http://www.dailomo.com/wp-content/gallery/meghna-raj-spicy-stills-from-tamil-movie-jakkamma/meghna-raj-spicy-photos-from-jakkamma-movie-117.jpg

ದಿನ ಬೆಳಗಾದ್ರೆ ನ್ಯೂಸ್ ಪೇಪರ ಮನಿಗೆ ಬರೋದೆ ತಡ ಅದ್ನಾ ತಗೊಂಡು ಇವತ್ತಿನ ದಿನ ಭವಿಷ್ಯ, ವಾರ ಭವಿಷ್ಯ, ನೋಡೋರಾ ನೀವು? ಇವತ್ತಿನ ದಿನ ಒಳ್ಳೆದಾಗತ್ತೊ, ಕೆಟ್ಟದ್ದಾಗತ್ತೊ ಅನ್ನೋ ಭಯದಲ್ಲೇ ಪೇಪರ ನೋಡ್ತರಲ್ಲಾ? ಭವಿಷ್ಯವನ್ನ ರಾಶಿಯ ಆಧಾರದ ಮೇಲಷ್ಟೆ ಅಲ್ದದೇ, ನೀವು ಹುಟ್ಟಿದ ತಿಂಗಳದ ಆಧಾರದ ಮೇಲೆನೂ ಕೂಡಾ ನಿಮ್ಮ ಗುಣ, ವ್ಯಕ್ತಿತ್ವ ಇನ್ನೂ ಹಲವಾರು ವಿಷಯಗಳನ್ನು ಹೇಳಾಕಾಕೈತಿ.

ಇದು ಸತ್ಯ, ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ನಡುವಳಿಕೆ, ಸ್ವಭಾವ, ಬೇರೇಯವರು ನಿಮ್ಮನ್ನ ಹೆಂಗ ನೋಡ್ತಾರ, ಜೀವನದ ಬಗ್ಗೆ ನಿಮಗಿರೊ ಆಲೋಚನೆ, ಭಾವನೆಗಳು ಇವೆಲ್ಲಾನೂ ಹಿಂಗ್ ಹಿಂಗ ಅಂತಾ ಹೇಳ್ಬೋದು. ಇದು ಹೇಂಗಪ್ಪ ಅಂದ್ಕೋತಿರಾ? ನಿಮ್ಮ ಗುಣ ಲಕ್ಷಣಗಳು, ನೀವು ಹುಟ್ಟಿದ ತಿಂಗಳಲ್ಲಿ, ನಕ್ಷತ್ರಗಳು ಯಾವ ಯಾವ ಸ್ಥಾನದಾಗ ಅದಾವು ಯಾವ ರೂಪದಾಗ ಅದಾವು ಅನ್ನೋದನ್ನಾ ಲೇಕ್ಕಾಚಾರ ಮಾಡಿ ಹೇಳ್ತಾರಂತ.  

ನೀವು ಯಾವ ತಿಂಗಳದಾಗ ಹುಟ್ಟಿದ್ರ ನಿಮ್ಮೊಳಗ ಯಾವ ಸ್ವಭಾವ, ವ್ಯಕ್ತಿತ್ವ ಇರ್ತಾವು ಅನ್ನೋದನ್ನ ಇಲ್ಲಿ ಕೊಟ್ಟೆವಿ ನೋಡ್ರಿ… ಇದನ್ನ ಓದಿ ನಿಮ್ಮ ಸ್ವಭಾವಕ್ಕ ಹೊಂದಿಕೆ ಮಾಡಿ ನಮ್ಮ ಜೊತೆನು ಹಂಚ್ಕೊಳ್ರಿ…

ಜನೇವರಿ ತಿಂಗಳಲ್ಲಿ ಹುಟ್ಟಿದವರು

ಈ ತಿಂಗಳದಾಗ ಹುಟ್ಟಿರೋರ್ಗೆ ಹೆಚ್ಚು ಹಠಮಾರಿತನ ಮತ್ತು ಮೊಂಡತನ ಇರ್ತೈತಿ. ಇವ್ರು ಯಾರ್ ಮಾತನ್ನು ಕೇಳೊದೆ ಇಲ್ಲಾ ಯಾರರ ಅದು ಹಂಗಲ್ಲಾ ಹಿಂಗ ಅಂತಾ ಹೇಳಿದ್ರ ಅದ್ನ ಒಪ್ಪೋ ಸ್ವಭಾವದವರಂತು ಮೊದಲೇ ಅಲ್ಲಾ. ಆದ್ರ ಇವರು ಹಿಡದ ಕೆಲಸಾನ ಪೂರ್ತಿ ಮಾಡಿ ಮುಗಸತನಕಾನೂ ಬಿಡಂಗಿಲ್ಲಾ. ಹಂಗ ತಮ್ಮ ಮನ್ಸಿನೊಳಗ ಬಂದ ವಿಷಯಾನ ಹಿಂದ ಮುಂದ ವಿಚಾರ ಮಾಡದಂಗ ನಾಲ್ಕ ಮಂದಿ ಮುಂದ ಹೇಳಿಬಿಡ್ತಾರ.

ಜನೇವರಿಯೊಳಗ ಹುಟ್ಟಿದರು ಒಳ್ಳೆ ನಾಯಕರಾಗೊದ್ರಲ್ಲಿ ಯಾವ್ ಸಂಶಯಾನು ಇಲ್ಲಾ. ಇವರೊಳಗಿರೊ  ಛಲ ಯಾವಾಗ್ಲೂ ಇವರನ್ನು ಯಶಸ್ಸಿನ ಹಾದಿಯೊಳಗ ಕರ್ಕೊಂಡ ಹೊಗತೈತಿ ಅನ್ನೊದು ನೂರಕ್ಕೆ ನೂರು ಸತ್ಯ. ಆದ್ರ ಇವರು ತಮ್ಮ ಜೊತೆಗಿರೊರ ಮಾತು ಕೇಳೊದು ಕಡಿಮೆ.  

ಇವರೊಳಗ ಅಡಗಿದಂದ ಅತ್ಯಮೂಲ್ಯವಾದ ಗುಣ ಏನಂದ್ರ…. ತಮಗ ಗೊತ್ತಿರುವಂತ ವಿಷಯಗಳನ್ನು ಬೆರೊಬ್ಬರಿಗೆ ಅರ್ಥಾಗಂಗ, ಅವರಲ್ಲಿ ಆ ವಿಷಯದ ಬಗ್ಗೆ ತಿಳ್ಕೊಳೊ ಆಸಕ್ತಿ ಬರೊಹಂಗ, ಕಷ್ಟ ಇಲ್ದ ಇಷ್ಟಾ ಪಟ್ಟು ಕಲಿಬೇಕನ್ನಂಗ ಹೇಳಿಕೊಡೊ ಗುಣ ಹೆಚ್ಚೈತಿ ಅಂದ್ರ ತಪ್ಪಾಗಲ್ಲಾ.

ಫೆಬ್ರುವರಿ

ಫೆಬ್ರುವರಿ ತಿಂಗಳದಾಗ ಹುಟ್ಟದವರಿಗೆ ಕಲಾರೇಖೆ ಉದ್ದಿರ್ತೈತಂತ. ಇವ್ರು  ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿರ್ತಾರಂತ ಮತ್ತ ಹೊಸಾದೇನರ ಮಾಡೊದ್ರೊಳಗ ತಮ್ಮನ್ನ ತೊಡಗಿಸ್ಕೊಂತಿರ್ತಾರ. ಯಾವಾಗ್ಲೂ ಬುದ್ಧಿವಂತರ ಕೂಡ ವಾದಾ ಮಾಡ್ಕೊತಾ ತಮ್ಮ ವಿಚಾರ ಹೇಳ್ಕೊಳೊದಂದ್ರ ತುಂಬಾ ಹುರುಪು. ಆದರ ಸ್ವಲ್ಪ ದಡ್ರಿರೊರನ್ನ ತಮ್ಮ ಹರ್ತಾನು ಸುಳಿಸ್ಕೊಳಲ್ಲಾ ಇವರು.

ಸಮಾಜದಲ್ಲಿನ ಕಟ್ಟುಪಾಡುಗಳನ್ನು, ನಿಯಮಗಳನ್ನ ಇವರು ಲೆಕ್ಕಕ್ಕತಗೊಳೊದಿಲ್ಲ. ಇವರೊಂತರಾ ಹಾರಾಡೋ ಹಕ್ಕಿ ಹಂಗ ಫ್ರೀಯಾಗಿರ್ತಾರ. ಇವರ್ಯಾವಾಗ್ಲೂ ತಾವು ಅಂದ್ಕೊಂಡಂಗ ಇರ್ತಾರಾ. ಇವರಿಗೆ ಊರ ಸುತ್ತೊದಂದ್ರ ಎಲ್ಲಿಲ್ಲದ ಪ್ರೀತಿ ಟೈಮ್ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ತಿ ಹೋಕ್ಕಿರ್ತಾರ. ಸುತ್ತಮುತ್ತಲಿನ ವಿಷಯಗಳನ್ನ ತಿಳ್ಕೊಳೊ ಆಸಕ್ತಿ ಬೆಟ್ಟದಷ್ಟಿರ್ತೈತಿ. ಇವರು ಬಾಳ ಚಟುವಟಿಕೆಯಿಂದಿರ್ತಾರಾ. ತಮ್ಮ ವ್ಯಕ್ತಿತ್ವವನ್ನು ಹೊಂದಿರೊರ ಜೊತೆಗೆ ಜಲ್ದಿ ಸೇರ್ಕೊತಾರ ಮತ್ತ ಅವರ ಜೊತೆಗೆ ಸಿಕ್ಕಾಪಟ್ಟೆ ಖುಷಿಯಿಂದ ಇರ್ತಾರ.

ಇವರೊಳಗಿರೊ ಇನ್ನೊಂದು ಒಳ್ಳೆ ವಿಷಯ ಏನಪ್ಪಾ ಅಂದ್ರ…. ಗೆಳೆತನ ಹಾಗೂ ಸಂಗಾತಿ ವಿಷಯಗಳೊಳಗೆ ಸಿಕ್ಕಾಪಟ್ಟೆ ಪ್ರಾಮಾಣಿಕರಾಗಿರ್ತಾರ.

ಮಾರ್ಚ್

ಮಾರ್ಚ್ ತಿಂಗಳಲ್ಲಿ ಜನಿಸಿದವರು ಕ್ರಿಯೇಟಿವ್ ಆಗಿರ್ತಾರ, “ಮಾತು ಬೆಳ್ಳಿ, ಮೌನ ಬಂಗಾರ” ಅನ್ನೊ ಸ್ವಭಾವದವರು. ಇವರು ತಮ್ಮ ಮನಸಲ್ಲಿರೊದನ್ನಾ ಯಾರ ಹತ್ರು ಹೇಳ್ಕೊಳೊದಿಲ್ಲಾ ತಮ್ಮ ವಿಷಯಗಳನ್ನ ತಮ್ಮಲ್ಲೆ ಇಟ್ಕೋಂಡು ತಮ್ಮ ಪ್ರಪಂಚದಲ್ಲೆ ತಾವು ಮುಳಗಿರ್ತಾರ. ಇವರು ಒಳಗೊಳಗೆ ಮಾಸ್ಟರ್ ಪ್ಲಾನ್ಸ ಮಾಡ್ಕೊತಿರ್ತಾರ. ಯಾರದರ ಬೆಂಬಲ ಸಿಕ್ಕತಂದ್ರ ತಮ್ಮ  ಬಾವನೆಗಳನ್ನು/ಅನಿಸಿಕೆಗಳನ್ನು ಹಂಚ್ಕೊತಾರ. ತಮಗ ಇಷ್ಟ ಆಗೋ ಕಲೆಗಳ ಮುಖಾಂತರ ಎಲ್ಲವನ್ನು ವ್ಯಕ್ತಪಡಿಸ್ತಾರ. ಹಂಗ ತಮ್ಮೊಳಗ ಸಿಗೊ ಒಂಟಿತನವನ್ನು ಮನಸಾರೆ ಅನುಭವಿಸ್ತಾರ.  

ತಮ್ಮ ಬಗ್ಗೆ ಹೆಚ್ಚು ವಿಷಯಗಳನ್ನ ಬಿಟ್ಕೊಡ್ದೆ ಮುಚ್ಚಿಟ್ಕೊಳ್ಳೊಕೆ ನೋಡೋ ಇವರು ಬೇರೆಯವರ ಜೊತೆ ಸೂಕ್ಷ್ಮವಾಗಿ, ಕಾಳಜಿಯಿಂದ ನಡ್ಕೋಳ್ತಾ ರ. ಸಂಬಂಧಗಳನ್ನ ಚನ್ನಾಗಿಟ್ಕೋಂಡಿರ್ತಾರ. ಮಾರ್ಚನಲ್ಲಿ ಹುಟ್ಟಿರೋರ ಬಗ್ಗೆ ಮತ್ತೊಂದ ಮುಖ್ಯವಾದ ವಿಷಯ ಏನಂದ್ರ ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣವನ್ನು ಹುಡಿಕ್ಕೊಂತ ಹೋಕ್ಕಿರ್ತಾರ. ಜನಜಂಗುಳಿ, ಗಲಾಟೆಗಳಿಂದ ದೂರ ಇರ್ತಾರ.

ಏಪ್ರಿಲ್

ಏಪ್ರಿಲ್ ತಿಂಗಳದಾಗ ಹುಟ್ಟಿದವರ್ಗೆ ತಮ್ಮ ಸುತ್ತಮುತ್ತ ಇರೋರು ಯಾವಾಗ್ಲು ತಮ್ಮ ಬಗ್ಗೆನೆ ಮಾತಾಡ್ತಿರಬೇಕು, ಎಲ್ಲಾರೂ ತಮ್ಮ ಕಡೆನ ಲಕ್ಷೆಕೊಡ್ತಿರಬೇಕು, ತಮ್ಮನ್ನ ಹೊಗಳಕೊಂತ ಇರ್ಬೇಕು, ಒಟ್ಟಾರೆ ಹೇಳಬೇಕಂದ್ರ ಎಲ್ಲಾರಕಡೆಯಿಂದ ಪ್ರಚಾರ ಗಿಟ್ಟಿಸ್ಕೊಳೊದಂದ್ರ ಇವರಿಗೆ ಸಿಕ್ಕಾಪಟ್ಟೆ ಇಷ್ಟಾ. ಇವರ ವಿಷಯದಾಗ ಯಾರರ ತಲೆ ಹಾಕಿದ್ರ ಇವರು ಸಹಿಸ್ಕೋಳಲ್ಲಾ. ಯಾರ ಮಾತನ್ನು ಲೆಕ್ಕಿಸ್ದೆ ತಮ್ಮ ಮೂಗಿನ ನೇರಕ್ಕೆ ನಡಿಯೊ ಗುಣದವರು. 

ಹೊಸ ಹೊಸ ಸಾಹಸಗಳನ್ನು ಮಾಡೋಕೆ ಅವಕಾಶ ಸಿಗತೈತಾ ಅಂತ ಕಾಯ್ತಿರ್ತಾರ ಮತ್ತ ಯಾವದೇ ಕೆಲಸ ಇದ್ರು ಕಣ್ಣ ಮುಚ್ಚಿ ಕಣ್ಣ ಬಿಡಷ್ಟ್ರೊಳಗ ಮುಗ್ಸಿಬಿಡ್ತಾರ. ಇಷ್ಟಾಪಟ್ಟಿದ್ದೆಲ್ಲ ಇವರಿಗೆ ದಕ್ಕಬೇಕೆನ್ನವ ಅವಸರದಾಗಿರೋರು. ಮುಂದಿನ ಭವಿಷ್ಯದ ಬಗ್ಗೆ ತಲೆ ಕೆಡಿಸ್ಕೊಳಂಗಿಲ್ಲ, ತಮ್ಮ ಮನಸ್ಸಿಗೆ ಬಂದಿದ್ದನ್ನ ಮಾಡದೇ ಇರೋರಲ್ಲ, ಜೀವನ ಹೇಂಗ ಬರ್ತೈತೊ ಹಂಗ ನಡ್ಕೊಂಡುಹೊಕ್ಕಿರ್ತಾರ, “ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೆ ಚಿಂತೆ ಏತಕೆ” ಅನ್ನೊ  ಹಾಡು ಇವರಿಗೆ ಹೇಳಿಮಾಡ್ಸದಂಗೈತಿ.

ಕೆಲವೊಂದ ಸಾರ್ತಿ ಇವ್ರು ನಡ್ಕೊಳೊ ರೀತಿ, ಜಗಳ ಮಾಡೋ ರೀತಿ, ಬೇರೊಬ್ರಿಗೆ ನೋವ ಮಾಡ್ತಿರ್ತೈತಿ. ಆದ್ರ ಇವ್ರು ಯಾವ್ದನ್ನು ಬೇಕಂತಾ ಮಾಡ್ತಿರಲ್ಲಾ, ಅವರ ಮನ್ಸಲ್ಲಿರೊ ಮಾತುಗಳನ್ನ ಹೊರಹಾಕ್ತಿರ್ತಾರ. ತಮ್ಮ ಮನಸಿಗೆ ಬೇಜಾರಾದ್ರ ಯಾವ ಯೋಚನೇನೂ ಮಾಡದಂಗ, ಜೊತೆಗೆ ಯಾರದಾರ ಅನ್ನೊದನ್ನು ನೋಡದಂಗ ಮುಚ್ಚುಮರೆ ಇಲ್ದಂಗ ಹೇಳ್ಕೊತಾರ. ತಮ್ಮ ವಿಷಯದೊಳಗ ಫಿಲ್ಟರಿರಲ್ಲಾ ಇವರಿಗೆ.

ಮೇ

ಮೇ ತಿಂಗಳದಾಗ ಹುಟ್ಟಿದವರು ಚಂಚಲ ಮನಸ್ಸಿನವರು. ಇವತ್ತ ಇದ ಬೇಕಂದ್ರ, ನಾಳೆ ಮತ್ತೊಂದ ಬೇಕು ಅನ್ನೊ ಸ್ವಭಾವದರು ಇವ್ರ ಮಸನ್ನು ಸ್ಥಿರವಾಗಿರಲ್ಲ. ಇವರು ತಮ್ಮ ಭಾವನೆಗಳನ್ನು ಚನ್ನಾಗಿ ವ್ಯಕ್ತಪಡಸ್ತಾರ ಮತ್ತ ಜೀವನದೊಳಗ ಬೇರೆ ಬೇರೆ ಹಂತದಲ್ಲಿರೋರನ್ನ, ಬೇರೆ ಬೇರೆ ಹಿನ್ನೆಲೆ ಹೊಂದಿದವರನ್ನ ಇಷ್ಟಾ ಪಟ್ಟ ಮಾತಾಸ್ತಾರ. ಸೋಶಿಯಲ್ ಲೈಫನ್ಯಾಗ ಚುರುಕಿರ್ತಾರ. ಒಬ್ಬಂಟಿಯಾಗಿರೋದಂದ್ರ ಇವರ ಕೈಲೆ ಬಿಲ್ಕುಲ್ ಆಗಲ್ಲ.  

ಇವರು ಹುರಿದುಂಬಿಸಂತ. ಬುದ್ಧಿವಂತಿಕೆ ಇರಂತ ಮಾತುಕತೆಗಳಲ್ಲಿ ತಮ್ಮನ್ನ ತೊಡಗಿಸ್ಕೊಳಾಕ ಇಚ್ಛಿಪಡ್ತಾರ. ಅಂದ್ರ ಮಾತುಗಳು ತಮಾಷೆಯಾಗಿರ್ಬೇಕು, ಬೇಜಾರಾಗಂಗಿರ್ಬಾದು, ಮಾತುಗಳಿನ್ನು ಮುಂದುವರಿಬೇಕು ಅಂತ ಅನಸ್ತಿರ್ಬೇಕು ಹಿಂಗಿದ್ರ ಮಾತ್ರ ಆ ಗುಂಪಿನ್ಯಾಗ ಖುಷಿಯಿಂದ ಇವರು ಮಾತಿಗೆ ಸೇರ್ಕೊಂತಾರ.

ಮಾತಿನೊಳಗ ಮಂದಾಹಾಸ ಇರ್ಲಿಲ್ಲಾ ಅಂದ್ರ ಮಾತಿನ ಮದ್ಯನೆ ಎದ್ದಬಿಡ್ತಾರ. ಒಂದ ವಿಷಯದ ಬಗ್ಗೆ ಜಾಸ್ತಿ ಹೊತ್ತ ಹಿಡದಿಟ್ಕೊಳಾಕ ಆಗೂದೇ ಇಲ್ಲಾ ಇವರನ್ನ. ಈ ಕಾರಣಕ್ಕೆ ಇವರು ಸಂತೋಷದಿಂದ ಕಾಲ ಕಳಿಬೇಕು ಅಂತಾ ಹೊಸ ಹೊಸ ಯೋಜನೆಗಳನ್ನ ಹುಡಕ್ತಿರ್ತಾರ.

ಜೂನ್

ಜೂನ್ ತಿಂಗಳದಾಗ ಹುಟ್ಟಿದವರು ಬೇರೆಯವ್ರ ಭಾವನೆಗಳನ್ನ ಅತೀ ಸೂಕ್ಷ್ಮವಾಗಿ ಅರ್ಥಾಮಾಡ್ಕೊತಾರ. ಬೇರೊಬ್ಬರನ್ನ ಕಾಲಜಿ ಮಾಡಂತ ಗುಣ ಇವರೊಳಗಿರ್ತೈತಿ. ಮೆತ್ತಗೆ ಮಾತಾಡ್ತಾರ ಮತ್ತ ತುಂಬಾ ನಾಚಿಕೆ ಸ್ವಭಾವದವರಾಗಿರ್ತಾರ. ಇವರಲ್ಲಿರುವ ಈ ಗುಣಗಳೇ ಜನಗಳ ಪ್ರೀತಿಗಳಿಸೊಕೆ ಕಾರಣ. 

ಬಹಳ ಕ್ರಿಯೇಟಿವ್ ಆಗಿರುವ ಇವರು ಭವಿಷ್ಯದ ಬಗ್ಗೆ ಮುಂದಾಲೋಚನೆ ಇಟ್ಕೊಂಡಿರ್ತಾರ. ಹೊಸದೆನಾದ್ರು ಮಾಡೊದರ ಬಗ್ಗೆ ಯಾವಾಗ್ಲೂ ಯೋಚಸ್ತಿರ್ತಾರ. ಹೊಸ ಹೊಸ ಯೋಜನೆಗಳನ್ನ ಯಾವ ರೀತಿಲಿ ಕಾರ್ಯಗತಗೊಳಿಸ್ಬೇಕು ಅನ್ನೋದರ ಬಗ್ಗೆ ವಿಚಾರ ಮಾಡ್ತಿರ್ತಾರ.

ಇವರು ತಮ್ಮ ಮನಸ್ಸಿನ ಭಾವನೆಗಳನ್ನ ಯಾರ ಮುಂದೇನು ತೋರಿಸ್ಕೊಳಲ್ಲ. ತಮ್ಮದೇ ಪ್ರಪಂಚದಲ್ಲಿ ತಾವಿರ್ತಾರ. ಅವುಗಳನ್ನ ತಮ್ಮ ನಿಜಜೀವನದೊಳಗ ಹ್ಯಾಂಗ್ ಅಳವಡಿಸ್ಕೊಬೇಕು ಅನ್ನೋದು ಗೊತ್ತಾದ್ಗ ಚಡಪಡಸ್ತಿರ್ತಾರ.

ಜುಲೈ

ಇವರ ಮನಸ್ಸಲ್ಲಿ ಏನ್ ಬಂತಂದ್ರು ಅದನ್ನ ಹೊರಗ ಹಾಕೇಹಾಕ್ತಾರ. ಇವರು ಒಂಥರಾ ಬಾಹ್ಯಕ್ರಿಯೇಗಳಲ್ಲಿ ಆಸಕ್ತಿಯುಳ್ಳವರು, ಇವರ ಮನಸ್ಸು ಮತ್ತು ನಾಲಿಗೆಗೆ ಫಿಲ್ಟರ ಇರೋದಿಲ್ಲ, ಇವರು ಪಾದರಸ ಇದ್ದಂದ, ಇವರ ಮಾಡೋ ಕೆಲಸಕ್ಕೆ ಯಾವ ಕಾರಣನೂ ಮತ್ತು ಪ್ರಚೋದನೇನೂ ಬೇಡ. ಒಳ್ಳೆ ರೀತಿಲಿ ಕಾಲಾಕಳಿಯೋಕೆ ಬಯಸೋ ಇವರು ಸಾಹಸ ಮಾಡಾಕ ಇಷ್ಟ ಪಡೋ ವ್ಯಕ್ತಿಗಳು.

ಇವರು ಒಳಗೊಳಗೆ ದೊಡ್ಡಮಟ್ಟದಲ್ಲಿ ನೋವು, ಸಂಕಟ, ದುಃಖ ಮತ್ತು ಕಠೋರ ಸತ್ಯಗಳನ್ನು ಮುಚ್ಚಿಟ್ಕೋಂಡಿದ್ರು ಹೊರಗಿನಿಂದ ನೋಡೋರಿಗೆ ಬಹಳ ಆತ್ಮವಿಶ್ವಾಸದಿಂದ ನಕ್ಕೊತಾ ಇರೋಹಂಗ ಕಾಣಸ್ತಾರ.

ಇನ್ನು ಜುಲೈ ತಿಂಗಳಲ್ಲಿ ಹುಟ್ಟದವರಿಗೆ ಸಿಕ್ಕಾಪಟ್ಟೆ ಎನರ್ಜಿ ಇರ್ತೈತಿ. ಈ ಕಾರಣಕ್ಕೆ ಬೇರೆಯವರು ಇವರ ಜೊತಿಗೆ ಓಡಾಡೋಕೆ ಹಾತೋರಿತಿರ್ತಾರ.

ಆಗಸ್ಟ್

ಆಗಸ್ಟನಲ್ಲಿ ಹುಟ್ಟಿರೋರು ಹುಟ್ಟೊವಾಗ್ಲೆ ನಾಯಕತ್ವದ ಎಲ್ಲಾ ಗುಣಗಳನ್ನ ತಗೊಂಡ ಬಂದಿರ್ತಾರ. ತಮ್ಮ ಅಭಿಪ್ರಾಯಗಳಿಗೆ ಎಷ್ಟೆ ತೊಂದ್ರೆ ತಾಪತ್ರಯಗಳುಂಟಾದ್ರು ಅದಕ್ಕ ಸ್ಥಿರವಾಗಿರ್ತಾರ. ತಮ್ಮ ಅಭಿಪ್ರಾಯಗಳನ್ನ ಬ್ಯಾರೇಯವರ ಮೇಲೆ ದಬ್ಬಾಳಿಕೆ ನಡಸ್ತಾರಂತ ಅನಸ್ತೈತಿ. ಆದ್ರ ಇವರಿಗೆ ತುಂಬಾ ದೊಡ್ಡ ಮನಸ್ಸಿರ್ತೈತಿ.

ಎಲ್ಲಾ ವಿಷಯಗಳಿಗೂ ಬಾಳ ವಿಚಾರ ಮಾಡೋ ಸ್ವಭಾವದವರು, ಎಲ್ಲಾದ್ರು ಸ್ವಲ್ಪ ಎರುಪೇರಾದ್ರ ಸಾಕು, ಶಿಸ್ತಿನಿಂದ ನಡಿತಿದ್ದ ತಮ್ಮ ಜೀವನವನ್ನ ಕಷ್ಟಗಳ ಸರಮಾಲೆ ಮಾಡ್ಕೊಂಡ ಬಿಡ್ತಾರ. ತಾವು ಮಾಡಂತ ಕೆಲಸಗಳ ಲಾಭ-ನಷ್ಟಗಳ ಬಗ್ಗೆ ಬಾಳ ವಿಚಾರ ಮಾಡಿ ಹೆಜ್ಜೆ ಹಾಕ್ತಿರ್ತಾರ. ಹಂಗಾಗಿ ಇವರು ತಮ್ಮ ವೃತ್ತಿ ಜೀವನದಲ್ಲಿ ಬಾಳ ನೆಮ್ಮದಿಯಿಂದ ಇರ್ತಾರ. ಜೀವನದಲ್ಲಿ ಇವರೀಡೊ ಒಂದೊಂದ ಹೆಜ್ಜೆನೂ ತುಂಬಾ ವಿಚಾರ ಮಾಡಿ ಹಂತಹಂತವಾಗಿ ಮುಂದವತಿರ್ತಾರ ಇದು ಇವರ ವೃತ್ತಿ ಜೀವನಕ್ಕೆ ಸಹಾಯಾಕ್ಕತಿ.

ತಮ್ಮ ಭಾವನೆಗಳನ್ನ ಸಲಿಸಾಗಿ ಬಿಟ್ಟಕೊಡೊದಿಲ್ಲ. ಈ ಕಾರಣಕ್ಕ ಕೆಲವು ಸೂಕ್ಷ್ಮ ಸಂಧರ್ಭಗಳು ಇವರ ಕೈ ತಪ್ಪಿ ಹೊಕ್ಕಾವು. ಜನರ ಮನಸ್ಸಿಗೆ ನೋವ ಮಾಡ್ತಾವು.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳದಾಗ ಹುಟ್ಟದವರು ಬಾಳ ಲಗೂನ ಹತಾಷೆಗೆ ಒಳಗಾಗ್ತಾರ. ಇವುರು ಬೇರೆಯವರಿಂದ ಬಾಳ ನಿರೀಕ್ಷೆಗಳನ್ನಿಟ್ಕೊಂಡಿರ್ತಾರ. ಇವರಿಗೆ ಮೊಂಡತನ ಹೆಚ್ಚು. ಬ್ಯಾರೇರ ಜೊತಿಗೆ ಏನರ ಗ್ರಹಚಾರ ಕೆಟ್ಟು, ಮನಸ್ತಾಪ ಬಂದು ದ್ವೇಷ ಹುಟ್ಕೊತಂದ್ರ ಸತ್ರು ಅವರನ್ನ ತಿರುಗಿ ನೋಡದಿರೊ ಸ್ವಭಾದವರು.

ಇವರ್ನಾ ಮಿಸ್ಟರ್ ಅಥವಾ ಮಿಸ್ಟ್ರೆಸ್ ಪರ್ಫಕ್ಟ ಅಂತಾ ಹೇಳ್ಬಹುದು. ಬೇರೆಯವರು ಇವರ ಹಂಗ ಇರ್ಬೇಕು ಅನ್ಕೊತಿರ್ತಾರ. ಇವರು ಬಾಳ ಕ್ರಿಯೇಟಿವ್ ಆಗಿರ್ತಾರ, ಅದಲ್ದ ತುಂಬಾ ಕಾಳಜಿ ವಹಿಸೋರು ಮತ್ತ ಅವಕಾಶ ಸಿಕ್ಕಾಗೆಲ್ಲ ಬ್ಯಾರೆಯವರಿಗೆ ಸಹಾಯ ಮಾಡೋ ಸ್ವಭಾವದವರು. 

 

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರು, ತಾವು ಮಾಡುವಂತಾ ಎಲ್ಲಾ ಕೆಲಸಗಳು ತೂಕಬದ್ಧವಾಗಿರ್ಬೇಕು ಅಂತ ಬಯಸ್ತಾರ. ಜೀವನದ ಬಗ್ಗೆ  ಒಂದು ಧನಾತ್ಮಕ ದೃಷ್ಟಿಕೋನವನ್ನು ಇಡ್ಕೋಡಿರ್ತಾರ. ಹೊಡದಾಟ, ಜಗಳ, ಗಲಾಟೆಗಳಂದ್ರ ಇವರಿಗೆ ಆಗಿಬರಲ್ಲ, ಎಷ್ಟ ಸಾಧ್ಯನೋ ಅಷ್ಟು ಅವಗಳನ್ನೆಲ್ಲಾ ನಿಲ್ಲಸಾಕ ಪ್ರಯತ್ನ ಮಾಡ್ತಿರ್ತಾರ.

ಇವರು ಸಾಮಾಜಿಕ ಜೀವನದಲ್ಲಿ ಸಿಕ್ಕಾಪಟ್ಟೆ ಬುದ್ಧಿವಂತರಾಗಿರ್ತಾರ ಮತ್ತ ಸ್ನೇಹಕ್ಕಾಗಿ ಜೀವಾನ ಕೊಡ್ತಾರ. ತಮ್ಮಡೆಗೆ ಸೆಳ್ಕೊಳೋ ಗುಣದವರು ಮತ್ತು ಮಾತಿನ ಮಲ್ಲರು ಸಹ. ಯಾವಾಗ್ಲೂ ಜನಗಳ ಮಧ್ಯ ಇರೋದಕ್ಕೆ ಇಷ್ಟ ಪಡಂತವರು, ಸ್ವತಂತ್ರ ವ್ಯಕ್ತಗಳಾಗಿರ್ತಾರ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿದವರು, ತಮ್ಮೊಳಗೆ ತುಂಬಾ ರಹಸ್ಯಗಳನ್ನ ಇಡ್ಕೊಂಡಿರ್ತಾರ ಅಲ್ಲದೆ ತಮ್ಮ ನಿಜ ಸ್ವರೂಪವನ್ನು ಯಾರ ಮುಂದೇನು ಬಿಚ್ಚಿಡಲ್ಲ. ಇನ್ನೊಬ್ಬರ ಸಲಹೆ, ಮಾರ್ಗದರ್ಶನ ಇವರಿಗೆ ಇಷ್ಟಾ ಆಗಲ್ಲ. ತಮ್ಮ ಜೀವನವನ್ನು ತಾವೇ ರೂಪಿಸ್ಕೊಳಾಕ ಒದ್ದಾಡ್ತಿರ್ತಾರ. 

ಭಯ, ಹೆದರಿಕೆ ಇವರ ಹತ್ರಾನೂ ಸುಳಿಯೊದಿಲ್ಲ. ಈ ಕಾರಣಕ್ಕೆ ಎಂಥಾ ಪರಿಸ್ಥಿತಿ ಬಂದ್ರೂ ಹಿಂದ ಮುಂದ ವಿಚಾರ ಮಾಡ್ದೆ ಧೈರ್ಯದಿಂದಾ ಮುನ್ನುಗ್ಗಗ್ತಿರ್ತಾರ. ಬಂದಿರೋ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡ್ಕೊಂಡು  ಮುಂದವರಿಬೇಕು, ಅದರಿಂದಾ ಮುಂದೆ ಯಾವ ಪರಿಣಾಮವನ್ನ ಎದುರಿಸಬಹುದು, ಅನ್ನೋದರ ಬಗ್ಗೆ ಸ್ವಲ್ಪನೂ ತೆಲೆಕೆಡಿಸ್ಕೊಳ್ಳೊದಿಲ್ಲ.

ಇವರ ಜೀವನದಲ್ಲಿ ಯಾವ ಅಡ್ಡಿ ಆತಂಕಗಳು ಬಂದ್ರು ಭಯಪಡ್ದೆ ಮುನ್ನುಗ್ಗಗ್ತಿರ್ತಾರ. ಹಠಮಾರಿತನ. ಧೈರ್ಯ ಮತ್ತು ಜೀವನದ ಮೇಲಿರೋ ಅತೀಯಾದ ಭಾವುಕತೆ ಇವರ ಬಹುದೊಡ್ಡ ಆಸ್ತಿ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ದಾರಾಳ ಮನಸ್ಸಿನವರು, ಸಾಹಸ ಮಾಡುವಂತ ಜನಗಳು. ತಮ್ಮ ಗೌರವ ಮತ್ತು ಅಹಂಕಾರದಿಂದ ಬೇರೆಯವರ ಜೊತೆ ಸಣ್ಣಪುಟ್ಟ ಜಗಳ ಮನಸ್ತಾಪ ಉಂಟಾಗ್ತಿರ್ತಾವು. ಇವರೋಂತರ ಹರಿಯೊ ನದಿಯ ಹಾಗೆ, ಒಂದ ಕಡೆ ಹೆಚ್ಚಹೊತ್ತು ಇವರಿಗೆ ಇರೋದಕ್ಕೆ ಆಗೋದೆ ಇಲ್ಲ.

ಇವರು ಸ್ವಲ್ಪ ಸಿಟ್ಟಿನ ಸ್ವಭಾವದವರು. ಆದರೆ ಮತ್ತೊಬ್ಬರ ಜೊತೆ ತುಂಬಾ ನಗೆಚಟಾಕಿಗಳನ್ನ ಹೇಳ್ಕೊತಾ ಸಮಯವನ್ನ ಕಳಿತಿರ್ತಾರ. ಅವರಲ್ಲಿರುವ ದಾರಾಳ ಮನಸ್ಸು ಜೀವನದ ಎಲ್ಲಾ ಏರುಪೇರುಗಳನ್ನ ಸರಿಯಾಗಿ ಹೊಂದಾಣಿಕೆ ಮಾಡ್ತಿರ್ತೈತಿ.

ಏನಂತೀರಿ? ನೀವು ಹುಟ್ಟಿದ್ದು ಯಾವ ತಿಂಗಳು? ನಿಮ್ಮ ಸ್ವಭಾವ ನೋಡಿದ್ರಾ? ಸರಿ ಐತ್ಯಾ?