https://images.fatherly.com/wp-content/uploads/2017/07/Dad_Flowers.png

ಸಂಬಂಧಗಳು ತುಂಬಾನೇ ನಾಜೋಕು. ಎಷ್ಟು ಜೋಪಾನ ಮಾಡಿದ್ರೂ ಕಮ್ಮೀನೇ. ಇನ್ನು ಈ ಪ್ರೀತಿ – ಪ್ರೇಮದ ವಿಷಯದಲ್ಲಂತೂ ಈ ಮಾತು ಇನ್ನೂ ಸತ್ಯ. ಈ ಪ್ರೀತಿ ಪ್ರೇಮ ಅಂತ ಬಂದಾಗ ಎಷ್ಟೋ ಸರ್ತಿ ಏನ್ ಮಾಡ್ಬೇಕು, ಏನ್ ಮಾಡ್ಬಾರ್ದು ಅಂತಾನೇ ಒಂದೊಂದ್ಸರ್ತಿ ಗೊತ್ತಾಗಲ್ಲ. ನಮಗೆ ಗೊತ್ತಿಲ್ದೇನೇ ಒಂದೊಂದ್ಸರ್ತಿ ತಪ್ಪಾಗೋಗತ್ತೆ. ಏನೋ ಹೇಳಕ್ಕೋಗಿ ಏನೋ ಹೇಳಿ ಎಡವಟ್ಟಾಗೋಗತ್ತೆ! ಆಮೇಲೆ ಪಶ್ಚಾತಾಪ ಪಟ್ಟು ಏನ್ ಪ್ರಯೋಜನ ಹೇಳಿ? ಆದ್ರಿಂದ ನಿಮ್ ಹುಡ್ಗನ್ ಜೊತೆ ಮಾತಾಡೋವಾಗ ಸ್ವಲ್ಪ ಗಮನ ಹರಿಸಿ. ಇನ್ನು ನಿಮ್ ಹುಡ್ಗನ ಹತ್ರ ಮಾತಾಡೋವಾಗ ಈ 10 ವಿಷಯಗಳನ್ನ ಬಿಟ್ಬಿಡೋದೇ ಒಳ್ಳೇದು. ಅದೇನಂತ ನೋಡಿ.

1. ನಿಮ್ ಹಳೇ ಬಾಯ್ ಫ್ರೆಂಡ್ ಬಗ್ಗೆ ಮಾತಾಡಿ ಅವ್ನನ್ನ ಇವ್ನಿಗೆ ಹೋಲ್ಸೋದು

ನಿಮ್ಮ ಹುಡುಗನಿಗೆ ಹೊಟ್ಟೆಕಿಚ್ಚು ತರಿಸೋಕಾದರೂ ನೀವೇನಾದರೂ ಈ ರೀತಿ ಮಾಡಿದರೆ ನಿಮ್ಮ ಹುಡುಗನಿಗೆ ಹೊಟ್ಟೆ ಕಿಚ್ಚಲ್ಲ ಅನುಮಾನ ಶುರು ಆಗುತ್ತೆ. ಇದು ನಿಮ್ಮ ಸಂಬಂಧಕ್ಕೆ ದೊಡ್ಡ ಸಮಸ್ಯೆ ಆಗ್ಬೋದು!

 

2. ನಿಮ್ಮ ಹುಡ್ಗನ ಹಳೇ ಗರ್ಲ್ ಫ್ರೆಂಡ್ನ ಹೀಯಾಳಿಸೋದು

ನಿಮ್ಮ ಹಳೇ ಕಥೆ ಆಗಲೀ ಅವರ ಹಳೇ ಕಥೆ ಆಗಲೀ ಮತಾಡೋದು ನಿಮ್ಮ ಹುಡುಗನಿಗೆ ಇಷ್ಟ ಆಗಲ್ಲ. ಅವರ ಹಿಂದಿನ ದಿನಗಳು ಎಷ್ಟೇ ಚನ್ನಾಗಿದ್ರೂ ಅವರಿಗೆ ಹಳೇದನ್ನ ನೆನಪಿಸಿದಾಗ ನೋವಾಗೋದು ಸಹಜ. ತುಂಬಾ ಅಗತ್ಯ ಅನ್ನಿಸೋವರೆಗೂ ಈ ವಿಷಯಗಳನ್ನ ಮಾತಾಡ್ಬೇಡಿ.

3. ಪದೇ ಪದೇ ಅವನ ಪ್ರೀತಿ ಪರೀಕ್ಷೆ ಮಾಡೋದು

ಹುಡುಗೀರಿಗೆ ತಮ್ಮನ್ನ ಹೊಗಳೋ ಹುಡುಗರು ಇಷ್ಟ ಆಗೋದು ನಿಜಾನೆ! ಹಾಗಂತ ಮೂರು ಹೊತ್ತೂ " ನನ್ನ ಯಾಕೆ ಪ್ರೀತಿಸುತ್ತೀಯಾ?" ಅಂತ ನಿಮ್ಮ ಹುಡುಗನ್ನ ಕೇಳ್ತಾನೇ ಇದ್ರೆ ಅವರಿಗದು ಇಷ್ಟ ಆಗಲ್ಲ. ನೀವೂ ಅರ್ಥ ಮಾಡ್ಕೋಬೇಕು… ಎಲ್ಲಾನೂ ಮಾತಲ್ಲಿ ಹೇಳೋಕಾಗಲ್ಲ ಅಂತ. ನೀವು ಇದನ್ನೇ ಪದೇ ಪದೇ ಕೇಳ್ತಾ ಇದ್ರೆ ಅವರಿಗದು ಕೋಪ ತರಿಸ್ಲೂಬಹುದು.

 

4. ಅವರಮ್ಮನ ಬಗ್ಗೆ ಕೀಳಾಗಿ ಮಾತಾಡೋದು

ಎಲ್ಲಾ ಹುಡುಗರಿಗೂ ಅವರಮ್ಮ ಅಂದ್ರೆ ಇಷ್ಟ. ನಿಮ್ಮನ್ನ ಎಷ್ಟೇ ಪ್ರೀತಿಸಿದರೂ ನೀವು ಅವರ ಅಮ್ಮ ಆಗೋಕೆ ಸಾಧ್ಯ ಇಲ್ಲ! ಅವರಮ್ಮನ್ನ ಇಷ್ಟ ಪಡದೇ ಇರೋಕೆ ನಿಮ್ಮ ಹತ್ತಿರ ಏನೇ ಕಾರಣ ಇದ್ರೂ ಸರಿ ಅದನ್ನ ಹೇಳೋಕೆ ಬೇರೆ ದಾರಿ ಹುಡುಕಿಕೊಳ್ಳಿ.

5. ಹುಚ್ಚುಚ್ಚು ಪ್ರಶ್ನೆ ಕೇಳೋದು

" ಆ ಹುಡುಗಿ ಚೆನ್ನಾಗಿದ್ದಾಳಾ?" , "ನಾನು ದಪ್ಪ ಆಗಿದ್ದೀನಾ?" , "ಇವತ್ತು ನಾನು ಚೆನ್ನಾಗಿ ಕಾಣಿಸ್ತಿದ್ದೀನಾ?" ಇಂತಹ ಪ್ರಶ್ನೆಗಳು ಅವರಿಗೆ ನಿಜ್ವಾಗ್ಲೂ ಇಷ್ಟ ಆಗಲ್ಲ. ಇಂತಹ ಪ್ರೆಶ್ನೆಗಳನ್ನ ಪದೇ ಪದೇ ಕೇಳ್ತಿದ್ರೆ ನಿಮ್ಮ ಸಂಬಂಧ ಒಂದಿನ ಹಾಳಾದರೂ ಆಶ್ಚರ್ಯ ಇಲ್ಲ!

 

6. ಮನಸ್ಸಿಗೆ ಬೇಜಾರಾಗಿದ್ರೂ ಏನೂ ಆಗೇ ಇಲ್ಲ ಅನ್ನೋತರ ಆಡೋದು

ನಿಮ್ ಮನಸ್ಸಿಗೆ ಬೇಜಾರಾಗಿದ್ರೂ " ಪರವಾಗಿಲ್ಲ! ನಾನು ಚೆನ್ನಾಗಿದ್ದೀನಿ!" ಅಂತೆಲ್ಲಾ ಹೇಳಿದ್ರೆ ನೀವು ನಿಜ ಹೇಳ್ತಿಲ್ಲ, ಸಿಟ್ಟಲ್ಲಿ ಅಥವಾ ಬೇಸರದಲ್ಲಿ ಈ ಡೈಲಾಗ್ ಹೊಡೀತಿದ್ದೀರ ಅಂತ ಅವರಿಗೆ ಅರ್ಥ ಆಗುತ್ತೆ. ವಿಷಯ ಏನು ಅಂತ ಅವರ ಹತ್ರ ಹೇಳದೇ ಹೋದ್ರೆ ಮನಸ್ತಾಪಗಳು ಜಾಸ್ತಿ ಆಗಿ ನಿಮ್ಮ ಸಂಬಂಧ ಹದಗೆಡಬಹುದು!

7. ಅವ್ನು ಯಾವ್ದಕ್ಕೂ ಲಾಯಕ್ಕಿಲ್ಲ ಅನ್ನೋತರ ನೋಡೋದು

ಅವರ ಹುಮ್ಮಸ್ಸು ಕುಗ್ಗಿಸೋ ಪ್ರಯತ್ನ ನೀವೇನಾದ್ರೂ ಮಾಡಿದ್ರೆ ಅವರಿಗದು ಇಷ್ಟ ಆಗಲ್ಲ. ಅವರನ್ನ ಹುರಿದುಂಬಿಸೋಕಾದರೆ ಹುರಿದುಂಬಿಸಿ… ಇಲ್ಲ ಅಂದ್ರೆ ಸುಮ್ಮನಿರಿ. ಹುಡುಗರಿಗೆ ತಮ್ಮ ಜೀವನದ ಬಗ್ಗೆ ನಿರ್ಧಾರ ತಗೊಳ್ಳೊ ಅಷ್ಟು ಜಾಣ್ಮೆ ಖಂಡಿತಾ ಇರುತ್ತೆ!

 

8. ಅವನ ಸ್ನೇಹಿತರಿಗೆ ಮರ್ಯಾದೆ ಕೊಡ್ದೆ ಇರೋದು

ನಿಮಗೆ ಅವನ ಸ್ನೇಹಿತರು ಇಷ್ಟ ಆಗದೇ ಇದ್ದರೂ ಹೇಳೋಕೆ ಹೋಗ್ಬೇಡಿ. ಯಾಕಂದ್ರೆ ನಿಮ್ಮ ಹುಡುಗಂದೂ ಅದೇ ಭಾವನೆ ಆಗಿದ್ರೆ ಅವನ ಸ್ನೇಹಿತರನ್ನ ಅವ್ನು ಯಾವತ್ತೋ ಬಿಟ್ಟಿರ್ತಿದ್ದ. ನೀವು ಹೀಗೆ ಹೇಳೋದ್ರಿಂದ ಅವರು ನಿಮ್ಮಿಂದ ದೂರ ಆದ್ರೂ ಆಗ್ಬೋದು.

9. ಅವನ ಮುಂದೆ ಬೇರೆ ಹುಡುಗರನ್ನ ಹೊಗಳೋದು

ನಿಮ್ಮ ಫೇವರೆಟ್ ಹೀರೋ ಬಗ್ಗೆ ಮಾತಾಡಿ ಪರ್ವಾಗಿಲ್ಲ. ಆದ್ರೆ ನೀವೇನಾದ್ರೂ ಅವರಿಗೆ ಹೊಟ್ಟೆಕಿಚ್ಚು ತರಿಸೋ ಪ್ರಯತ್ನ ಮಾಡಿದರೆ ಅದು ನಿಮ್ಮವರಿಗೆ ಹಿಡಿಸಲ್ಲ. ಹಾಗಾಗಿ ನಿಮ್ಮವರನ್ನ ಯಾರಿಗೂ ಹೋಲಿಸೋದಾಗಲಿ, ಬೇರೆಯವರನ್ನ ಅವ್ರ ಮುಂದೆ ಹೊಗಳೋದೇ ಆಗ್ಲಿ ಮಾಡ್ಬೇಡಿ.

 

10. ಪದೇ ಪದೇ ಧಮ್ಕಿ ಹಾಕಿ ಕೆಲಸ ಮಾಡಿಸ್ಕೊಳೋದು

ನಿಮ್ಮನ್ನ ಪ್ರೀತಿಸ್ತಾರೆ ಅನ್ನೋ  ಕಾರಣಕ್ಕೆ ಮೂರು ಹೊತ್ತೂ ಅದನ್ನ ನಿರೂಪಿಸೋ ಆಗತ್ಯ ಇಲ್ಲ! " ನೀ ನನ್ನ ನಿಜ್ವಾಗ್ಲೂ ಪ್ರೀತಿ ಮಾಡ್ತಿದ್ರೆ ನಾ ಹೇಳ್ದಾಗ್ ಮಾಡೇ ಮಾಡ್ತ್ಯ " … ಹಾಗೆ ಹೀಗೆ ಅಂತ ಧಮ್ಕಿ ಹಾಕೋದು ಸರಿ ಅಲ್ಲ!  ನಿಮ್ಮನ್ನ ಖುಷಿಪಡಿಸೋಕೆ ಅವರು ಎಲ್ಲ ಪ್ರಯತ್ನ ಮಾಡೋವಾಗ ನೀವೀತರ ಆಗಾಗ ಆಡೋದು ತಪ್ಪಲ್ವಾ ಹೇಳಿ?

ನೋಡಿ… ನಿಮ್ ಸಂಬಂಧ ಚನ್ನಾಗಿರ್ಬೇಕು ಅಂದ್ರೆ ಈ ತಪ್ಪುಗಳನ್ನ ಮಾಡ್ಬೇಡಿ!