https://i.ytimg.com/vi/JFf4vV5GKZ0/maxresdefault.jpg

ವಯಸ್ಸು ಎಷ್ಟಾದ್ರೂ ತೆಳ್ಳಗೆ ಬಳುಕೋ ಬಳ್ಳಿ ತರ ಇರ್ಬೇಕು. ಸುರಸುಂದರಾಂಗ ಅನ್ನಿಸ್ಕೋಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತೆ. ಕೆಲವರು ಏನು ಮಾಡದಿದ್ರೂ ಸಣ್ಣಗೆ ಇರ್ತಾರೆ. ಇನ್ನು ಕೆಲವರು ಎಷ್ಟು ಕಷ್ಟಪಟ್ರೂ ಒಂದು ಗ್ರಾಂ ಕೂಡ ಕಮ್ಮಿ ಆಗಲ್ಲ. ಆದ್ರೆ, ಸಣ್ಣಗಾಗೋಕೆ ಯೋಗ, ಜಿಮ್ , ನಡಿಗೆ, ಡಯಟ್ ಅಂತ ಬೇಜಾನ್ ಪಾಡುಪಡೋವ್ರು ನಿದ್ದೆ ಕೂಡ ಸಣ್ಣ ಆಗೋಕೆ ಸಹಾಯ ಮಾಡತ್ತೆ ಅಂದ್ರೆ ನಂಬಲ್ಲ. ಸಣ್ಣಗಾಗೋಕೆ ಕಷ್ಟಪಡೋವ್ರು ಸ್ವಲ್ಪ ಕೇಳಿಸ್ಕೊಳ್ಳಿ. ನಿದ್ದೆಯಿಂದ ಎಷ್ಟು ಪ್ರಯೋಜನ ಇದೆ ಅಂತ. 

1. ಮಧ್ಯರಾತ್ರಿ ಮುಕ್ಕೋದು ಬಿಡಬೋದು!

ಸರಿಯಾಗಿ ನಿದ್ದೆ ಬರ್ಲಿಲ್ಲ ಅಂದ್ರೆ ಬೇಜಾರು ಮಾಡ್ಕೊಂಡು ಎದ್ದು, ಸಿಕ್ಕಿದ್ದೆಲ್ಲಾ ಮುಕ್ಕೋದು. ಆಮೇಲೆ ಸಣ್ಣಾನೇ ಆಗ್ತಿಲ್ಲ ಅಂತ ಅಳೋದು. ಇವೆಲ್ಲಾ ಯಾಕಾಗುತ್ತೆ ಅಂದ್ರೆ ಪ್ರತಿದಿನ 7-8 ಗಂಟಿ ಒಳ್ಳೇ ನಿದ್ದೆ ಮಾಡದೇ ಇರೋದ್ರಿಂದ. ಅಷ್ಟಕ್ಕೂ ಗಡದ್ದು ನಿದ್ದೆಯಿಂದ ಎದ್ದು ತಿನ್ನೋ ಹುಚ್ಚು ಸಾಹಸ ಯಾರೂ ಮಾಡಲ್ಲ.

ste.india.com

2. ಸಿಹಿತಿಂಡಿ ಬಯಕೆ ಕಮ್ಮಿ ಆಗತ್ತೆ!

ನಿಮ್ಮ ಹುಡುಗ ಏನಾರೂ ನಿಮಗೆ ಸಿಹಿತಿಂಡಿ ಚಪಲ ಜಾಸ್ತಿ ಅಂತ ಕಿಚಾಯಿಸ್ತಿದ್ರೆ, ಅವರು ನಿಜಾನೇ ಹೇಳ್ತಿರ್ತಾರೆ. ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಸಿಹಿ ತಿನ್ಬೇಕು ಅನ್ನೋ ಚಪಲ ಜಾಸ್ತಿ ಆಗತ್ತಂತೆ. ನಿಮಗೇ ಗೊತ್ತು ಸಿಹಿ ತಿಂದಷ್ಟು ಸುಲಭ ಅಲ್ಲ ಮೈ ಕರಗಿಸೋದು.

foodenvy.tv

3. ನಿದ್ದೆ ಕೊಬ್ಬು ಕರಗಿಸತ್ತೆ!

ಓಡಾಡೋವಾಗ, ನಿಂತಿರುವಾಗ, ಮಾತಾಡುವಾಗ, ಕೂತಿರುವಾಗ ಹಾಗೆ ನಿದ್ದೆ ಮಾಡೋವಾಗ್ಲೂ ನಿಮ್ಮ ಶಕ್ತಿ ಖಚರ್ಾಗ್ತಿರತ್ತೆ. ಅಂದ್ರೆ ನಿಮ್ಮ ದೇಹ ಕೆಲಸ ಮಾಡ್ತಿರತ್ತೆ. ನಿದ್ದೆ ಮಾಡೋದ್ರಲ್ಲಿ ಹೆಚ್ಚು ಕಮ್ಮಿ ಮಾಡ್ಕೊಂಡ್ರೆ, ನಿಮ್ಮ ದೇಹಕ್ಕೆ ಹಿಂದೆ ಮುಂದೆ ಅರ್ಥ ಆಗದೆ ಕೆಲಸ ಸರಿಯಾಗಿ ಮಾಡಲ್ಲ. ಅಂದ್ರೆ ದಪ್ಪ ಆಗೋಕೆ ನೀವೆ ದಾರಿ ಮಾಡಿಕೊಟ್ಟ ಹಾಗೆ ಆಗತ್ತೆ.

i.pinimg.com

4. ಇನ್ಸುಲಿನ್ ಸ್ರವಿಕೆ ಪ್ರಮಾಣ ಸರಿಹೋಗತ್ತೆ!

ನಿದ್ದೆ ಸರಿಯಾಗಿ ಮಾಡಲಿಲ್ಲ ಅಂದ್ರೆ, ಇನ್ಸುಲಿನ್ ಕಡಿಮೆ ಬಿಡುಗಡೆ ಆಗತ್ತಂತೆ. ಅದರಿಂದಾನೇ ಕೊಬ್ಬು ಮೈಯಲ್ಲಿ ತುಂಬ್ಕೊಂಡು ನೀವು ಡುಮ್ಮಿ/ ಡುಮ್ಮ ಆಗೋದಂತೆ.

i.pinimg.com

5. ಇಡೀ ದೇಹ ರೀಪೆರಿಯಾಗತ್ತೆ, ಫ್ರೀಯಾಗಿ!

ದಿನ ಇಡೀ ಕಷ್ಟಪಟ್ಟು ದುಡಿದು, ನಿಮಗೆ, ನಿಮ್ಮ ದೇಹ ಮನಸ್ಸಿಗೆ ತುಂಬಾ ಆಯಾಸ ಆಗಿರತ್ತೆ. ನೀವು ನಿದ್ದೆ ಮಾಡೋವಾಗ ಪಾಪ ಅದು ತನ್ನನ್ನ ತಾನೇ ರಿಪೇರಿ ಮಾಡಿಕೊಳ್ಳತ್ತೆ. ಮಕ್ಕಳು ನಿದ್ದೇಲೆ ಬೆಳೆಯೋದು ಅಂತಾರಲ್ಲ ಅದು ನಿಜ. ಮಕ್ಕಳು ಮಾತ್ರ ಅಲ್ಲ. ಎಲ್ಲರ ತಲೆ, ಮೈ ರಿಪೇರಿ ಆಗೋದು ನಿದ್ದೇಲಿ. ನಿದ್ದೆ ಮಾಡದಿರೋ ದೇಹ ಕೆಟ್ಟು ನಿಂತಿರೋ ಲಾರಿ ಇದ್ದಂಗೆ.

i0.wp.com

6. ನಿದ್ದೆ ಮಾಡೋದ್ರಿಂದ ನಿಮ್ಮ ಯೋಚನೆ ಮೇಲೆ ನಿಮಗೆ ಹಿಡಿತ ಇರತ್ತೆ!

ನಮ್ಮಲ್ಲಿ ಒಂದು ಮಾತಿದೆ. ನಿದ್ದೆ ಕೆಟ್ಯೋ ಬುದ್ದಿ ಕೆಟ್ಯೋ ಅಂತ. ಸರಿಯಾಗಿ ನಿದ್ದೆ ಮಾಡದಿದ್ರೆ ನಿಮ್ಮ ಮನಸ್ಸು ಹೇಳಿದ ಮಾತು ಕೇಳಲ್ಲ. ನಿಮ್ಮ ಆಯ್ಕೆಗಳು ತಪ್ಪಾಗತ್ತೆ. ಸಣ್ಣ ಆಗ್ಬೇಕು ಅಂತ ಉದ್ದೇಶ ಇಟ್ಕೊಂಡಿರೋ ನೀವು, ಶಾಪಿಂಗ್ ಹೋದಾಗ ಬರೀ ಕರಿದ ತಿಂಡಿ, ಐಸ್ ಕ್ರೀಮ್, ಚಾಕೊಲೇಟ್ ತಂದು ನಿಮ್ಮ ಮನೇಲಿ ತುಂಬ್ಕೋತೀರಿ. ಹಸಿವಾದಾಗ ಅದನ್ನೇ ತಿಂದು ಊದ್ತೀರಿ. 

fthmb.tqn.com

ಗೊತ್ತಾಯ್ತಲ್ಲ. ನಿದ್ದೆ ಮಾಡೋಕೆ ಕಷ್ಟಪಡಬೇಕಿಲ್ಲ. ನಿದ್ದೆ ಮಾಡಲಿಲ್ಲ ಅಂದ್ರೆ ಕಷ್ಟ ತಪ್ಪಲ್ಲ. ಸಣ್ಣ ಆಗಲೇಬೇಕು ಅಂದುಕೊಂಡಿರೋರು ನಿದ್ದೆ ಮಾಡಿ ಖುಷಿಯಾಗಿರಿ. ನಿಮ್ಮ ತಲೆ, ಮನಸ್ಸು, ದೇಹ ಸರಿಯಾಗಿ ಕೆಲಸ ಮಾಡಿ ನಿಮಗೆ ಸಣ್ಣ ಆಗೋಕೆ ಸಹಾಯ ಮಾಡತ್ತೆ.