https://cairofood.id/wp-content/uploads/coffee-wallpaper-1306-1433-hd-wallpapers-775x450.jpg

ಕಾಫಿ, ಟೀ ಎರಡು ಕುಡಿದೆರೋರು ತುಂಬಾ ಕಮ್ಮಿ. ಪಾಪ ಅವ್ರ್ ಗೋಳು ಹೇಳಂಗಿಲ್ಲ ಕೇಳಂಗಿಲ್ಲ. ಆದ್ರೆ ನಾವು ಅಂತೆಕಂತೆ ಅವ್ರು  ಹಂಗೆಲ್ಲಾ ಬೇಧ ಭಾವ ಮಾಡಲ್ಲ. ಕಾಫಿ ಟೀ ಕುಡಿದೆರೋರ ಗೋಳನ್ನು ಕೇಳ್ತೀವಿ. ಹಾಗಂತ ಅವ್ರೇನ್ ಕಮ್ಮಿ ಜನ ಇಲ್ಲ. ಅಂತವರ ಗೋಳನ್ನ ನಾವಿವತ್ತು ಪಟ್ಟಿ ಮಾಡಿದೀವಿ. ನೀವು ಹಿಂಗೇನ? ಒಂದು ರೌಂಡ್  ನೋಡಿ ಬನ್ನಿ 

1. ಮೊದಲನೇ ಸತಿ ಯಾರನ್ನಾದ್ರೂ ಭೇಟಿ ಆದಾಗ, ಅವ್ರು ಕಾಫಿ ನಾ ಟೀನಾ? ಅಂತ ಕೇಳಿದಾಗ ಆಗೋ ಆಭಾಸ, ಮ್ಮ್ಮ್… ಇಲ್ಲ ನಾ ಎರಡನ್ನು ಕುಡಿಯಲ್ಲ 

ste.india.com

2. ನೀವ್ ಕಾಫಿ ಟೀ ಎರಡನ್ನು ಕುಡಿಯಲ್ಲ, ಹಾಗಾದ್ರೆ ದುಡ್ಡೆಷ್ಟು ಉಳಿಸಿದೀರಾ ಅಂತ ಜನ ಕೇಳೋದು ನಿಮಗೆ ಮಾಮೂಲಾಗಿರತ್ತೆ 

3. ಯಾರ್ದಾದ್ರೂ ಮನೆಗ್ ಹೋದಾಗ, ಕಾಫಿಗೂ ಮುಂಚೆ ಸೀದಾ ಹೇಗಪ್ಪಾ ತಿಂಡಿ ಕೇಳೋದು ಅಂತ ಇರುಸು ಮುರುಸಾಗತ್ತೆ 

vegrecipesofindia.com

4. ಮನೆಗೆ ಅತಿಥಿಗಳು ಬಂದಾಗ ಅವರಿಗೆ ಕಾಫಿ-ಟೀ ಬೇಕಾ ಅಂತ ವಿಚಾರಿಸೋದು ಮರೆತೋಗೋದು ನಿಮಗೆ ಹೊಸ ವಿಚಾರ ಅಲ್ಲ 

5. ಯಾರಾದರೂ ಕಾಫಿ ಮಗ್ ನಿಮಗೆ ಗಿಫ್ಟ್ ಕೊಟ್ಟಾಗ ನಿಮಗೆ ಇಷ್ಟ ಆಗಲ್ಲ 

artsonia.com

6. ಯಾರಾದ್ರೂ ಸಡನ್ನಾಗಿ ಅತಿಥಿಗಳು ಮನೆಗೆ ಬಂದಾಗ ನಿಮ್ಮ ಮನಸಿನ ಮೊದಲ ಮಾತು "ದೇವ್ರೇ ಚೂರಾದ್ರೂ ಕಾಫಿನೋ ಟೀನೋ ಉಳಿದಿರಲಪ್ಪಾ"

7. ನಿಮ್ಮ ಅಡುಗೆ ಮನೆಗೆ ಬಂದ ಅತಿಥಿಗಳು ಇದೇನು ಕಾಫಿಪುಡಿ ಡಬ್ಬಾನೇ ಇಲ್ಲ ಅನ್ನೋದು ನಿಮಗೆ ಮಾಮೂಲಿಯಾಗಿದೆ 

viacom18-res.cloudinary.com

8. ಟೀನು ಕುಡಿಯಲ್ಲ ಕಾಫೀನೂ ಕುಡಿಯಲ್ಲ ಹಾಗಾದ್ರೆ ಏನು ಹಾರ್ಡ್ ಡ್ರಿಂಕ್ ಕುಡಿತೀರಾ? ಈ ಪ್ರಶ್ನೆ ಕೂಡ ನಿಮಗೆ ತಪ್ಪಿದ್ದಲ್ಲ 

9. ನಿಮಗೆ ಕಾಫಿ ಮತ್ತು ಟೀಯ ಬೇರೆ ಬೇರೆ ಬ್ರಾಂಡ್, ಫ್ಲೇವರ್ ಇದರ ಬಗ್ಗೆ ಎಲ್ಲ ಗೊತ್ತಿಲ್ಲ, ನಿಮಗೆ ಇವುಗಳ ಅಂಗಡಿಗೆ ಹೋಗೋದು ಅಂದ್ರೇನೆ ಬೇಜಾರು 

hola.com

10. ನಿಮಗೆ ಕಾಫಿ ಅಥವಾ ಟೀ ಬೇಕು! ಬರಿ ಬಿಸ್ಕತ್ತು ಇಲ್ಲ ರಸ್ಕನ್ನ ಅದ್ರಲ್ಲಿ ಅದ್ದಕ್ಕೆ, ಆಮೇಲೆ ಆ ಕಾಫಿನ ಏನ್ ಮಾಡೋದು ಅಂತ ನಿಮ್ಮ ಗೊಂದಲ 

11. ವೆರೈಟಿ ವೆರೈಟಿ ಕಾಫಿ ಮಗ್ ನೋಡಿದಾಗ ಬೇಕು ಅಂತ ಅನ್ನಿಸತ್ತೆ, ಆದ್ರೆ ಅದನ್ನ ಏನ್ ಮಾಡೋದು ಅಂತ ಸುಮ್ಮನಾಗ್ತೀರ

cdn.coolstuff.com

12. ಆಫೀಸಲ್ಲಿ ಜನ ನಿಮಗೆ "ನಿಂಗೆ ಟೀ ಬ್ರೇಕ್ ಅಥವಾ ಕಾಫಿ ಬ್ರೇಕ್ ಯಾಕ್ ಬೇಕು" ಅಂತ ಕೇಳೋದು ತಪ್ಪಿದ್ದಲ್ಲ 

13. ಹುಡುಗಿ ಜೊತೆ ಡೇಟಿಂಗ್ ಹೋದಾಗ ಕಷ್ಟ ಪಟ್ಕೊಂಡು ಕಾಫಿ ಕುಡುದ್ರು ಮುಖದಮೇಲೆ ನಗು ಇಟ್ಕೋಳೋ ನಿಮ್ಮ ಪಾಡು ಯಾರಿಗೂ ಬೇಡ 

ak4.picdn.net

14. ನೀವು ಟೀ ಅಥವಾ ಕಾಫಿ ಮಾಡಿಕೊಟ್ಟಾಗ ಬೇರೆಯವರು ಅದರ ರುಚೀನ ತುಂಬಾ ಹೊಗಳುತ್ತಾರೆ, ಸಕ್ಕತ್ತಾಗಿದೆ ಅಂತಾರೆ. ನೀವು ಮನ್ಸಲ್ಲೇ ಅನ್ಕೋತೀರಾ "ಹೌದಾ ವಾವ್ ಏನ್ ಮ್ಯಾಜಿಕ್ ಗುರು"

15. ಅಪರೂಪಕ್ಕೆ ಕಾಫಿ ಇಲ್ಲ ಟೀ ಬೇಕು ಅಂತ ನೀವು ಹೇಳಿದಾಗ ಬೇರೆಯವರು ಈ ಮಾತನ್ನ ಕೇಳೇ ಕೇಳ್ತಾರೆ "ಹುಷಾರಾಗಿದೀಯಾ ಇಲ್ಲ ಏನಾದ್ರು ಪ್ರಾಬ್ಲಮ್ಮಾ?"

images.indianexpress.com

ನೀವು ಕಾಫಿ – ಟೀ ಎರಡೂ ಕುಡಿಯಲ್ಲ ಅಂದ್ರೆ ಇವೆಲ್ಲ ನಿಮ್ಮ ಅನುಭವಕ್ಕೆ ಬಂದೆ ಬಂದಿರತ್ತೆ…