https://atlanta.seoforgrowth.com/wp-content/uploads/sites/4/2017/01/seo-mind-blown.jpg

ಭಾಳಾ ಸಲಾ ಲೈಫಿನ್ಯಾಗ ನಮ್ಮನ ನಾವ ಕೀಳಾಗಿ ಕಂಡರತವಿ. ನಮ್ಮ ಮನಿಯೊಳಗ ಇರೋರೂ ಸೈತ ಭಾಳಾ ಸಲಾ ನಮ್ಮನ ನೀನ ದರಿದ್ರಾ ಅದೀದಿ, ಒಂದ ಕೆಲಸಾನೂ ಸೈತ ನೆಟ್ಟಗ ಮಾಡಾಕ ಬರಂಗಿಲ್ಲ ನಿಂಗ ಅಂತ ಬೈದಿರತಾರ. ಆದರ ಮಜಾ ಏನಪಾ ಅಂದರ ಈ ಕೆಳಗ ಹೇಳೋ ಕೆಲವ ಗುಣಾ ನಿಮ್ಮ ಹಂತೇಲೆ ಅದಾವು ಅಂದರ ಸಾಯನ್ಸಿನ ಪ್ರಕಾರ ನಾವ ನಮ್ಮನ್ನ ಏನ ಅಂತ ತಿಳಕಂಡಿರತವಿ ಅಲ್ಲಾ ಅದಕ್ಕಿಂತಾ ಹೆಚ್ಚಿಗೆ ಶ್ಯಾಣೇರ ಅಂತ. ನಕಲೀ ಅನಸಾಕ ಹತ್ತೇತಾ? ಮುಂದಕ ಓದಿ ನೋಡರೆಲಾ ನಿಮ್ಮ ಬಾಯಿ ಮ್ಯಾಲ ನೀವ ಬಳ್ಳ ಇಟಗಂತೀರಿ.

1. ಸಾಲ್ಯಾಗ ನೀವ ಯಾವಾಗನೂ ಕಡೇ ಬೆಂಚ್ ಏನ?

ನೀವ ಸಾಲಿ ಕಾಲೇಜಿನ್ಯಾಗ ಕನಸ ಕಾಣಿಕೆಂತ ಕಡೇ ಬೆಂಚಿನ್ಯಾಗನ ಉಳಕಂಡ ಬಿಟ್ಟೆ… ನನ್ನ ಜೀವನಾ ಏನ ಆಕ್ಕತೋ ಏನೋ ಅಂತ ಚಿಂತಿ ಮಾಡಿದ್ದರ ಇಲ್ಲಿ ಐತಿ ನೋಡ್ರಿ ನಿಮಗ ಒಂದ ಸಿಹಿ ಸುದ್ದಿ. ಸೈಂಟಿಸ್ಟಗುಳ ಪ್ರಕಾರ ಒಂದ ಕೆಲಸಾ ಮಾಡೋ ಮುಂದ ನಿಮ್ಮ ಲಕ್ಷ್ಯಾ ಏನರ ಬ್ಯಾರೇ ಕಡೆ ಹೋದರ ಒಂದ ಸಲಕ್ಕ ನಿಮಗ ಒಂದಕಿಂತಾ ಹೆಚ್ಚಿಗಿ ಕೆಲಸಾ ಮಾಡ ಕೆಪ್ಯಾಸಿಟಿ ಐತಿ ಅಂತಾನ ಅರ್ಥ ಅಂತ. ಹಂಗ ಈ ಹಗಲಗನಸ ಏನ ಕಾಣತಿರತಾರಲ್ಲ ಅವರಿಗೆ ನೆನಪಿನ ಶಕ್ತಿ ಭಾಳ ಏನರೆಪಾ….

2. ನೀವ ಭಾಳಾ ಜನರ ಜತೀಗೆ ಮಿಂಗಲ್ ಆಗಾಕ ಇಸ್ಟಾ ಪಡಲ್ಲೇನ?

ನಿಮ್ಮ ಕೈಯ್ಯಾಗ ಒಂದ ಬುಕ್ಕ ಇದ್ದಬಿಟ್ಟರ ಜಗತ್ತನ ಮರತ ಬಿಡತೀರಿ. ಇದರ ಜತೀಗಿ ಒಂದೀಟ ಚಾ, ಕಾಫಿ ಏನರ ಸಿಕ್ಕಬಿಟ್ಟರ ಅಂತೂ ಸ್ವರ್ಗಕ್ಕ ಮೂರ ಗೇಣು ನಿಮಗ. ಮತ್ಯಾವದೂ ಬ್ಯಾಡಾ ಯಾರೂ ಬ್ಯಾಡಾ ಅಲ್ಲಾ? ನೀವ ನಿಮ್ಮ ಜತೀಗೆನ ಭಾಳಾ ಟೈಮ ಕಳ್ಯಾಕ ಇಸ್ಟಾ ಪಡತೀರಿ. 90% ಅಂತರ್ಮುಖಿ ಇರೋರಿಗೆ ಓದೋ ಚಟಾ ಐತೆಂತ. ಹಂಗ ಯಾರ ಸಣ್ಣರ ಇದ್ದಾಗಿಂದಾ ಓದೋ ಚಟಾ ಇಟಗಂಡಿರತಾರೋ ಅಂಥಾರು ಮುಂದ ಬುದ್ಧಿವಂತರ ಆಗಿರತಾರ ಮತ್ತ ತಮ್ಮನ ತಾವ ಛೊಲೋತ್ತಿನ್ಯಾಗ ಡಿಸ್ಪ್ಲೇ ಮಾಡಿಕೆಂತಾರ.

3. ಲೆಫ್ಟ್ ಕೈನ ನೀವ ಹೆಚ್ಚಿಗೆ ಬಳಸತೀರೇನ?

ಈ ರೊಡ್ಡಗೈ ಇರೋರಿಗೆ ಡಿಫರೆಂಟ ಆಗಿ ಥಿಂಕ ಮಾಡ ಕೆಪ್ಯಾಸಿಟಿ ಇರತತಿ ಅಂತ. 90ರ ದಶಕದಾಗ ನಡದಿರ ಒಂದ ಸರ್ವೇ ಪ್ರಕಾರ ರೊಡ್ಡ ಜನರ ವಿಚಾರಗಳು ಡಿಫರೆಂಟ ಆಗಿ ಇರದರಿಂದಾ ಅವರ ಸಂಬಂಧಾನ ಇಲ್ಲದ ಇರೋ 2 ವಸ್ತುಗಳ ನಡುವೆನೂ ಸೈತ ಲಿಂಕ್ ಹುಡಕತಾರಂತ. ಇವರ ಹಂತೇಲೆ ಕ್ರಿಯೇಟಿವಿಟಿ ಹೆಚಿಗಿ ಅಂತ. ಮತ್ತ ಯಾವದ ಸಮಸ್ಯೆ ಇದ್ದರೂ ಅದಕ್ಕ ಭಾಳ ಜಲ್ದೀ ಐಡಿಯಾ ಕಂಡ ಹಿಡೀತಾರ ಅಂತ.

4. ಒಂದೀಟ ಟೆನ್ಶನ್ ಮನಿಶಾರೇನ ನೀವ?

ನಿಮಗ ಎಲ್ಲ್ಲಾರು ಟೆನ್ಶನ್ ಚೋಲೋ ಅಲ್ಲ ಅಂತಾ ಭಾಳ ಸಲಾ ಹೇಳಿರತಾರ. ಆದರ ಒತ್ತಡಾನ ಕರೆಕ್ಟ ಆಗಿ ಮ್ಯಾನೇಜ್ ಮಾಡಿದರ ಅದರಿಂದಾ ಭಾಳ ಉಪೇಗ ಐತೆಂತರೆಪಾ. ಈ ಒತ್ತಡದ ಪ್ರಮಾಣ ಲಿಮಿಟ್ಟಿನ್ಯಾಗ ಇದ್ದರ ನಮ್ಮ ದಿನ ನಿತ್ಯದ ಕೆಲಸಗೂಳಿಗೆ ಹೆಲ್ಪ ಆಕ್ಕತಿ. ಹಿಂಗ ಒಂದ ಸಲಾ ಇಸ್ರೇಲ್ ನ್ಯಾಗ ಜನರೀಗೆ ಕಂಪ್ಯೂಟರ್ ಲ್ಯಾಬಿನೊಳಗ ಕಂಪ್ಯೂಟರ್ ವೈರಸ್ ಆಗೇತಿ ಅಂತ ಸುಳ್ಳ ಸುದ್ದಿ ಹಬ್ಬಿಸಿಬಿಟ್ಟರಂತ, ಅವಾಗ ಅಲ್ಲಿರೋ ಜನಾ ಎಲ್ಲಾ ಇದನ್ನ ನಾವ ಮಾಡೇವಿ ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಹೆಂಗ ಸರಿ ಮಾಡೋದು ಅಂತ ಥಿಂಕ್ ಮಾಡಿದರಂತ. ಅವಾಗ ಸೈಟಿಸ್ಟಗುಳು ಕಂಡು ಹಿಡದದ್ದ ಏನಪಾ ಅಂದರ ಯಾರು ಟೆನ್ಶನ್ ಮಾಡಿಕೆಂಡಿದ್ದರೋ ಅವರ ಛೋಲೋತ್ನ್ಯಾಗ ಕೆಲಸಾ ಮಾಡಿ ಮುಗಸ್ತಾರ ಅಂತ. ಎಸ್ಟ ವಿಚಿತ್ರಾ ಅನಸತತಿ ಅಲ್ಲಾ?

5. ನೀವೂ ನಕ್ಕ ಬ್ಯಾರೇವರನೂ ಭಾಳ ನಗಸತೀರೇನ?

ನಿಮ್ಮ ಹಂತೇಲೆ ನೀವು ನಕ್ಕ ನಿಮ್ಮ ಜತೀಗೆ ಇರೋರನೂ ನಗಸ ಅಂತಾ ಗುಣಾ ಇದ್ದರ ನಿಮ್ಮ ಮಿದಳ ಭಾಳ ಛೊಲೋ ಕೆಲಸಾ ಮಾಡತತಿ ಶಾರ್ಪ್ ಐತಿ ಅಂತ ಅರ್ಥ. 1990ರೊಳಗ ಮೈಕಲ್ ಎಂ ಜಾನ್ ಹೇಳಿರೋದರ ಪ್ರಕಾರ ನೀವ ಕಾಮಿಡಿ ಮಾಡಿಕೆಂತ ಇರೋರ ಆಗಿದ್ದರ ನಿಮ್ಮ ಹಂತೇಲೆ ಸಮಸ್ಯಾನ ಬಗೀ ಹರಿಸೋ ಶಕ್ತಿ ಹೆಚಿಗಿ ಐತೆಂತ.

ಹಂಗಂದರ ನಿಮಗ ಗೊತ್ತಿಲ್ಲದ ಹಂಗ ನಿಮ್ಮ ಹಂತೇಲೆ ಭಾಳ ಶ್ಯಾಣೇತನಾ ಐತಿ. ಅದನ್ನ ಉಪೇಗಿಸಿಕೆರ್ರಿಪಾ!!