https://www.indianholiday.com/pictures/hotel/hotelgalleryn/om-beach-resort-5481-1.jpg

ನೀರಿಗೂ ಮನುಷ್ಯನಿಗೂ ಒಂಥರಾ ಅವಿನಾಭಾವ ಸಂಬಂಧ. ನೀರು ಕಂಡಿದ್ದೆ ಮನುಷ್ಯನಿಗೆ ಖುಷಿ ಆಗೋದಂತೂ ಸತ್ಯ.. ಇನ್ನು ಬೇಸಿಗೆ ಕಾಲದಲ್ಲಿ ಸಮುದ್ರದಲ್ಲಿ ಆಡೋದು ಅಂದ್ರಂತೂ ಮನುಷ್ಯಂಗೆ ಹುಚ್ಚೇ ಹಿಡಿದು ಬಿಡುತ್ತೆ ಅನ್ಸುತ್ತೆ. ಪ್ರಶಾಂತವಾದ ಸಮುದ್ರದ ದಡದಲ್ಲಿ ಕೂತ್ಕೊಂಡು, ಸೂರ್ಯಾಸ್ತ ನೋಡೋದು, ಮರಳಲ್ಲಿ ಆಡೋದು, ಬಿಸಿಲಿಗೆ ಮೈ ಒಡ್ಡೋದು ಎಲ್ಲ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಎಂಜಾಯ್ ಮಾಡೇ ಮಾಡತಾರೆ. ಮನುಷ್ಯನ ಈ ಆಸೆಗೆ ಪ್ರಕೃತಿ ಕೂಡ ಒಂದಲ್ಲ ಒಂದು ರೀತಿಲಿ ಸಹಕರಿಸುತ್ತೆ. ಹೇಗೆ ಅಂತೀರಾ? ಪ್ರಪಂಚದ ಬೇರೆ ಬೇರೆ ಕಡೆ ಇರೋ ಸಮುದ್ರ ತೀರಗಳನ್ನ ನೋಡಿ ಗೊತ್ತಾಗುತ್ತೆ. ನೆಮ್ಮದಿ ಅರಸೊ ಮನುಷ್ಯಂಗೆ , ಇದ್ರ ತೀರದಲ್ಲಿ ಕೂತ್ಕೊಂಡಾಗ ಮನಸ್ಸು ಒಂಥರಾ ಶಾಂತ ಆಗೋದಂತೂ ಸತ್ಯ. ಒಂದ್ಸಲ ಈ ಸಮುದ್ರ ತೀರಗಳನ್ನ ಇಲ್ಲಿಂದಾನೆ ಕಣ್ಣುತುಂಬಿಕೊಳ್ಳೋಣ, ಏನಂತೀರಾ?

1 ) ಓಂ ಬೀಚ್,ಗೋಕರ್ಣ,ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ , ಬಹುಳಷ್ಟು ಸಮುದ್ರ ತೀರಗಳಿಗೆ ಹೆಸರಾಗಿದೆ. ಕನ್ನಡದ ಓಂ ಅಕ್ಷರದ ಆಕಾರದಲ್ಲಿರುವ ಈ ಬೀಚ್ ನೋಡಕ್ಕೆ ಪ್ರತಿವರ್ಷ ದೇಶ ವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಬರ್ತಾರೆ.

indianholiday.com

2 ) ಡೈನಿ ಬೀಚ್, ಕೀನ್ಯಾ 

ಇದು ಇರೋದು, ಕೀನ್ಯಾದ ಎರಡನೇ ದೊಡ್ಡ ನಗರವಾದ ಮೋಮ್ಬಾಸದಲ್ಲಿ. 10 ಕಿ.ಮೀ ಅಷ್ಟು ಉದ್ದವಾಗಿರುವ ಈ ಸಮುದ್ರ ತೀರ, ಅಚ್ಚಬಿಳಿ ಮರಳಿನ ಜೊತೆ ನೀಲಿಯಾಗಿ, ಬೆಚ್ಚಗಿರುವ ನೀರನ್ನ ಹೊಂದಿದೆ. ವಿಶ್ವದ ಎಲ್ಲ ಕಡೆಯ ಪ್ರವಾಸಿಗರನ್ನ ಈ ಸಮುದ್ರ ತೀರಾ ಆಕರ್ಷಿಸುತ್ತೆ .

cdn4.list25.com

3) ಲಾಂಗ್ ಬೀಚ್, ಫಿಲಿಪೈನ್ಸ್

ಪಾಲ್ವಾನ್ ದ್ವೀಪದ ಸುತ್ತ ಇರೋ ಈ ಸಮುದ್ರ ತೀರಾ, ಫಿಲಿಪೈನ್ಸ್ನಲ್ಲಿರೋ ಅತ್ಯಂತ ಉದ್ದವಾದ ಸಮುದ್ರ ತೀರ. ಇದು ಸುಮಾರು 14  ಕಿ.ಮೀ ಉದ್ದ ಇದೆ. ಜೊತೆ ಬಿಳಿಯದಾಗಿ , ಮೃದವಾದ ಮರಳನ್ನ ಹೊಂದಿದೆ. ಸಮುದ್ರ ತೀರದಲ್ಲಿರೋ ತಾಳೆ ಮರಗಳು ಈ ಸಮುದ್ರದ ಸೌಂದರ್ಯವನ್ನ ಇನ್ನೂ ಹೆಚ್ಚು ಮಾಡಿವೆ.

cdn4.list25.com

4) ವಸಂಗ ಬೀಚ್ , ಕೆನಡಾ 

14 ಕಿಮಿ ಅಷ್ಟು ಉದ್ದ ಇರೋ ವಸಂಗ ಬೀಚ್, ಕೆನಡಾದ ಒಂಟಾರಿಯೋನಲ್ಲಿ ಇದೆ . ಇದು ಪ್ರಪಂಚಾದಲ್ಲೇ ಅತ್ಯಂತ ಉದ್ದವಾದ ಸಿಹಿನೀರಿನ ಸಮುದ್ರ. ಪ್ರತಿವರ್ಷ 2  ಮಿಲಿಯನ್ ಅಷ್ಟು ಜನರು ಈ ಬೀಚ್ ನೋಡಕ್ಕೆ ಬರ್ತಾರೆ ಅಂತೆ.

cdn4.list25.com

5) ಕ್ಲಿಫ್ಟೋನ್ ಬೀಚ್ , ಪಾಕಿಸ್ತಾನ್ 

ಪಾಕಿಸ್ತಾನದ ಕರಾಚಿಯಲ್ಲಿರೋ ಈ ಬೀಚ್, ತನ್ನ ಸೌಂದರ್ಯ ಒಂದೇ ಅಲ್ಲದೆ ಸುತ್ತಲೂ ಇರೋ ಅಮ್ಯೂಸೀಮೆಂಟ್ ಪಾರ್ಕ್ ಹಾಗೆ ಕೆಲವೊಂದು ಸಾಹಸ ಕ್ರೀಡ್ಹೆಗಳಿಗೆ ಹೆಸರಾಗಿದೆ.

cdn4.list25.com

6) ಕರಾಲೇಜೋ ಬೀಚ್ , ಸ್ಪೇನ್ 

ಕ್ಯಾನರಿ ದ್ವೀಪದ ಸುತ್ತ ಇರೋ ಈ ಬೀಚ್, ಸ್ಪೇನ್ನ ಅತ್ಯಂತ ಸುಂದರವಾದ ಮತ್ತು ಉದ್ದವಾದ ಸಮುದ್ರ ತೀರ. ಈಜುಗಾರರಿಗೆ ಹೇಳಿ ಮಾಡಿಸಿದಂತಹ ಸಮುದ್ರ ತೀರ ಇದು.

cdn4.list25.com

7) ಪತಾರಾ ಬೀಚ್ , ಟರ್ಕಿ 

ಟರ್ಕಿಯ ಅತ್ಯಂತ ಸುಂದರವಾದ ಸಮುದ್ರ ಇದಾಗಿದ್ದು, ತುಂಬಾ ಮೃದುವಾದ ಮರಳನ್ನ ಹೊಂದಿದೆ. ಈ ಸಮುದ್ರ ತೀರದಲ್ಲಿ ಆಮೆಗಳು ಮೊಟ್ಟೆ ಇಡೋದ್ರಿಂದ ಈ ಸಮುದ್ರ ತೀರವನ್ನ ಸೂಕ್ಷ್ಮವಾದ ಪ್ರದೇಶ ಅಂತ ಗುರುತಿಸಿದ್ದಾರೆ.

cdn4.list25.com

8) ಕೋಸ್ಟಾ ದ ಕ್ಯಾಪೆರಿಕಾ, ಪೋರ್ಚುಗಲ್ 

30 ಕಿ.ಮೀ ಅಷ್ಟು ಉದ್ದ ಇರುವಂತಹ ಈ ಸಮುದ್ರ ತೀರ, ಪೋರ್ಚುಗಲ್ ನ ಅತ್ಯಂತ ಸುಂದರವಾದ ಸಮುದ್ರ.  ಮೊದ್ಲು ಈ ಸಮುದ್ರದಲ್ಲಿ ಮೀನುಗಾರಿಕೆ ಜಾಸ್ತಿ ನಡೀತಾ ಇತ್ತು.

cdn4.list25.com

9) ಸ್ಟಾಕ್ಟನ್ ಬೀಚ್, ಆಸ್ಟ್ರೇಲಿಯಾ.

ಆಸ್ಟ್ರೇಲಿಯಾದ ಈ ಸಮುದ್ರ ತೀರ, 32  ಕಿ. ಮೀ ಅಷ್ಟು ಉದ್ದವಾಗಿದ್ದು, ಅನೇಕ ರೀತಿಯ ಜಲಕ್ರೀಡೆಗಳಿಗೆ ಹೆಸರಾಗಿದೆ.

cdn4.list25.com

10 ) ಮುಇಝೆನ್ಬರ್ಗ್ ಬೀಚ್, ಸೌತ್ ಆಫ್ರಿಕಾ 

ಸೌತ್ ಆಫ್ರಿಕಾದಲ್ಲಿರೋ ಬಹಳ ಪ್ರಸಿದ್ಧವಾದ ಸಮುದ್ರ ತೀರ ಇದು. ಅತ್ಯಂತ ಸುಂದರವಾಗಿದ್ದು , ಮೃದುವಾದ ಮರಳನ್ನ ಹೊಂದಿದೆ. ಸರ್ಫಿಂಗ್ ಕ್ರೀಡೆ ಇದೆ ಸಮುದ್ರ ತೀರದಲ್ಲಿ ಮೊದ್ಲು ಶುರು ಆಗಿದ್ದು ಅಂತೆ.

cdn4.list25.com