ನಿದ್ದೆ ಮನುಷ್ಯನ ಜೀವನದಲ್ಲಿ ಸಿಕ್ಕಾಪಟ್ಟೆ ದೊಡ್ಡ ಗೇಮ್ ಆಡತ್ತೆ. ಒಬ್ಬೊಬ್ರು ಒನ್ನೊಂಥರಾ ನಿದ್ದೆ ಮಾಡ್ತಾರೆ. ಎಲ್ಲಾ ರೀತಿಯ ಜನಗಳೂ ಇರ್ತಾರೆ, ಎಷ್ಟೋ ಜನ ಯಾವಾಗ್ಲೂ ನಿದ್ದೆ ಮಾಡ್ತಾರೆ, ಎಷ್ಟೋ ಜನ ತುಂಬಾ ಕಮ್ಮಿ ನಿದ್ದೆ ಮಾಡ್ತಾರೆ. ಆದ್ರೆ ಒಬ್ಬ ಆರೋಗ್ಯವಂತ ಮನುಷ್ಯನಿಗೆ ಮಿನಿಮಂ ಗಂಟೆ ನಿದ್ದೆ ಬೇಕು. ಈ ನಿದ್ದೆ ಇಲ್ಲದೆ ನರಳೋರು, ಇಲ್ಲ ನಿದ್ದೆ ಬರಲ್ಲ ಅಂತ ಪರದಾಡೋರು, ನಿದ್ದೆ ತುಂಬಾ ಕಡಿಮೆ ಮಾಡೋ ಜನ ಯಾವ ರೀತಿ ಇರ್ತಾರೆ ಅಂತ ನಾವ್ ಹೇಳ್ತೀವಿ. ಬನ್ನಿ ತಿಳ್ಕೊಳೋಣ

1. ಇವ್ರು ಬೇಗ ಇರಿಟೇಟ್ ಆಗೋಗ್ತಾರೆ

ಚೆನ್ನಾಗಿ ನಿದ್ದೆ ಇರದ ಕಾರಣ ಇವರಿಗೆ ಸಂದರ್ಭಗಳನ್ನು ಅಷ್ಟು ಚೆನ್ನಾಗಿ ಸಂಭಾಳಿಸಕ್ಕೆ ತಾಳ್ಮೆ ಇರಲ್ಲ, ಚಿಕ್ಕ ಪುಟ್ಟ ವಿಷಯಕ್ಕೂ ಕೋಪ, ಇರ್ರಿಟೇಷನ್ ಆಗತ್ತೆ. ಇಂಥ ಟೈಮಲ್ಲಿ ಸ್ವಲ್ಪ ಸಮಯ ಆರಾಮಾಗಿ ನಿದ್ದೆ ಮಾಡ್ಬೇಕು

2. ಸಿಕ್ಕಾಪಟ್ಟೆ ಭಾವುಕರಾಗಿರ್ತಾರೆ

ಯಾವಾಗ ನಿದ್ದೆ ಸರಿಯಾಗಿ ಆಗಿರಲ್ಲ, ನಮ್ಮ ಮೆದುಳು ಮತ್ತೆ ಮನಸು ಎರಡೂ ದೇಹದ ಮೇಲೆ, ಕೋಪದ ಮೇಲೆ, ಭಾವನೆ ಮೇಲೆ ಹಿಡಿತವನ್ನ ಕಳ್ಕೊಂಡಿರತ್ತೆ. ಅದಕ್ಕೆ ಚಿಕ್ಕ ಪುಟ್ಟ ವಿಷಯಕ್ಕೂ ಭಾವುಗರಾಗ್ತಾರೆ.

3. ಯಾರಾದ್ರೂ ಚೂರು ಕೆಣಕಿದ್ರೂ ಗುರಾಯ್ಸಿ ಗುಮ್ಮಕ್ಕೆ ಅಂತಾನೆ ರೆಡಿ ಇದ್ದಂಗೆ ಇರ್ತಾರೆ

4. ಯಾವಾಗ್ಲೂ ಹೊಟ್ಟೆ ಹಸಿವು ಅನ್ನುತ್ತಾರೆ

ಹೌದು, ನಿದ್ದೆ ಕಮ್ಮಿ ಆದ ಕಾರಣ ದೇಹ ನಿದ್ದೆಯಲ್ಲಿ ಸಿಗಬೇಕಾದ ಶಕ್ತಿಯನ್ನು ಊಟದ ಮೂಲಕ ಪಡೆಯಲು ಹಸಿವಿನ ಹಾರ್ಮೋನನ್ನು ಜಾಸ್ತಿ ರಿಲೀಸ್ ಮಾಡತ್ತೆ

5. ಆಗಾಗ ಖಾಯಿಲೆಗೆ ಒಳಗಾಗ್ತಾರೆ

ರೋಗವನ್ನು ತಡೆಗಟ್ಟುವ ಹಾರ್ಮೋನನ್ನು ದೇಹ ಉತ್ಪತ್ತಿ ಮಾಡೋದು ನಿದ್ದೆ ಮಾಡಿದಾಗ, ಇದಕ್ಕೆ ಸೈಟೋಕೈನಿನ್ ಅಂತಾರೆ. ನಿದ್ದೆ ಕಮ್ಮಿ ಮಾಡೋರಿಗೆ ರೋಗ ನಿರೋಧಕ ಶಕ್ತಿ ಕಮ್ಮಿ ಆಗಿರತ್ತೆ.

6. ಅಂದ ಬೇಗ ಕಮ್ಮಿ ಆಗತ್ತೆ

ಆರೋಗ್ಯ ದೇಹಕ್ಕೆ, ಅಂದಕ್ಕೆ, ಒಂದು ಒಳ್ಳೆಯ ನಿದ್ದೆ ಮುಖ್ಯ. ಯಾವಾಗ್ಲೂ ನಿದ್ದೆ ಕಮ್ಮಿ ಮಾಡೋರಾದ್ರೆ ಮುಖ ಬೇಗ ಸುಕ್ಕಾಗತ್ತೆ, ಸ್ವಲ್ಪ ಆಗಿರೋ ವಾಯಸ್ಸಿಗಿಂತ ಜಾಸ್ತಿ ದೊಡ್ಡವರಾಗಿ ಕಾಣ್ತಾರೆ

7. ಮರೆಗುಳಿತನ ಜಾಸ್ತಿ ಆಗತ್ತೆ, ಹಾಗೆಯೇ ನಿರ್ಧಾರಗಳನ್ನ ಮಾಡಕ್ಕೆ ಜಾಸ್ತಿ ಸಮಯ ತೊಗೊತಾರೆ

8. ಯಾವಾಗ್ಲೂ ಮೈಕೈ ನೋವ್ವು ಅನ್ನುತ್ತಾರೆ

ನಿದ್ದೆ ಸರಿಯಾಗಿ ಆಗಿಲ್ಲ ಅಂತಂದ್ರೆ ಸುಖಾಸುಮ್ಮನೆ ಮೈಕ್ ಕೈ ನೋವ್ವು ಬರೋದು ಗ್ಯಾರಂಟಿ

9. ಆಗಾಗ ಏನೋ ಯೋಚ್ನೆ ಮಾಡ್ಕೊಂಡು ಮುಳುಗೋಗ್ತೀರಾ

ನಿದ್ದೆ ಇರದ ಕಾರಣ, ವಿಷಯದ ಬಗ್ಗೆ ಗಮನ ಕೊಡಲು ಕಷ್ಟ ಆಗಿ, ಕೆಲಸ ಮಾಡೋ ಸಮಯದಲ್ಲಿ ಆಗಾಗ ಏನೋ ಯೋಚ್ನೆ ಮಾಡ್ಕೊಂಡು ಮೈ ಮರೀತಾರೆ

ಇದೆಲ್ಲ ತಿಳ್ಕೊಂದ್ಮೇಲೆ, ನಿದ್ದೆ ಕಮ್ಮಿ ಮಾಡ್ಕೊಳಲ್ಲ ನೀವು ಅಂತ ಅಂದ್ಕೋತೀನಿ. ಹಾಗಂತ ಜಾಸ್ತೀನು ಮಲ್ಕೊಬೇಡಿ