾವಾಗ್ಲೂ ತುಂಬ ನಯವಿನಯದಿಂದ ನಡ್ಕೊಳ್ತಿರಿ.

ಜನರ ಹತ್ರ ಕೆಟ್ಟವರು ಅಂತ ಅನ್ನಿಸ್ಕೊಳ್ಳೋದು ನಿಮ್ಗೆ ಸರಿ ಬರಲ್ಲ..ಹಾಗಾಗಿ ಜನರ ಹತ್ರ ಆದಷ್ಟು ವಿನಯವಾಗಿ ನಡ್ಕೊಳ್ಳಕ್ಕೆ ಪ್ರಯತ್ನ ಮಾಡ್ತಿರಿ. ಇನ್ನೊಬ್ರು ಬೇಜಾರಾಗೋದು ನಿಮ್ಗೆ ಸಹಿಸಿಕೊಳ್ಳಕ್ಕೆ ಆಗಲ್ಲ. ಹಾಗಾಗಿ ಎಲ್ಲರ ಮನಸ್ಸು ಖುಷಿಯಾಗಿಟ್ಕೊಳ್ಳಕ್ಕೆ ನೋಡ್ತಿರಾ. ಈ ವಿನಯ ಯಾವ ಮಟ್ಟಕ್ಕೆ ಇರುತ್ತೆ ಅಂದ್ರೆ, ಜನ ನಿಮ್ಹತ್ರ ಸರಿಯಾಗಿ ನಡ್ಕೊಂಡಿಲ್ಲ ಅಂದ್ರೂ, ನಿಮ್ಗೆ ಬೆಲೆ ಕೊಟ್ಟಿಲ್ಲಾ ಅಂದ್ರೂ , ಅವರ ಹತ್ರ ಸಹ ನೀವು ವಿನಯವಾಗಿ ನಡ್ಕೊಳ್ಳಕ್ಕೆ  ಪ್ರಯತ್ನ ಮಾಡ್ತಿರಿ.

1.bp.blogspot.com

5) ಯಾವದೇ ವಿಷಯಕ್ಕೂ ನೀವು ಬೇಗ ರಿಯಾಕ್ಟ್ ಮಾಡ್ತಿರಿ.

ಅದು ಒಂದು ಸಂತೋಷದ ಸುದ್ದಿ ಆಗಿರ್ಬಹುದು, ದುಃಖದ ಸುದ್ದಿ ಕೂಡ ಆಗಿರ್ಬಹುದು. ಆದ್ರೆ ಅದನ್ನ ಕೇಳಿದ್ಕೂಡ್ಲೆ ನೀವು ಎಲ್ಲರಿಗಿಂತ ಮೊದ್ಲು ರಿಯಾಕ್ಟ್ ಮಾಡ್ತಿರಾ. ನಿಮ್ಮ ಮನಸ್ಸಿಗೆ ಬಹು ಬೇಗ ಭಾವನೆಗಳು ಹತ್ತಿರ ಆಗುತ್ತೆ. ಹಾಗಗಿ ನೀವು ರಿಯಾಕ್ಟ್ ಮಾಡೋ ವೇಗ ಕೂಡ ಅಷ್ಟೇ ಜಾಸ್ತಿ ಆಗಿರುತ್ತೆ.

ನಿಮ್ಮಲ್ಲಿ ಈ ಎಲ್ಲ ಗುಣಗಳು ಇದ್ರೆ ನೀವು ಸ್ವಲ್ಪ ಸೂಕ್ಷ್ಮ ಮನಸ್ಸಿನವರು ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಲಬಹುದು. ಹಾಗಂತ ಬೇಜಾರಾಗೋ ಅವಶ್ಯಕತೆ ಇಲ್ಲ, ನಿಮ್ಮ ತರದ್ದೇ ಮನಸ್ಸಿನವರು ನಿಮ್ಗೆ ಸಿಕ್ಕಿದ್ರೆ ನಿಮ್ಮ ಜೀವನ ಸೂಪರ್ ಆಗಿರುತ್ತೆ.