https://steemitimages.com/
ಸಕ್ಕರೆ ಅನ್ನೋದು ಅಡುಗೆಮನೆಯ ಖಾಯಂ ಪದಾರ್ಥ. ಕೆಲವರಿಗಂತೂ ಸಕ್ಕರೆ ಅಂದ್ರೆ ಮೈಯೆಲ್ಲಾ ಬಾಯಿ. ಎಲ್ಲಾದಕ್ಕೂ ಒಂಚೂರು ಜಾಸ್ತಿ ಸಕ್ಕರೆ ಹಾಕ್ಕೊಂಡು ಲೊಟಿಕೆ ಹೊಡ್ಕೊಂಡು ತಿಂತಾರೆ. ಕುಡಿತಾರೆ. ಆದರೆ ಸಕ್ಕರೆ ಒಂದನ್ನ ಬಿಟ್ರೆ, ಕಡೇಪಕ್ಷ ಕಡಿಮೆ ಮಾಡ್ಕೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಒಂದಲ್ಲ ಹತ್ತು ಹೇಳ್ತೀವಿ ಕೇಳಿ.
1. ಸದಾಕಾಲ ನಿಮ್ಮ ಶಕ್ತಿ, ಹುರುಪು ಒಂದೇ ತರ ಇರತ್ತೆ. 
shesaid.com
ಸಕ್ಕರೆ ಜಾಸ್ತಿ ಉಪಯೋಗಿಸೋದ್ರಿಂದ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಏರುಪಾರಾಗ್ತಾ ಇರತ್ತೆ. ಆದರಿಂದ ಆಗಾಗ ಆಯಾಸ, ಸುಸ್ತು, ಬೇಜಾರು ಎಲ್ಲಾ ಆಗುತ್ತಂತೆ. ಸಕ್ಕರೆ ಬಿಟ್ರೆ ಈ ತಾಪತ್ರಯ ಇಲ್ಲ. ಸದಾಕಾಲ ಉತ್ಸಾಹದಿಂದ ಗಟ್ಟಿಯಾಗಿ ಓಡಾಡ್ಕೊಂಡು ಇರಬೋದು.
2. ತೂಕ ಕಡಿಮೆ ಮಾಡೋಕೆ ಸಹಾಯ ಆಗತ್ತೆ.
rd.com
ಊಟ, ತಿಂಡಿ ಬಿಟ್ಟು ಉಪವಾಸ ಮಾಡೋ ಅಗತ್ಯ ಇಲ್ಲ. ಸಕ್ಕರೆ ತಿನ್ನೋದು ಬಿಡಿ. ಹಸಿವು ಕಡಿಮೆ ಆಗತ್ತೆ. ಸಿಹಿ ತಿನ್ನೋ ಚಪಲ ದೂರಾಗತ್ತೆ. ತೂಕ ತಾನೇತಾನಾಗಿ ಕಡಿಮೆ ಆಗತ್ತೆ.
3. ರಾತ್ರಿ ಹೊತ್ತು ಒಳ್ಳೇ ನಿದ್ದೆ ಬರತ್ತೆ.
health.harvard.edu
ಹೌದು ರೀ…ಸಕ್ಕರೆ ಜಾಸ್ತಿ ತಿಂದ್ರೆ, ಮೈಯಲ್ಲಿ ಸಕ್ಕರೆ ಮಟ್ಟ ಏರುಪೇರಾಗಿ ರಾತ್ರಿ ನಿದ್ದೆಗೂ ಕಂಟಕ ತರತ್ತಂತೆ. ಸಕ್ಕರೆ ಬಿಟ್ರೆ ಸಿಹಿ ನಿದ್ದೆ ಗ್ಯಾರೆಂಟಿ.
4. ನಿಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಆಗತ್ತೆ.
interactive-biology.com
ದೇಹದಲ್ಲಿ ಉರಿಯೂತದ ಲಕ್ಷಣ ಇದ್ರೆ ಕಡೆಮೆಯಾಗತ್ತೆ. ಆರೋಗ್ಯವಾಗಿ ಇರ್ತೀರ.
5. ನಿಮ್ಮ ಚರ್ಮ ಲಕಲಕ ಹೊಳೆಯತ್ತೆ.
dr-spiller.com
ಯಾವ ಮೇಕಪ್ಪೂ ಬೇಡ. ಗುಳ್ಳೆಗಳ ಕಿರಿಕಿರಿ ಇರಲ್ಲ. ನಯವಾದ ಚರ್ಮ ನಿಮ್ಮದಾಗತ್ತೆ.
6. ನಿಮಿಷಕ್ಕೊಂತರ ಮನಸ್ಸು ಬದಲಾಗಲ್ಲ. ಸ್ಥಿರವಾದ ಮನಸ್ಸು ನಿಮ್ಮದಾಗತ್ತೆ.
lifenbalancecom.files.wordpress.com
ನಿಮ್ಮ ಮನಸ್ಸಿನ ಭಾವನೆಗಳು ಹುಚ್ಚುಚ್ಚಾಗಿದ್ರೆ, ಅದಕ್ಕೂ ಸಕ್ಕರೆ ಕಾರಣ ಆಗಿರಬೋದು. ಸಕ್ಕರೆ ಬಿಟ್ರೆ, ಡಿಪ್ರೆಷನ್ನ, ಸ್ಕಿಜೋಫ್ರೀನಿಯಾ ತರದ ಖಾಯಿಲೆ ಬರೋ ಸಾಧ್ಯತೆ ಕಡಿಮೆ ಆಗತ್ತಂತೆ.
7. ನೀವು ನಿಮ್ಮ ವಯಸ್ಸಿಗಿಂತ ಚಿಕ್ಕೋರಾಗಿ ಕಾಣ್ತೀರ.
wisdomtimes.com
ಸಕ್ಕರೆ ಖಾಯಿಲೆ ಇದ್ದೋರು ಸುಸ್ತಾಗಿ, ವಯಸ್ಸಾದೋರ ತರ ಕಾಣೋದು ಗಮನಿಸಿದ್ದೀರ? ಸಕ್ಕರೆ ಬಿಟ್ರೆ, ನಿಮ್ಮ ದೇಹ ತೆಳ್ಳಗಾಗಿ, ಚರ್ಮ ನಯವಾಗಿ, ಉತ್ಸಾಹ ಜಾಸ್ತಿಯಾಗಿ ನೀವು ಚಿಕ್ಕವರ ಹಾಗೆ ಕಾಣೋದು ಸುಳ್ಳಲ್ಲ.
8. ನಿಮ್ಮ ಹೃದಯದ ಆರೋಗ್ಯ ಸುಧಾರಿಸತ್ತೆ.
ಸಕ್ಕರೆ ಬಾಯಿಗೆ ಮಾತ್ರ ಸಿಹಿ. ಹೃದಯದಲ್ಲಿ ಒಳ್ಳೇ ಕೊಬ್ಬಿನ ಅಂಶ ಕಡಿಮೆ ಮಾಡಿ, ನಿಮ್ಮ ಹೃದಯದ ಆರೋಗ್ಯ ಹಾಳು ಮಾಡತ್ತೆ. ಅದಕ್ಕೆ ಸಕ್ಕರೆ ಕಡಿಮೆ ಮಾಡೋದೊಂದೇ ದಾರಿ.
9. ನಿಮ್ಮ ಲಿವರ್ ಕೂಡ ಚೆನ್ನಾಗಿ ಕೆಲ್ಸ ಮಾಡಕ್ಕೆ ಶುರುವಾಗತ್ತೆ.
liverandpancreassurgeon.com
ಸಕ್ಕರೆ ಕೂಡ ಹೆಂಡದಷ್ಟೇ ಅಪಾಯಕಾರಿ. ನಿಮ್ಮ ಲಿವರ್ ಚೆನ್ನಾಗಿರಬೇಕಂದ್ರೆ, ಸಕ್ಕರೆ ಕಡೆಮೆ ಮಾಡಿ.
10. ಕಿಡ್ನಿ ಕಲ್ಲುಗಳ ಸಮಸ್ಯೆ ಬರಲ್ಲ.
st1.thehealthsite.com
ಸಕ್ಕರೆಭರಿತ ಪಾನೀಯ ಕುಡಿಯೋದ್ರಿಂದ ಕಿಡ್ನಿ ಕಲ್ಲುಗಳು ಆಗೋ ಸಾಧ್ಯತೆ 25 ರಿಂದ 33% ಇರತ್ತಂತೆ. ಸಕ್ಕರೆ ಕಮ್ಮಿ ಮಾಡಿದ್ರೆ, ಕಿಡ್ನಿ ಕೂಡ ಚೆನ್ನಾಗಾಗುತ್ತೆ.
ಇನ್ನೇನು ಬೇಕ್ರಿ? ಅನ್ಕೊಂಡಿದ್ದೆಲ್ಲಾ ಪಡೆಯೋಕೆ ಸಕ್ಕರೆ ಬಿಡಿ.