https://cdn3.img.sputniknews.com/images/101965/58/1019655804.jpg

ಭಾರತದ ಮಿಲಿಟರಿ ಪ್ರಪಂಚದ ನಾಲ್ಕನೆ ಅತಿ ದೊಡ್ಡ ಮಿಲಿಟರಿ. ನಮ್ಮಲ್ಲಿ ಹೈ-ಟೆಕ್ ಶಸ್ತ್ರಾಸ್ತ್ರಗಳೆಷ್ಟೋ ಇವೆ. ನಮ್ಮ ಮಿಲಿಟರಿ ಬಜೆಟ್ ಕಡಿಮೆ ಇದ್ರೂ ಕೂಡ ಅಮೆರಿಕ, ರಷ್ಯಾ ದೇಶಗಳಲ್ಲಿರೋ ರೀತಿಯ ಟೆಕ್ನಾಲಜಿ ನಮ್ಮಲ್ಲೂ ಇದೆ ಅನ್ನೋದೇ ಹೆಮ್ಮೆಯ ವಿಷ್ಯ. ಶತ್ರುಗಳ ಎದೆಯಲ್ಲಿ ನಡುಕ ಹುಟ್ಸೋ ನಮ್ ವೆಪನ್ನುಗಳು ಯಾವ್ಯಾವುದು ನೋಡಿ.

10. ಪಿನಾಕ (mbrlS)

ಇದು ಡಿ.ಆರ್.ಡಿ.ಒ. ತಯಾರಿಸಿದ ಮಲ್ಟಿಪಲ್ ಬ್ಯಾರಲ್ ರಾಕೆಟ್ ಲಾಂಚ್ ಸಿಸ್ಟಮ್. ಕಾರ್ಗಿಲ್ ಯುದ್ಧದ ಸಮಯದಲ್ಲಿ ಇದರ ಶಕ್ತಿ ಪ್ರೂವ್ ಆಗಿದೆ. 44 ಸೆಕೆಂಡುಗಳಲ್ಲಿ 12 ಮಿಸೈಲುಗಳನ್ನು ಫೈರ್ ಮಾಡೋ ಸಾಮರ್ಥ್ಯ ಇದೆ. ರಿಲೋಡ್ ಮಾಡೋದಿಕ್ಕೆ ನಾಲ್ಕು ನಿಮಿಷ ಸಾಕು. 8×8 ಟಾಟ್ರಾ ಟ್ರಕ್ಕಿನಲ್ಲಿ 12 ರಾಕೆಟ್ಟುಗಳಿರೋ ಈ ಲಾಂಚ್ ಸಿಸ್ಟಮನ್ನು ಲೋಡ್ ಮಾಡ್ತಾರೆ. Inertial Navigation System ಅನ್ನೋ ಟೆಕ್ನಾಲಜಿ ಬಳಸಿ ಟಾರ್ಗೆಟ್ ವಸ್ತುವಿನ ವಿವರಗಳನ್ನ ಲೆಕ್ಕ ಹಾಕುತ್ತೆ ಪಿನಾಕ. ಅಮೆರಿಕಾದ M270 ಇದೇ ಥರದ ರಾಕೆಟ್ ಲಾಂಚ್ ಸಿಸ್ಟಮ್. ಆದರೆ ನಮ್ಮ ಪಿನಾಕ ಅದಕ್ಕಿಂತ ಹತ್ತು ಪಟ್ಟು ಕಡಿಮೆ ಖರ್ಚಲ್ಲಿ ತಯಾರಾಗಿದೆ.

ಮೂಲ

9. T-90S ಭೀಷ್ಮ

ಇದು ರಷ್ಯಾದಲ್ಲಿ ತಯಾರಾದ ಟ್ಯಾಂಕ್. ಭಾರತದ ಮಿಲಿಟರಿ ಇಂಥ ಏಳ್ನೂರು ಟ್ಯಾಂಕುಗಳನ್ನ ರಷ್ಯಾದಿಂದ ಕೊಂಡ್ಕೊಂಡಿದೆ. ಇನ್ನೂ 347 ಟ್ಯಾಂಕುಗಳನ್ನ ಭಾರತದಲ್ಲೇ ತಯಾರು ಮಾಡ್ತಿದ್ದಾರೆ. ಇದು ತಯಾರಾದ ಮೇಲೆ ದಕ್ಷಿಣ ಏಷ್ಯಾದಲ್ಲೇ ಮಾಡರ್ನ್ ಟ್ಯಾಂಕುಗಳಿರೋ ಅತಿ ದೊಡ್ಡ ಮಿಲಿಟರಿ ನಮ್ಮದಾಗುತ್ತೆ. ಈ ಟ್ಯಾಂಕುಗಳನ್ನ ಮೂವತ್ತು ವರ್ಷ ಉಪ್ಯೋಗಿಸ್ಬಹುದು. ಈ ಟ್ಯಾಂಕಿನ ತೂಕ 48,000 ಕಿಲೋ. ನೀರಿನಲ್ಲಿ ಐದು ಮೀಟರ್ ಆಳಕ್ಕೆ ಇರೋ ತಡೆಯನ್ನ ಕೂಡ ಸುಲಭವಾಗಿ ದಾಟುತ್ತೆ. ಜ್ಯಾಮಿಂಗ್ ಸಿಸ್ಟಮ್, ಲೇಸರ್ ವಾರ್ನಿಂಗ್ ರಿಸೀವರ್, ಡೇ ಆಂಡ್ ನೈಟ್ ಸೈಟಿಂಗ್ ಸಿಸ್ಟಮ್ ಮುಂತಾದ ಅತ್ಯಾಧುನಿಕ ಟೆಕ್ನಾಲಜಿ ಇದೆ.

ಮೂಲ

ಮೂಲ

8. INS ವಿಕ್ರಮಾದಿತ್ಯ

24 ಮಿಗ್-29k ಫೈಟರ್ಗಳು ಮತ್ತು 6 ASW/AEW ಹೆಲಿಕಾಫ್ಟರುಗಳನ್ನ ಹೊರೋ ಸಾಮರ್ಥ್ಯ ಇರೋ ಈ ಏರ್-ಕ್ರಾಫ್ಟ್ ಕ್ಯಾರಿಯರಿನ ತೂಕ ನಲವತ್ತೈದು ಸಾವಿರ ಕಿಲೋ! ರಷ್ಯಾದಿಂದ 2.35 ಬಿಲಿಯನ್ ಡಾಲರ್ ಬೆಲೆಗೆ ಕೊಂಡ್ಕೊಂಡಿರೋದು. ರಾಡಾರ್ ಸಿಸ್ಟಮ್ಗಳಿಗೆ ಇದನ್ನ ಟ್ರ್ಯಾಕ್ ಮಾಡೋಕೆ ಆಗ್ದಿರೋ ಥರದ ಟೆಕ್ನಾಲಜಿ ಇದೆ ಇದ್ರಲ್ಲಿ.

ಮೂಲ

7. ನಾಗ್ ಮಿಸೈಲ್ ಮತ್ತು ನಾಗ್ ಮಿಸೈಲ್ ಕ್ಯಾರಿಯರ್

300 ಕೋಟಿ ರುಪಾಯಿ ಖರ್ಚಿನಲ್ಲಿ ಡಿ.ಆರ್.ಡಿ.ಒ. ತಯಾರಿಸಿರೋ ನಾಗ್ ಮಿಸೈಲ್ 'ಫೈರ್ ಆಂಡ್ ಫರ್ಗೆಟ್' ಮಿಸೈಲ್. ಅಂದ್ರೆ ಒಮ್ಮೆ ಟಾರ್ಗೆಟ್ಟಿನ ವಿವರಗಳನ್ನ ಕೊಟ್ಟು ಫೈರ್ ಮಾಡಿದ್ರೆ ಬೇರೆ ಯಾವ್ದೇ ಸಹಾಯ ಇಲ್ದೆ ಸೀದಾ ಟಾರ್ಗೆಟ್ಟನ್ನು ಮುಟ್ಟುವ ಸಾಮರ್ಥ್ಯ ಇರೋ ಮಿಸೈಲ್ ಇದು. ನಾಮಿಕಾ ಅನ್ನೋ ನಾಗ್ ಮಿಸೈಲ್ ಕ್ಯಾರಿಯರ್ ನೀರು ಮತ್ತು ನೆಲ – ಎರಡೂ ಕಡೆ ಕೆಲಸ ಮಾಡುತ್ತೆ. ಹನ್ನೆರಡು ನಾಗ್ ಮಿಸೈಲುಗಳನ್ನ ಹೊರೋ ಸಾಮರ್ಥ್ಯ ಇದೆ ನಾಮಿಕಾಗೆ.

ಮೂಲ

ಮೂಲ

6. ಫಾಲ್ಕನ್ AWACS

Airborne Early Warning and Control System (AWACS) ಶತ್ರು ವಿಮಾನ, ಹಡಗುಗಳನ್ನ ದೂರದಿಂದಲೇ ಕಂಡು ಹಿಡಿಯೋದಿಕ್ಕೆ ಇರೋದು. 400 ಕಿಲೋಮೀಟರ್ ದೂರದಿಂದ್ಲೇ ಕಂಡು ಹಿಡಿಯೋ ಸಾಮರ್ಥ್ಯ ಇದೆ ಫಾಲ್ಕನ್ AWACS ಗೆ!

ಮೂಲ

5. PAD/ AAD ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್

ಬ್ಯಾಲಿಸ್ಟಿಕ್ ಮಿಸೈಲ್ ಅಂದ್ರೆ ಸ್ವಲ್ಪ ದೂರ ವಿಮಾನದಲ್ಲಿ ಹೊತ್ಕೊಂಡು ಮತ್ತೆ ಗುರುತ್ವಾಕರ್ಷಣೆಯಿಂದಾಗಿ ಎಲ್ಲಿ ಬೇಕಾದ್ರೂ ಬೀಳಬಹುದಾದ ಮಿಸೈಲ್. ಇದು ಶಾರ್ಟ್-ರೇಂಜ್ ಮಿಸೈಲ್. ಈ ರೀತಿಯ ಮಿಸೈಲ್ ದಾಳಿ ಪಾಕಿಸ್ತಾನ್ ಮತ್ತು ಚೀನಾ ದೇಶಗಳು ನಮ್ ಮೇಲೆ ಮಾಡೋ ಸಾಧ್ಯತೆ ಇರೋದ್ರಿಂದ ಭಾರತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸನ್ನ (BMD) ಶುರು ಮಾಡಿದೆ. BMD ಐದು ಸಾವಿರ ಕಿಲೋಮೀಟರ್ ದೂರದಲ್ಲಿ ಎಲ್ಲೇ ಬ್ಯಲಿಸ್ಟಿಕ್ ಮಿಸೈಲ್ ದಾಳಿ ಆದ್ರೂ ಅದನ್ನ ಕೆಳಗುರುಳಿಸೋ ಶಕ್ತಿ ಇರೋ ವ್ಯವಸ್ಥೆ. ಈ ರೀತಿಯ ವ್ಯವಸ್ಥೆಯನ್ನ ಮಾಡಿರೋ ನಾಲ್ಕನೇ ದೇಶ ಭಾರತ.

ಮೂಲ

4. INS ಚಕ್ರ

ರಷ್ಯಾ ತಯಾರು ಮಾಡಿರೋ ಈ ಸಬ್-ಮರೈನಿನ ತಯಾರಿಗೆ ಭಾರತ 900 ಮಿಲಿಯನ್ ಡಾಲರ್ ಬಂಡವಾಳ ಹಾಕಿದ್ರಿಂದ, ರಷ್ಯಾ ಇದನ್ನ ಭಾರತದ ಮಿಲಿಟರಿಗೆ ಹತ್ತು ವರ್ಷ ಲೀಸ್ಗೆ ಕೊಟ್ಟಿದೆ. ಸಾಧಾರಣ ಸಬ್-ಮರೈನುಗಳು ದಿವಸಕ್ಕೊಮ್ಮೆಯಾದ್ರೂ ನೀರಿನಿಂದ ಹೊರಗೆ ಬರ್ಲೇಬೇಕು. ಆದ್ರೆ INS ಚಕ್ರ ಹಾಗಲ್ಲ – ಎಷ್ಟು ಸಮಯ ಬೇಕಾದ್ರೂ ನೀರಿನೊಳಗೇ ಇರುತ್ತೆ!

ಮೂಲ

3. INS ವಿಶಾಖಪಟ್ಟಣ

ಇದೊಂದು ಡಿಸ್ಟ್ರಾಯರ್ ಹಡಗು. ಅಂದ್ರೆ ಬೇರೆ ಯುದ್ಧ ಹಡಗುಗಳನ್ನ ರಕ್ಷಣೆ ಮಾಡ್ತಾ ಶತ್ರು ಪಡೆಯ ಕಡೆ ಮುಂದೆ ನುಗ್ಗೋ ಹಡಗು. 163 ಮೀಟರ್ ಉದ್ದ, 7300 ಟನ್ನು ತೂಕ ಇರೋ ಈ ಹಡಗಿನಲ್ಲಿ ಎಂಟು ಸೂಪರ್ಸಾನಿಕ್ ಬ್ರಾಹ್ಮೊಸ್ ಆಂಟಿ-ಶಿಪ್ ಮಿಸೈಲುಗಳು, 32 ಬಾರಾಕ್-8 ಲಾಂಗ್ ಸರ್ಫೇಸ್ ಟು ಏರ್ ಮಿಸೈಲುಗಳು, ರಾಕೆಟ್ ಲಾಂಚರುಗಳು – ಎಲ್ಲ ಇದೆ. ಇಷ್ಟೇ ಅಲ್ಲ, ಯುದ್ಧದ ಸಮಯದಲ್ಲಿ ಏನಾದ್ರೂ ಹೊರಗೆ ನ್ಯೂಕ್ಲಿಯರ್ ಅಥ್ವಾ ಕೆಮಿಕಲ್ ದಾಳಿ ಆಗಿದ್ರೆ ಹೊರಗಿನ ವಾತಾವರಣದ ಮಾಲಿನ್ಯ ಒಳಗಿರೋರಿಗೆ ತಟ್ಟದ ಹಾಗೆ ಮಾಡೋ ‘Total Atmosphere Control System' ಇದ್ರಲ್ಲಿದೆ.

ಮೂಲ

2. ಸುಕೊಯ್ SU-30MKI

ಇದೊಂದು ಅದ್ಭುತ ಫೈಟರ್ ಜೆಟ್. ಎಚ್.ಎ. ಎಲ್ ನಲ್ಲಿ ಭಾರತದ ಅಗತ್ಯಗಳಿಗೆ ಸರಿಯಾಗಿ ಫ್ರೆಂಚ್, ಇಸ್ರೇಲಿ ಮತ್ತು ಭಾರತೀಯ ಇಂಜಿನಿಯರ್ಗಳು ತಯಾರಿಸಿರೋ ಈ ಜೆಟ್ 8 ಟನ್ನು ಆಯುಧವನ್ನ ಹೊರೋ ಸಾಮರ್ಥ್ಯ ಹೊಂದಿದೆ. ಮುಂದೆ ಇದಕ್ಕೆ ಬ್ರಹ್ಮೋಸ್ ಮತ್ತು ನಿರ್ಭಯ್ ಕ್ರೂಸ್ ಮಿಸೈಲುಗಳನ್ನ್ ಫಿಟ್ ಮಾಡ್ತಾರಂತೆ.

ಮೂಲ

1. ಬ್ರಹ್ಮೋಸ್ ಮಿಸೈಲ್

ಪ್ರಪಂಚದಲ್ಲಿಯೇ ಅತಿ ವೇಗದ ಕ್ರೂಸ್ ಮಿಸೈಲ್ ಇದು. ಕ್ರೂಸ್ ಮಿಸೈಲ್ ಅಂದ್ರೆ ಒಂದೇ ವೇಗದಲ್ಲಿ ಗಾಳಿಯಲ್ಲಿ ಚಲಿಸೋ ಸಾಮರ್ಥ್ಯ ಇರೋ ಮಿಸೈಲ್. ವರ್ಷಕ್ಕೆ ಇಂಥ ನೂರು ಮಿಸೈಲುಗಳನ್ನ ತಯಾರು ಮಾಡ್ತಿದ್ದಾರೆ. ಬ್ರಹ್ಮೋಸ್ ಪ್ರಾಜೆಕ್ಟಿಗೆ ಒಟ್ಟು 13 ಬಿಲಿಯನ್ ಡಾಲರ್ ಖರ್ಚಾಗುತ್ತೆ.

ಮೂಲ

ಇದ್ದೆಲ್ಲದರ ಜೊತೆ 30  ವರ್ಷಗಳ ನಂತರ ಎರಡು ’145 M – 777' ಅಲ್ಟ್ರಾ ಲೈಟ್ ಹೆವಿಟ್ಜರ್ ಫಿರಂಗಿಗಳನ್ನು ಅಮೇರಿಕಾದಿಂದ ಭಾರತ ಕೊಂಡ್ಕೊಂಡಿದೆ. ಈಗ ಹೇಳಿ, ಶತ್ರುಗಳಿಗೆ ನಡುಕ ಹುಟ್ಟುತ್ತಾ ಇಲ್ವ?