ಕೆಂಚ: `ನಿಂಗೆ ನಾನಿಷ್ಟಾನೋ ನಿಮ್ಮಮ್ಮ ಇಷ್ಟಾನೋ?'

ಗುಂಡ: `ಇಬ್ಬರೂ‌ ಇಷ್ಟ'

ಕೆಂಚ: `ಇಲ್ಲ, ಯಾರಾದರೂ ಒಬ್ಬರ ಹೆಸರು ಹೇಳು.'

ಗುಂಡ: `ನಂಗೆ ಇಬ್ಬರೂ‌ ಇಷ್ಟಾಪ್ಪಾ.'

ಕೆಂಚ: `ನಾನು ಅಮೇರಿಕಕ್ಕೆ ಹೋಗ್ತೀನಿ ಅಂತಿಟ್ಕೋ, ನಿಮ್ಮಮ್ಮ ಪ್ಯಾರಿಸ್ಗೆ ಹೋಗ್ತಾಳೆ ಅಂತಿಟ್ಟುಕೊ. ನೀನು ಎಲ್ಲೀಗ್ ಹೋಗ್ತೀಯಾ?'

ಗುಂಡ: `ಪ್ಯಾರಿಸ್ಗೆ'

ಕೆಂಚ: `ಹಂಗಾದರೆ ನಿಮ್ಮಮ್ಮಾನೇ ಇಷ್ಟ ಅಂತ ಆಯ್ತಲ್ಲ?'

ಗುಂಡ: `ಹಾಗಲ್ಲಪ್ಪ, ಪ್ಯಾರಿಸ್ ಅಮೇರಿಕಕ್ಕಿಂತ ಚೆನ್ನಾಗಿರುತ್ತೆ ಅಂತ, ಅಷ್ಟೆ.'

ಕೆಂಚ: `ನಾನು ಪ್ಯಾರಿಸ್ಗೆ ಹೋಗಿ ಅವಳು ಅಮೇರಿಕಕ್ಕೆ ಹೋದೆ ಅಂತಿಟ್ಟುಕೋ. ಈಗ ನೀನು ಎಲ್ಲೀಗ್ ಹೋಗ್ತೀಯಾ?'

ಗುಂಡ: `ಅಮೇರಿಕಕ್ಕೆ.'

ಕೆಂಚ: `ಯಾಕೆ?'

ಗುಂಡ: `ಪ್ಯಾರಿಸ್ಗೆ ಹೋಗಾಯ್ತಲ್ಲ?'