http://jesusgilhernandez.com/wp-content/uploads/2015/06/the-secrets-to-limiting-your-mental-fatigue.jpg

ಈ ಒತ್ತಡ ಅನ್ನೋದು ಮನುಷ್ಯನ್ನ ಹೇಗೆ ಕಾಡುತ್ತೆ ಅಂದ್ರೆ, ಜೀವ್ನಾನೇ ಸಾಕಪ್ಪ ಅನ್ಸಕ್ಕೆ ಶುರು ಆಗುತ್ತೆ. ಯಾಕಂದ್ರೆ ಈ ಒತ್ತಡ ಬೀಳೋದು ನಮ್ಮ ಮೆದುಳಿನ ಮೇಲೆ. ಒಂದೊಂದ್ಸಲ ನಮಗೆ ತಿಳೀದೆ ಒತ್ತಡ ಜಾಸ್ತಿ ಆಗೋಗಿರುತ್ತೆ. ಆಗ ಮನಸ್ಸಿಗೆ ಒಂಥರಾ ಕಿರಿಕಿರಿ ಅನ್ನಿಸುತ್ತಾ ಇರುತ್ತೆ… ಆದ್ರೆ ಎನ್ ವಿಷ್ಯ ಅಂತ ಗೊತ್ತಾಗಿರಲ್ಲ. ಆದರೆ ಗೊತ್ತು ಮಾಡ್ಕೊಳೋದು ಒಳ್ಳೇದು. ಇಲ್ಲಿ ಕಳಗೆ ಕೊಟ್ಟಿರೋ ತರಹ ನಿಮಗೆನಾದರೂ ಆಗ್ತಿದ್ರೆ ನೀವು ಆದಷ್ಟು ಬೇಗ ಜೀವನದಲ್ಲಿ ಒತ್ತಡ ಕಡಿಮೆ ಮಾಡ್ಕೋಬೇಕು ಅನ್ನೋದರಲ್ಲಿ ಸಂದೇಹವೇ ಇಲ್ಲ…

1. ಶಕ್ತಿ ಮೀರಿ ಕೆಲಸ ಮಾಡ್ತಿದೀನಿ ಅನ್ಸುತ್ತಾ?

ನಮ್ಮ ಶಕ್ತಿಗೂ ಮೀರಿ ಕೆಲ್ಸ ಮಾಡ್ತಿದ್ದೀವಿ ಅಂತ ಅನ್ಸಿದ್ರೆ, ನಮ್ಮ ಮೆದುಳಿಗೆ ಜಾಸ್ತಿ ಕಷ್ಟ ಕೊಡ್ತಿದ್ದೀವಿ ಅಂತ ಅರ್ಥ. ಅದರ ಶಕ್ತಿಗೆ ಮೀರಿ ನಾವು ಅದಕ್ಕೆ ಕೆಲ್ಸ ಕೊಡ್ತಿದ್ದೀವಿ. ಹೀಗಾದಾಗ ಅದು ನಮಗೆ ಗೊತ್ತಾಗಕ್ಕೆ ಶುರು ಆಗುತ್ತೆ. ಏನೋ ಒಂಥರಾ ಸಮಾಧಾನ ನೇ ಇಲ್ಲ ಅನ್ಸೋದು, ಏನೂ ಆಗಲ್ಲ ಅಂತ ಕೈಚೆಲ್ಲಿ ಕೂತ್ಕೊಳ್ಳೋದು ಮಾಡ್ತೀವಿ.

 

2. ಎಲ್ಲ ಮರೆತು ಹೋಗ್ತಿದೆ ಅನ್ನಿಸುತ್ತಾ?

ಹೋದ ಸಲ ಟ್ರಿಪ್ ಎಲ್ಲಿ ಹೋಗಿದ್ರಿ? ಕೊನೆ ಸಲ ಮನಸ್ಸಿಂದ ಪೂರ್ತಿಯಾಗಿ ನಕ್ಕಿದ್ದು ಯಾವಾಗ ನೀವು? ಇದೆಲ್ಲ ನಿಮಗೆ ಮರೆತು ಹೋದಂಗೆ ಆಗ್ತಿದೆಯಾ? ಹಾಗಾದ್ರೆ ನಿಮ್ಮ ಮೆದುಳು ನಿಮ್ಮ ಹಿಡಿತದಲ್ಲಿಲ್ಲ ಅಂತ ಅರ್ಥ. ಹೀಗಾದಾಗ ಸ್ವಲ್ಪ ರೆಸ್ಟ್ ತಗೊಂಡ್ರೆ ಎಲ್ಲಾ ಆರಾಮ ಆಗುತ್ತೆ. ಸ್ವಲ್ಪ ದಿನ ರಜಾ ತೊಗೊಂಡು ಆರಾಮಾಗಿ ಎಲ್ಲೀಗಾದ್ರೂ ಟ್ರಿಪ್ ಹೋಗಿ ಬರೋದು ವಾಸಿ.

 

3. ಮುಂದಿನ ದಾರಿ ಯಾವ್ದು ಅಂತ ತಲೆ ಮೇಲೆ ಕೈ ಹೊತ್ಕೊಂಡು ಕೂತ್ಕೊಳೋ ಹಾಗೆ ಆಗುತ್ತಾ?

ನೀವು ಯೋಚ್ನೆ ಮಾಡೋ ಶಕ್ತಿನೇ ಕಳ್ಕೊಂಡಿರ್ತೀರಾ ಅಂದ್ಮೇಲೆ ಮುಂದಿನ ದಾರಿ ಹೇಗೆ ತಿಳಿಯುತ್ತೆ ಹೇಳಿ? ತನಗೆ ಆಗೋ ಒತ್ತಡ ತಾಳಕ್ಕೆ ಆಗದೆ ಮೆದುಳು ಯೋಚ್ನೆ ಮಾಡೋದನ್ನೇ ಬಿಟ್ಬಿಡುತ್ತೆ. ಹೀಗಾದ್ರೆ ಒಂದು ಲೆಕ್ಕದಲ್ಲಿ ಒಳ್ಳೆದೇ. ಯಾಕಂದ್ರೆ ಆವಾಗಾದ್ರೂ ನಾವು ಒದ್ದಾಡೋದು ಬಿಟ್ಟು ಸುಮ್ನೆ ಕೂತ್ಕೊಳ್ತೀವಿ.

 

4. ಆಗಾಗ ತೀರಾ ಬೇಜಾರಾಗುತ್ತಾ?

ನಿಮಗೆ ಏನಾದ್ರೂ ಬೇಗ ಅಳು ಬಂದಹಾಗೆ ಆಗೋದು, ಎಲ್ಲರ ಮೇಲೂ ಕೋಪ ಬರೋದು, ಬೇಜಾರಾಗೋದು ಹೀಗೆಲ್ಲ ಆಗ್ತಿದೆ ಅಂದ್ರೆ, ನಿಮ್ಮ ಮೆದುಳಿನ ಮೇಲೆ ನಿಮ್ಮ ಹಿಡಿತ ಕಡಿಮೆ ಆಗಿದೆ ಅಂತರ್ಥ. ಮೆದುಳು ಈ ರೀತಿ ಒತ್ತಡ ಹೋರ್ಗಡೆ ಹಾಕುತ್ತೆ.

 

5. ತೀರ ಮುಖ್ಯವಾಗಿರೋದನ್ನೂ ಮರೆತು ಬಿಡ್ತಾ ಇದೀರಾ?

ಮರೆವು ಮನುಷ್ಯ ಸಹಜವಾದ ಗುಣ ಅಂತೆ. ಆದ್ರೆ ತೀರಾ ಮುಖ್ಯವಾದ ವಿಷಯಗಳ್ನೂ ಮರೀತಿದೀವಿ ಅಂದ್ರೆ ನಮ್ಮ ತಲೆಗೆ ಅತೀ ಕಷ್ಟ ಕೊಡ್ತಿದ್ದೀವಿ ಅಂತ ಅರ್ಥ. 

 

6. ಎಲ್ಲರ ಮೇಲೂ ಹಾರಾಡ್ತಿದೀರಾ?

ಯಾರ್ದೋ ಹತ್ರ ಮಾತಾಡ್ತಾ ಇರ್ತೀರಾ, ಏನೋ ಕೇಳ್ತಾ ಇರ್ತಾರೆ. ಒಂದು ಸ್ವಲ್ಪ ಜಾಸ್ತಿ ಏನೋ ಕೇಳಿದ್ರೋ… ಮುಗೀತು! ಅದೆಲ್ಲಿರುತ್ತೋ ಸಿಟ್ಟು! ಪ್ರಶ್ನೆ ಕೇಳಿದವ್ರನ್ನ ಬಾಯಿಗೆ ಬಂದ ಹಾಗೆ ಬೈಯ್ಯಕ್ಕೆ ಶುರು ಮಾಡ್ಬಿಡ್ತೀರಾ. ನಿಮ್ಮ ಮೆದುಳಿಗೆ ಆಗೋ ಒತ್ತಡದಿಂದ ನಿಮ್ಮ ಸಹನೆ ದೂರ ಆಗ್ತಿದೆ ಅನ್ನೋದರ ಲಕ್ಷಣ ಇದು!

7. ಆವಾಗಾವಾಗ ತಲೆನೋವು, ವಾಂತಿನಾ?

ಆವಾಗಾವಾಗ ತಲೆ ನೋಯೋದು, ವಾಂತಿ ಬಂದ ಹಾಗೆ ಆಗೋದು, ಹೊಟ್ಟೆನೋವು, ಹಸಿವಾಗಲ್ಲ, ಏನೇನೋ ಭ್ರಮೆಯಲ್ಲಿ ಬದುಕಿದ ಹಾಗೆ ಆಗೋದು , ನಿದ್ದೆ ಬರ್ದೆ ಇರೋದು ಇದೆಲ್ಲಾ ಮೆದುಳಿಗೆ ಜಾಸ್ತಿ ಒತ್ತಡ ಆಗಿರೋ ಲಕ್ಷಣಗಳು. ನಿಮಗೂ ಪದೇಪದೇ ಹೀಗಾಗ್ತಿದೆಯಾ? ರೆಸ್ಟ್ ತಗೊಳ್ರಿ, ಒದ್ದಾಡ್ಬೇಡಿ!

ಹಾಗಾದರೆ ನೀವು ಆದಷ್ಟು ಬೇಗ ನೀವು ಒತ್ತಡ ಕಡಿಮೆ ಮಾಡ್ಕೋಬೇಕು. ನಿಮ್ಮ ಮಿದುಳಿಗೆ ಒತ್ತಡ ತಡಿಯಕ್ಕಾಗ್ತಿಲ್ಲ ಅನ್ನೋದಂತೂ ಗ್ಯಾರಂಟಿ.