https://antekante.com/sites/default/files/images/photoasjkhjkanf.png

"ನೋಡಿದ್ದು ಸುಳ್ಳಾಗಬಹುದು , ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುದು " ಅನ್ನೋ ಹಾಡನ್ನ ನಾವ್ ಚಿಕ್ಕಂದಿನಲ್ಲೇ ಕೇಳ್ಕೊಂಡ್ ಬಂದಿದ್ದೀವಿ ಅಲ್ವಾ. ಒಂದೊಂದ್ ಸಲ ಯೋಚ್ಸಿದ್ರೆ ನಾವೇ ಅದೃಷ್ಟವಂತ್ರು ಯಾಕಂದ್ರೆ ಈಗೀನ್ ಕಾಲದಲ್ಲಿ ಈ ತರದ ಹಾಡನ್ನ ಹೇಳ್ಕೋಡೊ ಮಾಸ್ಟ್ರಂತೂ ಮೊದ್ಲೇ ಇಲ್ಲ , ಹೇಳ್ಕೊಡ್ತೀನಿ ಅಂದ್ರು ಎಷ್ಟ್ ಮಕ್ಳು ರೆಡಿಯಾಗಿದ್ದಾರೆ ಹೇಳಿ ನೋಡುವ . ಬರೇ ಫೇಸ್ಬುಕ್ , ವಾಟ್ಸಪ್ ಅನ್ನೋದ್ರಲ್ಲೇ ಇದ್ದಾರೆ ಬಿಡಿ. ಈಗ ವಿಷ್ಯ ಎನಂದ್ರೆ ಇಲ್ಲೊಂದಿಷ್ಟು ಪೋಟೋಗಳನ್ನ ಕೊಟ್ಟಿದ್ದೀವಿ ಆದ್ರೆ ಒಂದ್ಸಲ ನೋಡಿದ್ರೆ ಅದೇನಂತ ನಿಮ್ಗೆ ಅಷ್ಟು ಸುಲಭವಾಗಿ ಅರ್ಥ ಆಗ್ಲಿಕ್ಕಿಲ್ಲ ಬಿಡಿ. ಅದ್ಕೆ ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯತ್ತೆ ಅನ್ನೋದು ನೆನಪಿರ್ಲಿ. ಒಂದೊಂದಾಗಿ ನೋಡ್ತಾ ಬರೋಣ ಬನ್ನಿ. 

1) ನಿದ್ದೆ ಕಣ್ಣಲ್ಲಿ ಇಲ್ಲೆಲ್ಲಾದ್ರೂ ಒಡಾಡಿದ್ರೆ ಈ ನಾಯಿ ಕಚ್ಚೋದು ಗ್ಯಾರಂಟಿ 

2) ಹಲಗೆ ಸುಟ್ಟಿದ್ರೂ ಈ ನಾಯಿ ಮುಖ ನೋಡಿ ಯಾಕೋ ಪಾಲಿಶ್ಗೆ ಕೊಡೋಕೆ ಮನ್ಸ್ ಆಗ್ತಾ ಇಲ್ಲ 

3) ಹಕ್ಕಿ ಹಾರುತಿದೆ ಕಿಚಿಪಿಚಿ ಅನ್ನುತಿದೆ ಅನ್ನೋ ಅಣ್ಣಾವ್ರ ಹಾಡು ನೆನಪಾಗ್ತಾ ಇದೆ

ಇದು ಹಕ್ಕಿಯಲ್ಲಾರೀ ಹಿಮಕುಸಿತದಿಂದ ಇರೋ ಬರೋ ಐಸೆಲ್ಲಾ ಹೀಗ್ ಹಾರ್ಕೊಂಡ್ ಹೋಗ್ತಾ ಇದೆ ನೋಡಿ

4) ತುಂಬಾ ಬೆನ್ನೋವಂತೆ ಈ ಮುದುಕಪ್ಪನಿಗೆ ಅದ್ಕೆ ಈ ತರ ಚಿಂತೆ ಮಾಡ್ಕೊಂಡ್ ಕೂತ್ಕೊಂಡಿದ್ದಾನೆ 

5) ಇವ್ರಷ್ಟು ಧೈರ್ಯವಂತರನ್ನ ನಾನ್ ಇದುವರ್ಗೆ ನೋಡ್ಲೇ ಇಲ್ಲ 

ಛೇ ಅದು ಅವ್ನ ಕೂದ್ಲು ಕಣ್ರೀ. ನಾನೆಲ್ಲೋ ಕಿಂಗ್ ಕಾಂಗ್ ಎದ್ರಿಗೆ ಪೋಟೋ ತೆಗ್ಸಕಂಡಿದ್ದಾರೆ ಅಂತ ತಿಳ್ಕಂಡಿದ್ದೆ. 

6) ಅಪ್ಪಿ ತಪ್ಪಿ ಒಳ್ಳೆ ದಾರಿ ಅನ್ಕೊಂಡು ನಡೆದ್ರೆ ಅಷ್ಟೆ ಕತೆ , ನಂಗಂತೂ ಮೊದ್ಲೇ ಈಜ್ ಬರಲ್ಲ ಹೇಳಿದ್ದೀನಿ

ಅದು ಕೆರೆ ಕಣ್ರೀ . ತರಗೆಲೆಯಿಂದ ಮುಚ್ಚೋಗಿದೆ ಅಷ್ಟೆ. 

7) ಅಮೇರಿಕಾದ ವರ್ಜೀನಿಯಾದಲ್ಲಿ ಈಗ ತಾನೇ ಬಂದಿಳಿದ ಎಲಿಯನ್ಗಳ ವಾಹನ ಅಂತೆ ಇದು

ಎಲಿಯನ್ನು ಇಲ್ಲಾ ಮಣ್ಣು ಇಲ್ಲ. ಇದು ಕಾರ್ ಡೋರ್ . ಪುಣ್ಯಾತ್ಮ ಸರ್ವೀಸ್ಗೆ ಕೊಡ್ದೇ ತುಂಬಾ ದಿನ ಆಯ್ತು. ಅದ್ಕೆ ಈ ತರ ಕೊಳೆ ಮೆತ್ಕೊಂಡಿದೆ. 

8) ಇದು ಪಾರಿವಾಳ ಅಲ್ಲ ಸಿಹಿಗೆಣಸಂತೆ 

9) ಒಂದಲ್ಲ 20 ಸಲ ನೋಡಿದ್ರೂ ಅರ್ಥ ಆಗ್ಲಿಕ್ಕೆ ತುಂಬಾ ಕಷ್ಟ್ ಇದೆ ಬಿಡಿ

https://files.brightside.me/files/news/part_44/445010/19373660-dVIpY5O-1517395319-650-4697ceb08b-1517813429.jpg

10) ಇದ್ರಲ್ಲಿ ಒಂದೇ ಒಂದು ಪ್ರಾಣಿಯಿದೆಯಂತೆ ಕರಡಿಯಂತ ನಂಗನ್ಸತಾ ಇದೆ 

ನಿಮ್ಗೆ ಹಾಗೇ ಅನ್ಸತಾ ಇದೆಯಾ ಇಲ್ಲ ಇನ್ಯಾವದಾದ್ರು ಇದೆಯಾ 


ಇಂತ ಪೋಟೋಗಳನ್ನೆಲ್ಲಾ ನೋಡೋವಾಗ ತಲೆ ಸ್ವಲ್ಪ ಖರ್ಚ ಮಾಡ್ಬೇಕಾಗತ್ತೆ. ಇಲ್ಲಾಂದ್ರೆ ತಲೆಬಿಸಿ ಗ್ಯಾರಂಟಿ.