ನಿನ್ನ ಲಿಪ್-ಸ್ಟಿಕ್ ಚೆನ್ನಾಗಿದೆ

ಕೆಂಚ ಸಂಜೆ ಬಸ್-ಸ್ಟಾಪಲ್ಲಿ ಕಾಯ್ತಾ ನಿಂತಿದ್ದಾಗ ಒಬ್ಬ ಹುಡುಗಿ ಬಂದಳು.

ತಡ್ಕೊಳಕ್ಕಾಗ್ದೆ ಹೇಳಿದ: ‘ವಾವ್! ಚಿಂದಿ ಲಿಪ್-ಸ್ಟಿಕ್!’

ಹುಡುಗಿ: ‘ತ್ಯಾಂಕ್ಸ್!’

ಕೆಂಚ: ‘ಚಿಂದಿ ಟಾಪ್, ಚಿಂದಿ ಜೀನ್ಸ್!’

ಹುಡುಗಿ: ‘ತ್ಯಾಂಕ್ಸ್!’

ಕೆಂಚ: ‘ಚಿಂದಿ ಓಲೆ!’

ಹುಡುಗಿ: ‘ತ್ಯಾಂಕ್ಸ್!’

ಕೆಂಚ: ‘ಸೂಪರ್ ಸರ!’

ಹುಡುಗಿ: ‘ತ್ಯಾಂಕ್ಸ್ ಅಣ್ಣಾ!’

ಕೆಂಚ: ‘ಆಶ್ಚರ್ಯ! ಆದರೂ ನೀನು ಚೆನ್ನಾಗಿ ಕಾಣಿಸ್ತಾ ಇಲ್ಲ!’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: