ಅದ್ಹೆಂಗ್ ಸಾಧ್ಯ ಇದು? ನೀರಿನ ಕೆಳಗೊಂದು ನದಿ ಇರುತ್ತಾ? ಎಲ್ಲೋ ತಲೆಕೆಟ್ಟಿರ್ಬೇಕು ಅಂದುಕೊಳ್ತೀರ…

ಆದ್ರೆ ಆ ತರಹ ನದಿ ಇದೆ ಅಂತ ಇಲ್ಲೊಬ್ಬ ವೃತ್ತಿಪರ ಈಜುಗಾರ ಕಮ್ ಫೋಟೋಗ್ರಾಫರ್ ತೋರಿಸಿಕೊಟ್ಟಿದಾನೆ. ಹೆಸರು ಅನಟೋಲಿ ಬೆಲೋಶ್ಚಿನ್ ಅಂತ. 

ಮೂಲ

ಇತ್ತೀಚೆಗೆ ಈತ ಮೆಕ್ಸಿಕೋ ದೇಶಕ್ಕೆ ಹೋಗಿದ್ದ. ಹಾಗೆಯೇ ಡ್ರೈವ್ ಮಾಡ್ಕೊಂಡ್ ಸಿನೋಟ್ ಏನ್ಜಲೀಟಾ ಅನ್ನೋ ಜಾಗಕ್ಕೆ ಹೋದ…

ಸಿನೋಟ್ ಅನ್ನೋದು ಪ್ರಕೃತಿ ನಿರ್ಮಿಸಿರೋ ಒಂದು ಸುಣ್ಣದಕಲ್ಲಿನ ಕುಳಿ. ಗುಹಾಂತರದ ಗೋಡೆಗಳು ಕುಸಿದು ರೂಪಗೊಂಡಿರೋ ಕುಳಿ…

ಮೂಲ

ನಿಸರ್ಗವೇ ನಿರ್ಮಿಸಿದ ಈ ಗುಹಾಂತರ ಬಾವಿಗಳಲ್ಲಿ ನೀರು ತುಂಬುಕೊಂಡಿರುತ್ತೆ. ಈ ರೀತಿಯ ಬಾವಿಗಳನ್ನು ಹೆಚ್ಚಾಗಿ ಮೆಕ್ಸಿಕೋದಲ್ಲಿ ಕಾಣಬಹುದು.

ಈ ನಿಸರ್ಗದ ಚೆಲುವನ್ನು ಫೋಟೋನಲ್ಲಿ ಸೆರೆ ಹಿಡಿಯಕ್ಕೆ ಆಕ್ಸಿಜನ್ ಕಟ್ಟಿಕೊಂಡು ಅನಾಟೋಲಿ ನೀರಿಗೆ ಧುಮುಕಿದ….

ಮೂಲ

ಅಲ್ಲಿ ಅವನು ನೀರಿನ ಒಳಗಿನ ಸೌಂದರ್ಯವನ್ನು ಸೆರೆಹಿಡಿತಾ ಹಿಡಿತಾ 60 ಅಡಿ ಆಳದ ವರೆಗೂ ಹೋದ. ಆಗ ಕಣ್ಣಿಗೆ ಬಿತ್ತು ನೋಡಿ ಒಂದು ಅದ್ಭುತ…

60 ಅಡಿ ಕೆಳಗೆ ಅವನಿಗೆ ಮರಳು, ಉದುರಿದ ಎಲೆಗಳು, ಕಸಕಡ್ಡಿ… ಒಂದು ಹರೀತಿರೋ ನದಿ ಕಾಣಿಸ್ತು! ಅವನಿಗೆ ನಂಬಕ್ಕೇ ಆಗ್ಲಿಲ್ಲ…

ಮೂಲ

ಆದರೆ… ವಿಜ್ಞಾನ ಈ ಒಗಟು ಬಿಡಿಸಿದೆ… ಅಲ್ಲಿ ಹರೀತಿದ್ದಿದ್ದು ನೀರೇ ಅಲ್ಲ!

ಸಮುದ್ರ ನೀರಿನಲ್ಲಿ ಹೈಡ್ರೋಜನ್ ಸಲ್ಪೈಡ್ (H2S) ಹೆಚ್ಚಾಗಿರುತ್ತೆ. ಮಾಮೂಲಿ ನೀರಿಗಿಂತ ಅದ್ರ ತೂಕ ಜಾಸ್ತಿ. ಹಾಗಾಗಿ ಅದು ಕೆಳಗೆ ಹೋಗಿ ಸೆಟ್ಲ್ ಆಗುತ್ತೆ. ಮೇಲಿಂದ ನೋಡ್ದಾಗ ನದಿ ಹರೀತಿರೋಹಂಗೆ ಕಾಣುತ್ತೆ.

ಅನಟೋಲಿ ಫೇಸ್ಬುಕ್ಕಲ್ಲಿ ಸಿಗ್ತಾರೆ ಬೇಕಾದ್ರೆ ಒಂದ್ಸಲ ಹಲೋ ಅನ್ನಿ: