ದೇಹದಲ್ಲಿ ಕೊಬ್ಬಿನಾಂಶ ಹೆಚ್ಚದರೆ ಅದನ್ನ ಸ್ಥೂಲ ಕಾಯ ಅಂತಾರೆ. ಇನ್ನು ಈ ಸ್ಥೂಲ ಕಾಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಹತ್ತಿರ ಬಂದರೆ ಹೃದಯಾಘಾತ, ಮಧುಮೇಹ, ನಿದ್ರಾಹೀನತೆಯಂತಹ ತೊಂದರೆಗಳು ಕಾಡುತ್ತವೆ.

ನಮಗೆ ಸ್ಥೂಲ ಕಾಯ ಇದೆಯೋ ಇಲ್ಲವೋ ಅಂತ ತಿಳಿಯೋಕೆ 3 ವಿವಿಧ ರೀತಿಗಳಿವೆ

* ನಮ್ಮ ದೇಹದ ತೂಕ ನಮ್ಮ ಎತ್ತರಕ್ಕೆ ಸರಿ ಇದೆಯೋ ಇಲ್ಲವೋ ಅಂತ ತಿಳಿಯೋಕೆ ಬಿ.ಎಮ್.ಐ ನೋಡ್ಕೋಬೇಕು

* ಸೊಂಟದ ಸುತ್ತಳತೆ ಗಂಡಸರಲ್ಲಿ 40 ಇಂಚಿಗೂ ಮೀರಿ ಹೆಂಗಸರಲ್ಲಿ 35 ಇಂಚಿಗೂ ಮೀರಿ ಇರಬಾರದು

* ಇನ್ನು ನಿಮ್ಮ ಜೀವನ ಶೈಲಿ ಹಾಗೆ ನಿದ್ದೆ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಉತ್ತಮ

ಇನ್ನು ದೇಹದ ಯಾವ ಯಾವ ಭಾಗಗಳಲ್ಲಿ ಕೊಬ್ಬಿನಾಂಶ ಶೇಖರಣೆ ಆದರೆ ನಿಮ್ಮ ಜೀವನ ಶೈಲಿಯಲ್ಲಿ ಎಲ್ಲಿ ತೊಂದರೆಗಳಿವೆ ಅಂತ ಹೇಳ್ತೀವಿ, ಸರಿ ಮಾಡಿಕೊಳ್ಳಿ.

1. ವಿಧ 1

ದೇಹ ರಚನೆ – ನಿಮ್ಮ ಕುತ್ತಿಗೆಯಿಂದ ಸೊಂಟದ ವರೆಗೂ ಕೊಬ್ಬಿನಾಂಶ ಶೇಖರಣೆ ಆಗಿದ್ದರೆ

ಕಾರಣ – ಅತಿಯಾಗಿ ತಿನ್ನೋದು ಹಾಗೆ ವ್ಯಾಯಾಮ ಇಲ್ಲದ ಜೀವನ ಮಾಡೋದು

ಪರಿಹಾರ – ನೀವು ಈ ಕೂಡಲೇ ಎಣ್ಣೆಲಿ ಕರಿದದ್ದು, ಹೆಚ್ಚು ಸಿಹಿ ತಿಂಡಿ ಹಾಗೆ ಹೊರಗಿನ ತಿಂಡಿಗೆ ಟಾ ಟಾ ಹೇಳೋ ಸಮಯ. ದಿನದಲ್ಲಿ ಕಡೇ ಪಕ್ಷ 15-20 ನಿಮಿಷ ವ್ಯಾಯಾಮ ಮಾಡಿ.

2. ವಿಧ 2

ದೇಹ ರಚನೆ – ನಿಮ್ಮ ಎದೆಯಿಂದ ಕೆಳಗೆ ಸೊಂಟದ ವರೆಗೂ ಹೊಟ್ಟೆ ಮಾತ್ರ ದಪ್ಪವಾಗಿದ್ದರೆ

ಕಾರಣ – ಜೀವನದಲ್ಲಿನ ಒತ್ತಡ ಕಡಿಮೆ ಮಾಡಿಕೊಳ್ಳೋಕೆ ನೀವು ಹೆಚ್ಚು ಕ್ಯಾಲೊರೀ ಇರೋ ಆಹಾರ ಸೇವಿಸೋದು

ಪರಿಹಾರ – ಒತ್ತಡ ಕಡಿಮೆ ಮಾಡೋಕೆ ಊಟದ ಮೊರೆ ಹೋಗೋ ಬದಲು, ಯೋಗ- ಪ್ರಾಣಾಯಾಮ ಮತ್ತಿತರ ವ್ಯಾಯಾಮದ ಮೊರೆ ಹೋಗೋದು ಉತ್ತಮ

3. ವಿಧ 3

ದೇಹ ರಚನೆ – ಸೊಂಟದ ಕೆಳಭಾಗದಲ್ಲಿ ಹಾಗೇ ತೊಡೆಯ ಭಾಗದಲ್ಲಿ ಕೊಬ್ಬಿನಾಂಶ ಇದ್ದರೆ

ಕಾರಣ – ಮುಟ್ಟು ನಿಲ್ಲೋ ಸಮಯದಲ್ಲಿ ಇದು ಸಾಮಾನ್ಯ, ಇನ್ನು ಚಿಕ್ಕವಯಸಿನವರಲ್ಲಾದರೆ ಇದು ಹಾರ್ಮೋನ್ ವ್ಯತ್ಯಾಸದಿಂದ ಆಗಿರಬಹುದು

ಪರಿಹಾರ – ನಿಮ್ಮ ಜೀವನ ಶೈಲೀಲಿ ಮಾರ್ಪಾಟು ಅತ್ಯಗತ್ಯ, ಕೊಬ್ಬಿನಾಂಶ ಕರಗಿ ಹಾರ್ಮೋನ್ ಸಮತೋಲನದಲ್ಲಿಡೋಕೆ ವ್ಯಾಯಮ ಮಾಡಿ

4. ವಿಧ 4

ದೇಹ ರಚನೆ – ಹೊಟ್ಟೆ ಮಾತ್ರ ದಪ್ಪನಾಗಿರೋದು

ಕಾರಣ – ಅತಿಯಾದ ಮದ್ಯ ಪಾನ

ಪರಿಹಾರ – ಮದ್ಯಪಾನ ಬಿಟ್ಟಷ್ಟೂ ಒಳ್ಳೇದು, ಇನ್ನು ಉಸಿರಾಟದ ತೊಂದರೆ ಆಗದೇ ಇರೋಕೆ ವ್ಯಾಯಮ ಮಾಡೋದು

5. ವಿಧ 5

ದೇಹ ರಚನೆ – ಇಡೀ ಕಾಲು ಪಾದದ ವರೆಗೂ ದಪ್ಪಗಿದ್ದರೆ

ಕಾರಣ – ಗರ್ಭಿಣಿ ಮಹಿಳೆಯರಲ್ಲಿ ಊತದ ಕಾರಣ ಹೋಗಾಗಬಹುದು

ಪರಿಹಾರ –ಕಾಲಿನ ಕೆಳಗೆ ದಿಂಬಿಟ್ಟು ಕೂರೋದು ಅಥವಾ ವೈದ್ಯರ ಸಲಹೆ ಮೆರೆಗೆ ವ್ಯಾಯಾಮ ಮಾಡೋದು ಉತ್ತಮ

6. ವಿಧ 6

ದೇಹ ರಚನೆ – ಎದೆಯ ಭಾಗದಲ್ಲಿ ಹಾಗೆ ಬೆನ್ನಿನ ಮೇಲ್ಭಾಗದಲ್ಲಿ ಕೊಬ್ಬಿನಾಂಶ ಇದ್ದರೆ

ಕಾರಣ – ಯಾವುದೇ ರೀತಿ ವ್ಯಾಯಮ ಇಲ್ಲದಾಗ ಹೋಗಾಗುತ್ತೆ

ಪರಿಹಾರ – ನಿಮಗೆ ಮಧುಮೇಹ ಇದೆಯಾ ಆಗಾಗ ನೋಡಿಕೊಳ್ಳಿ, ದಿನಕ್ಕೆ ೧೫-೨೦ ನಿಮಿಷ ವ್ಯಾಯಾಮ ಮಾಡಿ

ಇನ್ನು ನಿಮ್ಮ ದೇಹ ರಚನೆ ಹೇಗಿದೆ ಅನ್ನೋದು ತಿಳೀತಲ್ಲ? ಈಗ ಅದಕ್ಕೆ ಸರಿಯಾಗಿ ಕ್ರಮಗಳನ್ನ ವಹಿಸಿ. ಎಲ್ಲ ರೀತಿಯ ಸ್ಥೂಲಕಾಯಕ್ಕೂ ಊಟ ಬಿಡೋದೇ ಪರಿಹಾರ ಅಲ್ಲ. ಗಂಟೆಗಟ್ಟಲೇ ಜಿಮ್ ನಲ್ಲಿರೋದ್ರಿಂದ ಏನೂ ಲಾಭ ಇಲ್ಲ.