https://guardianhelmets.com/wp-content/uploads/special-needs-helmets-1170x780.jpg

ಇವತ್ತಿನ ದಿನದಲ್ಲಿ ಮಕ್ಕಳನ್ನ ಬೆಳೆಸೋದೇ ಒಂದು ದೊಡ್ಡ ಪ್ರಶ್ನೆ. ನೀವು ನಿಮ್ಮ ಮಕ್ಕಳು ಗೆಲ್ಲಬೇಕು ಅವರಿಗೆ ಬೇಜಾರಾಗತ್ತೆ ಅಂತ ಅವರ ಜೊತೆ ಆಟ ಆಡ್ಬೇಕಾದ್ರೆ ಎಷ್ಟ್ ಸತಿ ಸೋತಿದೀರ ಯೋಚ್ನೆ ಮಾಡಿ, ತುಂಬಾ ಸತಿ ಅಲ್ವಾ, ನಿಮ್ಮ ಮಕ್ಕಳು ಯಾವಾಗ್ಲೂ ಗೆಲ್ಲಬೇಕು ಅಂತ ಸೋಲಿನಿಂದ ಕಾಪಾಡ್ತಿದೀರ, ಇದು ಎಲ್ಲಾರು ಮಾಡೋ ದೊಡ್ಡ ತಪ್ಪು, ಅದಕ್ಕೆ ನಿಮ್ಮ ಮಕ್ಕಳು ಹೊರಗಿನ ಜಗತ್ತನ್ನ ಎದುರಿಸೋಕೆ ನೀವು ಏನೇನ್ ಮಾಡ್ಬೇಕು ಅಂತ ಹೇಳಿದೀವಿ ಓದಿ.

1. ಮಕ್ಕಳ ಜೊತೆ ಮಕ್ಕಳ ಥರಾನೇ ಆಟ ಆಡಿ 

ಮಕ್ಕಳು ಗೆಲ್ಲಲಿ ಅಂತ ಬಿಟ್ಟುಕೊಡೋದು, ಅಥವಾ ಅವರಿಗೆ ಆಡಕ್ಕೆ ಬರಲ್ಲ ಅಂತ ನೀವ್ ಹೆಂಗೆಂಗೋ ಆಟಾದದು, ಅವರನ್ನ ಬೇಕು ಬೇಕು ಅಂತ ಗೆಲ್ಲಿಸೋದು ಅಥವಾ ಏನೋ ದೊಡ್ಡವರ ಲೆವೆಲ್ಲಲ್ಲಿ ಆಡೋದು ಇವೆಲ್ಲ ಮಾಡಬೇಡಿ. ಮಕ್ಕಳ ಜೊತೆ ಮಕ್ಕಳ ಥರ ಆಟಾಡಿ. ನೀವ್ ಇದ್ದಂಗೆ ಹೊರಗಿನ ಪ್ರಪಂಚ ಇರಲ್ಲ, ಮಕ್ಕಳಿಗೆ ಗೆಲ್ಲೋದು, ಸೋಲೋದು ಎರಡೂ ಗೊತ್ತಿರಲಿ. ಇಲ್ಲ ಅಂದ್ರೆ ಮುಂದೆ ಅವರಿಗೆ ಅದೇ ಸಮಸ್ಯೆ ಆಗತ್ತೆ.

2. ಸೋಲೋದು ಕಲಿಸಿ

ಸೋಲಕ್ಕೆ ಯಾರಿಗಿಷ್ಟ ಹೇಳಿ, ನಿಮ್ಮ ಮಕ್ಕಳ ಎದುರು ಬೇಕು ಬೇಕು ಅಂತ ನೀವ್ ಸೋತು ಅವರಿಗೆ ಗೆಲುವಿನ ಹುಚ್ಚು ಹಿಡಿಸಬೇಡಿ. ಹೊರಗಡೆ ಹಿಂಗೇ ಇರಲ್ಲ. ಮುಂದೆ ಯಾವತ್ತೋ ಸೋತಾಗ ಆ ನೋವನ್ನ ತಡ್ಕೊಳಕ್ಕೆ ಆಗಲ್ಲ ಅನ್ನೋತರ ಮಾಡಬೇಡಿ. ಸೋಲು ಅಂದ್ರೇನು, ಅದರ ನೋವು ಅವರಿಗೆ ಗೊತ್ತಿರಬೇಕು. ಒಂದು ಕಾಲೇಜಲ್ಲಿ ನಡೆದ ಸಂಶೋಧನೆ ಪ್ರಕಾರ ಯಾವ ಮಕ್ಕಳಿಗೆ ನೀವು ಗೆಲ್ಲಿಸಿ ಗೆಲ್ಲಿಸಿ ಅಭ್ಯಾಸ ಮಾಡಿರ್ತೀರ ಅಂಥವ್ರು ಸ್ವಂತ ನಿರ್ಧಾರ ತೊಗೊಳಕ್ಕೆ ಹಿಂದೇಟು ಹಾಕ್ತಾರೆ ಹಾಗೆ ಬೇರೆಯವರ ಅನಿಸಿಕೆಗಳನ್ನ ತೊಗೊಳಕ್ಕೆ ಕಷ್ಟ ಪಡ್ತಾರೆ 

3. 'ಮರಳಿ ಯತ್ನವ ಮಾಡು' ಅನ್ನೋದನ್ನ ಹೇಳಿಕೊಡಕ್ಕೆ ಮರೀಬೇಡಿ 

ಸೋತಾಗ ಆ ವಿಷಯದಲ್ಲಿ ಸೋತೆ ನಾನು ಅನ್ನೋ ಸಿಟ್ಟು, ಬೇಜಾರು ಎಲ್ಲ ಇರತ್ತೆ, ನಿಮ್ಮ ಮಕ್ಕಳು ಸೋತಾಗ ಅವ್ರಿಗೆ ಈ ಭಾವನೇನ ಹೊರಗೆ ಹಾಕಕ್ಕೆ ಹೇಳಿಕೊಡಿ, ಇದು ಮಾಮೂಲಿನೆ ಅಂತ ಅವರಿಗೆ ಅನ್ನಿಸಲಿ. ಸೋತ ತಕ್ಷಣ ಯಾವುದನ್ನು ಬಿಡಬಾರದು. ಮತ್ತೆ ಮತ್ತೆ ಪ್ರಯತ್ನ ಮಾಡೋದನ್ನ ಹೇಳಿಕೊಡಿ. 

4. ಅವರ ತಪ್ಪು ಅವರೇ ತಿದ್ದಿಕೊಳಕ್ಕೆ ಹೇಳಿಕೊಡಿ 

ಎಲ್ಲ ಸತೀನು ಹೋಗಿ ಮುಟ್ಟೋ ಗುರೀಗಿಂತ ಹೋಗೋ ದಾರೀಲೆ ತುಂಬಾ ಕಲೀತೀವಿ. ಸೋತಿದ್ದಾರೆ ಅಂದ್ರೆ ತಪ್ಪು ಮಾಡಿದಾರೆ ಅಂತ ಅರ್ಥ ಆ ತಪ್ಪನ್ನ ನೀವು ತಿದ್ದಬೇಡಿ, ಅವರಿಗೆ ಕೇಳಿ ಈಗ ಏನು ಮಾಡಬಹುದು ನಿನ್ನ ಯೋಚನೆ ಏನು ಅಂತ. ಅವರೇ ಅವರ ತಪ್ಪನ್ನ ತಿದ್ದಿಕೊಳೋದು ಹೇಗೆ ಅನ್ನೋದನ್ನ ಚೆನ್ನಾಗಿ ಹೇಳಿಕೊಡಿ.

5. ಫಲ ಏನೇ ಇರ್ಲಿ ನೂರಕ್ಕೆ ನೂರು ಪ್ರಯತ್ನ ಪಡೋದನ್ನ ಹೇಳಿಕೊಡಿ 

ಜೀವನದ ಯಾವುದೇ ಸಂದರ್ಭ ಇರಲಿ ಎಲ್ಲದರಲ್ಲೂ ನಮ್ಮ ಪ್ರಯತ್ನ ಪೂರ್ತಿ ಇರಲೇಬೇಕು, ಗೆಲ್ಲೋದು ಸೋಲೋದು ಆಮೇಲಿನ ವಿಚಾರ, ಆದ್ರೆ ಸಮಸ್ಯೆ ಎದುರಿಸೋದು ಕಲ್ಸಿ. ಅವರ ತಾಕತ್ತಿಗೆ ಮೀರಿ ಪ್ರಯತ್ನ ಮಾಡೋದು ಗೊತ್ತಿದ್ದರೆ ತುಂಬಾ ಸೋತಾಗ ಮತ್ತೆ ಮೇಲೇಳಕ್ಕೆ ಇದು ಪ್ರೇರಣೆ ಕೊಡತ್ತೆ 

6. ಗೆದ್ದಾಗ ವಿನಯದಿಂದ ಇರ್ಬೇಕು, ಜಂಬದಿಂದ ಬೀಗಬೇಡ ಅಂತ ಹೇಳಿಕೊಡಿ 

ಗೆದ್ದಾಗ ಸಂತೋಷಪಡಬೇಕು ಆದ್ರೆ ಎದುರಾಳಿ ಮುಂದೆ ಮೆರೀಬೇಡ ಅಂತ ಹೇಳಿಕೊಡಿ. ಎದುರಿಗಿರೋ ಆಟಗಾರನ ಭಾವನೇನ ಅರ್ಥ ಮಾಡ್ಕೊಳೋದನ್ನ ಕಲಿಸಿ. "ಆಟಗಾರನ ಹುರುಪು" ಅಂದರೆ ಆಟಾನ ಸಂತೋಷವಾಗಿ ಆಡಿ ಎದುರಾಳಿಯನ್ನು ಗೌರವಿಸುವುದು ಇದನ್ನ ಕಲಿಸಿ, ಇದು ಮುಂದೆ ಬದುಕಲ್ಲಿ ತುಂಬಾ ಮುಖ್ಯವಾಗತ್ತೆ 

7. ನಿಜವಾಗಲೂ ಗೆದ್ದಾಗ ಶಬ್ಬಾಶ್ ಅಂತ ಬೆನ್ನು ತಟ್ಟಿ ಸಂತೋಷ ಪಡಿ

ನಿಮ್ಮ ಮಕ್ಕಳು ನಿಜವಾಗಿ ಗೆದ್ದಾಗ, ಅವರೇ ಕಷ್ಟಾಪಟ್ಟು ಕಲಿತು ಗೆದ್ದಾಗ ಅವರ ಗೆಲುವನ್ನ ಸಂಭ್ರಮಿಸಿ. ಅವರಿಗೆ ಗೆಲ್ಲಕ್ಕೆ ಎಷ್ಟು ಕಷ್ಟ ಪಡಬೇಕು ಅನ್ನೋದು ಗೊತ್ತಾಗತ್ತೆ. ಗೆದ್ದ ಅಂತ ತಲೆಮೇಲೆ ಕೂರುಸ್ಕೊಂಡು ಮೆರವಣಿಗೆ ಮಾಡ್ಬೇಡಿ ಆಗಾಗ ಸೋಲಲೂಬೇಕು ಗೆಲ್ಲಲೂಬೇಕು. ಸೋತಾಗಲೇ ಗೆಲ್ಲಕ್ಕೆ ಏನು ಮಾಡ್ಬೇಕು ಅಂತ ಗೊತ್ತಾಗದು ಇದನ್ನ ಹೇಳಿಕೊಡಿ