http://ghk.h-cdn.co/assets/15/24/980x490/landscape-1434145189-natural-lips.jpg

ಒಬ್ಬ ವ್ಯಕ್ತಿ ಗುಣ, ಸ್ವಭಾವ, ನಡವಳಿಕೆನ ನಿರ್ಧಾರ ಮಾಡಕ್ಕೆ ಅವರ ಮುಖದ್ ಮೇಲಿರೋ ತುಟಿಗಳು ಮುಖ್ಯ ಪಾತ್ರ ವಹಿಸತ್ತೆ ಅಂತ ವಿಜ್ಞಾನಿಗಳು ಮತ್ತೆ ಮುಖಸಾಮುದ್ರಿಕಾ ಶಾಸ್ರ್ತಜ್ಞರು ಹೇಳ್ತಾರೆ. ನಮ್ಮ ಅಲೋಚನೆಗಳ್ನ ಮಾತಲ್ಲಿ ಹೇಳುವಾಗ ಆಗೋ ತುಟಿಗಳ ಚಲನೆಯಿಂದ ನಾವು ನಿಜಕ್ಕೂ ಏನ್ ಹೇಳಕ್ಕೆ ಹೊರ್ಟಿದಿವಿ ಮತ್ತೆ ಮಾನಸಿಕ ಅಸಮತೋಲನ ಏನಾದ್ರೂ ಇದ್ರೆ ಅದೂ ಗೊತ್ತಾಗತ್ತಂತೆ.

ತುಟಿಗಳು ಯಾವ್ ಆಕಾರ್ದಲ್ಲಿದ್ರೆ, ಆ ವ್ಯಕ್ತಿ ಗುಣ, ಸ್ವಭಾವ ಹೇಗಿರತ್ತೆ ಅಂತ ಇಲ್ಲಿ ಕೊಟ್ಟಿದಿವಿ. ನಿಮ್ ತುಟಿ ನಿಮ್ಮ ಬಗ್ಗೆ ಏನು ಹೇಳುತ್ತೆ ಅಂತ ತಿಳ್ಕೊಳೋ ಆಸೆ ಇದ್ಯಾ? ನೋಡ್ತಾ ಹೋಗಿ…

1. ಉಬ್ಬಿರುವ ದೊಡ್ಡ ತುಟಿ 

typeset-beta.imgix.net

ಯಾರಿಗೆ ತುಟಿ ಈ ಥರ ದೊಡ್ಡದಾಗಿ ಉಬ್ಬಿರತ್ತೋ ಅವ್ರು ಇನ್ನೊಬ್ರು ಬಗ್ಗೆ ಕಾಳಜಿ ವಹಿಸಕ್ಕೆ ಅಂತನೇ ಹುಟ್ಟಿರೋ ಹಾಗಿರ್ತಾರೆ. ಚಿಕ್ಕವಯಸ್ಸಿನಲ್ಲಿ, ಬೇರೆ ಮಕ್ಕಳು ಆಟ ಆಡ್ಕೊಂಡ್ ಖುಷಿ ಪಟ್ಟಿದ್ರೆ, ಇವ್ರು ಹೆಚ್ಚಿನ್ ಸಮಯನ ಬೀದಿ ನಾಯಿಗಳು, ಬೆಕ್ಕುಗಳ್ಗೆ ಊಟ ಹಾಕೋದ್ರಲ್ಲಿ, ಪ್ರಾಣಿ ಪಕ್ಷಿಗಳ್ನ ಮನೆಗ್ ತೊಗೊಂಡ್ ಬಂದು ಸೂರು ಮಾಡ್ಕೊಡೋದ್ರಲ್ಲೇ ಕಾಲ ಕಳ್ದಿರ್ತಾರೆ. ಇನ್ನೊಬ್ರುನ್ನ ರಕ್ಷಣೆ ಮಾಡೋದು, ಜೋಪಾನ ಮಾಡದು ಇವ್ರ ಸ್ವಭಾವ್ದಲ್ಲೇ ಬಂದಿರತ್ತೆ. ಇಂಥರ ಅಮ್ಮನಂಥ ಗುಣ ಅನ್ಬೋದು. ಎಂಥಾ ಒತ್ತಡದ್ ಪರಿಸ್ಥಿತಿ ಇದ್ರೂ ತಮ್ಗಿಂತ, ಬೇರೆಯೋರ್ ಬಗ್ಗೆನೇ ಮೊದ್ಲು ಯೋಚ್ನೆ ಮಾಡ್ತರೆ. ಇವ್ರು ಒಳ್ಳೆ ಅಪ್ಪ ಅಮ್ಮ ಆಗೋದ್ರಲ್ಲಿ ಎರಡ್ ಮಾತಿಲ್ಲ.

2. ಕೆಳತುಟಿಗಿಂತ ಮೇಲ್ದುಟಿ ದೊಡ್ಡದು 

beautyeditor.ca

ಈ ಥರ ತುಟಿಗಳಿರೋ ವ್ಯಕ್ತಿನ ದೊಡ್ಡ ಡ್ರಾಮ ಕ್ವೀನ್ ಅಂತ ಕರಿಬೋದು ಕಣ್ರಿ. ಇವ್ರು ತುಂಬಾ ಎಮೋಷನಲ್, ಮುಖದಲ್ಲಿ ಒಂಥರಾ ವರ್ಚಸ್ ಇರತ್ತೆ. ಜೀವಕಳೆಯಿಂದ ಕುಣಿತಿರ್ತಾರೆ ಜೊತೆಗೆ ಬೇರೆಯೋರು ತನ್ನನ್ನೇ ಗಮನಿಸ್ಬೇಕು ಅಂತ ಇಷ್ಟ ಪಡ್ತಾರೆ. ಅಷ್ಟೇ ಅಲ್ಲ. ತಾವೇ ತ್ರಿಪುರ ಸುಂದ್ರಿರು, ಸುಂದರಾಂಗರು, ತಮ್ಗೆ ಇನ್ನೊಬ್ರನ್ನ ಆಕರ್ಷಿಸೋ, ಮೋಡಿ ಮಾಡೋ ಶಕ್ತಿ ಇದೆ ಅನ್ನೋ ಜಂಬನೂ ಚೂರ್ ಇರತ್ತೆ. ಎಲ್ಲೇ ಹೋಗ್ಲಿ, ಬರ್ಲಿ, ತಾವೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗ್ಬೇಕು ಅನ್ನೋ ಆಸೆ ಇರೋರು. ಏನೇ ಅದ್ರೂ ಕೆಲವ್ ಸಲ ಸಖತ್ತಾಗಿರೋ ಡೈಲಾಗ್ಗಳು, ಹೊಟ್ಟೆ ಹುಣ್ಣಾಗ್ಸೋ ಜೋಕ್ಗಳು ಇವ್ರಿಂದಾನೇ ಬರೋದು.

3. ಮೇಲ್ದುಟಿಗಿಂತ ಕೆಳತುಟಿ ದೊಡ್ಡದು 

askideas.com

ಇವ್ರು ಸುಮ್ನೆ ಕೂತ್ಕೊಳೋರ್ ಅಲ್ವೇ ಅಲ್ಲ. ಬಾಯಿ ಮುಚ್ಚುದ್ರೂ ನೆತ್ತಿಲಾದ್ರೂ ಮಾತಾಡ್ತರೆ ಅಂತಾರಲ್ಲ ಹಾಗೆ. ಈ ಥರ ತುಟಿ ಇರೋರ್ಗೆ ನಿಜವಾದ್ ಮೋಜು, ಮಸ್ತಿ ಅಂದ್ರೇನು ಅಂತ ಗೊತ್ತಿರತ್ತೆ. ಮುಖ್ಯವಾಗಿ ಇವ್ರಿಗೆ ಎನೆರ್ಜಿಟಿಕ್ ಜೀವ್ನ, ಹೊಸ ಹೊಸ ಪರಿಚಯಗಳು, ಬೇರೆ ಬೇರೆ ಜಾಗಗಳ್ಗೆ ಹೋಗೋದು ಒಟ್ನಲ್ಲಿ ಹೊಸತನ ತುಂಬಿರೋ ಬದುಕು ಇಷ್ಟ ಆಗತ್ತೆ. ಹಾಗೇ ಬದುಕ್ತಾರೆ. ಅಷ್ಟೇ ಅಲ್ಲ ಇವ್ರು ಎಲ್ಲಾದನ್ನೂ ತುಂಬಾ ಕುತೂಹಲ್ದಿಂದ ನೋಡ್ತಾರೆ, ಚೆನ್ನಾಗಿ ಬೆರಿಯೋ ಗುಣ ಇರತ್ತೆ ಮತ್ತೆ ತಮ್ಮನ್ನ ತಾವು ಹೊಸ ಎಕ್ಸ್ಪರಿಮೆಂಟ್ಗಳ್ಗೆ ತೆರೆದ್ಕೊಳ್ತಾರೆ. ಬರೀ ತಾವ್ ಮಾತ್ರ ಅಲ್ಲ, ತಮ್ ಜೊತೆಗಿರೋರ್ನೂ ತುಂಬಾ ಸಾಹಸಮಯವಾಗಿರೋ ದಾರೀಲ್ ಕರ್ಕೊಂಡ್ ಹೋಗ್ತಾರೆ.

4. ಸಾಧಾರಣವಾದ ತುಟಿ 

i.imgur.com

ಇಂಥ ಸಾದಾರಣವಾದ, ದಪ್ಪನೂ ಅಲ್ದಿರೋ, ಸಣ್ಣನೂ ಅಲ್ದಿರೋ ತುಟಿ ಇರೋರು ಯಾವಾಗ್ಲೂ ಮಾನಸಿಕವಾಗಿ ಸಮತೋಲನ ಕಾಪಾಡ್ಕೊತರೆ. ಜೊತೆಗೆ ಎಂಥಾ ಪರಿಸ್ಥಿತಿನ ಅವ್ರ ಎದುರ್ಗಿಟ್ರೂ ಕಾಮನ್ ಸೆನ್ಸ್ ಉಪ್ಯೋಗ್ಸಿ ಅದನ್ನ ಬಗೆಹರ್ಸಕ್ಕೆ ನೋಡ್ತಾರೆ. ಅವ್ರ ಶಕ್ತಿನೇ ಇನ್ನೊಬ್ರು ಹೇಳದನ್ನ ತಾಳ್ಮೆಯಿಂದ ಕೇಳೋದು ಅನ್ಬೋದು. ತಮ್ ಬಗ್ಗೆ ಯಾರೇ ಹೀಯಾಳ್ಸಿ, ಟೀಕೆ ಮಾಡುದ್ರೂ ಆ ಅನಿಸಿಕೆಗಳ್ನ ದೊಡ್ಡ ಮನಸ್ಸಿಂದ ತೊಗೋತಾರೆ. ಅವ್ರನ್ನ ದಾರಿ ತಪ್ಸೋದು, ಕೈಕಾಲ್ ಆಡ್ದಂಗೆ ತಬ್ಬಿಬ್ಬು ಮಾಡ್ಸೋದು ಅಷ್ಟು ಸುಲಭದ್ ಕೆಲ್ಸ ಅಲ್ಲ. ಇಷ್ಟೆಲ್ಲಾ ಗಟ್ಟಿತನ, ನಿಷ್ಠೂರದ್ ಸ್ವಭಾವ ಅವ್ರಲ್ಲಿ ಇದ್ರೂ ಕೂಡ, ಜೋಕ್ ಮಾಡಕ್ಕೆ, ಜಾಲಿಯಾಗಿ ಕಾಲ ಕಳಿಯಕ್ಕೆ ಇಷ್ಟ ಪಡ್ತಾರೆ. ಆದ್ರೂ ಎಲ್ಲೋ ಒಂದ್ ಕಡೆ ಅವ್ರಿಗೆ ಸಿಗ್ಬೇಕಿರೋ ಸ್ಥಾನ ಮಾನ ಪೂರ್ತಿಯಾಗ್ ಸಿಗಲ್ಲ. ಅರ್ಧಕ್ಕೇ ತೃಪ್ತಿ ಪಟ್ಕೊಬೇಕು.

5. ತೆಳು ತುಟಿ 

jennysuemakeup.com

ತೆಳು ತುಟಿ ಇರೋರು ಸಾಮಾನ್ಯವಾಗಿ ಒಂಟಿಯಾಗಿರಕ್ಕೆ ಇಷ್ಟ ಪಡ್ತಾರೆ. ಆತ್ಮ ವಿಶ್ವಾಸ ಗಟ್ಟಿಯಾಗಿರತ್ತೆ ಇವ್ರಿಗೆ. ಹಾಗಾಗಿ ಎಂಥಾ ತೊಂದ್ರೆ ಬಂದ್ರೂ ನಿಭಾಯಿಸ್ತಾರೆ. ತೆಳು ತುಟಿ ಇರೋರ್ ಸ್ವಭಾವ್ದಿಂದ ಒಂದ್ ಅನುಕೂಲ ಏನಪ್ಪ ಅಂದ್ರೆ ಇವ್ರಿಗೆ ಎಲ್ಲಾದ್ರೂ ಹೋಗ್ಬೇಕು ಅಂದ್ರೆ, ಉದಾಹರಣೆಗೆ ಮ್ಯೂಸಿಯಮ್ ಅಥವ ರಜಾ ದಿನಗಳಲ್ಲಿ ದೂರದ್ ಊರಿಗೆ, ಕಡೆಗೆ ದ್ವೀಪಗಳಿಗೆ ಹೋಗಕ್ಕೂ ಯಾರ್ ಜೊತೆಗೂ ಕಾಯಲ್ಲ. ತಾವ್ ಹೋಗ್ಬೇಕ? ಹೋಗ್ ಬರ್ತಾರೆ. ಏಕಾಂತ ಬಯಸ್ತಾರೆ ಅನ್ನೋ ಕಾರಣಕ್ಕೆ ಇವ್ರನ್ನ ಒಂಟಿ ಪಿಶಾಚಿಗಳು ಅನ್ನಕ್ಕಾಗಲ್ಲ. ಯಾಕಂದ್ರೆ, ಒಂದ್ ದೊಡ್ಡ ಕುಟುಂಬದಲ್ಲಿ ಒಬ್ಬರಾಗಿ ಇರೋದಕ್ಕೂ ಒಗ್ಗಿಕೊಳ್ತಾರೆ. ಇವ್ರು ಇನ್ನೊಬ್ರು ಜೊತೆ ಕಾಮನ್ನಾಗಿ ಮಾತಾಡೋ ವಿಷ್ಯನ ಬೇಗ ಕಂಡಿಡ್ಕೊತಾರೆ ಜೊತೆಗೆ ಬೇರೆಯೋರ ಕೆಲ್ಸಗಳ್ಗೂ ಮನ್ನಣೆ ಕೊಡ್ತಾರೆ.

6. ಮೇಲ್ತುಟಿ ಆಕಾರ್ದಲ್ಲಿ ಚೂಪಾಗಿ 'v' ಥರ ಇರೋದು 

beautybymatty.files.wordpress.com

ಈ ಥರ ತುಟಿ ಇರೋ ವ್ಯಕ್ತಿ ಸೆಂಟ್ ಪರ್ಸೆಂಟ್ ಕ್ರಿಯೇಟಿವ್. ಕಲೆ ಅನ್ನೋದು ಅವ್ರ ಬೆರಳ್ ತುದೀವರ್ಗೂ ಹಬ್ಬಿರತ್ತೆ. ಸಾಮಾನ್ಯ ಇವ್ರು ಪ್ರತಿಭಾವಂತ ಕಲಾವಿದ್ರೋ, ಸಂಗೀತಗಾರರೋ ಆಗಿರ್ತಾರೆ. ಬೇರೆಯೋರ್ ಹೆಸರು, ಮುಖ ಇದೆಲ್ಲ ನೆನಪಿಟ್ಕೊಳೋ ವಿಷ್ಯದಲ್ಲಿ ಇವ್ರಿಗೆ ಇವ್ರೇ ಸಾಟಿ. ಇನ್ನೊಂದ್ ಗುಣ ಅಂದ್ರೆ, ತಮಗ್ ಪರಿಚಯ ಇರೋರ್ ಜೊತೆಲೆಲ್ಲಾ ಸಂಪರ್ಕ ಇಟ್ಕೊಂಡಿರ್ತರೆ. ಹಾಗಾಗಿ ಯಾರೂ ಇವ್ರನ್ನ ನೋಡ್ದಾಗ, ಅಪರೂಪಕ್ಕೆ ನೋಡಿದಂಗೆ ಅನ್ಸಲ್ಲ. ಅಷ್ಟೇ ಅಲ್ಲ, ಅವ್ರ ಸುತ್ತಾ ಮುತ್ತಾ ಏನ್ ಆಗ್ತಿದೆ ಅನ್ನೋದ್ರ್ ಬಗ್ಗೆ ಸದಾ ಗಮನ ಇಟ್ಟಿರ್ತಾರೆ. ಇನ್ನು ಇವ್ರಿಗೆ ಎಲ್ರು ಜೊತೆ ಚೆನ್ನಾಗಿ ಬೆರಿಯೋ ಗುಣ ಮತ್ತೆ ತಮ್ಮ ಏಳ್ಗೆಗೋಸ್ಕರ ಒದ್ದಾಡೋ ಗುಣ ಇದೆ. ಅದ್ರಿಂದ ಸಾಕಷ್ಟು ಸಲ ಒಳ್ಳೆದೇ ಆಗತ್ತೆ.

7.ಮೇಲ್ದುಟಿ ಆಕಾರ್ದಲ್ಲಿ ಅರ್ಧವೃತ್ತಾಕಾರದ್ ಥರ ಇರೋದು 

s-media-cache-ak0.pinimg.com

ಈ ಥರ ತುಟಿ ಇರೋರಲ್ಲಿ ಅನುಕಂಪ, ದಯೆ ಮತ್ತೆ ಸೂಕ್ಷ್ಮ ದೃಷ್ಟಿ ಇರತ್ತೆ. ಅದೃಷ್ಟ ಕೈಕೊಟ್ಟಾಗ ಮನಸ್ಸಿಗೆ ತುಂಬಾ ಹಚ್ಚ್ಕೊತಾರೆ. ಆದ್ರೆ ಬೇರೆಯೋರಿಗೆ ಸಹಾಯ ಮಾಡ್ಬೇಕಾದ್ ಸಂದರ್ಭ ಬಂದ್ರೆ ಮಾತ್ರ ಸಮಯ ಇಲ್ದಿದ್ರೂ ಮಾಡ್ಕೊತಿರ. ಇವ್ರಿರೋದೇ ಸುತ್ತಾ ಮುತ್ತಾ ಇರೋರ್ಗೆ, ಅವಶ್ಯಕತೆ ಇರೋರ್ಗೆ ಸಹಾಯ ಮಾಡಕ್ಕೆ ಅಂತಾನೇ ಬಾಳ್ತಿರ. ಇಂಥೋರಿಂದನೇ ಜಗತ್ತು ನಡಿತಿರೋದು ಅಂದ್ರೂ ತಪ್ಪಾಗಲ್ಲ, ಅಷ್ಟು ಒಳ್ಳೆ ಮನಸ್ಸಿನೋರು ಇವ್ರು.

8. ಮೇಲ್ದುಟಿನಲ್ಲಿ ಯಾವ್ ಆಕಾರನೂ ಇಲ್ದೇ ನೇರವಾಗಿರೋದು 

propiercingkits.com

ಇಡೀ ಜಗತ್ನಲ್ಲಿ, ಜವಾಬ್ದಾರಿ ನಿಭಾಯಿಸಕ್ಕೆ ಮತ್ತೆ ನಂಬಿಕೆ ಉಳುಸ್ಕೊಳಕ್ಕೆ ಈ ಥರದ್ ಜನ ಎತ್ತಿದ್ ಕೈ ಅಂತ ಹೇಳ್ಬೋದು. 'ಎಷ್ಟೇ ಬೇಜಾರಾದ್ರೂ, ಅಗೋ ಕೆಲ್ಸ ಆಗ್ಲೇಬೇಕು' ಅನ್ನೊರ್ ಇವ್ರು. ಅಸಾಧ್ಯ ಅನ್ನೋ ಪದ ಅವ್ರ ಡಿಕ್ಷ್ಣರಿನಲ್ಲೇ ಇಲ್ಲ, ಹಾಗೆನೇ ಕೆಲ್ಸ ಮುಗ್ಸಕ್ಕೆ ಕೊಡೋ ಡೆಡ್ ಲೈನ್ಗಳು ಯಾವತ್ತೂ ಚಿಂತೆ ತರಲ್ಲ. ಎಲ್ಲಾನೂ ಅಂದ್ಕೊಂಡಿದ್ ಸಮಯಕ್ಕೆ ಮಾಡಿ ಮುಗುಸ್ತಾರೆ. ತಮ್ ಬಗ್ಗೆ ತಮ್ಗೆ ಗೊತ್ತಿರತ್ತೋ ಇಲ್ವೋ ಆದ್ರೆ ಕಷ್ಟಕಾಲ್ದಲ್ಲಿ ಇವ್ರಿಗಿಂತ ಆಪದ್ಬಾಂಧವ, ನಂಬಿಕಸ್ತ ಇನ್ನೊಬ್ರಿಲ್ಲ ಅಂತ ಇವ್ರ ಬಂಧು ಬಳಗಕ್ಕೆ, ಫ್ರೆಂಡ್ಸ್ಗೆ ಚೆನ್ನಾಗ್ ಗೊತ್ತಿರತ್ತೆ. ಯಾರೂ ಬಂದು, ಇವ್ರ ಹತ್ರ ಸಹಾಯ ಕೇಳ್ಬೇಕು ಅಂತಿಲ್ಲ. ತಾವೇ ಮುಂದಾಳತ್ವ ವಹಿಸ್ಕೊಂಡು, ತಮಗ್ ತೋಚಿದ್ ಪರಿಹಾರ ಹುಡ್ಕಿ, ಸಮಾಜ ಸೇವೆ ಮಾಡೋ ಮನೋಭಾವದೋರು.

9. ಉಬ್ಬಿರೋ ಪುಟ್ಟ ತುಟಿ 

ghk.h-cdn.co

ಈ ಥರದ್ ತುಟಿ ಇರೋ ವ್ಯಕ್ತಿಗಳಲ್ಲಿ ತುಂಬಾನೇ ಹುಡುಗಾಟ ಮತ್ತೆ ತುಂಟತನದ್ ಸ್ವಭಾವ ಇರತ್ತೆ. ಇವ್ರಿಗೆ ಜೀವನ್ದಲ್ಲಿ ತಾವು, ತಮ್ ಸುಖ ಬಿಟ್ರೆ ಬೇರೆ ಯಾವ್ ಯೋಚ್ನೆ ಇರಲ್ಲ. ಈ ಗುಣದಿಂದಾಗಿ, ಇವ್ರು ತಮ್ಮನ್ನ ತಾವೇ ನೋಡ್ಕೊಬೇಕು. ಯಾರೂ ಬರಲ್ಲ. ಮೇಲ್ನೋಟಕ್ಕೆ ಇವ್ರು ಸ್ವಾರ್ಥಿಗಳು ಅನ್ನಿಸ್ತಾರೆ. ಆದ್ರೆ ಹಾಗಲ್ಲ. ಇವ್ರು ಒಳ್ಳೆ ಫ್ರೆಂಡ್ಸ್ ಆಗ್ತರೆ. ಆ ವಿಷ್ಯದಲ್ಲಿ ತುಂಬಾ ಡೆಡಿಕೇಟೆಡ್. ನೆನೆಸ್ಕೊಂಡಿದ್ ತಕ್ಷಣ ಫ್ರೆಂಡ್ಸ್ ಸಹಾಯಕ್ಕೆ ಬರೋ ಜನ ಇವ್ರು. ತಮ್ಮ ಇಷ್ಟನ ಇನ್ನೊಬ್ರು ಮೇಲೆ ಬಲವಂತವಾಗಿ ಹೇರಲ್ಲ. ಆದ್ರೆ ತಮಗೂ ಬೇಜಾರ್ ಆಗ್ದೇಯಿರೋಹಾಗ್ ನೋಡ್ಕೊಳೋ ಜಾಣರು. ಈ ಗುಣನೇ ಸುಮಾರಷ್ಟು ವಿಷ್ಯದಲ್ಲಿ ಅವರ ಕೈಹಿಡಿಯತ್ತೆ.

10. ತುಂಬಾ ತೆಳುವಾಗಿರೋ ಮೇಲ್ದುಟಿ 

pad2.whstatic.com

ಈ ರೀತಿ ತುಟಿ ಇರೋರಲ್ಲಿ, ಯಾರಿಗೂ ಸಾಟಿಯಾಗ್ದೇ ಇರೋ ಮುಂದಾಳತ್ವದ್ ಗುಣ ಇರತ್ತೆ. ಒಂಥರಾ ಇವ್ರ ನರನಾಡಿನಲ್ಲಿ ರಕ್ತದ್ ಬದ್ಲು ಬೆಂಕಿ ಹರೀತಿದ್ಯನೋ ಅನ್ನೋವಷ್ಟರ್ ಮಟ್ಟಿಗೆ. ಇನ್ನೊಬ್ರುನ್ನ ಒಪ್ಸೋ ವಿಷ್ಯದಲ್ಲಿ ತುಂಬಾ ಜಾಣ್ರು ಮತ್ತೆ ತಮ್ಮ ನಿರ್ಧಾರಕ್ಕೆ, ಎಷ್ಟೇ ಕಷ್ಟ ಆದ್ರೂ ಹೇಗ್ ಅಂಟ್ಕೊಂಡಿರ್ಬೇಕು? ಬಿಟ್ಕೊಡ್ಬಾರ್ದು ಅಂತ ತಿಳ್ಕೊಂಡಿರ್ತಾರೆ. ಇವ್ರಿಗೆ, ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ಬೋದು. ಆದ್ರೂ ಇವ್ರು ರೊಮ್ಯಾಂಟಿಕ್ ಸಂಬಂಧಗಳ್ನ ನಿಭಾಯಿಸಕ್ಕೆ ಒದ್ದಾಡ್ತಾರೆ. ಯಾಕಂದ್ರೆ ಸಾಕಷ್ಟು ಸಮಯ ಇಂಥೋರು ಇನ್ನೊಬ್ರು ಜೊತೆ ಇರಕ್ಕಿಂತ, ತಾವೇ ತಮ್ಮತನ ಬಿಟ್ಟು ಬೇರೆಯಾರೋ ಆಗಿರದೇ ಜೀವ್ನದ್ ಗುರಿ ಅಂದ್ಕೊಂಡಿರ್ತಾರೆ.