http://petsfans.com/wp-content/uploads/2014/06/Pastor-who-did-things-to-little-girls_Naijapalsdotcom.jpg

ದಿನ ಬೆಳಗಾದ್ರೆ, ಪ್ರಾಣಿಗಳ ಬಗ್ಗೆ, ಅವುಗಳ ವಿಚಿತ್ರವಾದ ವರ್ತನೆಗಳ ಬಗ್ಗೆ ಕೇಳ್ತಾನೇ ಇರ್ತೀವಿ. ಆ ಪ್ರಾಣಿಗಳು ಎಷ್ಟು ಭಯಂಕರವೋ, ಅವುಗಳ ಬಗೆಗಿನ ಕಥೆ ಕೂಡ ಅಷ್ಟೇ ರೋಮಾಂಚನ. ಆದ್ರೆ, ಈ ಭಯಂಕರವಾದ ಪ್ರಾಣಿಗಳಿಗೂ ಒಂದು ವಾತ್ಸಲ್ಯ ತುಂಬಿರೋ ಮುಖ ಇದೆ ಅಂತ ಕೆಲವು ಘಟನೆಗಳು ತೋರ್ಸುತ್ವೆ. ಇದಕ್ಕೊಂದು ಉದಾಹರಣೆ, ಪಂಜಾಬಲ್ಲಿ ಕಂಡುಬಂದಿರೋ ಈ ಅಪರೂಪದ ದೃಶ್ಯ.

ಕಥೆ ಏನಪ್ಪಾ ಅಂದ್ರೆ, ಎರಡು ನಾಯಿ ಮರಿಗಳು ಒಂದು ಹಳೇ ಬಾವಿಯೊಳಗೆ ಬಿದ್ದೋಗಿವೆ. ಬಾವಿ ಆಳ ಜಾಸ್ತಿ ಇದ್ದಿದ್ರಿಂದ ಅವುಗಳಿಗೆ ಹೊರಗ್ ಬರಕ್ಕಾಗಿಲ್ಲ. ಈ ನಾಯಿಮರಿಗಳ ಅಮ್ಮನ ಆಕ್ರಂದನ ಕೇಳಿ ನಾಯಿಮರಿಗಳು ಕಳೆದೋಗಿವೆ ಅಂತ ಅವುಗಳ ಮಾಲೀಕಂಗೆ ಗೊತ್ತಾಯ್ತಂತೆ. 

ಸ್ವಲ್ಪ ಹೊತ್ತು ಹುಡುಕಾಡಿ, ಆ ಮನುಷ್ಯ ಬಾವಿಯೊಳಗ್ ನೋಡ್ದಾಗ, ಅವನ ಹೃದಯಾನೇ ಬಾಯಿಗೆ ಬಂದಂಗಾಗಿದೆ!

ಒಂದು ದೊಡ್ಡ ನಾಗರಹಾವು ಆ ಎರಡು ಮರಿಗಳ ಪಕ್ಕ ಕೂತಿತ್ತಂತೆ!ಆಶ್ಚರ್ಯ ಏನಪ್ಪಾ ಅಂದ್ರೆ, ಆ ಹಾವು ನಾಯಿಮರಿಗಳಿಗೆ ಕಿಂಚಿತ್ತೂ ತೊಂದ್ರೆ ಕೊಟ್ಟಿಲ್ಲ… ಬದ್ಲಾಗಿ, ಅವ್ಗಳನ್ನ ನೀರಿರೋ ಕಡೆ ಹೋಗ್ದೇ ಇರೋ ರೀತಿ ನೋಡ್ಕೋತಿತ್ತಂತೆ! ಇಷ್ಟೆಲ್ಲಾ ನೋಡಿ, ಆ ನಾಯಿಮರಿಗಳನ್ನ ಹೊರಕ್ಕೆ ತೆಗಿಯಕ್ಕೆ ಬರೋಬ್ಬರಿ 48 ಗಂಟೆಕಾಲ ಹಿಡಿದಿದೆ!

ನಾಯಿ ಮರಿಗಳನ್ನ ಬಾವಿಯಿಂದ ತೆಗಿಯಕ್ಕೆ ಜನ ಮುಂದಾದಾಗ, ಆ ಹಾವು ಸುಮ್ನೆ ಸೈಡಿಗೆ ಹೊರಟೋಯ್ತಂತೆ. ಆ ನಾಯಿಮರಿಗಳಿಗೆ ಒಂಚೂರೂ ಏನೂ ಆಗಿರ್ರ್ಲಿಲ್ಲ ಗೊತ್ತಾ? ಆಮೇಲೆ, ಆ ಹಾವನ್ನೂ ಹಿಡಿದು ಕಾಡಿಗೆ ತಗೊಂಡು ಹೋಗಿ ಬಿಟ್ಬಂದಿದ್ದಾರೆ ಜನ.

ನೋಡಿದ್ರಾ? ಬೇರೊಬ್ರು ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡ್ಬೇಕು ಅಂತಾ ಆ ಪ್ರಾಣಿಗಳಿಗೂ ಗೊತ್ತು!