http://media.istockphoto.com/photos/two-indian-business-women-giving-each-other-a-highfive-picture-id452559651?k=6&m=452559651&s=612x612&w=0&h=hCOPfFDc1vFIpxAR_EslEhicfUFlY0WwqqiJ_i-HnNM=

ಕಾಲೇಜಲ್ಲಿ ಸಿಗೋ ಹಾಗೆ ಒಳ್ಳೆ ಸ್ನೇಹಿತರು ಆಮೇಲೆ ಜೀವನದಲ್ಲಿ ಸಿಗಲ್ಲ ಅನ್ನೋ ಮಾತಿದೆ. ಆಫೀಸಲ್ಲಿ ಸಿಗೋರೆಲ್ಲಾ ನಮ್ಮ ಜೊತೆ ಸ್ಪರ್ಧೆಗೆ ನಿಲ್ಲೋರೆ, ಜೊತೇಲಿದ್ದರೂ ನಂಬೋದು ಕಷ್ಟ. ಜೀವನದಲ್ಲಿ ಎಲ್ಲರಿಗೂ ಅವರ ಕೆರಿಯರ್ ಬಗ್ಗೆ ಚಿಂತೆ. ಹೀಗೆಲ್ಲಾ ನಗೆ ಯೋಚನೆಗಳು ಹಾದುಹೋಗತ್ವೆ. ಆದ್ರೆ ಅದೃಷ್ಟಕ್ಕೆ ಆಫೀಸಲ್ಲಿ ಕೂಡ ನಮ್ ಮನಸ್ಸಿಗೆ ಹೊಂದ್ಕೊಳ್ಳೊ ವ್ಯಕ್ತಿಗಳು ಸಿಕ್ತಾರೆ. ಒಳ್ಳೆ ಸ್ನೇಹಿತರಾಗ್ತಾರೆ. ಜೀವನ ಸಲೀಸಾಗತ್ತೆ. ಇನ್ನೂ ಬೇಕಾದಷ್ಟು ಲಾಭ ಸಿಗತ್ತೆ. ಇಲ್ಲಿ ಅಂತೆಕಂತೆ ತಂಡ ನಿಮಗೋಸ್ಕರ ಒಂದು 9 ಪಟ್ಟಿ ಮಾಡಿದ್ದೀವಿ. ಓದಿ ನಿಮ್ಗೂ ಖುಷಿಯಾದ್ರೆ ನಮ್ಗೂ ಖುಷಿ.

1. ನಿಮ್ಮ ಸಾಧನೆಯ ಗೆಲುವನ್ನ ಅವರ ಜೊತೆ ಮುಕ್ತವಾಗಿ ಹಂಚ್ಕೊಬೋದು

ಕೆಲಸದಲ್ಲಿ ನೀವೇನಾದ್ರೂ ಹೆಚ್ಚಾಗಿ ಸಾಧಿಸಿದಾಗ ಸಾಕಷ್ಟು ಜನರ ಕಣ್ಣಿಗೆ ಬಿದ್ದಿರ್ತೀರಿ. ಅಂಥಾ ಜನರ ಪೈಕಿ ಮೂರು ತರದ ವ್ಯಕ್ತಿಗಳು ಸಿಗ್ತಾರೆ. ಮೊದಲ್ನೆಯೋರು ನಿಮಗೆ ಶಭಾಷ್ ಹೇಳಿ ತಮ್ಮ ಕೆಲಸಕ್ಕೆ ಹಿಂತಿರುಗೋರು. ಎರಡನೆಯೋರು ಏನೂ ಮಾತಾಡದೆ ಹೊಟ್ಟೆಕಿಚ್ಚು ಪಡೋರು. ಮೂರನೇಯೋರು ನಿಮ್ಮ ಸಾಧನೆಗೆ ಮನಃ ಪೂರ್ತಿಯಾಗಿ ಖುಷಿ ಪಡೋರು- ನಿಮ್ ಜೊತೆ ಜೊತೆಗೆ ಅವರು ಸಾಧಿಸೋರು.

ಮೂಲ

2. ಏನೂ ಅಳುಕಿಲ್ಲದೇ ನಿಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತಾಡ್ಬೋದು

ಕೆಲವರಿಗೆ ತಮ್ಮ ಮನೆ ವಿಷಯಾನ ಆಫೀಸ್ನಲ್ಲಿ ಮಾತಾಡಕ್ಕೆ ಇಷ್ಟ ಪಡಲ್ಲ. ಒಂದು ತರ ಒಳ್ಳೇದೇ. ಹಾಗಂತ ಸರಿಯಾಗಿರೋರು ಸಿಕ್ರೆ ಮಾತಾಡ್ಬಾರ್ದು ಅಂತೇನಿಲ್ಲ. ಸ್ವಲ್ಪ ಅರಾಮ್ ಟೈಮಿದ್ದಾಗ ಸಮಯ ಸಂದರ್ಭ ನೋಡಿ, ವ್ಯಕ್ತಿ ಮೂಡ್ ನೋಡಿ ಮಾತಾಡ್ಬೋದು. ಅವರು ನಿಮ್ಮ ಭಾವನೆಗಳಿಗೆ ಸರಿಹೊಂದೋ ವ್ಯಕ್ತಿಯಾದ್ರೆ ಮಾತಾಡೋದ್ರಲ್ಲಿ ತಪ್ಪೇನಿಲ್ಲ. ಮನಸ್ಸು ಹಗೂರವಾಗತ್ತೆ. ಕೆಲ್ಸದ ಕಡೆ ಇನ್ನೂ ನಿಗಾ ಹೆಚ್ಚಾಗತ್ತೆ.

3. ಕೆಲಸದಲ್ಲಾಗೋ ಕಸಿವಿಸಿ ಬಗ್ಗೆ ಸಲೀಸಾಗಿ ಮಾತಾಡ್ಬೋದು

ಆಫೀಸಿನ ತೊಂದರೆಗಳನ್ನ ಹೊರಗಡೆ ಸ್ನೇಹಿತರ ಹತ್ತಿರ ಹಂಚಿಕೊಂಡರೆ ಅವರಿಗೆ ಸಮಾಧಾನ ಮಾಡೋಕೆ ಮಾತ್ರ ಸಾಧ್ಯ. ಆದರೆ ಆಫೀಸ್ಸಲ್ಲಿ ಜೊತೇಲೆ ಸ್ನೇಹಿತನಿದ್ದಾಗ ಅವನಿಗೆ ನಿಜವಾಗಲೂ ಮನಸ್ಸಿನ ನೋವು ಅರ್ಥ ಆಗುತ್ತೆ.

ಮೂಲ

4. ಬೆಳಗೆದ್ದು ಆಫೀಸಿಗೆ ಹೋಗೋಕೆ ಖುಷಿ ಇರತ್ತೆ

ಆಫೀಸಲ್ಲಿ ನಿಮ್ಮನ್ನ ನಗುಮೊಗದಿಂದ ಸ್ವಾಗತಿಸೋರು ಸಿಗ್ತಾರೆ, ನಿಮ್ಮ ಮನೆಯ ಬಗ್ಗೆ ಮನೆಯವರ ಬಗ್ಗೆ ವಿಚಾರಿಸೋರಿರುತ್ತಾರೆ. ಅದೇ ಖುಷಿ ಅಲ್ವಾ?

5. ಕೆಲಸದಲ್ಲಿ ತೊಂದ್ರೆ ಅದಾಗ ನಿಮ್ಮನ್ನ ವಿಚಾರಿಸ್ಕೊತಾರೆ

ಎಲ್ಲರಿಗೂ ತಮ್ಮದೇ ಜೀವನ ಇರುತ್ತೆ. ನೀವು ಅತ್ತಾಗ ಸಮಾಧಾನ ಮಾಡೋ ಸಮಯ ಯಾರಿಗಿರುತ್ತೆ ಹೇಳಿ? ಆಫೀಸಲ್ಲಂತೂ ಇದೆಲ್ಲ ಇರೋದೇ ಇಲ್ಲ. ಅದೇ ಸ್ನೇಹಿತನೊಬ್ಬ ತನ್ನ ಜಂಜಾಟಗಳನ್ನ ಪಕ್ಕಕ್ಕಿಟ್ಟು ನೀವು ಬೇಸರವಾಗಿದ್ದಾಗ ಬಂದು ಸುಮ್ನೆ ಒಂದೆರಡು ಮಾತಾಡಿದ್ರೆ ಹಗುರ ಆಗುತ್ತೆ.

ಮೂಲ

6. ಕಷ್ಟದ ಸಂದರ್ಭಗಳಲ್ಲಿ ನಿಮ್ಮ ಬೆಂಬಲಕ್ಕೆ ಇರ್ತಾರೆ

ನಿಮಗೇನಾದರು ತೊಂದರೆ ಆದರೆ ನೀವೊಬ್ಬರೇ ಇಲ್ಲ. ನಿಮ್ಮ ಸ್ನೇಹಿತ ಕೂಡ ಇರ್ತಾನೆ. ಯಾವುದೇ ಸಂದರ್ಭವನ್ನ ಎದುರಿಸೋಕೆ ಸಾಥ್ ನೀಡ್ತಾರೆ.

7. ನೀವಿಲ್ಲದಿದ್ದ್ರೂ ಪರ್ವಾಗಿಲ್ಲ ಅವರೇ ನಿಮ್ಮ ಕೆಲಸವನ್ನ ಅಚ್ಚುಕಟ್ಟಾಗಿ‌ ಮಾಡಿರ್ತಾರೆ

ಇದಕ್ಕಿಂತ ಬೇರೆ ಬೇಕಿಲ್ಲ. ನಿಮ್ಮೆಲ್ಲಾ ಮುಖ್ಯ ವಿಚಾರಗಳನ್ನ ಹಾಗೆ ಗುಪ್ತ ಮಾಹಿತಿಗಳನ್ನ ಹಂಚಿಕೊಳ್ಳೊಕೆ ಇವರಿರ್ತಾರೆ. ಇವರ ಹತ್ರ ಮುಚ್ಚು ಮರೆ ಇಲ್ದೇ ಮಾತಾಡ್ಬೋದು. ಏನೋ ಒಂದು ದಿನ ಆಫೀಸಿಗೆ ಹೋಗಕ್ಕೆ ಆಗ್ಲಿಲ್ಲ ಆದ್ರೂ ಮುಖ್ಯ ಕೆಲಸಗಳು ನಡೀಲೇಬೇಕು ಅಂದಾಗ ನಿಮ್ಗೊಬ್ಬ ನಂಬಿಕಸ್ಥ ಇರ್ತಾನೆ.

ಮೂಲ

8. ರಜಾ ದಿನಾನೂ ಇವರ ಜೊತೆ ಕಾಲ ಕಳಿಯಕ್ಕೆ ಇಷ್ಟ ಆಗತ್ತೆ

ಆಫೀಸಿನ ಸಮಯ ಬಿಟ್ಟು ಬೇರೆ ಸಮಯದಲ್ಲಿ ಸಹುದ್ಯೋಗಿಗಳ ಜೊತೆ ಇರೋಕೆ ಯಾರಿಗೂ ಅಷ್ಟು ಇಷ್ಟ ಆಗಲ್ಲ. ಆದರೆ ನಿಮಗೆ ಸಮಯ ಕಳೆಯೋಕೆ ಇಷ್ಟ ಆಗೋ ಸ್ನೇಹಿತರಿದ್ದರೆ ಸಿನಿಮ, ಶಾಪಿಂಗ್, ವೀಕೆಂಡ್ ಅಂತ ಸಮಯ ಕಳೀಬಹುದು.

9. ಯಾವುದೇ ಸಂಕೋಚ ಇಲ್ದೇ ಅವರೂ ಅಭಿಪ್ರಾಯ ಕೇಳ್ತಾರೆ

ನಿಮ್ಮ ಯಾವುದೇ ವಿಚಾರದ ಬಗ್ಗೆ ನಿಮಗೇನನಿಸುತ್ತೋ ಅನ್ನೋ ಯೋಚನೆಯಿಲ್ಲದೇ ತಮ್ಮ ಭಾವನೆಯನ್ನ ಆರಾಮಾಗಿ ವ್ಯಕ್ತಪಡಿಸೋರಿರ್ತಾರೆ. ಅದು ವೈಯ್ಯಕ್ತಿಕವಾಗಿರ್ಲಿ ಅಥವಾ ಕೆಲಸಕ್ಕೆ ಸಂಬಂಧ ಪಟ್ಟಿದ್ದಾಗ್ಲಿ. ಈ ಪ್ರಾಮಾಣಿಕ ಅಭಿಪ್ರಾಯ ನಮ್ಗೆ ತುಂಬ ಮುಖ್ಯ.

ಮೂಲ