http://livebharath.com/wp-content/uploads/2016/07/fenugreek.jpg

ಮೆಂತ್ಯ ಅಂದ್ರೇ ಅಯ್ಯಪ್ಪ ಕಹಿ ಅನ್ನೋದೇ ವಾಡಿಕೆ. ಆದ್ರೆ ಮನೆಯೋರ್ನ ಕೇಳಿ ನೋಡಿ…ಹೆಂಗೋ ಮಾಡಿ ಔರ್ ಮಾಡೋ ಅಡುಗೇಲಿ ಮೆಂತ್ಯ ಸೇರ್ಸಿ ನಿಮ್ಗೆ ತಿನ್ಸಿರ್ತಾರೆ 🙂

ನಮ್ಮ ಅಜ್ಜಿ ಕಾಲದಿಂದನೂ ಇದ್ನ ಅಡುಗೆಲಿ ಬಳಸ್ತಾ ಬಂದಿದಾರೆ. ಮೆಂತ್ಯದ ತಂಬ್ಳಿ ತಿಂದಿದ್ದೀರಾ? ಜೀವನದಲ್ಲಿ ಒಂದು ದಿನ ಆದ್ರೂ ಅದರ ರುಚಿ ನೋಡ್ಲೇಬೇಕು ರೀ! ಹಾಗೆ ಜೊತೆಗೆ ಇಲ್ಲಿ ಕೆಳಗೆ ಕೊಟ್ಟಿರೋ ವಿಷಯಾನೂ ತಿಳ್ಕೊಳಿ. ಒಂದಲ್ಲ ಒಂದು ಸಲ ನಿಮ್ ಉಪ್ಯೋಗಕ್ಕೆ ಬರತ್ತೆ.

ಅಡುಗೆಗೆ ಒಂದೇ ಅಲ್ಲ, ಕೂದಲು ಸೊಂಪಾಗಿ ಬೆಳೆಯಕ್ಕೆ ಹಾಗೆ ಹೊಟ್ಟೆ ಪ್ರಾಬ್ಲಂಗೆ ಹಾಗೆ ಚರ್ಮಕ್ಕೆ ಮೆಂತ್ಯದ ಉಪಯೋಗ ಬೆಟ್ಟದಷ್ಟು.

ಚರ್ಮಕ್ಕೆ ಹೆಂಗೆ ಒಳ್ಳೇದು ಅಂತೀರಾ…

1. ಚರ್ಮ ಬೇಗ ಸುಕ್ಕಾಗಲ್ಲ

ಮೆಂತ್ಯಾನ ಚರ್ಮಕ್ಕೆ ಹಚ್ಚಿ. ನಿಮ್ಗೇ ಆಶ್ಚರ್ಯ ಆಗತ್ತೆ. ನಮ್ ಮೈನಲ್ಲಿರೋ ಫ್ರೀ ರಾಡಿಕಲ್ಗಳ ಜೊತೆ ಹೊಡೆದಾಡಿ ಸಾಯ್ಸತ್ತೆ. ಹಂಗೆ ಚರ್ಮ ಸುಕ್ಕಾಗದೇರೋ ಹಾಗೆ ಮಾಡತ್ತೆ. ಈ ಎಫೆಕ್ಟ್ ಬರ್ಸ್ಕೊಬೇಕಾದ್ರೆ ಹಿಂಗೆ ಮಾಡಿ…

1 ಸ್ಪೂನ್ ಮೆಂತ್ಯಾನಾ ಹಿಂದಿನ ದಿನ ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದು 1 ಸ್ಪೂನ್ ಮೊಸರಿನ ಜೊತೆ ನುಣ್ಣಗೆ ರುಬ್ಬಿಕೊಳ್ಳಿ. ಮುಖಕ್ಕೆ ಪ್ಯಾಕ್ ಹಾಕೊಳಿ. ಒಂದು 30 ನಿಮಿಷ ಬಿಟ್ಟು ತಣ್ಣೀರಲ್ಲಿ ಮುಖ ತೊಳಿರಿ. 

ಮೂಲ

2. ಮೊಡವೆ ಕಲೆ ಹೋಗ್ಸತ್ತೆ

ಮೆಂತ್ಯದಲ್ಲಿ ಡಯೋಸ್ಜೆನಿನ್ ಅನ್ನೋ ಅಂಶ ಇದೆ. ಅದು ಚರ್ಮದಲ್ಲಿರೋ ಬ್ಯಾಕ್ಟೀರಿಯಾನ ನಾಶ ಮಾಡತ್ತೆ. ಮೊಡವೆ ಕಲೇನೂ ಮಾಯ ಆಗತ್ತೆ. ಇದಕ್ಕೋಸ್ಕರ ಹೀಗೆ ಮಾಡಿ…

4 ಸ್ಪೂನ್ ಮೆಂತ್ಯೆನ ಹಿಂದಿನ ದಿನ ರಾತ್ರಿ ನೆನೆಸಿಟ್ಟು ಬೆಳಿಗ್ಗೆ 4 ಕಪ್ ನೀರಿನ ಜೊತೆ 15 ನಿಮಿಷ ಚೆನ್ನಾಗಿ ಕುದಿಸಿ. ನಂತರ ಆ ನೀರನ್ನ ಸೋಸಿ ತಣ್ಣಗಾದ್ ಮೇಲೆ ಹತ್ತಿಯಿಂದ ಕಲೆ ಮೇಲೆ ಹಚ್ಚಿ. ಉಳಿದ ನೀರನ್ನ ಫ಼್ರಿಜ್ಡನಲ್ಲಿಡಿ. ಇನ್ನೊಂದು ದಿನ ಉಪ್ಯೋಗ್ಸ್ಬೋದು.

ಮೂಲ

3. ಚರ್ಮಕ್ಕೆ ತೇವಾಂಶ ಒದಗಿಸತ್ತೆ

ಮೆಂತ್ಯದ ಕಾಳು ನೆನೆಸಿದ ಮೇಲೆ ಒಂಥರಾ ಜಿಗುಟು ಆಗೋದ್ರಿಂದ ಮುಖಕ್ಕೆ ಅಥವಾ ಮೈಯಿಗೆ ಹಚ್ಚಿಕೊಂಡಾಗ ಚರ್ಮಕ್ಕೆ ತೇವಾಂಶ ಕೊಡತ್ತೆ. ಇದ್ರಿಂದ ಯಾವ್ದೇ ಕಾಲದಲ್ಲೂ ಚರ್ಮ ಒಣ ಒಣ ಆಗೋಲ್ಲ. ಇದಕ್ಕೆ ಹೀಗೆ ಮಾಡಿ…

1 ಸ್ಪೂನ್ ಮೆಂತ್ಯೆ ಪುಡಿಗೆ 1 ಸ್ಪೂನ್ ನೀರು ಹಾಕಿ ಮುಖಕ್ಕೆ ಹಚ್ಚಿಕೊಂಡು ಒಂದು ಅರ್ಧ ಗಂಟೆ ಬಿಟ್ಟು ತೊಳ್ಕೊಳ್ಳಿ. ಇದು ಚರ್ಮ ಡ್ರೈ ಆಗಿರೋತರ ಕಾಣೋದ್ನ ಹೋಗ್ಸತ್ತೆ.

ಮೂಲ

ಕೂದಲಿಗೆ ಹೆಂಗೆ ಒಳ್ಳೇದು ಅಂತೀರಾ…

4. ಕೂದಲು ಉದುರ್ತಿದ್ರೆ ಕಡಿಮೆ ಮಾಡತ್ತೆ

ಇದು ತಲೆ ಕೂದಲು ಬುಡನಾ ಗಟ್ಟಿ ಮಾಡಿ ಕೂದ್ಲು ಬೇಗ ಉದುರದೇರೋ ಹಾಗೆ ಮಾಡುತ್ತೆ. ಮೆಂತ್ಯೆ ಕಾಳ್ನಲ್ಲಿ ಕೂದಲು ಉದ್ದ ಬೆಳಿಯೋದಕ್ಕೆ ಬೇಕಾದ ಹಾರ್ಮೋನ್ ಇದೆ. ಮತ್ತೆ ಪ್ರೋಟೀನ್ ಹಾಗು ನಿಕೋಟಿನಿಕ್ ಆಸಿಡ್ ಇರೋದ್ರಿಂದ ಬುಡ ಗಟ್ಟಿ ಮಾಡಿ ಕೂದಲು ಸೂಂಪಾಗಿ ಬೆಳಿಯೋತರ ಮಾಡುತ್ತೆ. ಇದಕ್ಕೆ ಹೀಗೆ ಮಾಡಿ…

1 ಸ್ಪೂನ್ ಮೆಂತ್ಯೆ ಕಾಳ್ನ 1 ಕಪ್ ಕೊಬ್ಬರಿ ಎಣ್ಣೆಗೆ ಹಾಕಿ, ಗಾಜಿನ ಬಾಟ್ಲಿಲಿ 3 ವಾರ ಮುಚ್ಚಿಡಿ. ಆಮೇಲೆ ಈ ಎಣ್ಣೇನಾ ಪ್ರತಿದಿನ ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡ್ಕೊಳ್ಳಿ. ತಲೆ ತುಂಬಾ ಜಿಡ್ಡಾದಾಗ ಮಾತ್ರ ಸ್ನಾನ ಮಾಡಿ. 

ಮೂಲ

5. ಕೂದಲಿಗೆ ಹೊಳಪು ಕೊಡತ್ತೆ

ಹೇಗಪ್ಪಾ ಅಂದ್ರೆ, ಕುದೀಯೋ ನೀರ್ನಲ್ಲಿ ಹಿಂದಿನ ರಾತ್ರಿ 2 ಸ್ಪೂನ್ ಮೆಂತ್ಯೆ ನೆನ್ಸಿಡಿ. ಬೆಳಿಗ್ಗೆ 1 ಕಪ್ ನೀರ್ನಲ್ಲಿ ರುಬ್ಬಿ ಬುಡದಿಂದ ಪೂರ್ತಿ ತಲೆ ಕೂದ್ಲುಗೆ ಹಚ್ಕೊಳ್ಳಿ. 30 ನಿಮಿಷ ಹಾಗೆ ಬಿಟ್ಟು ಕೂದಲನ್ನ ತೊಳ್ಕೊಳ್ಳಿ.  ಪಳ ಪಳ ಅಂತ ಹೊಳೆಯತ್ತೆ.

ಮೆಂತ್ಯೆ ಕಾಳಲ್ಲಿ ಲೆಸಿಟಿನ್ ಅನ್ನೋ ಅಂಶ ಇರೋದ್ರಿಂದ ನೀರಲ್ಲಿ ನೆನೆಸಿದಾಗ ಮುಟ್ಟಿದ್ರೆ ಜಾರೋ ತರ ಆಗುತ್ತೆ.  ಇದರಿಂದನೇ ಕೂದಲು ಹೊಳೆಯೋ ಹಾಗೆ ಆಗೋದು.

ಮೂಲ

6. ತಲೆ ಹೊಟ್ಟು ಕಡಿಮೆ ಮಾಡತ್ತೆ

ಈಗಂತೂ ಇದೊಂದು ದೊಡ್ಡ ಸಮಸ್ಯೆ ಆಗೋಗಿದೆ.  ಇದಕ್ಕೆ ಬೇಕಾದಷ್ಟು ಪರಿಹಾರಗಳು ಇರ್ಬಹುದು. ಆದ್ರೆ ಮೆಂತ್ಯೆ ಪೇಸ್ಟ್ ಹಚ್ಚಿಕೊಳ್ಳದ್ರಿಂದ ತಲೆ ಹೊಟ್ಟು ಬೇಗ ಕಡ್ಮೆ ಆಗುತ್ತೆ. ತಲೆ ಬುರುಡೆ ಒಣಗೋಗದ್ರಿಂದಲೇ ಹೊಟ್ಟು ಬರುತ್ತೆ.

ಅವಾಗವಾಗ ಮೆಂತ್ಯೆ ಹಚ್ಚೋದ್ರಿಂದ ಮಾಯಿಶ್ಚರೈಜರ್ ತರ ಕೆಲ್ಸ ಮಾಡಿ ಕೂದ್ಲು ಬುಡ ಒಣಗದಂತೆ ನೋಡ್ಕೊಳತ್ತೆ.

ಮೂಲ

7. ಚಿಕ್ಕ ವಯಸ್ಸಿಗೇ ಬಿಳಿ ಕೂದ್ಲು ಬರೋದ್ನ ತಡ್ಯತ್ತೆ

 ಕೂದಲು ತನ್ನ ಬಣ್ಣ ಕಳ್ಕೊಬಾರ್ದು, ಕಪ್ಪಾಗೇ ತುಂಬಾ ವರ್ಷ ಇರ್ಬೇಕು ಅಂದ್ರೆ ಅವಾಗವಾಗ ನೆನೆಸಿದ ಮೆಂತ್ಯದ ಕಾಳನ್ನ ರುಬ್ಬಿ ತಲೆಗೆ ಹಚ್ಕೋತಾ ಇರಿ. ಬಿಳಿ ಕೂದಲು ಇದ್ರೆ ಅದೂ ಕೂಡ ಕಡಿಮೆ ಆಗೋ ಸಾಧ್ಯತೆ ಇದೆ.

ಮೂಲ

ಹೊಟ್ಟೆಗೆ ಹೆಂಗೆ ಒಳ್ಳೇದು ಅಂತೀರಾ…

8. ಸಕ್ಕರೆ ಕಾಯಿಲೆ ಹತೋಟಿ ಬರತ್ತೆ

ಸಕ್ಕರೆ ಕಾಯಿಲೆ ಇರೋರು ಮೈನಲ್ಲಿ ಇನ್ಸುಲಿನ್ ಉತ್ಪಾದನೇನ ಹತೋಟಿಗೆ ತರಬೇಕು ಅಲ್ವಾ? ಈ ಕೆಲ್ಸನಾ ಮೆಂತ್ಯ ಚೆನ್ನಾಗಿ ಮಾಡತ್ತೆ. ಡಾಕ್ಟರ್ಗಳೇ ಹೇಳ್ತಾರೆ…ದಿನಾ ಖಾಲಿ ಹೊಟ್ಟೇಲಿ ಸ್ವಲ್ಪ ಮೆಂತ್ಯ ಕಾಳನ್ನ ಜಗೀತಿದ್ರೆ ಅವತ್ತಿನ ಸಕ್ಕರೆ ಮಟ್ಟನಾ ತಕ್ಕಮಟ್ಟಿಗೆ ಹತೋಟೀಲಿ ಇಟ್ಕೊಬೋದು ಅಂತ.

ಮೂಲ

9. ಹೃದಯ ನಾಳದಲ್ಲಿ ರಕ್ತ ಹೆಪ್ಪುಗಟ್ಟೋದನ್ನ ತಡೆಯತ್ತೆ

ಹೃದಯಕ್ಕೂ ಮೆಂತ್ಯ ಒಳ್ಳೆ ಆಹಾರ. ಮೆಂತ್ಯ ತಿನ್ನೋರ್ಗೆ ಅಕಸ್ಮಾತ್ ಹಾರ್ಟ್ ಅಟ್ಯಾಕ್ ಆದ್ರೂ ಹಾರ್ಟ್ಗೆ ಡಾಮೇಜ್ ಕಡಿಮೆ.

ಮೂಲ

10. ಕ್ಯಾನ್ಸರ್ ತಡೆಯುತ್ತೆ

ಸಿಕ್ಕಾಪಟ್ಟೆ ರಿಸರ್ಚ್ ಮಾಡಿ ವಿಜ್ನಾನಿಗಳು ಮೆಂತ್ಯ ಬಳ್ಸೋದ್ರಿಂದ ನಮ್ ಮೈನಲ್ಲಿ ಕ್ಯಾನ್ಸರ್ ಅಂಶ ಏನಾದ್ರು ಇದ್ರೆ ಅದು ನಾಶ ಆಗೋಗುತ್ತೆ ಅಂತ ಹೇಳಿದಾರೆ. ಕ್ಯಾನ್ಸರ್ ತಡೆಗಟ್ಟಕ್ಕೆ ಮೆಂತ್ಯದ ಕಾಳನಲ್ಲಿರೋ ಎಣ್ಣೆ ಅಂಶ ಒಂದೇ ಸಾಕಂತೆ. 

ಮೂಲ

11. ಮುಟ್ಟಾದಾಗ ಆಗೋ ಕಾಲು ಸೆಳೆತ ಕಡಿಮೆ ಮಾಡತ್ತೆ

ಮೆಂತ್ಯೆ ಕಾಳನಲ್ಲಿರೋ ಒಂದು ವಿಶೇಷವಾದ ಗುಣದಿಂದ ಮುಟ್ಟಿನ ಸಮಯದಲ್ಲಿ ಆಗೋ ಕಾಲು ಸೆಳೆತ, ಸುಸ್ತು, ತಲೆ ನೋವು ಎಲ್ಲಾ ಬರ್ದೇಯಿರೋ ತರ ತಡಿಯುತ್ತೆ. ಆ ಟೈಮಲ್ಲಿ ಮೆಂತ್ಯದ ಕಷಾಯ ಮಾಡ್ಕೊಂಡು ಕುಡಿದು ನೋಡಿ! ಬರೀ ಮೆಂತ್ಯ ಸೇರಲ್ಲ ಅಂದ್ರೆ ಜೀರಿಗೆ + ಮೆಂತ್ಯ ಎರಡೂನೂ ಸ್ವಲ್ಪ ಹುರಿದು ಪುಡಿ ಮಾಡಿ ತಿನ್ನಿ. ಎಷ್ಟೋ ವಾಸಿ ಆಗತ್ತೆ.

ಮೂಲ

12. ಡೆಲಿವೆರಿ ಆದಮೇಲೆ ಹೆಂಗಸರಿಗೆ ಎದೆಹಾಲು ಹೆಚ್ಚು ಬರೋಹಾಗೆ ಮಾಡುತ್ತೆ

ಮಗು ಹುಟ್ಟಿದೆ ಅನ್ನೋ ಖುಷಿ..ಆದ್ರೆ ತಾಯಿಗೆ ಎದೆಹಾಲಿಲ್ಲ ಅಂದ್ರೆ ಸಂಕಟ. ಆ ಟೈಮಲ್ಲಿ ಮೆಂತ್ಯೆ ಕಾಳನ್ನ ಹೆಚ್ಚಾಗಿ ತಿನ್ನಿ…ಮೆಂತ್ಯದ ದೋಸೆಗೆ ಚೆನ್ನಾಗಿ ತುಪ್ಪ ಹಾಕೊಂಡು ದಿನಾ ಬೆಳಗ್ಗೆ ತಿನ್ನಿ. ಆಗ ಎದೆಹಾಲು ಹೆಚ್ಚಾಗಿ ಬರತ್ತೆ.

ಮೂಲ

13. ಕೆಟ್ಟ ಕೊಬ್ಬು ಕರಗಿಸಿ ತೂಕ ಇಳಿಸತ್ತೆ

ನಮ್ ಮೈನಲ್ಲಿ ಒಳ್ಳೆ ಕೊಬ್ಬು, ಕೆಟ್ಟ ಕೊಬ್ಬು(ಕೊಲೆಸ್ಟ್ರಾಲ್) ಅಂತ ಇರತ್ತೆ. ಮೆಂತ್ಯ ತಿನ್ನೋದ್ರಿಂದ ಕೆಟ್ಟ ಕೊಬ್ಬು ಕರಗಿ ಆರೋಗ್ಯದಿಂದ ಇರ್ತೀರಿ. ನಿಮ್ಗೆ ತೊಕ ಕಡಿಮೆ ಮಾಡ್ಕೋಳ್ಳೊ ಆಸೆ ಇದ್ದು ಡಯಟ್ ಮಾಡ್ತಿದ್ರೆ ನಿಮ್ಮ ಲಿಸ್ಟಲ್ಲಿ ಮೆಂತ್ಯ ಸೇರಿಸಿ. ಇದರಿಂದ ನಿಮ್ಮ ದೇಹದಲ್ಲಿ ಜೀರ್ಣ ಶಕ್ತಿ ಹೆಚ್ಚಾಗಿ ಬೇಗ ತೂಕ ಕಡಿಮೆ ಆಗುತ್ತೆ.

ಮೂಲ

14. ಕೀಲು ನೋವು ಕಡಿಮೆ ಮಾಡುತ್ತೆ

ಮೆಂತ್ಯ ತಿನ್ನೋದ್ರಿಂದ ಕೀಲು ನೋವು ಸಹ ಕಡ್ಮೆ ಆಗುತ್ತೆ. 

ಮೂಲ

15. ಜೀರ್ಣ ಶಕ್ತಿ ಹೆಚ್ಚಾಗತ್ತೆ

ಹೊಟ್ಟೆ ಉರಿ, ನೋವು, ಆಮಶಂಕೆ, ಗ್ಯಾಸ್ತ್ರಿಕ್, ಅಜೀರ್ಣದ ಸಮಸ್ಯೆ ಇರೊವ್ರು ಮೆಂತ್ಯ ತಿನ್ಬೇಕು. ಇದ್ರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತೆ ಮತ್ತೆ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳು ಸರಿಹೋಗುತ್ತೆ.

ಹಳೆಕಾಲದವರು ಹೊಟ್ಟೆ ನೋವು ಅಥವಾ ಹೊಟ್ಟೆಯಲ್ಲಿ ಏನಾದರೂ ಸಂಕಟ ಆದಾಗ ಒಂದೆರಡು ಕಾಳು ಮೆಂತ್ಯ ತಿನ್ನಬೇಕು…ಇಲ್ಲದೆ ಹೋದ್ರೆ ಮಜ್ಜಿಗೇಲಿ ಮೆಂತ್ಯ ಹಾಕೊಂಡು ಕುಡಿಯಕ್ಕೆ ಹೇಳ್ತಿದ್ರು.

ಭೇದಿ ನಿಲ್ಲಿಸಕ್ಕಂತೂ ಮೆಂತ್ಯಕ್ಕಿಂತ ಇನ್ಯಾವ್ದೂ ಇಲ್ಲ. ಅರ್ಧ ಚಮಚ ಮೆಂತ್ಯನಾ ನೀರಿನಲ್ಲಿ ಅಥವಾ ಮಜ್ಜಿಗೇಲಿ ಹಾಕೊಂಡು ಕುಡಿದ್ರಾಯ್ತು… ದಿನಕ್ಕೆ ಮೂರು ಸಲ ಈ ರೀತಿ ಮಾಡಿದ್ರೆ ಭೇದಿ ಬಂದ್! ಮೆಂತ್ಯದಲ್ಲಿ ಗೋಂದಿನಂತಾ ಪದಾರ್ಥ ಇದೆ. ಇದು ನೀರನ್ನ ಹೀರಿಕೊಂಡು ಭೇದಿ ನಿಲ್ಸತ್ತಂತೆ.

ಗ್ಯಾಸ್ಟ್ರಿಕ್ ತೊಂದರೆ, ಅಜೀರ್ಣ, ಅಲ್ಸರ್ ಮತ್ತೆ ಮಲಬದ್ದತೆ ಆದಾಗಲೂ ಇದೇ ರೀತಿ ಮಾಡಬೋದು.

ಮೂಲ

16. ಕಿಡ್ನಿ ಚೆನ್ನಾಗಿ ಕೆಲ್ಸ ಮಾಡ್ಸುತ್ತೆ

ಮೆಂತ್ಯೆ ಕಿಡ್ನಿ ಕ್ಲೀನ್ ಮಾಡುತ್ತೆ ಅಂದ್ರೆ ನೀವು ನಂಬ್ಲೆಬೇಕು. ಇದು ಕಿಡ್ನಿಯ ಪದರ ಹಾಳಾಗದಂತೆ ತಡೆಯುತ್ತೆ. ಇದರಿಂದ ನಿಮ್ಮ ಕಿಡ್ನಿ ಚೆನ್ನಾಗಿ ಕೆಲ್ಸ ಮಾಡ್ಸುತ್ತೆ.

ಮೂಲ

17. ಲಿವರ್ ಡ್ಯಾಮೇಜಾಗಲ್ಲ

ಖುಷಿ-ದುಃಖ ಏನೆ ಇರ್ಲಿ,  ಕ್ವಾಟ್ರಾದ್ರು ಹೊಟ್ಟೆಗೆ ಹಾಕೊತೀನಿ ಅನ್ನೋರು ತಪ್ಪದೇ ಮೆಂತ್ಯನಾ ಜಾಸ್ತಿ ತಿನ್ನ್ಲೇಬೇಕು. ಏಕೆಂದ್ರೆ ದೇಹದಲ್ಲಿ ಸೇರೊ ವಿಷದ ಅಂಶನ ಕ್ಲೀನ್ ಮಾಡೋದೆ ಲಿವರ್ರು.

ಆಲ್ಕೋಹಾಲು ಮೈನಲ್ಲಿ ವಿಷದ ಅಂಶ ಜಾಸ್ತಿ ಮಾಡೋದರ ಜೊತೆ ಲಿವರ್ರನ ಮೇಲೆ ಒತ್ತಡನ ಜಾಸ್ತಿ ಮಾಡುತ್ತೆ.  

ಮೂಲ

ಮೆಂತ್ಯ ತಿಂದ್ರೆ ಎಷ್ಟೊಂದು ಲಾಭ ಇದೆ ಅಂತ ಗೊತ್ತಾಯ್ತಲ್ಲಾ. ಇನ್ಮೇಲೆ ಕಹಿ ಅಂತ ತಿನ್ನದೇ ಇರ್ಬೇಡಿ 🙂