ಇತಿಹಾಸದ ಪುಟಗಳನ್ನ ತೆರೆದು ನೋಡಿದ್ರೆ ಕನ್ನಡಿಗರು ಅದೆಷ್ಟೋ ಕ್ಷೇತ್ರಗಳಲ್ಲಿ ಮೊದಲಿಗರಾಗಿದ್ದಾರೆ. ಆ ರೀತಿ ಮೊದಲಿಗರಾಗಿ ಮೂಲ ಸಂಸ್ಥೆಗಳನ್ನು ಹುಟ್ಟು ಹಾಕಿದ ಎಷ್ಟೋ ಮಹನೀಯರನ್ನ ನಮ್ಮ ನಾಡಿನಲ್ಲಿ ಇಂದಿಗೂ ನೆನೆಯೋದುಂಟು. ಕನ್ನಡಿಗರಿಗೆ ಇದೊಂದು ಹೆಮ್ಮೆಯ ಸಂಗತಿಯೇ ಸರಿ. ಕನ್ನಡಮ್ಮನ ಕಿರೀಟದಲ್ಲಿರುವ ಅಂತಹ ಅದೆಷ್ಟೋ ಗರಿಗಳಲ್ಲಿ ಈ ಆಕಾಶವಾಣೀನೂ ಒಂದು. ಹೇಗೆ ಅಂದ್ರಾ? ಮುಂದೆ ಓದಿ…

1) ಬ್ರಿಟಿಷ್ ಸರ್ಕಾರದ ಹಂಗಿಲ್ಲದೆ ಮೊದಲ ಬಾರಿಗೆ ಒಂದು ರೇಡಿಯೋ ವಾಹಿನಿ ಶುರು ಮಾಡಿದ್ದು ಮೈಸೂರಿನ ಡಾ|| ಎಂ. ವಿ. ಗೋಪಾಲಸ್ವಾಮಿಗಳು

ಇವರ ರೇಡಿಯೋ ಸ್ಟೇಶನ್ ಸೆಪ್ಟೆಂಬರ್ 10, 1935ನೆ ತಾರೀಕು ಪ್ರಸಾರ ಶುರುಮಾಡ್ತು.

ಮೂಲ

2) ಅದಕ್ಕೆ ಅವರು ಬರೀ ಒಂದು 30 ವ್ಯಾಟ್ ಫಿಲಿಪ್ಸ್ ಟ್ರಾನ್ಸ್ ಮಿಟರ್ ಉಪಯೋಗಿಸಿದ್ದರು

ಮೊದಮೊದಲು ಈ ವಾಹಿನೀಲಿ ದಿನಾ ಒಂದು ಘಂಟೆಕಾಲ ಶೈಕ್ಷಣಿಕ ಕಾರ್ಯಕ್ರಮ ಬರ್ತಿತ್ತಂತೆ. ಸೊಲ್ಪ ವರ್ಷ ಆದ್ಮೇಲೆ ಶಾರ್ಟ್ ವೇವ್ ಬಳಸಿ ಕಾರ್ಯಕ್ರಮಗಳನ್ನ ಪ್ರಸಾರ ಮಾಡಕ್ಕೆ ಒಪ್ಪಿಗೆ ಸಿಕ್ತಂತೆ.

ಮೂಲ

3) ಈ ರೇಡಿಯೋ ಸ್ಟೇಶನ್ ಶುರುವಾಗಿದ್ದು ಗೋಪಾಲಸ್ವಾಮಿಗಳ ಬಾಡಿಗೆ ಮನೇಲಿ

‘ವಿಠ್ಠಲ ವಿಹಾರ’ ಅಂತ ಅದಕ್ಕೆ ಹೆಸರು. ಮೈಸೂರು ಇವತ್ತಿನ ಆಕಾಶವಾಣಿ ಕೇಂದ್ರದಿಂದ 500 ಅಡಿ ದೂರದಲ್ಲಿ ಇವತ್ತಿಗೂ ಈ ಮನೆ ಇದೆ.

ಮೂಲ

4) ಡಾ|| ಗೋಪಾಲಸ್ವಾಮಿಗಳು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸೈಕಾಲಜಿ ಪ್ರೊಫೆಸರ್ ಹಾಗೂ ಪ್ರಿನ್ಸಿಪಲ್ ಆಗಿದ್ರು

ಸೈಕಾಲಜೀಗೂ ರೇಡಿಯೋ ಸ್ಟೇಶನ್ಗೂ ಎಲ್ಲೀ ಸಂಬಂಧ!

ಮೂಲ

5) ಅವರು 6 ವರ್ಷ ಆಲ್ ಇಂಡಿಯಾ ರೇಡಿಯೋನ ತಮ್ಮ ಸ್ವಂತ ಖರ್ಚಲ್ಲೇ ನಡೆಸಿದರು – ಬೇರೆ ಯಾರ ಸಹಾಯವೂ ಇಲ್ಲದೆ

ಮೂಲ

6) ಕಡೆಗೆ ಕೈಯಿಂದ ಖರ್ಚು ನಿಭಾಯಿಸಕ್ಕಾಗದೆ ಮೈಸೂರು ಮುನಿಸಿಪಾಲ್ಟಿಗೆ ತಮ್ಮ ಸ್ಟೇಶನ್ನ ಬಿಟ್ಟುಕೊಟ್ಟರು

ಮೂಲ

7) ಆಮೇಲೆ 1942ರ ಜನವರಿಯಿಂದ ಈ ರೇಡಿಯೋ ವಾಹಿನಿ ಮಹಾರಾಜರ ಸುಪರ್ದಿಗೆ ಬಂತು

ಆಗ ಜಯಚಾಮರಾಜೇಂದ್ರ ಒಡೆಯರ್ ರಾಜರಾಗಿದ್ರು.

ಮೂಲ

8) ಆಮೇಲೂ ಗೋಪಾಲಸ್ವಾಮಿಗಳೇ 1943ರ ಆಗಸ್ಟ್ ವರೆಗೂ ನಿಲಯದ ನಿರ್ದೇಶಕರಾಗಿದ್ರು

ಆ ಸ್ಟೇಶನ್ ನಡೆಸಕ್ಕೆ ಬೇಕಾದ ಅನುಭವ ಅವರಿಗಲ್ಲದೆ ಬೇರೆ ಯಾರಿಗೂ ಇರಲಿಲ್ಲ ಅನ್ನಬಹುದು.

9) ತಮ್ಮ ಸ್ಟೇಶನ್ಗೆ ಕನ್ನಡದಲ್ಲೇ ಒಂದು ಹೆಸರಿಡಬೇಕು ಅಂತ ಪ್ರೊ|| ಎನ್. ಕಸ್ತೂರಿ ಅವರ ಜೊತೆಗೂಡಿ ಒಂದು ದಿನ "ಆಕಾಶವಾಣಿ" ಅಂತ ಹೆಸರು ಕೊಟ್ರು

ಪುರಾಣಗಳಲ್ಲಿ ಕೇಳಿಬರುವ ‘ಅಶರೀರವಾಣಿ’ ಅನ್ನೋ ಪದ ಇದಕ್ಕೆ ಪ್ರೇರಣೆ ಆಗಿತ್ತಂತೆ.

ಮೂಲ

10) ಗೋಪಾಲಸ್ವಾಮಿ ಅವರ ನಂತರ ಪ್ರೊ|| ಕಸ್ತೂರೀನೇ ಮೈಸೂರು ಆಕಾಶವಾಣೀನ ಮುನ್ನಡೆಸಿದ್ರು

ಮೂಲ

11) ಮೈಸೂರು ಸಂಸ್ಥಾನ ಭಾರತಕ್ಕೆ ಸೇರಿದಾಗ ಗೋಪಾಲಸ್ವಾಮಿಗಳ ಕೂಸು… ಆಕಾಶವಾಣಿ… ಭಾರತ ಸರ್ಕಾರದ ಸ್ವತ್ತಾಯಿತು

ಮೂಲ

12) ಆಮೇಲೆ ಭಾರತದಲ್ಲೆಲ್ಲ ಹರಡಿದ ಆಲ್ ಇಂಡಿಯಾ ರೇಡಿಯೋಗೆ "ಆಕಾಶವಾಣಿ" ಅಂತಾನೇ ಹೆಸರು ಬಂತು.

ಮೂಲ

ಕಾಲರ್ ಮೇಲ್ ಮಾಡ್ಕೊಂಡು ಹೇಳ್ಕೊಳ್ರಪ್ಪಾ ಎಲ್ಲರಿಗೂ!