http://youtube.com

ಬುದ್ಧಿವಂತಿಕೆಗೆ ಮತ್ತೊಂದು ಹೆಸರು ಚಾಣಕ್ಯ. ಯುದ್ಧ/ರಾಜಕೀಯ ಕ್ಷೇತ್ರದಲ್ಲಿ ತನ್ನದೇ ನೀತಿ ಮೂಲಕ ಗುರುತಿಸಿಕೊಂಡು ಚಾಣಕ್ಯ ಚಂದ್ರಗುಪ್ತ ಮೌರ್ಯನ ಆಪ್ತ ಮಂತ್ರಿ ಆಗಿದ್ದ.

ಅವನು ಅಂದಿನ ಜೀವನದಲ್ಲಿ ಜನರಿಗೆ ಒಂದಷ್ಟು ನೀತಿಗಳನ್ನ ಹೇಳಿಕೊಟ್ಟು ಅದನ್ನೇ ಚಾಣಕ್ಯನ ನೀತಿ ಅನ್ನೋ ಹೆಸರಲ್ಲಿ ಬರೆದಿಟ್ಟ. ಅವು ಇಂದಿಗೂ ಅನ್ವಯಿಸುತ್ತೆ!

ಜೀವನದಲ್ಲಿ ಎಂದೂ ಸೋಲು ನಮ್ಮ ಹತ್ರ ಸುಳೀಬಾರದು ಅಂತಿದ್ರೆ ಏನೇನು ಮಾಡ್ಬೇಕು ಅಂತ ಹೇಳ್ತಾನೆ. ಅದ್ರಲ್ಲಿ ಒಂದು ಮುಖ್ಯ ಅಂಶ ಅದ್ರೆ ಗುಟ್ಟುಗಳನ್ನ ಹೇಗೆ, ಯಾರ್ ಹತ್ರ ಬಿಟ್ಕೊಡ್ಬಾರ್ದು ಅಂದ್ರೆ ಗುಟ್ಟುಗಳನ್ನ ಹೇಗೆ ಕಾಪಾಡ್ಕೊಬೇಕು? ಅಂತ ಹೇಳ್ಟಾನೆ. ಮುಂದೆ ಹೇಳೋ 8 ವಿಷ್ಯಗಳನ್ನ ಓದಿ ನೀವೂ ತಿಳ್ಕೊಳಿ. ಸಂದರ್ಭ ಬಂದ್ರೆ ಉಪ್ಯೋಗ್ಸಿ.

1. ನಿಮ್ಮ ಆದಾಯ ಎಷ್ಟು ಅಂತ ಹೇಳ್ಬೇಡಿ

ನಿಮ್ಮ ದುಡ್ಡು ಕಾಸಿನ ವಿಚಾರ ತುಂಬ ಅಗತ್ಯ ಇದೆ ಅನ್ನಿಸೋವರ್ಗೂ ಯಾರಿಗೂ ಹೇಳಬೇಡಿ. ನೀವೇನಾದ್ರೂ ಹೇಳಿದ್ರೆ ನಿಮ್ಮ ಸುತ್ತ ಮುತ್ತ ಜನರ ವರ್ತನೆಯಲ್ಲಿ ನಿಮಗೇ ಬದಲಾವಣೆ ಕಾಣುತ್ತೆ.

media.indiatimes.in

2. ಗುರು ಹೇಳಿಕೊಟ್ಟಿರೋ ಮಂತ್ರ ಯಾರಿಗೂ ಹೇಳಿಕೊಡಬೇಡಿ

ನಿಮ್ಮ ಗುರುಗಳು ಹೇಳಿಕೊಟ್ಟ ಮಂತ್ರಗಳನ್ನ ನೀವು ಇನ್ನೊಬ್ಬರಿಗೆ ಹೇಳಿಕೊಟ್ರೆ ಅದರ ಶಕ್ತಿ ಕಡಿಮೆ ಆಗಬಹುದು.

organicconsumers.org

3. ಮನೆಯವರ ವಿಷಯಗಳು ಮನೇಲೇ ಇರಲಿ

ಸಂಸಾರ ಗುಟ್ಟು ವ್ಯಾಧಿ ರಟ್ಟು ಅನ್ನೋ ಗಾದೆ ನೆನಪಿಲ್ವಾ? ಅದರಂತೇ ನಿಮ್ಮ ಮನೆಯವರ ವಿಷಯ ನಿಮ್ಮ ಮನೆಯಲ್ಲೇ ಇದ್ದರೆ ಒಳ್ಳೇದು, ಇಲ್ಲವಾದ್ರೆ ನಿಮಗೇ ಕಷ್ಟ ನೋಡಿ.

coorgcountyresorts.com

4. ಬಲಗೈಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು

ದಾನ ಮಾಡಿ ಅದನ್ನ ಗುಟ್ಟಾಗಿಡೋರನ್ನ ದೇವರು ಕಾಪಡ್ತಾನೆ ಅಂತಾನೆ ಚಾಣಕ್ಯ.

faithdebates.org.uk

5. ನಿಮ್ಮ ನಿಜವಾದ ವಯಸ್ಸು ಹೇಳ್ಬೇಡಿ

ವಯಸ್ಸಿಗೂ ನಮ್ಮ ಸಾಮರ್ಥ್ಯಕ್ಕೂ ಸಂಬಂಧ ಇಲ್ಲ. ಎಷ್ಟು ಲವಲವಿಕೆ ಇಂದ ಇರ್ತೀವೋ ಅಷ್ಟು ಸರಾಗವಾಗಿ ಜೀವನ ಮಾಡಬಹುದು.

ruiabioanalyticalsciences.files.wordpress.com

6. ನಿಮ್ಮ ಗಂಡ ಅಥವಾ ಹೆಂಡತಿ ಜೊತೆ ಸಂಬಂಧ ಹೇಗಿದೆ ಅಂತ ಚರ್ಚೆ ಮಾಡ್ಬೇಡಿ

ನಿಮ್ಮ ಸಂಸಾರ ನಿಮ್ಮದು, ಮಿಕ್ಕವರಿಗೂ ಅದಕ್ಕೂ ಸಂಬಂಧ ಇಲ್ಲ.

image.vanguardia.com.mx

7. ನಿಮ್ಮ ನಿಜವಾದ ಶಕ್ತೀನ ತುಚ್ಛ ಕಾರಣಗಳಿಗೆ ತೋರಿಸಿಕೊಳ್ಳಬೇಡಿ

ಸಮಾಜದಲ್ಲಿ ಅಥವಾ ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಸ್ಥಾನಮಾನ ಸಿಗುತ್ತೆ ಅಂತ ನಿಮ್ಮ ನಿಜವಾದ ಶಕ್ತಿ ತೋರಿಸಿಕೊಳಕ್ಕೆ ಹೋದ್ರೆ ಜನರಿಗೆ ಹೊಟ್ಟೆಕಿಚ್ಚು ಬಂದು ನಿಮ್ಮ ಸಂತೋಷ ಹಾಳು ಮಾಡ್ತಾರೆ.

youmatter.suicidepreventionlifeline.org

8. ನಿಮ್ಮ ಆರೋಗ್ಯ-ಅನಾರೋಗ್ಯ ಗುಟ್ಟಾಗಿರಲಿ

ನಿಮಗಿದ್ದ ಅನಾರೋಗ್ಯ, ಅದ್ರಿಂದ ಹೇಗೆ ಪಾರಾದ್ರಿ, ಹೇಗೆ ಸರಿಹೋದ್ರಿ ಅಂತ ಯಾರಿಗೆ ಬೇಕೋ ಅವರಿಗೆ ಮಾತ್ರ ಹೇಳ್ಬೇಕು, ಸುಮ್ ಸುಮ್ನೆ ಸಿಕ್ಕೋರ್ಗೆಲ್ಲಾ ಹೇಳ್ಕೊತಾ ಹೋಗ್ಬೇಡಿ. ಹಾಗೆ ಹೇಳಿದ್ರೆ ಮುಂದೊಂದು ದಿನ ನಿಮ್ಮನ್ನೇ ಉದಾಹರಣೆ ಮಾಡ್ಕೊಂಡು ಎನೇನೋ ಮಾತಾಡ್ತಾರೆ.

pbs.twimg.com

9. ಜನ ನಿಮ್ನ ಆಡ್ಕೊಂಡಿದ್ರೆ ಅದನ್ನ ಬಹಿರಂಗವಾಗಿ ಹೇಳ್ಕೋಬೇಡಿ

ಬೇರೆಯೋರು ಮಾಡುದ್ರು ಅಂತ ನೀವು ನಿಮ್ನೇ ಆಡಿಕೊಂಡ್ರೆ ಅದು ನಾಳೆ ನಿಮಗೇ ವಾಪಸ್ಸು ಬರ್ಬೋದು. ಮಿಕ್ಕವರು ತಮ್ಮ ಸ್ವಾರ್ಥಕ್ಕೆ ನಿಮ್ಮನ್ನ ಬಳಸಿಕೊಳ್ತಾರೆ. ಎಚ್ಚರ.

thewritepractice.com

ಈ ವಿಷಯಗಳನ್ನ ಯಾರಿಗೋ ಇರಲಿ ತೀರಾ ಹತ್ತಿರದೋರ್ಗೂ ಹೇಳಬಾರ್ದು. ಅವಶ್ಯಕತೆ ಇಲ್ಲದೆ ಹೇಳೋದ್ರಿಂದ ತೊಂದ್ರೆ ಆಗೋದಲ್ಲದೇ ಸಮಾಜದಲ್ಲಿ ಮರ್ಯಾದೆ ಕೂಡ ಕಳ್ಕೊಬೇಕಾಗುತ್ತೆ ಅಂತ ಚಾಣಕ್ಯ ನೀತಿ ಹೇಳತ್ತೆ.

ಚಾಣಕ್ಯನಿಂದ ಇನ್ನಷ್ಟು ಕಲೀಬೇಕು ಅಂದ್ರೆ:

  1. ಚಾಣಕ್ಯ ವಿಷ ಅಂತ ಗುರುತಿಸಿರೋ ಈ 4ರ ಬಗ್ಗೆ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೇದು
  2. ಜೀವನದಲ್ಲಿ ಯಶಸ್ಸು ಹುಡುಕ್ತಾ ಇರೋರ್ಗೆ ಚಾಣಕ್ಯನ ಈ 12 ಉಪದೇಶಗಳು ಬಹಳ ಬೇಕಾಗ್ತವೆ