ಯಾರ ಜೊತೆ?

ಒಂದು ದಿನ ಕೆಂಚ ನಾಲ್ಕು ಜನರ ಜೊತೆ ಸರ್ಕಲ್ಲಲ್ಲಿ ಜೂಜಾಡ್ತಾ ಕೂತಿದ್ನಂತೆ.

ಸಡನ್ನಾಗಿ ಪೋಲೀಸ್ ಬಂದು ಎಲ್ಲರನ್ನೂ ಲಾಕಪ್ಪಿಗೆ ಬನ್ನಿ ಅಂದನಂತೆ.

ಕಾರ್ಡ್ ಹಂಚ್ತಾ ಇದ್ದ ಕೆಂಚನ್ನ ಬಿಟ್ಟು ಬೇರೆಯೋರೆಲ್ಲಾ ‘ಜೂಜಾ? ಯಾವ ಜೂಜು? ನಮ್ಮ ಕೈಯಲ್ಲಿ ಕಾರ್ಡೇ ಇಲ್ಲ, ಬೇಕಾದರೆ ನೋಡಿ. ನಾವು ಸುಮ್ಮನೆ ಕೂತಿದೀವಿ, ಅಷ್ಟೆ’ ಅಂದರಂತೆ.

ಪೇದೆ ಕೆಂಚನ ಕೈಯಲ್ಲಿ ಕಾರ್ಡ್ ನೋಡಿ ‘ನನ್ ಮಗ್ನೆ, ಕೈಯಲ್ಲಿ ಕಾರ್ಡ್ ಇಟ್ಕೊಂಡು ಏನು ಗುರಾಯಿಸ್ತ್ಯಾ? ನೀನು ಜೂಜಾಡಿ ಸಿಕ್ಕಾಕೊಂಡಿ. ಬಾ ನನ್ನ ಜೊತೆ’ ಅಂದನಂತೆ.

ಅದಕ್ಕೆ ಕೆಂಚ ‘ನಾನು...? ಜೂಜಾಡ್ತಿದೀನಾ? ಯಾರ ಜೊತೆ?’ ಅಂದಾಗ ಪೇದೆ ಉತ್ತರ ಕೊಡಕ್ಕಾಗದೆ ಮುಚ್ಕೊಂಡ್ ಹೋದ್ನಂತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: