ನರ್ಮದಾ ನದಿಯಲ್ಲಿರೋ ಶಿವಪುರಿ ಅಥವಾ ಮಂದಾತಾ ದ್ವೀಪದಲ್ಲಿರೋದೇ ಓಂಕಾರೇಶ್ವರ. ಈ ದ್ವೀಪಾನೇ ಓಂಕಾರ ಆಕಾರದಲ್ಲಿದೆ.

ಓಂಕಾರಾಕಾರದ ದ್ವೀಪದಲ್ಲಿ ಎರಡು ಗುಡಿಗಳಿವೆ

ಒಂದು ಸ್ವತಃ ಓಂಕಾರೇಷ್ವರನದ್ದೇ ಆದರೆ ಮತ್ತೊಂದು ಅಮರತ್ವದ ಒಡೆಯ ಅಮರೇಶ್ವರನದ್ದು.

ದ್ವಾದಶ ಜ್ಯೋತಿರ್ಲಿಂಗಗಳನ್ನ ಸ್ಮರಿಸೊ ಶ್ಲೋಕದಲ್ಲಿ ಮಾಮ್ಲೇಶ್ವರ ಅನ್ನೋ ಪದದ ಉಲ್ಲೇಖ ಇದ್ಯಲ್ಲಾ? ಅದೇ ಅಮರೇಶ್ವರ. ಇವೆರಡನ್ನೂ ಜ್ಯೋತಿರ್ಲಿಂಗ ಅಂತಲೇ ಜನ ನಂಬುತ್ತಾರೆ.

ಓಂಕಾರೇಶ್ವರ ದೇವಸ್ಥಾನದ ಹಿಂದೆ ಒಂದು ಕತೆ ಇದೆ

ಒಂದಾನೊಂದು ಕಾಲದಲ್ಲಿ ವಿಂಧ್ಯಾಚಲದ ರಾಜ ವಿಂಧ್ಯಾ ತಾನು ಮಾಡಿರೋ ಪಾಪಗಳನ್ನ ಮನ್ನಿಸು ಅಂತ ಶಿವನಿಗಾಗಿ ಪೂಜೆ ಮಾಡುತ್ತ, ಒಂದು ವಿಶೇಷ ಆಕಾರ ನಿರ್ಮಾಣ ಆಡಿ, ಅದರ ಮಧ್ಯೆ ಶಿವನ ವಿಗ್ರಹ ಇಟ್ಟು ಪೂಜೆ ಮಾಡಿದ್ದನಂತೆ.ಈ ಆಕೃತೀನೇ ಓಂಕಾರ ರೂಪದಲ್ಲಿತ್ತಂತೆ. ನಂತರ ಇಲ್ಲಿ ಶಿವ ಓಂಕಾರೇಶ್ವರ ಹಾಗೆ ಅಮರೇಶ್ವರ ಅನ್ನೋ ಎರಡು ರೂಪದಲ್ಲಿ ನೆಲೆಸಿದ ಅನ್ನೋ ಅಂತೆಕಂತೆ ಇದೆ.

ಮತ್ತೊಂದ ಕತೆಯ ಪ್ರಕಾರ ಇಕ್ಷ್ವಾಕು ಕುಲದ ಮಂದಾತ ಶಿವಭಕ್ತ ರಾಜ ಅನ್ನೋ ಇಲ್ಲಿ ಮಾಡಿದ ತಪದಿಂದ ಶಿವ ಇಲ್ಲಿ ಜ್ಯೋತಿರ್ಲಿಂಗವಾದನಂತೆ

ಇನ್ನೂ ಕೆಲವರ ಪ್ರಕಾರ ಮಂದಾತನ ಮಕ್ಕಳು ಅಂಬರೀಶ ಮತ್ತೆ ಮುಚಕುಂದ ಇಲ್ಲಿ ತಪಸ್ಸು ಮಾಡಿದ ಕಾರಣ ಶಿವ ಇಲ್ಲಿ ನೆಲೆಸಿದನಂತೆ. ಹಾಗಾಗೇ ಈ ದ್ವೀಪವನ್ನ ಮಂದಾತ ಅನ್ನಲಾಗುತ್ತಂತೆ.

ಮತ್ತೊಂದು ಅಂತೆಕಂತೆಯ ಪ್ರಕಾರ ಇಲ್ಲಿ ಸುರಾಸುರರ ಮಧ್ಯೆ ಒಂದು ಯುದ್ಧ ನಡೆದಿತ್ತು. ಯುದ್ಧದಲ್ಲಿ ಅಸುರು ಗೆದ್ದ ಕಾರಣ ಸುರರು ಶಿವನನ್ನ ಬೇಡಿಕೊಳ್ಳುತ್ತಾರಂತೆ. ಹಾಗಾಗಿ ಸುರರನ್ನ ಕಾಪಾಡೋಕೆ ಶಿವ ಇಲ್ಲಿ ನೆಲೆಸಿದ ಅಂತಲೂ ಹೇಳಲಾಗುತ್ತೆ.

ಈ ದ್ವೀಪದಲ್ಲಿ ಪಾರ್ವತೀ ದೇವಿ ಹಾಗೆ ಪಂಚಮುಖೀ ಗಣಪತಿಗೂ ಗುಡಿಗಳಿವೆ

ಅಷ್ಟೇ ಅಲ್ಲದೇ ಇಲ್ಲಿ ಶ್ರೀ ಶಂಕರಾಚಾರ್ಯಯ ಗುಹೆ ಕೂಡ ಇದ್ಯಂತೆ. ಇದೇ ಜಾಗದಲ್ಲಿ ಶ್ರೀ ಶಂಕರರಿಗೆ ಅವರ ಗುರು ಗೋವಿಂದಪಾದರು ಸಿಕ್ಕಿದ್ದು.

ಓಂಕಾರೇಶ್ವರನ ಬಗ್ಗೆ ಇನೂ ಕತೆಗಳಿವೆ

ಒಮ್ಮೆ ನಾರದ ವಿಂಧ್ಯ ಪರ್ವತಾನ ಕೀಟಲೆ ಮಾಡುತ್ತ ವಿಂಧ್ಯ ಪರ್ವತಕ್ಕಿಂತ ಮೇರು ಪರ್ವತ ಶ್ರೇಷ್ಟ ಹೇಳಿದ್ದಕ್ಕೆ ಸಿಟ್ಟಿಗೆದ್ದೆ ವಿಂಧ್ಯ ಶಿವನಿಗೆ ಪೂಜೆ ಮಾಡಿ ಮೇರು ಪರ್ವತಕ್ಕಿಂತ ಶ್ರೇಷ್ಟ ಆಗೋ ಹಾಗೆ ವರ ಬೇಡಿದಾಗ ಶಿವ ಇಲ್ಲಿ ಎರಡೆರಡು ಜ್ಯೋತಿರ್ಲಿಂಗ ರೂಪದಲ್ಲಿ ನೆಲೆಸಿದ ಅಂತಲೂ ಹೇಳುತ್ತಾರೆ.

ಓಂಕಾರೇಶ್ವರನ ದೇವಸ್ಥಾನದ ಶೈಲಿ ಕೂಡ ವಿಶೇಷ

ಇಲ್ಲಿನ ಗುಡಿ ನಾಗರ ಶೈಲಿಯಲ್ಲಿದ್ದು ಅತೀ ಎತ್ತರದ ಗೂಪುರ ಇದರ ಆಕರ್ಷಣೆ. ಎರಡು ಕೋಣೆಗಳನ್ನ ದಾಟಿ ಮುಂದೆ ಹೋದರೆ ನಿಮಗೆ ಓಂಕಾರೇಶ್ವರನ ದರ್ಶನ ಆಗುತ್ತೆ. ಇನ್ನೊಂದು ವಿಶೇಷ ಏನೆಂದರೆ ಇಲ್ಲಿ ಜ್ಯೋತಿರ್ಲಿಂಗ ಕಪೋಲದ ಕೆಳಗಿರದೇ ಗುಡಿಯ ಮೇಲಿದೆ.