ಸೂರ್ಯ ಭೂಮಿ ಇಂದ ಹೇಗೆ ಕಾಣಿಸ್ತಾನೆ ಅಂತಾ ಹೇಳಕ್ ಹೊರಟ್ರಾ? ತಲೆ ಎತ್ತಿ ನೋಡಿದ್ರೆ ಸಾಕು. 15 ಕೋಟಿ ಕಿಲೋಮೀಟರ್ ದೂರದಲ್ಲಿರೋ ಬೆಂಕಿ ಚೆಂಡು ಅದು. ಅದ್ರೆ ನಾವೇನಾದ್ರೂ ಬೇರೆ ಗ್ರಹಗಳ ಮೇಲಿಂದ ಸೂರ್ಯನ್ನ ನೋಡಿದ್ರೆ ಹೇಗೆ ಕಾಣಿಸ್ತಾನೆ ಗೊತ್ತಾ? ಅದೇನ್ ಮಹಾ, ನಮ್ಮಿಂದ ಹತ್ತು ಪಟ್ಟು ದೂರದಲ್ಲಿದ್ರೆ ಹತ್ತು ಪಟ್ಟು ಸಣ್ಣದಾಗಿ ಕಾಣಿಸ್ತಾನೆ ಅಂತೀರಾ? ಆದ್ರೆ ಅಷ್ಟೇ ಅಲ್ಲ, ಭೂಮಿ ಇಂದ ಹತ್ತು ಪಟ್ಟು ದೂರ ಇದ್ರೆ ನೂರು ಪಟ್ಟು ಹೊಳಪನ್ನ ಕಳ್ಕೊಂಡಿರ್ತಾನೆ, ಸ್ವಲ್ಪ ತಣ್ಣಗಿರ್ತಾನೆ. ಈ ಲೆಕ್ಕಾಚಾರ ಎಲ್ಲ ಬಂಧ್ ಮಾಡಿ ಬೇರೆ ಗ್ರಹಗಳಿಂದ ಸೂರ್ಯ ಹೇಗ್ ಕಾಣ್ತಾನೆ ಅಂತ ಕಂಡ್ಕೊಂಡಿರೋ ಈ ಚಿತ್ರಗಳ್ನ ಒಂದ್ಸಾರಿ ನೋಡಿದ್ಮೇಲೆ ನೀವು ಭೂಮಿ ಬಗ್ಗೆ ಹೆಮ್ಮೆ ಪಡೋದಂತೂ ದಿಟ.

1) ಇದು ಸೂರ್ಯಂಗೆ ಹತ್ರ ಇರೋ ಬುಧನಿಂದ ಕಾಣೋ ವೈಖರಿ

ಬುಧ ಗ್ರಹದಿಂದ ಸೂರ್ಯ ಭೂಮಿಗಿಂತ ಸುಮಾರು ಮೂರು ಪಟ್ಟು ಕಮ್ಮಿ ದೂರದಲ್ಲಿ ಇದ್ದಾನೆ. ಆದ್ರಿಂದ ತಟ್ಟೆ ತರಾ ಕಾಣೋ ಬದ್ಲು ಪರಾತ ಅಥ್ವಾ  ಹರಿವಾಣದ ದಧಾ ಕಾಣ್ತಾನೆ.ಇದೇನು ನಿಮ್ ಚಿತ್ರದಲ್ಲಿ ಸೂರ್ಯನ ಜೊತೆ ನಕ್ಷತ್ರಗಳೂ ಇದ್ಯಲ್ಲ ಅಂದ್ರಾ? ಬುಧನ ಮೇಲೆ ವಾತಾವರಣ ತುಂಬಾನೆ ತೆಳುವಾಗಿರೋದ್ರಿಂದ ಬೆಳ್ಗೆ ಹೊತ್ತೂ ಆಕಾಶ ಕಪ್ಗಿರತ್ತೆ. ಬೆಳಕು ನಮ್ಗಿಂತ 8ರಿಂದ 9 ಪಟ್ಟು ಜಾಸ್ತಿ ಪ್ರಖರವಾಗಿ ಇರತ್ತೆ. ನಾವೇ ಸೂರ್ಯನ್ನ ಬೆಂಗದಿರ ಅಂದ್ರೆ ಅಲ್ಲೀನೋರು ಏನ್ ಹೇಳ್ಬೇಕೋ?

2) ಇದು ಬೆಳಗಿನ ಬೆಳ್ಳಿ ಶುಕ್ರಗ್ರಹದಿಂದ ಕಾಣೋ ಮಾದರಿ

ಶುಕ್ರನ್ನ ಸುತ್ತವರೆದಿರೋ ನಾನೂರು ಕಿಲೋಮೀಟರ ದಪ್ಪದ ಇಂಗಾಲದ ಡೈ ಆಕ್ಸೈಡ್ ಮೋಡಗಳಿಂದಾಗಿ ಸೂರ್ಯ ಮಂಕಾಗಿ ಕಾಣ್ತಾನೆ. ಭೂಮಿಯಿಂದ ನಾವು ನೋಡೋ ಸೂರ್ಯಂಗಿಂತ ಒಂದೂವರೆ ಪಟ್ಟು ದೊಡ್ದಾಗಿ ಕಾಣ್ತಾನೆ.

3) ಇದು ಭೂಮಿ ಮೇಲಿಂದ ಕಾಣೋ ಸೂರ್ಯಗ್ರಹಣದ ಚಿತ್ರ

ಭೂಮಿಯಿಂದ ಸೂರ್ಯ ಮತ್ತೆ ಚಂದ್ರ ಇಬ್ರೂ ಹೆಚ್ಚು ಕಮ್ಮಿ ಒಂದೇ ಗಾತ್ರ ಕಾಣೋದ್ರಿಂದ ಗ್ರಹಣ ತನ್ನ ಚಮಕ್ ಈ ರೀತಿ ತೋರಿಸಕ್ಕೆ ಸಾಧ್ಯ. ಸೌರಮಂಡಲದಲ್ಲಿ ಇನ್ನೆಲ್ಲೂ ಇದು ಸಾಧ್ಯವಿಲ್ವೋ ಏನೋ.

4) ಕೆಂಪು ಗ್ರಹ ಮಂಗಳನ ಧೂಳುಮಯ ಅಂಗಳದಿಂದ ಕಾಣೋ ಚಿತ್ರ

ಮಂಗಳ ನಮ್ಗಿಂತ ಒಂದೂವರೆ ಪಟ್ಟು ದೂರದಲ್ಲಿರೋದ್ರಿಂದ ಸೂರ್ಯ ಸ್ವಲ್ಪ ಚಿಕ್ದಾಗಿ ಕಾಣಿಸ್ತಾನೆ. ಹೊಳಪನ್ನ ಎರಡು ಪಟ್ಟು ಕಳ್ಕೊಂಡಿರ್ತಾನೆ.

5) ಆಗಸದ ದೈತ್ಯ ಗುರೂನ ಚಂದ್ರ ಯುರೋಪಾದಿಂದ ಕಾಣೋ ಪರಿ

ನಮ್ಗಿಂತ ಸುಮಾರು ಐದು ಪಟ್ಟು ದೂರ ಇರೋ ಗುರು ಗ್ರಹದ್ಮೇಲೆ ವಾತಾವರಣ ಸಾಂದ್ರವಾಗಿರೋದ್ರಿಂದ ನಿಗ-ನಿಗಿ ಕೆಂಪಗೆ ಹೊಳೀತಾನೆ. ಭೂಮಿ ಮೇಲೆ ಹುಟ್ಟೋ ಅಥ್ವಾ ಮುಳ್ಗೋ ಸೂರ್ಯನ ಥರಾ.

6) ನಮ್ಗಿಂತ ಹತ್ತು ಪಟ್ಟು ದೂರದ ಶನಿಗ್ರಹದಿಂದ ಕಾಣೋ ಇಂದ್ರಜಾಲ

ಆದರಿಂದ ಬರಿಕಣ್ಣಿಗೆ ಕಾಣೋ ಕೊನೆ ಗ್ರಹ ಆದ್ರಿಂದ ಹಾಗು ದೂರದ ಕಾರಣದಿಂದ ನಿಧಾನಕ್ಕೆ ಚಲಿಸೋದ್ರಿಂದ (ಸೂರ್ಯನ್ನ ಪ್ರದಕ್ಷಿಣೆ ಹಾಕಕ್ಕೆ ಸುಮಾರು 29 ವರ್ಷ ತೊಗೋತಾನೆ) ಅದನ್ನ ಶನಿ (ಸಂಸ್ಕೃತದಲ್ಲಿ ಶನೈಃ ಅಂದರೆ ಮೆಲ್ಲಗೆ ಅಂತ  ಅರ್ಥ) ಅಂತಾರೆ. ಶನಿಗ್ರಹದ ವಾತಾವರಣದಲ್ಲಿರೋ ನೀರಿನ ಅಂಶದಿಂದ ಕಾಮನಬಿಲ್ಲು ಸರ್ವೇ ಸಾಮಾನ್ಯ. ಸೂರ್ಯನ ಪ್ರಖರತೆ ಸುಮಾರು ನೂರು ಪಟ್ಟು ಕಮ್ಮಿಆಗಿದ್ರೂ ಬರಿಕಣ್ಣಲ್ಲಂತೂ ಸೂರ್ಯನ್ನ ನೋಡೊಹಾಗಿಲ್ಲ.

7) ನೀಲಿ ಬಣ್ಣದ ಯುರೇನಸ್ನ ಉಪಗ್ರಹ ಏರಿಯಲ್ನಿಂದ ಕಾಣೋ ನೋಟ

ಸೂರ್ಯ ನಮ್ಗಿಂತ ಹತ್ತೊಂಬತ್ತು ಪಟ್ಟು ಜಾಸ್ತಿ ದೂರ ಯುರೇನಸ್ನಿಂದ ಇದ್ದಾನೆ.

8) ನೆಪ್ಚ್ಯೂನ್ನ ಚಂದ್ರ ಟ್ರೈಟನ್ ಇಂದ ಸೂರ್ಯ ಹೀಗೆ ಕಾಣಿಸ್ತಾನೆ

ಬಿಸಿನೀರಿನ ಬುಗ್ಗೆ ಥರಾ ಅನಿಲಗಳ್ನ ಹೊರಕ್ಕೆ ಹಾಕ್ತಾ ಇರೋ ಟ್ರೈಟನ್ ವಾತಾವರಣದಲ್ಲಿ ಮಂಕಾಗಿ ಕಾಣ್ತಾ ಇದ್ರೂ ಪ್ರಖರವಾಗಿ ತೊಳಗ್ತಾ ಇರ್ತಾನೆ.

9) ಇವತ್ತು ಗ್ರಹದ ಪಟ್ಟಿಗೇ ಸೇರಿಸದ ಪ್ಲೂಟೋ ಇಂದ ಚುಕ್ಕೆ ಥರಾ ಕಾಣೋ ಸೂರ್ಯ

ಇಲ್ಲಿ ಸೂರ್ಯನ ಹೊಳಪು ಭೂಮಿ ಮೇಲ್ಗಿಂತ ಸುಮಾರು 1600 ಪಟ್ಟು ಮಂಕಾಗಿರತ್ತೆ. ಆದ್ರೂ ತಂಗದಿರ ನಮ್ಮ ಹುಣ್ಣಿಮೆ ಚಂದ್ರನ ಹೊಳ್ಪಿಗಿಂತ 250 ಪಟ್ಟು ಜಾಸ್ತಿ ಇರತ್ತೆ.