“ಜಡ್ಜಮ್ಮ ನಾನವನಲ್ಲ , ನಾನವನಲ್ಲ , ನಾನವನಲ್ಲ”

ಇದ್ನ ಎಲ್ಲೋ ಕೇಳ್ದಾಗಿದೆಯಲ್ಲ ಅಂತ ತುಂಬಾ ತಲೆಕೆರ್ಕೊಬೇಡಿ. ಉಪೇಂದ್ರ ಅಭಿನಯಿಸಿರೋ ಬುದ್ದಿವಂತ ಸಿನೆಮಾದ ಡಯ್ಲಾಗ್. ಇದಕ್ಕೂ ನಮ್ ವಿಷ್ಯಕ್ಕೂ ಎನ್ ಸಂಬಂಧ ಅಂದ್ರಾ ? ಹೇಗೆ ತನ್ನ ಬುದ್ದಿಶಕ್ತಿಯಿಂದ ಇಡೀ ಚಿತ್ರದಲ್ಲಿ ಎಲ್ಲಾ ಸಂಬಂಧಗಳನ್ನ ಮತ್ತೆ ಪುನ: ಒಂದ್ ಮಾಡ್ತಾನೋ ಹಾಗೇ ನಮ್ಮಲ್ಲೂ ಕೂಡಾ ಪಂಚಾಯಿತಿ ಅನ್ನೋ ಒಂದು ವ್ಯವಸ್ಥೆ ಇತ್ತು. ಊರಲ್ಲಿ ಎನೇ ಒಂದು ಸಮಸ್ಯೆಯಾದ್ರೂ ಒಂದೈದು ಗಣ್ಯ ಹಾಗೂ ಬುದ್ದಿವಂತರು ಅಂತ ಅನ್ಸಕೊಂಡಿರೋರು ಸಮಸ್ಯೆಗೆ ಪರಿಹಾರ ಕೊಡ್ತಾ ಇದ್ರು. ಈ ಬುದ್ದಿವಂತಿಕೆ ಅವ್ರಿಗೇ ಮಾತ್ರ ಸೀಮೀತಾನಾ ? ಇಲ್ಲಾ ಎಲ್ರಿಗೂ ಇದ್ರೂ ಅದ್ನ ನಾವುಗಳು ಬಳ್ಸೋದೇ ಇಲ್ವಾ ? ಯಾರ್ ಯಾರ್ಗೆ ಎಷ್ಟು ಬುದ್ದಿಯಿದೆ ? ಯಾರ್ ಯಾರನ್ನ್ ಬುದ್ದಿವಂತರಂತ ಕರೆಯೋದು ? ನಾನ್ ಬುದ್ದಿವಂತನಾ ಇಲ್ಲಾ ದಡ್ಡಾನಾ ? ಇದೆಲ್ಲಾ ಪ್ರಶ್ನೆಗಳಿಗೆ ವಿಜ್ನಾನಿಗಳು ಅನೇಕ ಪ್ರಯೋಗ ಮಾಡಿ ಒಂದಿಷ್ಟು ವಿಷ್ಯಗಳನ್ನ ಇಲ್ಲಿ ಕೊಟ್ಟಿದ್ದಾರೆ ನೋಡಿ. ನೀವು ಒಂದ್ಸಲ ನೋಡ್ಬಿಡಿ ಬುದ್ದಿವಂತ ಹೌದಾ ಅಲ್ವಾ ಅಂತ

  1. ಬುದ್ದಿವಂತರು ಗುಂಪು ಕಟ್ಟಿಕೊಂಡು ಹರಟೆ ಹೊಡ್ಕಂಡು ಸಮಯಾನಾ ಹಾಳ ಮಾಡಲ್ಲ

ನಾರ್ಮನ್ ಲೀ ಮತ್ತೆ ಸ್ಯಾಂಟೋಶಿ ಕನಜಾವ್ ಈ ಇಬ್ರು ವಿಜ್ನಾನಿಗಳು ತುಂಬಾನೇ ತಲೆಕೆರ್ಕೊಂಡು ಬುದ್ದಿವಂತರಂದ್ರೆ ಯಾರು ಅನ್ನೋದ್ನ ಕಂಡುಹಿಡಿದಿದ್ದಾರೆ. ಇವ್ರ ಪ್ರಕಾರ ಬುದ್ದಿವಂತರು ಗುಂಪುಕಟ್ಟಿಕೊಂಡು ಹರಟೆ ಹೊಡೀತಾ ತಮ್ ಸಮಯಾನಾ ಇವ್ರು ಹಾಳು ಮಾಡಲ್ಲ . ಸಮಯ ಸಿಕ್ಕಾಗೆಲ್ಲ ಇವ್ರು ಒಬ್ರೇ ಇರ್ತಾರೆ. ಒಬ್ರೇ ಇದ್ದಾಗ ಜೋರಾಗಿ ಮಾತಾಡ್ತಾ ಇರ್ತಾರೆ. ಒಬ್ರೇ ಇದ್ದಾಗ ಮಾತಾಡೋದು ಅತೀ ಬುದ್ದಿವಂತರ ಲಕ್ಷಣ.

2. ಚಿಕ್ಕ ವಯಸ್ಸಲ್ಲಿ ಒದೋದನ್ನ ಬೇಗ ಕಲಿತಿದ್ರೆ ಬುದ್ದಿವಂತರಾಗೋದು ಗ್ಯಾರಂಟಿ

ಇಂಗ್ಲೆಂಡ್ ವಿಜ್ನಾನಿಗಳಾದ ಸ್ಟುವರ್ಟ್ ಜೆ ರಿಚಿ, ಥಿಮೋಥಿ ಸಿ , ಬೇಟ್ಸ್ , ರಾಬರ್ಟ್ ಪ್ಲೋಮಿನವರ ಪ್ರಕಾರ ಚಿಕ್ಕವರಿರೋವಾಗ ನಾವು ಒದೋದು ಬರೆಯೋದನ್ನ ಬೇಗ ಕಲಿತರೆ ಬುದ್ದಿವಂತರಾಗೋದ್ರಲ್ಲಿ ಅನುಮಾನಾನೇ ಇಲ್ಲಂತೆ. ಇದ್ರಿಂದ ನಿಮ್ಗೆ ಒದೋ ಗೀಳು ಹಚ್ಕೊಳ್ಳತ್ತೆ. ಜ್ನಾನ ವೃದ್ಧಿಯಾಗ್ಬೇಕಂದ್ರೆ ಒದ್ಲೇ ಬೇಕಲ್ವಾ ?

3.  ತಂದೆ ತಾಯಿಗೆ ಹುಟ್ಟೋ ಮಕ್ಕಳ ಪೈಕಿ ಚಿಕ್ಕವರಿಗೆ ದೊಡ್ಡವರಿಗಿಂತ ಜಾಸ್ತೀನೇ ಐ ಕ್ಯೂ ಇರತ್ತಂತೆ

ಎಡಿನ್ ಬರ್ಗ್ ವಿಶ್ವವಿದ್ಯಾಲಯದ ವಿಜ್ನಾನಿಗಳ ಪ್ರಕಾರ ತಂದೆ ತಾಯಿಗೆ ಹುಟ್ಟೋ ಮಕ್ಕಳ ಪೈಕಿ ಚಿಕ್ಕವರಿಗೆ ದೊಡ್ಡವರಿಗಿಂತ ಜಾಸ್ತೀನೇ ಐ ಕ್ಯೂ ಇರತ್ತಂತೆ. ಉದಾಹರಣೆಗೆ ದೊಡ್ಡವರಿಗೆ 130 ಇದ್ರೇ ಚಿಕ್ಕವರಿಗೆ 133 ಇರತ್ತಂತೆ. ನೀವು ನಿಮ್ ತಂದೆ ತಾಯಿಯರಿಗೆ ಚಿಕ್ಕ ಮಗುವಾಗಿದ್ರೆ ಬುದ್ದಿವಂತಿಕೆಯನ್ನೋದು ಹುಟ್ಟಿಂದಾನೇ ಬಂದಿರತ್ತೆ.

4. ಯಾರು ಎತ್ತರವಿರುತ್ತಾರೋ ಅವ್ರು ತುಂಬಾನೇ ಬುದ್ದಿವಂತರಾಗಿರ್ತಾರಂತೆ

ಅನ್ನೇ ಕೇಸ್ ಮತ್ತೆ ಕ್ರಿಶ್ಚಿಯನ್ ಪಾಕ್ಸೇನ್ ಅನ್ನೋ ಈ ಇಬ್ಬರೂ ವಿಜ್ನಾನಿಗಳು ಪ್ರಿನ್ಸಟ್ನ್ ಅನ್ನೋ ಅಧ್ಯಯನದ ಮೂಲಕ ಯಾರು ಎತ್ತರವಿರುತ್ತಾರೋ ಅವ್ರು ತುಂಬಾನೇ ಬುದ್ದಿವಂತರಾಗಿರ್ತಾರಂತೆ. ಇದರರ್ಥ ಅಯಾಯ ವಯಸ್ಸಲ್ಲಿ ಇಂತಿಷ್ಟು ಎತ್ತರ ಇರ್ಬೇಕಂತಿರತ್ತೆ ಆ ಎತ್ತರವನ್ನ ದಾಟಿ ನೀವ್ ಬೆಳೆದಿದ್ರೆ ಬುದ್ದಿವಂತರು ಅಂತರ್ಥ. ಎತ್ತರವಿರೋರು ಖುಷಿಪಡ್ರಪ್ಪಾ.

5. ಯಾವ್ ಮಕ್ಕಳು ಬೇರೆ ಬೇರೆ ತರದ ಸಂಗೀತವನ್ನ ಕಲೀತಾರೋ ಅವ್ರು ತುಂಬಾನೇ ಬುದ್ದಿವಂತರಾಗಿರ್ತಾರಂತೆ

ಗ್ಲೆನ್ ಸ್ಕೇಲನಬರ್ಗ್ ಅಧ್ಯಯನದ ಪ್ರಕಾರ ಚಿಕ್ಕವಯಸ್ಸಲ್ಲಿ ಯಾವ್ ಮಕ್ಕಳು ಬೇರೆ ಬೇರೆ ತರದ ಸಂಗೀತವನ್ನ ಕಲೀತಾರೋ ಅವ್ರು ತುಂಬಾನೇ ಬುದ್ದಿವಂತರಾಗಿರ್ತಾರಂತೆ. ಬೇರೆ ಬೇರೆ ಸಂಗೀತ ಅಂದ್ರೆ ಬರೇ ಹಾಡೋದಲ್ಲ ಕೀಬೋರ್ಡ್ ಗಿಟಾರ ಇನ್ನಿತರ ಸಂಗೀತ ಉಪಕರಣಗಳನ್ನ ನುಡ್ಸೋದು ಕೂಡಾ ಬಂದಿರತ್ತೆ ಅಯ್ತಾ. ನೀವೊಂದ್ವೇಳೆ ಒಂದೇ ಹವ್ಯಾಸಕ್ಕೆ ಫಿಕ್ಸಾಗಿದ್ರೆ ಬುದ್ದಿವಂತಿಕೆಯ ಮಟ್ಟ ಜಾಸ್ತಿಯಾಗದೇನೇ ಇರಬಹುದು.

6. ಯಾರು ಜಾಸ್ತಿ ದಢೂತಿಯಾಗಿರ್ತಾರೋ ಅವ್ರ ಬುದ್ದಿವಂತಿಕೆಯ ಪ್ರಮಾಣ ತುಂಬಾನೇ ಕಮ್ಮಿಯಾಗಿರತ್ತಂತೆ

2006ರಲ್ಲಿ ಫ್ರೆಂಚ್ ವಿಜ್ನಾನಿಗಳು 2200 ಜನರ ಮೇಲೆ ಬಾಡಿ ಮಾಸ್ ಇಂಡೆಕ್ಸ್ ರೇಶಿಯೋವನ್ನ ಮುಖ್ಯವಸ್ತುವಾಗಿಟ್ಕೊಂಡು ನಡೆಸಿದ ಸಂಶೋಧನೆಯಲ್ಲಿ ಯಾರು ಜಾಸ್ತಿ ದಢೂತಿಯಾಗಿರ್ತಾರೋ ಅವ್ರ ಬುದ್ದಿವಂತಿಕೆಯ ಪ್ರಮಾಣ ತುಂಬಾನೇ ಕಮ್ಮಿಯಾಗಿರತ್ತಂತ ನಿರ್ಧಾರ ಮಾಡಿಬಿಟ್ರು. ಯಾರೆಲ್ಲ ಈ ಪಟ್ಟಿಯಲ್ಲಿದ್ದಿರೋ ಅವ್ರೆಲ್ಲಾ ಬೇಗ ಹೋಗಿ ಕರಗಿಸಿಬಿಟ್ಟು ಬುದ್ದಿವಂತರಾಗಿ.

7. ಯಾರು ನೀಲಿ ಕಣ್ಣುಗಳನ್ನ ಹೊಂದಿರ್ತಾರೋ ಅವ್ರು ತುಂಬಾನೇ ಬುದ್ದಿವಂತರಂತೆ

ಲೂಯಿಸ್ವಿಲ್ಲೆಯ ಪ್ರಾಧ್ಯಾಪಕರಾದ ಜೋಹಾನ್ನಾ ರಾವೇರವರ ಪ್ರಕಾರ ಯಾರು ನೀಲಿ ಕಣ್ಣುಗಳನ್ನ ಹೊಂದಿರ್ತಾರೋ ಅವ್ರು ತುಂಬಾನೇ ಬುದ್ದಿವಂತರಂತೆ. ಅವ್ರಲ್ಲಿ ಬುದ್ದಿಮತ್ತೆ ಜಾಸ್ತಿಯಿರತ್ತಂತೆ. ಉದಾಹರಣೆಗೆ ಸ್ಟೀಫನ್ ಹಾಕಿಂಗ್ನ ಕಣ್ಣು ಇದೇ ನೀಲಿ ಬಣ್ಣದ್ದು , ಹಾಗಂತ ಬೇರೆ ಬಣ್ಣದವರು ತುಂಬಾನೇ ಟೆನ್ಶನ್ ತಗೊಳ್ಳೊದು ಬೇಡ . ಅವ್ರವ್ರಿಗೆ ಅವ್ರದ್ದೇ ಆದ ಶಕ್ತಿಯಿರತ್ತೆ. ಕಪ್ಪು ಬಣ್ಣದ ಕಣ್ಣುಳ್ಳವರು ಯಾವ್ದೇ ವಿಷ್ಯಕ್ಕಾದ್ರೂ ಬೇಗನೇ ಪ್ರತಿಕ್ರಿಯೆ ಕೊಡೋದ್ರಲ್ಲಿ ಎತ್ತಿದ ಕೈಯಂತೆ. ತಿಳಿಬಣ್ಣದವರು ಸರ್ಯಾಗಿ ಗಮನಿಸಿ ನಿರ್ದಾರ ತಗೊಳ್ತಾರಂತೆ.

8. ಕಿರಿಕಿರಿ ಉಂಟು ಮಾಡೋ ಶಬ್ದಗಳು ಬುದ್ದಿಮತ್ತೆಯಿರೋರಿಗೆ ಇಷ್ಟ ಆಗಲ್ಲಂತೆ

ಮೇಜು ಕುಟ್ಟೋದು , ಗಾಜಿನ ಅಂಚನ್ನ ನೆಲದಮೇಲಿಂದ ಎಳೆದಾಗ ಬರೋ ಶಬ್ದ , ಚಿಪ್ಸ್ ತಿನ್ನೋವಾಗ ಬರೋ ಕುರುಂ ಕುರುಂ ಶಬ್ದ ಇದೇ ತರದ ಕೆಲ್ವೊಂದ್ ಶಬ್ದಗಳು  ಬುದ್ದಿಮತ್ತೆಯಿರೋರಿಗೆ ಇಷ್ಟ ಆಗಲ್ಲ. ಅವ್ರುಗಳು ಇದೆಲ್ಲದ್ರಿಂದ ದೂರ ಇರೋಕೆ ಬಯ್ಸತಾರೆ. ಇದ್ನ ಹೇಳ್ತಿರೋದು ಹೆಲ್ಸಿಂಕಿ ವಿಶ್ವವಿದ್ಯಾಲಯದವರು. ಕೆಲವೊಬ್ರಿಗೆ ಇದು ಜಾಸ್ತಿಯಾದ್ರೆ ಕಾಯಿಲೆಯಾಗಿ ಪರಿಣಮಿಸತ್ತೆ. ಇದ್ನ ಮಿಸೋಫೋನಿಯಂತಲೂ ಕರೀತಾರೆ.

 

9. ಯಾರ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದವಿರತ್ತೋ ಅವ್ರು ತುಂಬಾನೇ ಬುದ್ದಿವಂತರಂತೆ

ನಾರ್ವೇಯಿನ್ ಫಿಸಿಜನ್ ಕಾರ್ಲ್ ಪಿನ್ಸ್ಕ್ ಅನ್ನೋರು ಬೆರಳುಗಳ ಉದ್ದದ ಆಧಾರದ ಮೇಲೆ ಬುದ್ದಿವಂತರಾ ಅಲ್ವಾ ಅನ್ನೋದ್ನ ಕಂಡುಹಿಡಿದಿದ್ನಂತೆ. ಯಾರ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದವಿದ್ರೆ ಅವ್ರು ಸುಲಭವಾಗಿ ಗಣಿತ ವಿಜ್ನಾನದ ಸಮಸ್ಯೆಗಳನ್ನ ಪರಿಹರಿಸ್ತಾರಂತೆ. ಜಾನ್ ಕೋಟ್ಸ್ ಅನ್ನೋ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕ ಕೂಡಾ ಇದೇ ಅಭಿಪ್ರಾಯವನ್ನ ಹೇಳಿದ್ದಾರೆ ಜೊತೆಗೆ ಯಾರ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದವಿರತ್ತೋ ಅವ್ರುಗಳ ಆದಾಯ, ಹಣಕಾಸಿನ ಸ್ಥಿತಿ ಕೂಡಾ ಅತ್ಯುತ್ತಮವಾಗಿರತ್ತೆ ಅಂತಿದ್ದಾರೆ.

10. ಬುದ್ದಿವಂತರನ್ನ ನಿರಾಶಾವಾದ ತುಂಬಾನೇ ಕಾಡತ್ತಂತೆ

ಇಸ್ರೇಲನ ಇಂಟರ್ ಡಿಸಿಪ್ಲಿನರಿ ಸೆಂಟರ್ನ ಸಾಚಿ ಎನ್ ಡೋರ್ ಮತ್ತು ಆರ್ಗನ್ ಟಾಲ್ ಅನ್ನೋ ಮಾನಸಿಕ ತಜ್ನರು ನಡೆಸಿದ ಸಂಶೋಧನೆಯಲ್ಲಿ ಬುದ್ದಿವಂತರನ್ನ ನಿರಾಶಾವಾದ ತುಂಬಾನೇ ಕಾಡತ್ತಂತೆ. ಯಾಕಂದ್ರೆ ಅವ್ರುಗಳು ಪ್ರತಿಯೊಂದಕ್ಕೂ ವಿಷ್ಯಕ್ಕೂ ತುಂಬಾನೇ ಯೋಚ್ನೆ ಮಾಡಿ ಆಮೇಲೇ ಮಾತಾಡ್ತಾರೆ ಇಲ್ಲಾ ಕೆಲ್ಸ ಮಾಡ್ತಾರೆ. ಯೋಚ್ನೆ ಮಾಡಿರ್ತಾರಲ್ಲ ಆ ಯೋಚ್ನೆ ಅವ್ರ ತಲೆಯಿಂದ ಅಷ್ಟು ಸುಲಭವಾಗಿ ಹೊರ್ಗಡೆ ಹೋಗಿರೋದಿಲ್ಲ. ಅದಕ್ಕೆ ಅವ್ರಿಗೆ ಒತ್ತಡ ನಿರಾಶಾವಾದ ಜಾಸ್ತೀನೇ ಇರತ್ತೆ. ಇವ್ರುಗಳು ಬರೇ ವರ್ತಮಾನದಲ್ಲಿ ಯೋಚ್ನೆ ಮಾಡೋದಿಲ್ಲ , ಹಿಂದಿದ್ದು ಈಗೀರೋದು ಮುಂದಕ್ಕೆ ಎನಾಗಬಹುದಂತ ಯೋಚ್ನೆ ಮಾಡ್ತಾರೆ. ಈ ರೀತಿ ಮಾಡೋದ್ರಿಂದ್ಲೇ ಅವ್ರಿಗೆ ಒತ್ತಡ ನಿರಾಶವಾದ ಜಾಸ್ತಿಯಂತೆ.

ಜಾಸ್ತಿ ಯೋಚ್ನೆ ಮಾಡ್ಬೇಡಿ ಯಾವ್ದಾದ್ರೂ ಒಂದಾದ್ರೂ ನಿಮ್ಗೆ ಹೊಂದಿದ್ರೆ ಸಾಕು.