https://antekante.com

ಭಾರತದ ಈ 14 ಮಾರ್ಗಗಳಲ್ಲಿ ರೈಲಿನಲ್ಲಿ ಪ್ರಯಾಣ ಮಾಡಿದ್ರೆ ಅದ್ರಲ್ಲಿ ಸಿಗೋ ಮಜಾನೇ ಬೇರೆ. ವಿಮಾನದಲ್ಲೇ ಆಗಲಿ ಬಸ್ ಪ್ರಯಾಣದಲ್ಲೇ ಆಗಲಿ ಈ ರಮಣೀಯ ದೃಶ್ಯಗಳು ನಿಮಗೆ ಕಾಣಿಸೋದಿಲ್ಲ.

1. ಮಂಜಿನ ಯಾತ್ರೆ (ಖಜಿಗುಂಡ್-ಶ್ರೀನಗರ-ಬಾರಾಮುಲ್ಲಾ).

ಈ ದೃಶ್ಯ ಬಾಯಿ ಬಿಟ್ಕೊಂಡು ಹಾಗೆ ನೋಡ್ತಾನೆ ಇದ್ಬಿಡ್ತೀರಿ. ಜಮ್ಮು, ಶ್ರೀನಗರ ಹಾಗೂ ಬಾರಾಮುಲ್ಲಾ ಊರುಗಳನ್ನ ಸೇರಿಸೋ ಈ ದಾರಿಯಲ್ಲಿ ಪ್ರಯಾಣ ಮಾಡೋದೇ ಒಂದು ಮಜ. ಭಾರತದ ಅತೀ ಉದ್ದದ ಸುರಂಗ ಮಾರ್ಗ 11.2 ಕಿಲೋಮೀಟರು, ಪೈನ್ ಮರಗಳ ಕಾಡಿನ ದಾರಿ, ಮಂಜು ತುಂಬಿದ ಬೆಟ್ಟಗಳು ಕಾಶ್ಮೀರದ ಈ ಸೊಬಗು ನಿಮ್ಮ ಮನಸೂರೆಗೊಳ್ಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಬಾರಾಮುಲ್ಲಾ ಬನಿಹಾಲ್ ಡೆಮೋ ಟ್ರೈನ್ ನಿಮಗೆ ಈ ಸುಂದರ ಅನುಭವ ಕೊಡುತ್ತೆ.

https://www.msn.com
2. ಕಾಶ್ಮೀರ ರೈಲ್ವೆ (ಜಮ್ಮು – ಉಧಾಮ್ ಪುರ್).

ನಿಮ್ಮನ್ನ ಹಿಮಾಲಯದ ಮಡಿಲಿಗೆ ಕರ್ಕೊಂಡು ಹೋಗೋದೇ ಈ ಜಮ್ಮು ಉಧಾಮ್ ಪುರ್ ರೈಲಿನ ಪ್ರಯಾಣ. ದೊಡ್ಡ ದೊಡ್ಡ ಪರ್ವತಗಳ ಸಾಲು, ಚಿನಾರ್ ಮರಗಳ ಸುಂದರ ಕಣಿವೆ, ನೀಲಿ ಬಾನಿಗೆ ಹೊರಟಂತೆ ಕಾಣೋ ಮರಗಳು ಮತ್ತೇನು ಬೇಕು ನಿಮ್ಮ ಮನಸ್ಸು ಕಡಿಯೋದಕ್ಕೆ?. ಈ ಮಾರ್ಗದಲ್ಲಿ ರೈಲು 158 ಸೇತುವೆ, 20 ಪ್ರಮುಖ ಸುರಂಗಗಳ ಮೂಲಕ ನಿಮ್ಮನ್ನು ಕರ್ಕೊಂಡು ಹೋಗುತ್ತೆ. ಜಮ್ಮು ಮೇಲ್ ರೈಲು ನಿಮಗೆ ಈ ಪ್ರಯಾಣದ ಅನುಭವ ಮಾಡಿಸುತ್ತೆ.

https://www.msn.com
3. ಕೊಂಕಣ ಕರಾವಳಿ ರೈಲು ಮಾರ್ಗ (ರತ್ನಗಿರಿ – ಮಡಗಾವ್- ಹೊನ್ನಾವರ- ಮಂಗಳೂರು).

ನೈಋತ್ಯ ಕರಾವಳಿ ಪ್ರದೇಶ, ಭತ್ತದ ಗದ್ದೆಗಳು, ಮಾವಿನ ತೋಪು, ತೆಂಗಿನ ತೋಟ, ಸಮುದ್ರ ಸೇರೋದಕ್ಕೆ ಓಡಿ ಹೋಗ್ತಾ ಇರೋ ನದಿಗಳು ಈ ಸೊಬಗನ್ನು ಸವಿಬೇಕು ಅಂದ್ರೆ ನೀವು ಕೊಂಕಣ್ ರೈಲು ಮಾರ್ಗದಲ್ಲಿ ಪ್ರಯಾಣ ಮಾಡಬೇಕು. ಅದರಲ್ಲೂ ಮಳೆಗಾಲದಲ್ಲಿ ಹೋದ್ರೆ ಕಣ್ಣು ಮಿಟುಕಿಸದೆ ನೋಡ್ತಾನೆ ಇರೋಣ ಅಂತ ಅನ್ನಿಸೋದು ಗ್ಯಾರಂಟಿ. ಮಾಂಡೋವಿ ಎಸ್ಕ್ಪ್ರೆಸ್ ನಿಮಗೆ ಈ ರಮಣೀಯ ದೃಶ್ಯಗಳನ್ನ ತೋರಿಸುತ್ತೆ.

https://www.easemytrip.com

4. ಸಮುದ್ರಕ್ಕೆ ಕಟ್ಟಿರೋ ಸೇತುವೆ ಮೇಲೆ ಪ್ರಯಾಣದ ಸುಖ (ಮಂಡಪಂ-ಪಂಬನ್-ರಾಮೇಶ್ವರಂ).

ಹಿಂದೂ ಮಹಾ ಸಾಗರದಲ್ಲಿ ಹೋಗ್ತಾ ಸೂರ್ಯ ಹಾಗೂ ಸಮುದ್ರದ ಬೆಳಕಿನಾಟ ಸವಿಯೋದಕ್ಕೆ ಸೇತು ಎಸ್ಪ್ರೆಸ್ ನಲ್ಲಿ ಪ್ರಯಾಣ ಮಾಡಬೇಕು. ಪಂಬನ್ ದ್ವೀಪ ತಲುಪೋದಕ್ಕೆ ಈ ಸಮುದ್ರಕ್ಕೆ ಕಟ್ಟಿರೋ ಸೇತುವೆ ಮೇಲೆ ಈ ರೈಲು ಓಡಾಡುತ್ತೆ.ಈ ಅನುಭವ ನಿಮ್ಮ ಮನಸ್ಸಿನಲ್ಲಿ ಹೆಚ್ಚು ಕಾಲ ಉಲಿಯೋದ್ರಲ್ಲಿ ಅನುಮಾನಾನೇ ಇಲ್ಲ.

https://www.msn.com
5. ನೀಲಗಿರಿ ಬೆಟ್ಟಗಳ ರೈಲುಮಾರ್ಗ (ಮೆಟ್ಟುಪಾಳಯಂ – ಉಧಗಮಂಡಲಂ/ಊಟಿ).

ಚಯ್ಯ ಚಯ್ಯ ಅನ್ನೋ ಹಾಡು ಕೇಳಿದ್ದೀರಾ? ಹೌದು ಶಾರುಖ್ ಖಾನ್ ಹಾಗೂ ಮಲೈಕಾ ಅರೋರಾ ಡಾನ್ಸ್ ಮಾಡಿರೋ ಆ ಹಾಡಿನ ಚಿತ್ರೀಕರಣ ಮಾಡಿರೋದು ಈ ರೈಲು ಮಾರ್ಗದಲ್ಲೇ. ಇಲ್ಲೇ ನಿಮಗೆ ತಮಿಳು ನಾಡಿನ ನೀಲಿ ಬೆಟ್ಟಗಳ ರಮಣೀಯ ದೃಶ್ಯ ನೋಡೋದಕ್ಕೆ ಸಿಗೋದು. ಬೆಟ್ಟಗಳ ಮಧ್ಯೆ, ಕಿರಿದಾದ ಸುರಂಗ ಮಾರ್ಗ, ಪ್ರಪಾತದ ತುದಿಯಲ್ಲಿ ಪ್ರಯಾಣ, ದಟ್ಟ ಹಚ್ಚ ಹಸಿರು ಕಾಡು ಈ ಅದ್ಭುತವಾದ ದೃಶ್ಯ ನೋಡಬೇಕು ಅಂದ್ರೆ ನೀವು ನೀಲಗಿರಿ ಮೌಂಟೇನ್ ರೈಲ್ವೇ ಟಾಯ್ ಟ್ರೈನ್ (ಮೆಟ್ಟುಪಾಳಯಂ – ಉಧಗಮಂಡಲಂ/ಊಟಿ ಮಧ್ಯೆ ಓಡಾಡೋ ಆಟಿಕೆ  ರೈಲಿನ ) ಪ್ರಯಾಣ  ಮಾಡಬೇಕು.

https://www.msn.com
6. ಮರುಭೂಮಿ ರಾಣಿ (ಜೈಪುರ-ಜೈಸಲ್ಮೇರ್).

ಚಿನ್ನದ ಬಣ್ಣದ ಮರಳಿನ ಸೊಬಗು, ಬಣ್ಣ ಬಣ್ಣದ ಪೇಟ ಕಟ್ಟಿಕೊಂಡು ಓಡಾಡ್ತಿರೋ ಗಂಡಸರು, ಬಣ್ಣ ಬಣ್ಣದ ಮೈಮನ ಸೆಳೆಯೋ ಸ್ಥಳೀಯ ಉಡುಗೆ ತೊಟ್ಟಿರೋ ಹೆಂಗಸರು, ಕಣ್ಣಿಗೆ ಕಾಣಿಸುವಷ್ಟು ದೂರಕ್ಕೂ ಬರೀ ಮರಳು, ಅಲ್ಲಲ್ಲಿ ಕುರುಚಲು ಗಿಡಗಳು ಇದೆನ್ನೆಲ್ಲ ನೋಡಕ್ಕೆ ಥಾರ್ ಮರುಭೂಮಿಗೆ ಹೋಗ್ಬೇಕು. ಹೌದು ಸುಂದರ ದೇವಸ್ಥಾನಗಳೇ ಇರೋ ಊರು ಹಾಗೆ ಒಂಟೆಗಳು ಇವೆಲ್ಲ ನಿಮಗೆ ಕಾಣ್ಸುತ್ತೆ. ದೆಹಲಿ ಜೈಸಲ್ಮೇರ್ ಎಕ್ಸ್ಪ್ರೆಸ್ ಈ ಸುಂದರ ಕ್ಷಣಗಳನ್ನ ನೀವು ಕಣ್ತುಂಬಿಕೊಳ್ಳೋದಕ್ಕೆ ನಿಮ್ಮನ್ನ ಕರ್ಕೊಂಡು ಕೊಗುತ್ತೆ. ಜೈಪುರ್ –  ಜೈಸಲ್ಮೇರ್ ಮಾರ್ಗದಲ್ಲಿ ಹೋಗೋ ರೈಲಲ್ಲಿ ಪ್ರಯಾಣ ಮಾಡಬೇಕು ಅನ್ನೋದು ನೆನಪಿರಲಿ.

https://st2.indiarailinfo.com

7. ಮನಮೋಹಕ ಮಲೆನಾಡು (ಹಾಸನ – ಮಂಗಳೂರು).

ಪ್ರಕೃತಿಯ ಅತ್ಯುತ್ತಮ ನೋಟ, ಅಲ್ಲಲ್ಲೇ ಕಾಣಿಸೋ ಅದ್ಭುತ ಜಲಪಾತಗಳು, ದಟ್ಟವಾದ ಕಾಡಿನಲ್ಲಿ ಮುಚ್ಚಿಹೋಗಿರುವಂತೆ ಕಾಣೋ ಬೆಟ್ಟಗಳು, 57 ಸುರಂಗಗಳು, ಹಲವಾರು ಸೇತುವೆಗಳ ಮೇಲೆ ಪ್ರಯಾಣ ಮಾಡುತ್ತ, ನಿಮ್ಮ ಕಣ್ಣು ತುಂಬಾ ಈ ಪ್ರಕೃತಿ ಸೊಬಗನ್ನು ತುಂಬಿಕೊಳ್ಳೋದಕ್ಕೆ ನೀವು ಹಾಸನದಿಂದ ಮಂಗಳೂರಿಗೆ ಯಶವಂತಪುರ – ಕಣ್ಣೂರು ಎಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಬೇಕು.

http://www.tvdaijiworld.com

8. ಪಶ್ಚಿಮ ಘಟ್ಟಗಳು (ಕರ್ಜಾತ್ – ಲೋನವಾಲಾ).

ಕರ್ಜಾತ್ – ಲೋನವಾಲಾ ಈ ಊರುಗಳ ಮಧ್ಯೆ ರೈಲಿನಲ್ಲಿ ಪ್ರಯಾಣ ಮಾಡೋವಾಗ ನಿಮ್ಮ ಕಣ್ಣಿಗೆ ಕಣೋ ಮನಮೋಹಕ ದೃಶ್ಯ ನಿಮ್ಮ ಮನಸ್ಸಿನಲ್ಲಿ ಅಚ್ಚುಳಿಯೋದು ಖಂಡಿತ. ಈ ರೈಲು ಸುರಂಗ ಮಾರ್ಗಗಳನ್ನು ದಾಟಿ ಹೊರಬಂದಾಗ ಹಸಿರಿನ ಮೇಲೆ ಬೀಳುವ ಬೆಳಕು, ಅಲ್ಲಲ್ಲಿ ಬೆಳ್ಳಿ ನೊರೆಯಂತೆ ಬೀಳುವ ಜಲಪಾತ ಇದು ನಿಮ್ಮ ಮನಸೂರೆಗೊಳ್ಳೋದ್ರಲ್ಲಿ ಅನುಮಾನಾನೇ ಇಲ್ಲ. ಡೆಕ್ಕನ್ ಎಕ್ಸ್ಪ್ರೆಸ್ ಹಾಗೂ ಇತರ ರೈಲುಗಳು ಈ ಮಾರ್ಗದಲ್ಲಿ ಓಡಾಡುತ್ತವೆ.

https://www.msn.com
9. ಕೇರಳದ ಹಿನ್ನೀರಿನ ಸೊಬಗು (ಎರ್ನಾಕುಲಂ-ಕೊಲ್ಲಂ-ತ್ರಿವೆಂಡ್ರಮ್).

ಕೇರಳದ ಹಿನ್ನೀರಿನ ಸೊಬಗು, ಹಳ್ಳಿಗಳ ಜನ ಜೀವನ, ಭತ್ತದ ಗದ್ದೆಗಳು, ಹೆಚ್ಚಿನ ಸೊಬಗು, ಆಹ್ಲಾದಕರ ರೈಲಿನ ಪ್ರಯಾಣದ ಅನುಭವ ಪಡೆಯೋದಕ್ಕೆ ನೀವು ಎರ್ನಾಕುಲಂ ನಿಂದ ತಿರುವನಂತಪುರಕ್ಕೆ ಕೊಲ್ಲಮ್ ಮೂಲಕ ರೈಲಿನ ಪ್ರಯಾಣ ಮಾಡಬೇಕು. ತ್ರಿವೇಂದ್ರಮ್ ಎಸ್ಪ್ರೆಸ್ ನಿಮಗೆ ಈ ಅನುಭವ ಮಾಡಿಸುತ್ತೆ.

https://www.msn.com
10. ಚಿಲ್ಕಾ ಕೆರೆಯ ರಂಗು, ಸೊಬಗು (ಭುವನೇಶ್ವರ-ಬ್ರಹ್ಮಪುರ).

ಭಾರತದ ಎರಡನೇ ಅತ್ಯಂತ ದೊಡ್ಡ ಉಪ್ಪು ನೀರಿನ ಕೆರೆ, ಅದರ ಬಣ್ಣ ಒಂದು ಕಡೆ, ಪೂರ್ವ ಘಟ್ಟದ ಸಾಲು ಮತ್ತೊಂದು ಕಡೆ. ಬೆಳಗಿನ ಹೊತ್ತು ಪ್ರಯಾಣ ಮಾಡಿದರೆ ನಿಮಗೆ ಒರಿಸ್ಸಾದ ಈ ಸೊಬಗು ಸವಿಯೋದಕ್ಕೆ ಸಾಧ್ಯ. ಕೋನಾರ್ಕ್ ಎಸ್ಪ್ರೆಸ್ ನಿಮಗೆ ಈ ಪ್ರಕೃತಿಯ ಸೊಬಗಿನ ದರ್ಶನ ಮಾಡಿಸುತ್ತೆ.

https://www.msn.com
11. ಐಲ್ಯಾಂಡ್ ಎಕ್ಸ್ಪ್ರೆಸ್ (ಕನ್ಯಾಕುಮಾರಿ – ತಿರುವನಂತಪುರಂ).

ಐಲ್ಯಾಂಡ್ ಎಕ್ಸ್ಪ್ರೆಸ್ ನಿಮ್ಮನ್ನ ಕೇರಳ – ತಮಿಳುನಾಡಿನ ಹುಲ್ಲುಗಾವಲು, ಕಾಡಿನ ಕ್ಯಾನೋಪಿ ಮಧ್ಯೆ ಅದ್ಭುತವಾದ ದೃಶ್ಯಗಳನ್ನ ತೋರಿಸುತ್ತ ಕರ್ಕೊಂಡು ಹೋಗುತ್ತೆ. ಸಣ್ಣ ಪುಟ್ಟ ಮನೆಗಳು, ಚರ್ಚುಗಳು ಜೊತೆಗೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡ್ತಿರೋ ಗಂಡಸರು, ಹೆಂಗಸರು, ಹಳ್ಳಿಯ ವಾತಾವರಣ ಇದೆಲ್ಲ ನಿಮಗೆ ಕಾಣ್ಸುತ್ತೆ.

https://www.msn.com
12. ಪಶ್ಚಿಮ ಘಟ್ಟಗಳ ಸೊಬಗು ನೋಡಲು ಗೋವಾ ಎಸ್ಪ್ರೆಸ್ (ವಾಸ್ಕೋಡಗಾಮ – ಲೋಂಡಾ).

ಅನಿಶ್ಚಿತ ತಿರುವು, ಕಡಲ ತೀರ, ಇನ್ನೂ ಹಳಗದ ಗೋವಾ ಹಳ್ಳಿಗಳ ಸೊಗಡು, ಭಾರತ ಅತ್ಯಂತ ಸುಂದರ ಜಲಪಾತಗಳಲ್ಲಿ ಒಂದಾದ ದೂಧ್ ಸಾಗರ್, ಅದರ ಹತ್ತಿರದಿಂದ ಸಾಗುವಾಗ ನಿಮ್ಮ ಮೇಲೆ ಆಗುವ ನೀರಿನ ಸಿಂಚನ ಈ ರೋಮಾಂಚಕ ಪ್ರಯಾಣ ಮಾಡಬೇಕು ಅಂದ್ರೆ ಗೋವಾ ಎಕ್ಸ್ಪ್ರೆಸ್, ನಿಮಗೆ ಈ ಅದ್ಭುತ ಅನುಭವ ನೀಡುತ್ತೆ. ಇದೊಂದೇ ಟ್ರೈನ್ ಅಲ್ಲ, ವಾಸ್ಕೋದಿಂದ ಲೋಂಡಾ ಮಾರ್ಗದಲ್ಲಿ ಹೋಗೋ ಯಾವುದೇ ರೈಲಿನಲ್ಲಿ ಪ್ರಯಾಣ ಮಾಡಿದ್ರೂ ನಿಮಗೆ ಈ ಅನುಭವ ಸಿಗುತ್ತೆ.

https://www.msn.com
13. ದಿವಾರ್ಸ್ ವಾಯೇಜ್ (ಸಿಲಿಗುರಿ – ನ್ಯೂ ಮಾಲ್ – ಹಸಿಮಾರ – ಆಲಿಪುರೂರ್).

ಹಿಮಾಲಯ ಪರ್ವತದ ಕೆಳಭಾಗದಲ್ಲಿರುವ ಆಳವಾದ ಕಾಡುಗಳ ಮೂಲಕ ಹಾದುಹೋಗುವ ಹೊಸ ಜಲ್ಪೈಗುರಿ- ಅಲಿಪುರ್ದಾರ್ ರೈಲು, ರೈಲಿನ ಮೂಲಕ ವನ್ಯಜೀವಿ ಸಫಾರಿಯ ಅತಿವಾಸ್ತವಿಕ ಅನುಭವ ಕೊಡುತ್ತೆ. ಮಹಾನಂದ ವನ್ಯಜೀವಿ ಧಾಮ, ಚಪ್ರಾಮಾರಿ ಅರಣ್ಯ, ಜಲ್ಡಾಪಾರಾ ವನ್ಯಜೀವಿ ಅಭಯಾರಣ್ಯ ಮತ್ತು ಬುಕ್ಸ ಹುಲಿ ಸಂರಕ್ಷಿತ ಕಾಡಿನ ಮೂಲಕ ಹಾದುಹೋಗುವಾಗ ವನ್ಯಜೀವಿಗಳ ಜೊತೆ , ತೀಸ್ತಾ ನದಿ ಜೊತೆ ಜೊತೆಯಲ್ಲೇ ಮಾಡೋ ಪ್ರಯಾಣ ನಿಮಗೆ ವಿಶಿಷ್ಟ ರೀತಿಯ ಅನುಭವ ನೀಡುತ್ತೆ. KYQ ಕ್ಯಾಪಿಟಲ್ ಎಕ್ಸ್ಪ್ರೆಸ್ ಈ ಮಾರ್ಗದಲ್ಲಿ ನಿಮಗೆ ಕರ್ಕೊಂಡು ಹೋಗುತ್ತೆ.

https://www.msn.com
14. ಹಿಮಾಲಯದ ರಾಣಿ (ಕಲ್ಕಾ – ಶಿಮ್ಲಾ).

ಭಾರತದ ಅತ್ಯಂತ ಸುಂದರವಾದ ಚಿಕ್ಕ ಮೀಟರ್-ಗೇಜ್ ರೈಲ್ವೆ, ಹಿಮಾಲಯನ್ ರಾಣಿಯಲ್ಲಿ ಸವಾರಿ ಮಾಡಿ, ಇದು ಭಾರತದ ಅತ್ಯಂತ ಸುಂದರವಾದ ಬೇಸಿಗೆಯ ಪ್ರವಾಸಿ ತಾಣಕ್ಕೆ ನಿಮ್ಮನ್ನು ಕರ್ಕೊಂಡು ಹೋಗುತ್ತೆ. ಈ ಸುಂದರ ಪ್ರಯಾಣ ನೀವು ಪ್ರಸಿದ್ಧ 102 ಸುರಂಗಗಳು, 87 ಸೇತುವೆಗಳು ಮತ್ತು 900 ತಿರುವುಗಳ ಮೂಲಕ ಪ್ರಯಾಣ ಮಾಡುತ್ತಾ, ಇಳಿಜಾರಿನಲ್ಲಿರುವ ಕೆಂಪು ಹೂವುಗಳ ರಮಣೀಯ ದೃಶ್ಯ ನೋಡೋದಕ್ಕೆ ನಿಮ್ಮ ಕಣ್ಣು ಸಾಕ್ಷಿಯಾಗುತ್ತೆ. ಹಿಮಾಲಯನ್ ಕ್ವೀನ್ ಅನ್ನೋ ರೈಲು ನಿಮಗೆ ಈ ಸವರಿ ಮಾಡಿಸುತ್ತೆ. 

https://www.msn.com
ಇದು ಬರೀ ಈ 14 ಮಾರ್ಗಗಳಿಗೆ ಸೀಮಿತವಾಗಿಲ್ಲ, ಇನ್ನಷ್ಟು ಇದೆ ರೀತಿಯ ಅದ್ಭುತ ಅನುಭವ ಕೊಡೊ ಮಾರ್ಗಗಳಿವೆ. ಅದರ ಬಗ್ಗೆ ತಿಳ್ಕೊಂಡು ಪ್ರಯಾಣ ಮಾಡೋ ಆಸೆ ಇದ್ಯಾ?