https://dot.ro/wp-content/uploads/2017/08/1-2-1000x600.jpg

ಸಾಮಾನ್ಯವಾಗಿ ವ್ಯಕ್ತಿತ್ವ ಪರೀಕ್ಷೆಗಳು ಯಾವ್ದಾದ್ರೂ ಒಂದು ಚಿಹ್ನೆ ಜೊತೆ ಸಂಬಂಧ ಹೊಂದಿರುತ್ವೆ. ಒಂದೊಂದು ಸಂಕೇತಗಳೂ ಮನುಷ್ಯನ ಬೇರೆಬೇರೆ ವ್ಯಕ್ತಿತ್ವ ಹಾಗು ಸ್ವಭಾವಗಳ ಬಗ್ಗೆ ಹೇಳುತ್ತೆ. ಈ ಕೀಗಳು  ನಿಮ್ ಬಗ್ಗೆ ಏನು ಹೇಳುತ್ತೆ ಅಂತ ನೋಡಕ್ಕೆ ನೀವು ತಯಾರಾ?

1 ನೇ ಕೀ

ಯಾವುದೇ ಅಲಂಕಾರ ಇಲ್ದೆ ಇರೋ ಅತ್ಯಂತ ಸರಳ ಮತ್ತು ಸಾಮಾನ್ಯ ಕೀ ಇದು. ಇದು ತುಂಬಾ ಸರಳವಾಗಿದ್ರೂ ಅನೇಕ ಬೀಗಗಳನ್ನು ತೆಗೆಯುತ್ತೆ. ನೀವು ಈ ಕೀ ಆರಿಸ್ಕೊಂಡಿದ್ರೆ, ಯಾವುದೇ ವಿಷಯಾನೇ ಆಗ್ಲಿ ಚೆನ್ನಾಗಿ ಅರ್ಥ ಮಾಡ್ಕೊಂಡು ನೋಡೋ ಸೂಕ್ಷ್ಮ ಸ್ವಭಾವ ನಿಮ್ಮದು. ಯಾವುದೇ ಕೆಲ್ಸಾನೆ ಆಗ್ಲಿ ಒಂದ್ಸಲ ನಿರ್ಧಾರ ಮಾಡಿದ್ಮೇಲೆ ಮಾಡ್ಲೆ ಬೇಕು ಅನ್ನೋ ಸ್ವಭಾವದವರು. ಧೃಡವಾದ ಸಂಕಲ್ಪ ನಿಮ್ಮದು. ಸೂಕ್ಷ್ಮತೆ ಮತ್ತು ದುರ್ಬಲತೆ ನಿಮ್ಮನ್ನ ಆಗಾಗ ಕಾಡ್ತಾ ಇರುತ್ತೆ.

 

2 ನೇ ಕೀ

ಮ್ಯಾಜಿಕ್ ಮಾಡೋ ತರ ಯಾವುದೇ ಬಾಗಿಲು ಕೂಡ ತೆಗಿಯಕ್ಕೆ ಸಾಧ್ಯವಾಗೋ ವಿಶ್ವಾಸಾರ್ಹ ಕೀ ಆರಿಸ್ಕೊಂಡಿದ್ದೀರಿ. ಇದು ನೀವು ಸದಾ ಕಾಂತಿಯಿಂದ ಕೂಡಿರೋ, ಪ್ರಭಾವಶಾಲಿ ಹಾಗೂ ಸದಾ ಏನಾದ್ರೂ ಹೊಸತನ್ನು ಕಂಡುಹಿಡಿಯೋ ಮನೋಭಾವ ಇರೋವ್ರು ಅನ್ನೋದನ್ನ ತೋರ್ಸುತ್ತೆ.ನೀವು ನಿಮಗೇನು ಬೇಕೋ ಅದನ್ನ ಪಡ್ಕೊಂಡೋ ಪಡ್ಕೋತೀರಿ, ಸ್ವತಂತ್ರವಾಗಿರೋದೇ ನಿಮ್ಮ ದೊಡ್ಡ ಶಕ್ತಿ. ಆಣೆ ಪ್ರಮಾಣಗಳಿಂದ ನಿಮ್ಮನ್ನ ಕಟ್ಟಿಹಾಕಕ್ಕಾಗಲ್ಲ.

 

3 ನೇ ಕೀ

ಇದೊಂತರ ಅಪರೂಪದ ಕೀ. ಇದು ಘಾಡವಾದ ನಂಬಿಕೆ, ನಿಮ್ಮ ಶಕ್ತಿಯ ಮೇಲೆ, ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರೋವ್ರು ನೀವು ಅಂತ ತೋರ್ಸುತ್ತೆ. ನೀವು ಆಯ್ಕೆ ಮಾಡ್ಕೊಂಡಿರೋ ಕೀ ನೇ ನೀವು ಎಂತ ವ್ಯಕ್ತಿ ಅಂತ ತೋರ್ಸಕ್ಕೆ ಒಳ್ಳೆ ಸಾಕ್ಷಿ. ಕೀ ತುದಿಯನ್ನ ಸರಿಯಾಗಿ ಗಮನಿಸಿ, ಅದು ಕಟ್ ಆಗಿರೋ ರೀತಿ ನೋಡಿ, ಇದು ಏನು ಹೇಳುತ್ತೆ ಅಂದ್ರೆ ಇದು ತುಂಬಾನೇ ವಿಶೇಷವಾಗಿರೋ ಬಾಗಿಲು ಹಾಗೂ ಬೀಗಾನ ತೆಗೆಯುತ್ತೆ ಅಂತ. ಇದು ನೀವು ಯಾವುದೇ ಸವಾಲನ್ನೇ ಆಗ್ಲಿ ತುಂಬಾ ಯೋಚ್ನೆ ಮಾಡದೇ ಒಪ್ಕೋತೀರಿ. ನಿಮ್ಮ ಜೀವನ ನಿಮ್ಮ ನಿಯಂತ್ರಣದಲ್ಲಿರತ್ತೆ ಹಾಗೆ ಏನೇ ಬಂದ್ರು ಎದುರಿಸೋ ಸ್ವಭಾವ ನಿಮ್ಮದು.

 

4 ನೇ ಕೀ

ಇದು ನಾಲ್ಕು ಎಳೆಗಳ, ಸುಖ-ಭೋಗದ ಆಕಾರದಲ್ಲಿದೆ. ಇದು ಖುಷಿ, ಆನಂದ ಹಾಗು ಸಂತೋಷ ತೋರ್ಸುತ್ತೆ.ನೀವು ಎಲ್ಲದನ್ನೂ ಸುಲಭವಾಗಿ ತೊಗೋತೀರಿ. ಯಾವದೇ ವಿಷಯದಲ್ಲಾಗಲಿ ಒಳ್ಳೇದನ್ನೇ ನೋಡೋ ಸ್ವಭಾವ ನಿಮ್ಮದು. ನಿಮಗೆ ಆಶಾಭಾವ ಹೆಚ್ಚಾಗೇ ಇದೆ. ಆದ್ರೆ ಇದು ಕೆಲವೊಂದು ಸಲ ನಿಮ್ಮನ್ನ ಕಷ್ಟಕ್ಕೆ ಸಿಲಿಕಿಸಬಹುದು ಹುಷಾರಿಗಿರಿ. 

 

5 ನೇ ಕೀ

ನೀವು ಆರಿಸ್ಕೊಂಡಿರೋದು ಕಾಲ್ಪನಿಕ ಕಥೆಗಳಲ್ಲಿ ಬರೋ ಕಲ್ಪನೆ, ಭ್ರಮೆಗಳಿಂದ ತುಂಬಿರೋ, ತುಂಬಾನೇ ಗೋಜಲುಗಳಿರೋ, ಸಿಕ್ಕುಗಳಿರೋ ಕೀ. ಇದು ನೀವು ತುಂಬಾ ಕ್ರಿಯೇಟಿವ್, ಹೊಸ ಹೊಸ ಎದ್ದು ಕಾಣುವ ಕಲ್ಪನೆ ಇರೋವ್ರು, ಸೃಜನಾತ್ಮಕ ಕನಸುಗಾರರು ಅನ್ನೋದನ್ನ ತೋರ್ಸುತ್ತೆ. ನೀವು ಒಂದು ತರ ವಿಶೇಷವಾದ ವ್ಯಕ್ತಿ. ನಿಮ್ಮಲ್ಲಿರೋ ವಿಶೇಷತೇನೆ ನೀವು ಪ್ರಪಂಚದಲ್ಲಿ ಎಲೆ ಮರೆ ಕಾಯಿ ಅಂತಾರಲ್ಲ ಹಾಗೆ, ಏಕಾಂತವಾಗಿ ಇರೋ ಹಾಗೆ ಮಾಡುತ್ತೆ. ಇದೇ ಕಾರಣಕ್ಕೆ ಜನ ನಿಮ್ಮನ್ನ ತುಂಬಾ ತಪ್ಪಾಗಿ ಅರ್ಥ ಮಾಡ್ಕೋತಾರೆ.

 

6 ನೇ ಕೀ

ನೀವು ಅತ್ಯಂತ ಶ್ರೇಷ್ಠವಾದ ಕೀ ಆರಿಸ್ಕೊಂಡಿದ್ದೀರಿ. ಇದು ನಿಮಗೆ ತುಂಬಾನೇ ವಿಚಾರ ಜ್ಞಾನ ಇದೆ, ಒಳ್ಳೆ ತರ್ಕ ಜ್ಞಾನ ಇದೆ ಅನ್ನೋದನ್ನ ತೋರ್ಸುತ್ತೆ. ನಿಮ್ಮ ಸುತ್ತ ಮುತ್ತ ಇರೋ ವಸ್ತುಗಳ ಬಗ್ಗೆ ನೀವು ತುಂಬಾನೇ ಚೆನ್ನಾಗಿ ತಿಳ್ಕೊಂಡಿದ್ದೀರಿ. ನಿಮ್ಮಲ್ಲಿ ಏಕಾಗ್ರತೆ ತುಂಬಾನೇ ಹೆಚ್ಚಾಗಿದೆ. ನಿಮಗೆ ನಿಮ್ಮದೇ ಆದ ಒಂದು ಕಂಫರ್ಟ್ ಝೋನ್ ಇರುತ್ತೆ,  ಆದ್ರೂ ಅದ್ರಿಂದ ಹೊರಗೆ ಬರೋದು ಅಂದ್ರೆ ನಿಮಗೆ ತುಂಬಾನೇ ಕಷ್ಟ. ನೀವು ತುಂಬಾ ನಿಷ್ಠಾವಂತರು, ಎಲ್ಲರೂ ನಿಷ್ಠೆಯಿಂದ ಇರ್ಲಿ ಅಂತ ನಿರೀಕ್ಷೆ ಇಟ್ಕೊಂಡಿರೋವ್ರು.

ನೀವು ಏನು? ನಿಮ್ಮ ಸ್ವಭಾವ ಏನು ಅಂತ ನೀವು ಆಯ್ಕೆ ಮಾಡ್ಕೊಂಡ ಕೀ ಸರ್ಯಾಗಿ ಹೇಳ್ತಾ?