ನಮ್ಮ ಹಲ್ಲು ಹೇಗಿದೆ ಅನ್ನೋದರ ಮೇಲೆ ನಮ್ಮ ವ್ಯಕ್ತಿತ್ವ ತಿಳ್ಕೊಬಹುದು ಅಂತ ನಿಮಗೆ ಗೊತ್ತಿತ್ತಾ ? ಹೌದು ಒಬ್ಬ ಮನುಷ್ಯನ ಹಲ್ಲು ಹೇಗಿದೆ ಅನ್ನೋದರಮೇಲೆ ಅವರ ವ್ಯಕ್ತಿತ್ವ ತಿಳ್ಕೊಬಹುದು, ಈ ವಿಜ್ಞಾನವನ್ನ ಮಾರ್ಫೋ ಸೈಕಾಲಾಜಿ ಅಂತ ಕರೀತಾರೆ.

ಹಲ್ಲಿನ ರಚನೆ ಹೇಗಿದೆ ಅನ್ನೋದನ್ನ ನೋಡಿ ಒಬ್ಬ ಮನುಷ್ಯ ಹೇಗೆ ಅನ್ನೋದನ್ನ ಇದ್ರಿಂದ ತಿಳ್ಕೊಬಹುದು. ನಾವು ಯಾರದಾದ್ರೂ ಜೊತೆ ಮಾತಾಡೋವಾಗ ಸಾಮಾನ್ಯವಾಗಿ ಹಲ್ಲು ಕಾಣಿಸುತ್ತೆ. ಹಲ್ಲಿನ ರಚನೆ ಅದರ ಹಿಂದಿರೋ ಅರ್ಥ ತಿಳ್ಕೊಂಡ್ರೆ ನಿಮ್ಮ ಎದುರಿಗಿರೋ ಮನುಷ್ಯ ಹೇಗೆ ಅಂತ ಚೆನ್ನಾಗಿ ಅರ್ಥ ಆಗುತ್ತೆ.

ಹಾಗಂತ ಇದು ತುಂಬಾ ಸುಲಭ, ಒಬ್ಬ ವ್ಯಕ್ತಿ ಹೇಗೆ ಅಂತ ಇದ್ರಿಂದಾನೆ ತಿಳ್ಕೊಬಹುದು ಅಂತ ಅನ್ಕೋಬೇಡಿ, ವ್ಯಕ್ತಿತ್ವದ ವಿಶ್ಲೇಷಣೆ ಮಾಡಿ ಇವರು ಹೀಗೆ ಅಂತ ಹೇಳೋದು ಸುಲಭದ ಕೆಲಸ ಅಲ್ಲ, ಆದರೆ ಈ ವಿಶ್ಶ್ಲೇಷಣೆ ಮಾಡಿ ಹೇಳಿರೋದು ಹೆಚ್ಚಿನ ಸಂದರ್ಭಗಳಲ್ಲಿ ಇದು ನಿಜ ಅನ್ನೋದು ಸಾಬೀತಾಗಿದೆ. ಹಲ್ಲುಗಳನ್ನ ಡಾಕ್ಟರ್ ನಾಲ್ಕು ರೀತಿಯ ಹಾಸ್ಯಗಳಾಗಿ ಹೇಳಿದ್ದಾರೆ ಅಲ್ಲದೆ  ಇದು ನಾಲ್ಕು ಮೂಲಭೂತ ಮನೋಧರ್ಮದ ಬಗ್ಗೆನೂ ಹೇಳುತ್ತೆ.

ನಿಮ್ಮ ಹಲ್ಲು ಚೌಕ, ಮೊಟ್ಟೆ, ಆಯತ/ ರೆಕ್ಟ್ ಆಂಗಲ್ ಅಥವಾ ತ್ರಿಕೋನ ಯಾವ ಆಕಾರದಲ್ಲಿದೆ ಅಂತ ತಿಳ್ಕೊಂಡು ನಿಮ್ಮ ಬಗ್ಗೆ ಏನು ಹೇಳುತ್ತೆ ಅಂತ ತಿಳ್ಕೊಳಿ.

ಚೌಕ.

ಇದನ್ನ ಗುರುತಿಸೋದು ತುಂಬಾನೇ ಸುಲಭ. ಈ ಆಕಾರದ ಹಲ್ಲು ಇರೋವ್ರಿಗೆ ಚೌಕಾಕಾರದ ಗುಣಗಳೇ ಇರುತ್ತೆ. ಇವರಿಗೆ ಕ್ರಮಬದ್ಧತೆ, ವಸ್ತುನಿಷ್ಠತೆ ಹಾಗೂ ನಿಯಂತ್ರಣ ಶಕ್ತಿ ಇದೆ ಅಂತ ತೋರ್ಸುತ್ತೆ. ಈ ಆಕಾರದ ಹಲ್ಲು ಇದ್ದವರು ತುಂಬಾನೇ ಶಾಂತ ಸ್ವಭಾವದವರು. ತಮ್ಮ ಮೇಲೆ ಹಾಗೆ ತಮ್ಮ ಭಾವನೆಗಳಮೇಲೆ ಹಿಡಿತ ಇಟ್ಟುಕೊಳ್ಳೋ ಶಕ್ತಿ ಇದೆ. ಅವರಿ ಕೊಡೊ ತೀರ್ಪು ಹಾಗೆ ತೆಗೆದುಕೊಳ್ಳೋ ನಿರ್ಧಾರ ಚೆನ್ನಾಗಿರುತ್ತೆ. ಇದಷ್ಟೇ ಅಲ್ಲ, ಈ ರೀತಿ ಹಲ್ಲು ನಿಮ್ಮದಾಗಿದ್ರೆ ನಿಮಗೆ ರಾಜತಾಂತ್ರಿಕ, ಬಲವಾದ ಉದ್ಯಮಶೀಲ ಚೈತನ್ಯ ಹಾಗೂ ಮಹತ್ವಾಕಾಂಕ್ಷೆ ಇದೆ ಅನ್ನೋದನ್ನೂ ಹೇಳುತ್ತೆ.

ಇದರಲ್ಲಿರೋ ಒಂದೇ ಒಂದು ನೂನ್ಯತೆ ಅಂದ್ರೆ , ಯಾವ ಮಟ್ಟಕ್ಕೆ ತಮ್ಮ ಭಾವನೆಗಳನ್ನ ನಿಯಂತ್ರಣದಲ್ಲಿ ಇಟ್ಕೊಂಡಿದ್ದಾರೆ? ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿ ಏನು ನಡೀತಿದೆ ಅನ್ನೋದು ನಿಖರವಾಗಿ ತಿಳಿಯೋದಿಲ್ಲ.

ಮೊಟ್ಟೆಯಾಕಾರ.

ಈ ಆಕಾರದ ಜನರಿಗೆ ಇರೋ ವಿಶಿಷ್ಟ ಲಕ್ಷಣವೆಂದರೆ ಅವರ ಕಲೆಯ ಮೇಲಿನ ಪ್ರೀತಿ. ಅವರು ಕಲಾತ್ಮಕವಾಗಿ ಮಾತನಾಡುತ್ತಾರೆ, ಕಲಾತ್ಮಕವಾಗಿ ನಡೆದುಕೊಳ್ಳುತ್ತಾರೆ, ಎಲ್ಲವೂ ಕಲಾಮಯ. ಅವರ ಕೂದಲು, ಹಾಕಿಕೊಳ್ಳೋ ಬಟ್ಟೆ ಬರೆ, ಆಭರಣಗಳು, ಎಲ್ಲ ಕಲಾತ್ಮಕವಾಗಿರುತ್ತೆ. ಇವರು ತುಂಬಾ ಸೂಕ್ಷ್ಮ ಹಾಗೂ ನಾಚಿಕೆಯ ಸ್ವಭಾವದವರು.

ಒಂದೇ ಒಂದು ಕೊರತೆ ಅಂದ್ರೆ ಇವರು ಖಿನ್ನತೆ ಇರುವವರ ಹಾಗೆ ಕಾಣಿಸ್ತಾರೆ ಅದಕ್ಕೆ ನೀವು ಇವರನ್ನ ಕವಿಗಳ ಹಾಗೆ ಅಂತ ಕೂಡ ಅನ್ಕೋಬಹುದು.

ಆಯತ / ರೆಕ್ಟ್ ಆಂಗಲ್.

ಇವರಿಗಿರೋ ವಿಶೇಷ ಗುಣ ಅಂದ್ರೆ, ಇವರು ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತಾರೆ ಅಷ್ಟೇ ಅಲ್ಲ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯದೇ ಸುಮ್ಮನೆ ಇರಲ್ಲ. ಕೆಲಸಾನೇ ಇರ್ಲಿ, ಜೀವನಾನೆ ಇರ್ಲಿ ತರ್ಕಬದ್ದವಾಗಿರ್ತಾರೆ. ಅವರು ಏನು ಮಾಡಬೇಕು, ಹೇಗೆ ಮಾಡಬೇಕು ಅಂತ ಚೆನ್ನಾಗಿ ತಿಳ್ಕೊಂಡಿರ್ತಾರೆ. ಈ ಎಲ್ಲ ಗುಣದಿಂದಾನೆ ಅವರು ತುಂಬಾ ಒಳ್ಳೆ ಯೋಜಕರು / ಪ್ಲಾನ್ ಮಾಡೋವ್ರು ಅನ್ನಿಸ್ಕೊತಾರೆ.

ತುಂಬಿದ ಚೈತನ್ಯ, ಕ್ರಿಯಾತ್ಮಕ, ಆಶಾವಾದ, ಸುಲಭವಾಗಿ ಎಲ್ಲರ ಜೊತೆ ಬೇರೆಯೋದು, ತೀಕ್ಷ್ಣ ಸಂಭಾಷಣೆ ಮಾಡೋದು ಇವರಲ್ಲಿ ಕಾಣೋ ಮತ್ತಷ್ಟು ಗುಣಗಳು. ಇವರಿಗೆ ಒಳ್ಳೆ ಕಲ್ಪನಾ ಶಕ್ತಿ ಇದೆ ಅಷ್ಟೇ ಅಲ್ಲ ಇವರು ವಿಚಾರವಂತರೂ ಹೌದು.

ಇವರಲ್ಲಿರೋ ಕೊರತೆ ಅಂದ್ರೆ ಕೆಲವೊಮ್ಮೆ ಇವರು ಕಿರಿಕಿರಿ ಉಂಟುಮಾಡಿದ್ರೆ, ಕೆಲವೊಮ್ಮೆ ಇವರನ್ನ ನೋಡಿದ್ರೆ ಏನೂ ಭಾವನೆಗಳೇ ಇಲ್ವೇನೋ ಅನ್ಸುತ್ತೆ.

ತ್ರಿಕೋನ.

ಈ ಆಕಾರದ ಹಲ್ಲು ಇದ್ದವರಿಗೆ ಧಕ್ಷತೆ, ಹುರುಪು ತುಂಬಾನೇ ಹೆಚ್ಚು. ಜೀವನದಲ್ಲಿ ನಿರಾತಂಕವಾಗಿರ್ತಾರೆ, ಖುಷಿ ಖುಷಿಯಾಗಿ ಜೀವನ ಹೇಗೆ ನಡೆಸಬೇಕು ಅಂತಾನೂ ಗೊತ್ತಿದೆ.ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಅವರಿಗೆ ಪ್ರತಿ ಕ್ಷಣಾನೂ ಹೇಗೆ ಕಳೀಬೇಕು, ವರ್ತಮಾನದಲ್ಲಿ ಹೇಗೆ ಜೀವನ ಮಾಡಬೇಕು ಅಂತ ಚೆನ್ನಾಗಿ ಗೊತ್ತಿದೆ.

ಇವರು ಸ್ವತಂತ್ರರಾಗಿ ಕಂಡರೂ, ನಿರಾತಂಕ ಚೆನ್ನಾಗಿ ಬೇರೂರಿದೆ ಅನ್ನೋ ಬಗ್ಗೆ  ಕೊರತೆ ಕಾಣಿಸಬಹುದು.

ಬರಿ ಈ ನಾಲ್ಕೇ ರೀತಿಯ ಆಕಾರ ಇರುತ್ತಾ? ನಮ್ಮದು ಬೇರೆ ತಾರಾ ಇದ್ಯೆಲ್ಲ ಅನ್ಕೋಬೇಡಿ. ಇದು ಹೆಚ್ಚಾಗಿ ಕಾಣಿಸೋದು. ಇದಲ್ಲದೆ ಈ ಕೆಳಗಿನ ಆಕಾರ ಇದ್ರೆ, ಇದರ ಅರ್ಥ ಏನು ನೋಡಿ

ಸಮಾನ ಆಕಾರದ ಹಲ್ಲುಗಳು.

ಹೀಗಿದ್ರೆ ಸಮ ಚಿತ್ತ ಇದ್ದು ಒಳ್ಳೆ ನಿರ್ಧಾರಗಳನ್ನ ತೊಗೊಳೋ ಸ್ವಭಾವ ಇರೋ ವ್ಯಕ್ತಿತ್ವ ನಿಮ್ಮದು.

ಹಲ್ಲುಗಳ ಮಧ್ಯೆ ಅಂತರ ಇದ್ರೆ.

ಹಾಸ್ಯ ಇಷ್ಟ ಪಡೋವ್ರು, ಕಾಮಾಸಕ್ತಿ ಹೆಚ್ಚಾಗಿರೋವ್ರು ಅಂತ ಹೇಳುತ್ತೆ.

ಮುಂದಿನ ಹಲ್ಲು ದೊಡ್ಡದಾಗಿದ್ರೆ.

ತಡೆಗಟ್ಟೋ ಸ್ವಭಾವ, ನಿಶ್ಚಿತ ನಿರ್ಧಾರ ಮಾಡೋ ಗುಣ ಇರೋವ್ರು.

ಮುಂದಿನ ಹಲ್ಲು ಚಿಕ್ಕದಿದ್ರೆ.

ಕರುಣೆ ಇರೋವ್ರು, ಕರುಣೆಯುಳ್ಳ ನಿರ್ಧಾರ ತೆಗೆದುಕೊಳ್ಳೋವ್ರು.

ಮೊನಚಾದ ಹಲ್ಲುಗಳು.

ಈ ತರ ಇದ್ರೆ ನೀವು ಗೊಂದಲಮಯ ನಿರ್ಧಾರ ತೊಗೊಳೊವ್ರು ಅಂತ ತೋರ್ಸುತ್ತೆ.

ಉಬ್ಬು ಹಲ್ಲು.

ಹೀಗಿದ್ರೆ ನೀವು ತುಂಬಾ ನಾಚಿಕೆ ಸ್ವಭಾವದವರು ಅಂತ ತೋರ್ಸುತ್ತೆ.

ಮೇಲ್ಭಾಗದ ಹಲ್ಲಿನ ಸಾಲು ಕೆಳಭಾಗದ ಹಲ್ಲಿನ ಸಾಲಿನೊಳಗಿದ್ರೆ.

ಆಕ್ರಮಣಕಾರಿ ಸ್ವಭಾವ ಇರೋವ್ರು.

ನಿಮ್ಮ ಹಲ್ಲು ಹೇಗಿದೆ ?