https://cdn.wittyfeed.com/40319/rg1bxclg7k3m179de7he.jpeg

ಜೀವನದಲ್ಲಿ ಒಂದ್ ಘಳಿಗೆ ಇದ್ದಂಗೆ ಇನ್ನೊಂದ್ ಘಳಿಗೆ ಇರಲ್ಲ. ಆಕಸ್ಮಿಕ ಘಟನೆ ನಮ್ಮ ಜೀವನದಲ್ಲೂ ಆಗ್ಬೋದು. ಮಾಮೂಲು, ಬೋರು ಅನ್ನಿಸೊ ಜೀವನ ಒನೊಂದ್ಸಲ ಏನೋ ಮಾಡಕ್ ಹೋದಾಗ ಅಚ್ಚರಿ ಮೂಡ್ಸತ್ತೆ. ಯಾವಾಗ ವಿಸ್ಮಯಗಳು ನಮ್ ಕಾಲಿಗೇ ಸಿಕ್ಕಾಕೊಂಡು ಮೇಲಕ್ ಬರತ್ತೋ ಹೇಳಕ್ಕಾಗಲ್ಲ ಕಣ್ರಿ. ಇತಿಹಾಸದಲ್ಲಿ ಆಸಕ್ತಿ ಇರೋವ್ರು ಎಲ್ಲೆಲ್ಲೋ ಅಗೆದು ಮಾಡಿ ಏನೇನೋ ಹುಡುಕ್ತಿರ್ತಾರೆ. ಅವೆಲ್ಲ ಎಲ್ಲಾರಿಗೂ ಅಚ್ಚರಿ ಮೂಡ್ಸದೇ ಇಲ್ಲ. ಅವರು ಕಷ್ಟ ಪಟ್ಟು, ಏನೇನೋ ಲಾಜಿಕ್ ಪ್ರಕಾರ ಹುಡುಕಾಟ ನಡುಸ್ತಾರೆ. ಇವರು ಕಂಡು ಹಿಡಿಯದು ಹೊಸತಲ್ಲ, ಅದ್ರಲ್ಲಿ ವಿಶೇಷ ಅಂತ ಹೇಳದೂ ಏನಿರಲ್ಲ. ಆದ್ರೆ ಇಲ್ಲಿರೋ ಜಾಗಗಳ್ನ ಯಾವ ಇತಿಹಾಸ ಬಲ್ಲವ್ರೂ ಇರ್ಬೋದು ಅಂತ ಊಹೆನೂ ಮಾಡಿರ್ಲಿಲ್ಲ, ಆದ್ರೆ ಮಾಮೂಲಿ ಜನ ಅಕಸ್ಮಾತಾಗಿ ಏನೋ ಮಾಡಕ್ ಹೋದಾಗ ಕಂಡುಹಿಡ್ದಿದಾರೆ.

ಇಲ್ಲಿ ಅಂಥ 7 ಸಂಶೋಧನೆಗಳ್ನ ಪಟ್ಟಿ ಮಾಡಿ, ಹೇಗೆಲ್ಲಾ ಆಯ್ತು ಈ ವಿಸ್ಮಯ ಅಂತ ಕೊಟ್ಟಿದೀವಿ. ಓದಿ, ನಿಮ್ಗೂ ರೋಮಾಂಚನ ಆಗತ್ತೆ.

1) ಒಬ್ಬ ಸಾಮಾನ್ಯ ಸೈನಿಕ ಅಮೂಲ್ಯವಾದ ರೊಸೆಟ್ಟಾ ಕಲ್ಲು ಪತ್ತೆ ಹಚ್ಚಿದ

ಮೂಲ

1799ರಲ್ಲಿ ಫ್ರೆಂಚ್ ಸೇನೆ ಒಂದು ಮಿಲಿಟರಿ ಕಾರ್ಯಾಚರಣೆಗೋಸ್ಕರ ಈಜಿಪ್ಟ್ ಕಡೆ ಹೋಗ್ತಿರತ್ತೆ. ಈ ಸೇನೆ ಗುಂಪಲ್ಲಿ 167 ಜನ ಕಲಾವಿದರು ಮತ್ತೆ ವಿಜ್ಞಾನಿಗಳೂ ಇರ್ತಾರೆ. ಇವರು ಸನಾತನ ಸಂಸ್ಕೃತಿ, ಇತಿಹಾಸದ್ ಪಳೆಯುಳಿಕೆಗಳ್ನ ಶೋಧಿಸಕ್ಕೆ ಅಂತ ಬಂದಿರ್ತಾರೆ. ರೋಸೆಟ್ಟಾ ಅನ್ನೋ ಊರಲ್ಲಿ ಒಂದು ಕೋಟೆ ಕಟ್ಟೋ ಕೆಲ್ಸದ್ ಮೇಲೆ ಹೊರ್ಟಿರ್ತಾರೆ. ಅಲ್ಲಿ ಒಬ್ಬ ಸಾಮಾನ್ಯ ಸೈನಿಕಂಗೆ ಒಂದು ಚಪ್ಪಡಿ ಕಲ್ಲು ಸಿಕ್ಕಿರತ್ತೆ, ಅದನ್ನ ಅವ್ನು ಕೋಟೆ ಗೋಡೆ ಕಟ್ಟಕ್ಕೆ ಬಳಸ್ಬೇಕು ಅಂತಿರ್ತಾನೆ. ಆದ್ರೆ ಆ ಕಲ್ಲು ಅಧಿಕಾರಿಯೋಬ್ಬನ ಕಣ್ಣಿಗ್ ಬಿಳತ್ತೆ, ಆತ ಅದ್ರ ಮೇಲೆ ಕೆತ್ತಿದ್ದಂಥ ಬರವಣಿಗೆ ಗಮನಿಸ್ತಾನೆ. ಇದೇನೋ ವಿಶೇಷವಾಗಿದೆ ಅಂತ ಆ ಕಲ್ಲನ್ನ ಈಜಿಪ್ಟಿನ ಸಂಶೋಧನಾ ವಿದ್ಯಾಲಯಕ್ಕೆ ಕಳಿಸ್ತಾನೆ. ನಿಜಕ್ಕೂ ಆ ಕಲ್ಲಿನ ಮಹತ್ವ ಗೊತ್ತಾಗದು ಆಗ್ಲೇ. ಅದರ ಮೇಲೆ ಈಜಿಪ್ಷಿಯನ್ ಹೈರೋಗ್ಲಿಫಿಕ್, ಡೆಮೋಟಿಕ್ ಮತ್ತೆ ಗ್ರೀಕ್ ಈ 3 ಭಾಷೆನಲ್ಲಿ ಬರ್ದಿರ್ತಾರೆ. ಅವ್ರಿಗಿದ್ದ ಗ್ರೀಕ್ ಭಾಷಾ ಪಾಂಡಿತ್ಯನ ಉಪ್ಯೋಗುಸ್ಕೊಂಡು, ಆ ಕಲ್ಲಿನ್ ಮೇಲೆ ಏನ್ ಬರ್ದಿದೆ ಅಂತ ಕಂಡಿಡಿತಾರೆ. ಇದ್ರಿಂದಾಗಿ, ಎಷ್ಟೋ ವರ್ಷಗಳಿಂದ ಕಗ್ಗಂಟಾಗಿದ್ದ ಈಜಿಪ್ಷಿಯನ್ ಹೈರೋಗ್ಲಿಫಿಕ್ ಭಾಷೆನ ಅರ್ಥ ಮಾಡ್ಕೊಳಕ್ಕೆ ಗೊತ್ತಾಗುತ್ತೆ. ಇವತ್ತಿಗೂ ಅದು ರೋಸೆಟ್ಟಾ ಕಲ್ಲು ಅಂತನೇ ಪ್ರಸಿದ್ದವಾಗಿದೆ.

2) ಹಂಗೇ ನಡ್ಕೊಂಡು ಹೋಗ್ತಿರೋವ್ರು ಪುರಾತನವಾದ ಮಮ್ಮಿ ಪತ್ತೆ ಹಚ್ಚಿದರು

ಮೂಲ

1991ನೇ ಇಸವಿನಲ್ಲಿ ಏನೋ ಕೆಲ್ಸದ ಮೇಲೆ ನಡ್ಕೊಂಡು ಹೋಗ್ತಿದ್ದವ್ರು ಮಾಡಿರೋ ಅನಿರೀಕ್ಷಿತ ಸಂಶೋಧನೆ ಇದು. ಹೀಗೇ ನಡ್ಕೊಂಡ್ ಹೋಗ್ತಿರುವಾಗ, ಬೆತ್ತಲೆಯಾಗಿ, ವಿಕಾರ್ವಾಗಿರೊ ಒಂದು ಮನುಷ್ಯನ ಶವ ಹಿಮದಲ್ಲಿ ಹೂತೋಗಿರದು ಕಾಣ್ಸತ್ತೆ. ಅದರ ಚರ್ಮ ಸುಲಿದುಹೋಗಿ, ಕೆಂಪಗೆ ಕಾಣಿಸ್ತಿರತ್ತೆ. ತೀರ ಮೊನ್ನೆ ಮೊನ್ನೆ ಆ ವ್ಯಕ್ತಿ ಸತ್ತಿದಾನೇನೋ ಅನ್ಸತ್ತೆ. ಆ ದೃಷ್ಯ ನೋಡಿ ಇಬ್ರು ಅದೊಂದು ಕೊಲೆ ಇರ್ಬೋದೇನೋ ಅಂತ ಗಾಬರಿಯಿಂದ ಎದ್ನೋ ಬಿದ್ನೋ ಅಂತ ಓಡ್ಕೊಂಡ್ ಹೋಗಿ ಪೊಲೀಸ್ಗೆ ತಿಳಿಸ್ತಾರೆ. ಆಮೇಲಿಂದ ಆ ಶವನ ಹಿಮದಿಂದ ಹೊರಗ್ ತೆಗಿಯಕ್ಕೆ ಪೊಲೀಸ್ ತಂಡಕ್ಕೆ ಸುಮಾರು 4 ದಿನ ಬೇಕಾಗತ್ತೆ. ಆಗೊಂದು ಭಯಂಕರವಾದ್ ಸತ್ಯ ಹೊರಗ್ಬರತ್ತೆ. ಆ ಶವ ಕನಿಷ್ಟ ಅಂದ್ರೂ 5000 ವರ್ಷ ಹಳೇದು ಅಂತ. ಅದು ಗುಹೆನಲ್ಲಿ ವಾಸಮಾಡ್ತಿದ್ದ ಒಬ್ಬ ಆದಿಮಾನವನ್ ದೇಹ ಅಂತ ಗೊತ್ತಾಗುತ್ತೆ. ಹಿಮ ಅದನ್ನ ಮರುಗಟ್ಟಿಸಿ ಕಾಪಾಡಿ ಇಟ್ಟಿತ್ತು. ಆ ಮಮ್ಮಿನೇ ಇದುವರ್ಗೂ ಸಿಕ್ಕಿರೋ ಪ್ರಕೃತಿನೇ ಕಾಪಾಡ್ಕೊಂಡು ಬಂದಿರೋ ಮನುಷ್ಯರ ನಾಚುರಲ್ ಮಮ್ಮಿಗಳ ಪೈಕಿ ಅತ್ಯಂತ ಪುರಾತನವಾದ್ದು.

3) ಸಣ್ಣ ಹುಡುಗಿ ಹಿಂದಿನ ಜನ್ಮದ ನೆನಪಿಂದ ಒಂದು ಸಾಮ್ರಾಜ್ಯ ಹುಡುಕಿದಳು

ಮೂಲ

ದೊರೋಥಿ ಇಡಿ ಅನ್ನೋ ಹುಡುಗಿ 3 ವರ್ಷದೋಳಾಗಿದ್ದಾಗ ಮೆಟ್ಟಿಲಿಂದ ಕಾಲುಜಾರಿ ಬಿದ್ಬಿಟಿದ್ಲು. ಆಮೇಲಿಂದ ಅವ್ಳಿಗೆ ತಾನೊಂದು ಉದ್ದುದ್ದ ಕಂಬಗಳಿರೋ ಕಟ್ಟಡದಲ್ಲಿರೋಹಾಗೆ ವಿಚಿತ್ರವಾದ್ ಕನಸು ಬೀಳಕ್ಕೆ ಶುರುವಾಗತ್ತೆ. ಅದರ ಬಗ್ಗೆ ಅವ್ಳಿಗೂ ಸ್ಪಷ್ಟವಾಗಿ ಏನೂ ಗೊತ್ತಿರಲ್ಲ. ಆದ್ರೆ ಒಂದು ಸಲ ಅಪ್ಪ-ಅಮ್ಮನ ಜೊತೆ ಈಜಿಪ್ಟ್ ನಲ್ಲಿರೋ ಮ್ಯೂಸಿಯಂಗೆ ಹೋಗಿದ್ದಾಗ, ಅಲ್ಲಿ ಖುಷಿಯಿಂದ ಆಶ್ಚರ್ಯದಿಂದ ಅದು ತನ್ನ ಮನೆ ಅಂತ ಕಿರುಚಕ್ಕೆ ಶುರುಮಾಡ್ತಾಳೆ. ಮುಂದೆ ಬೆಳದ್ಮೇಲೆ ಆ ಯುವತಿ ಈಜಿಪ್ಟಿಗೆ ಬಂದು ನೆಲೆಸ್ತಾಳೆ. ತನ್ನ ಹೆಸರು ಒಮ್ಮ್ ಸೇಟಿ, ತಾನು ಈಜಿಪ್ಟಿನ ಅರಸನಾದ ಮೊದಲನೇ ಫೇರೋ ಸೇಟಿಯ ಪ್ರೇಯಸಿ ಈಗ ಮರು ಜನ್ಮತಾಳಿ ಬಂದಿದೀನಿ ಅಂತೆಲ್ಲಾ ಹೇಳಕ್ಕೆ ಶುರುಮಾಡ್ತಾಳೆ. ಮೊದ್ಲು-ಮೊದ್ಲು ಅವ್ಳ ಮಾತನ್ನ ಇತಿಹಾಸಕಾರ್ರು ತಳ್ಳಿಹಾಕ್ತಾರೆ. ಯಾರೋ ಹುಚ್ಚಿ ಇರ್ಬೇಕು ಅಂದ್ಕೊಂಡು ಅಷ್ಟು ಮಹತ್ವ ಕೊಡಲ್ಲ. ಆದ್ರೆ ಇಡಿ ಸುಮ್ನಿರ್ಲಿಲ್ಲ. ತಾನೇ ಗೈಡ್ ಮಾಡಿ ರಾಜ ಸೇಟಿಯ ದೇವಸ್ಥಾನ ಮತ್ತೆ ಉದ್ಯಾನವನನೆಲ್ಲ ಹುಡುಕಕ್ಕೆ ಸಹಾಯ ಮಾಡ್ತಾಳೆ. ಅವ್ಳು ಹೇಳಿದ್ ಜಾಗದಲ್ಲಿ ಅಗೆದಾಗ ನಿಜಕ್ಕೂ ಎಲ್ರಿಗೂ ಆಶ್ಚರ್ಯ ಆಗತ್ತೆ. ಅವಳು ಹೇಳ್ತಿದ್ದೆಲ್ಲ ನಿಜವಾಗಿತ್ತು. ಮುಂದೆ ಆಕೆ ತನ್ನ ಹಿಂದಿನ್ ಜನ್ಮದ್ ನೆನಪಲ್ಲೇ ಏನೇನೋ ಕೆಲ್ಸಗಳ್ನ ಮಾಡ್ಕೊಂಡು ಬದುಕು ಕಳೆದ್ಲು ಅಂತ ಹೇಳ್ತಾರೆ.

4) ಮಾಮೂಲಿ ರೈತ ಹಳೇಕಾಲದ ಚಿನ್ನದ ಮುದ್ರೆ ಹುಡುಕಿದ

ಮೂಲ

1784ನೇ ಇಸವಿನಲ್ಲಿ ಜಪಾನಿನ ರೈತ ಒಬ್ಬ ತನ್ನ ಜಮೀನಲ್ಲಿ ನೀರಾವರಿ ಹಳ್ಳನ ರಿಪೇರಿ ಮಾಡುವಾಗ, ಏನೋ ಒಂದು ಹೊಳಿತಿರೋ ವಸ್ತು ಬಂಡೆ ಮಧ್ಯ ಸಿಕ್ಕಾಕೊಂಡಿರದ್ ನೋಡ್ತಾನೆ. ಅದನ್ನ ಹೊರಕ್ ತೆಗೆದು, ತೊಳೆದು, ಅದೇ ಊರಲ್ಲಿ ಚೆನ್ನಾಗಿ ಓದ್ಕೊಂಡಿದ್ದ ಒಬ್ಬ ವ್ಯಕ್ತಿಹತ್ರ ತೊಗೊಂಡುಹೋಗಿ ತೋರುಸ್ತಾನೆ. ಆಗ ಆ ವಸ್ತುವಿನ ಮಹತ್ವ ಏನು ಅಂತ ಕಂಡಿಡಿತಾನೆ. ಅದೊಂದು ಚಿನ್ನದ ಮುದ್ರೆ. ಪೌರಾಣಿಕ ಹಿನ್ನಲೆ ಇರೋವಂಥದ್ದು. ಅದನ್ನ ಜಪಾನಿನ ಬೇಹುಗಾರನಿಗೆ ಚೈನೀಸ್ ರಾಜ ಗುವಾಂಗ್ಲು ಅನ್ನೋನು ಮೊದಲನೇ ಎಸ್ಟೇಟ್ ಸಭೆನಲ್ಲಿ ವಿಶ್ವಾಸದ ಕಾಣಿಕೆಯಾಗಿ ಕೊಟ್ಟಿರ್ತಾನೆ. ಇದೆಲ್ಲ ನಡ್ದಿದ್ದು ಕ್ರಿ.ಶ 57ರಲ್ಲಿ ಅಂತ ಗೊತ್ತಾಗುತ್ತೆ.

5) ಕಂಪ್ಯೂಟರಲ್ಲಿ ಆಟ ಆಡ್ಕೊಂಡು ರೋಮಲ್ಲಿರೊ ಪುರಾತನ ಬಂಗಲೆ ಹುಡುಕಿದ

ಮೂಲ

ಇಟಲಿಯ ವ್ಯಕ್ತಿಯೊಬ್ಬ ಹಾಗೇ ಸುಮ್ನೆ ಕಂಪ್ಯೂಟರಲ್ಲಿ ಆಟ ಆಡ್ತಾ, ಗೂಗಲ್ ಅರ್ಥ್ ನೋಡ್ತಾ ಕಾಲಕಳೀತಿರ್ವಾಗ, ಸ್ಪೇಸ್ ಇಂದ ಅವ್ನ ಊರು ಹೇಗ್ ಕಾಣುತ್ತೆ ಅಂತ ನೋಡ್ತಿದ್ದ. ಆಗ ನೆಲದ ಮೇಲೆ ಮೊಟ್ಟೆ ಆಕಾರ್ದಲ್ಲಿ ಅಸ್ಪಷ್ಟವಾಗಿ ಏನೋ ಕಾಣುತ್ತೆ. ಸುಮಾರು 500 ಮೀಟರ್ ದೂರದವರೆಗೂ ಆ ವಿಚಿತ್ರ ರಚನೆಯ ನೆರಳು ಹರಡಿರೋದು ಕಾಣುತ್ತೆ. ಕುತೂಹಲದಿಂದ ಆತ ಈ ವಿಷ್ಯನ ತನ್ನ ಬ್ಲಾಗಲ್ಲಿ ಬರೀತಾನೆ, ಅಲ್ಲಿಯ ಇತಿಹಾಸ ಇಲಾಖೆ ಜನರ ಗಮನ ಸೆಳಿಯುತ್ತೆ. ಅವರು ಇದನ್ನ ಗಂಭೀರ್ವಾಗಿ ತೊಗೊಂಡು, ಆ ಜಾಗದಲ್ಲಿ ನೆಲ ಅಗೆದು ನೋಡಿದಾಗ, ದಂಗಾಗೋಗ್ತಾರೆ. ಯಾಕಂದ್ರೆ ಅಲ್ಲಿ ಒಂದು ಬೃಹತ್ ಪ್ರಾಚೀನ ಕಾಲದ್ ರೋಮನ್ ಬಂಗಲೆ, ತೋಟ ಇದೆಲ್ಲಾ ಸಿಗತ್ತೆ.

6) ಒಬ್ಬ ನೀರು ಸಪ್ಲೈ ಮಾಡ್ತಿದ್ದ ಹುಡುಗ ಎಡುವಿ ಬಿದ್ದು ನಿಧಿ ಕಂಡುಕೊಂಡ

ಮೂಲ

ಇತಿಹಾಸಹಾರ ಹೋವರ್ಡ್ ಕಾರ್ಟರ್ ಅನ್ನೋರು ಎಷ್ಟೋ ವರ್ಷ ಬರೀ ಒಂದು ಗಾಳಿಮಾತನ್ನ ನಂಬ್ಕೊಂಡು ಇಲ್ದೇ ಇರೋ ಸಮಾಧಿ ಹುಡುಕ್ತಿದಾನೆ ಅನ್ನೋ ಅಪಹಾಸ್ಯಕ್ಕೆ ಈಡಾಗಿದ್ರು. ಅವರ ಜೊತೆ ಒಬ್ಬ ಹುಡುಗ ನೀರು ಸಪ್ಲೈ ಮಾಡೋ ಕೆಲ್ಸ ಮಾಡ್ಕೊಂಡಿದ್ದ. ಆ ಹುಡುಗ ಹೀಗೇ ಒಂದ್ಸಲ ಕಡ್ಡಿನಲ್ಲಿ ಮರಳನ್ನ ಕೆದಕ್ಕೊಂಡು ಆಟಾಡ್ಕೊಂಡು ಹೊಗ್ತಿದ್ದಾಗ, ಒಂದು ಕಲ್ಲನ್ನ ಎಡವಿ ಬೀಳ್ತಾನೆ. ಇದರ ಬಗ್ಗೆ ಕಾರ್ಟರ್ ಹತ್ರ ಹೇಳ್ತಾನೆ. ಮೊದ್ಲೇ ಇದ್ರಲ್ಲೆಲ್ಲಾ ಆಸಕ್ತಿಯಿರೋ ಕಾರ್ಟರ್ ಸುಮ್ನಿರ್ತಾರಾ? ತಕ್ಷಣ ಅಲ್ಲಿ ಹೋಗಿ ನೆಲ ಅಗೆದು ನೋಡಕ್ಕೆ ತನ್ನ ಗುಂಪಿನೋರ್ಗೆ ಹೇಳ್ತಾರೆ. ಸುಮಾರು 22 ದಿನಗಳಾದ್ಮೇಲೆ ಅವ್ರಿಗೆ ನೆಲಮಾಳಿಗೆಗೆ ಹೋಗೋ ಮೆಟ್ಟಿಲು ಸಿಗತ್ತೆ. ಇಳ್ಕೊಂಡು ಹೋಗಿ ನೋಡ್ದಾಗ, ಒಂದು ಮುಚ್ಚಿರೊ ಬಾಗಿಲು ಅಡ್ಡ ಬರತ್ತೆ. ಅದನ್ನ ಓಪನ್ ಮಾಡಿ ನೋಡುದ್ರೆ, ಯಾರೇ ಆದ್ರೂ ಮೂರ್ಚೆಹೋಗೋ ಸೀನ್. ಆ ಸಮಾಧಿ ತುಂಬಾ ಚಿನ್ನ ತುಂಬಿರತ್ತೆ. ಇಡೀ ಈಜಿಪ್ಟಲ್ಲಿ ಸಿಕ್ಕಿರೋ ಎಲ್ಲಾ ನಿಧಿನೂ ಮೀರ್ಸೋವಂಥ ನಿಧಿ ಅಲ್ಲಿರುತ್ತೆ.

7) ಮನೆ ರಿಪೇರಿ ಮಾಡ್ಸಕ್ಕೆ ಹೋಗಿ ನೆಲಮಾಳಿಗೆಲಿದ್ದ ದೊಡ್ಡ ಊರನ್ನ ಕಂಡುಹಿಡಿದ

ಮೂಲ

1963ನೇ ಇಸವಿನಲ್ಲಿ ಟರ್ಕೀಲಿ ಒಬ್ಬ ತನ್ನ ಮನೆ ರಿನೋವೇಟ್ ಮಾಡುಸ್ಬೇಕು ಅಂತ ಯೋಚನೆ ಮಾಡ್ತಾನೆ. ಆಗ, ಮನೆಯ ಗೋಡೆಯ ಹೊರ್ಗಡೆ ವಿಚಿತ್ರವಾಗಿರೋ ಅಲ್ಲಿವರ್ಗೆ ಅವ್ನು ಯಾವತ್ತೂ ನೋಡ್ದೇಯಿದ್ದ ರೂಂ ಸಿಗುತ್ತೆ. ಮೊದ್ಲು ಭಯ ಆಗತ್ತೆ. ಆದ್ರೆ ಆಮೇಲಿಂದ ಆ ರೂಮನ್ನ ಓಪನ್ ಮಾಡ್ಸಿ ನೋಡ್ದಾಗ, ಅಲ್ಲಿ ಒಂದು ಸುರಂಗ ಮಾರ್ಗ ಕಾಣ್ಸತ್ತೆ. ಆ ಸುರಂಗಮಾರ್ಗನ ಫಾಲೋ ಮಾಡ್ಕೊಂಡು ಹೋದಾಗ ಸಿಕ್ಕೋದು ಸುಮಾರು 280 ಅಡಿ ಆಳದಲ್ಲಿದ್ದಂಥ, ಭೂಗತವಾಗಿದ್ದಂಥ ಡೆರಿಂಕಿಯು ಅನ್ನೋ ಒಂದಿಡೀ ಊರು. ಅದನ್ನ 12 ಮತ್ತೆ 15ನೇ ಶತಮಾನದ ಮಧ್ಯದಲ್ಲಿ ಕಟ್ಟಿರ್ಬೋದು ಅಂತ ಅಂದಾಜು ಮಾಡಿದಾರೆ. ಇದನ್ನ ಹಿಟೈಟ್ ಜನ ವೈರಿಗಳ ದಾಳಿಯಿಂದ ಬಚಾವಗಕ್ಕೆ ಬಚ್ಚಿಟ್ಕೊಳೋದಕ್ಕೆ ಅಂತ ಕಟ್ಕೊಂಡಿದ್ರಂತೆ. ಈಗ ಇದು ಟರ್ಕಿಯ ಒಂದು ಪ್ರಸಿದ್ದವಾಗಿರೋ ಪ್ರವಾಸಿ ತಾಣ ಆಗಿದೆ.