https://static01.nyt.com/packages/images/photo/2009/02/04/0206-havens/26750629.JPG

ಯಾವತ್ತಾದ್ರು ಯೋಚನೆ ಮಾಡಿದಿರಾ? ಒಂದೊಂದ್ ಊರಿಗೂ ಇಟ್ಟಿರೋ ಹೆಸರನ್ನ ಉಚ್ಚಾರ ಮಾಡ್ದಾಗ, ಹೌದು ನಮ್ಮ ದೇಶದ ಪದ ಅನ್ನೋ ಭಾವ, ಮತ್ತೆ ಪ್ರಪಂಚದ ಬೇರೆ ಬೇರೆ ದೇಶದ ಜೊತೆ ಹೋಲಿಕೆ ಮಾಡ್ಕೊಂಡಾಗ, ಅರೆ ನಮ್ ಊರಿನ್ ಹೆಸರು ಎಷ್ಟು ಭಿನ್ನವಾಗಿದೆ ಅಂತ ಖುಷಿಯಾಗತ್ತೆ ಅಲ್ವಾ? ಆದ್ರೆ ಕೆಲವು ಸಲ ಕಾಕತಾಳೀಯ ಅಂತಾರಲ್ಲ ಹಾಗೆ, ಸಂಸ್ಕೃತಿ, ಆಚಾರ, ವಿಚಾರ ಇದೆಲ್ಲಾ ಯಾವ್ ಕಡೆಯಿಂದನೂ ಮ್ಯಾಚ್ ಆಗ್ದೇಯಿರೋ ಎರಡು ದೇಶಗಳಲ್ಲಿ ಒಂದೇ ಹೆಸರಿನ ಊರುಗಳಿರೋದು ನೋಡ್ಬೋದು. ಅದರ ಹಿಂದಿನ್ ಕಥೆ ಏನು? ಆ ಊರು ಚನ್ನಾಗಿದ್ಯಾ? ನಮ್ಮೂರು ಚೆನ್ನಾಗಿದ್ಯಾ? ಅವ್ರ ಭಾಷೆನಲ್ಲಿ ಆ ಪದದ ಅರ್ಥ ಏನು? ಹೀಗೆಲ್ಲಾ ಹುಡುಕ್ಕೊಂಡ್ ಹೋದ್ರೆ ಆಶ್ಚರ್ಯ ಹುಟ್ಟಿಸೋ ವಿಷ್ಯಗಳು ಸಿಗತ್ತೆ. ಇಲ್ಲಿ ಅಂಥದ್ದೇ 13 ನಮ್ಮ ದೇಶದ ಊರುಗಳ ಹೆಸರು ಜೊತೆಗೆ ಅದೇ ಹೆಸರಿರೋ ಬೇರೆ ದೇಶದ ಊರುಗಳ ಪಟ್ಟಿ ಕೊಟ್ಟಿದೀವಿ. ಓದಿ ನೀವೂ ಖುಷಿ ಪಡಿ. ಮುಂದೆ ಯಾವತ್ತಾದ್ರೂ ಆ ದೇಶಗಳ್ಗೆ ಟ್ರಿಪ್ ಪ್ಲ್ಯಾನ್ ಮಾಡಿದ್ರೆ, ಮರೀದೆ ಅಲ್ಲಿರೋ ಇಂಥ ಊರುಗಳ್ನೂ ನೋಡ್ಕೊಂಡ್ ಬನ್ನಿ.

1. ನಮ್ಮ ಕೇರಳದಲ್ಲಿರೋ ಕೊಚ್ಚಿ ನೋಡಿದೀರಿ…

ಮೂಲ

ಜಪಾನಲ್ಲಿರೋ ಕೊಚ್ಚಿ ಹೆಂಗಿದೆ ನೋಡಿ:

ಮೂಲ

ಭಾರತದಲ್ಲಿರೋ ಕೊಚ್ಚಿ, ಕೇರಳದಲ್ಲಿ ಮಾತ್ರ ಅಲ್ಲ ದೇಶದಲ್ಲೇ ದೊಡ್ಡ ಬಂದರು ಪ್ರದೇಶಗಳಲ್ಲಿ ಒಂದು. ಜಪಾನಲ್ಲೂ ಕೂಡ ಇದೇ ಹೆಸರಿನ ಒಂದೂರಿದೆ ಕಣ್ರಿ. ಅಲ್ಲಿರೋ ಕೊಚ್ಚಿ ಪ್ರಸಿದ್ದ ಪ್ರವಾಸಿತಾಣ. ಇಲ್ಲಿ ಒಂದು ಇನ್ಟರೆಸ್ಟಿಂಗ್ ವಿಷ್ಯ ಅಂದ್ರೆ ಬರಿ ಹೆಸರು ಮಾತ್ರ ಅಲ್ಲ , ಎರಡೂ ಕಡೆ ಜನಕ್ಕೆ ಸೀ ಫುಡ್ ಅಂದ್ರೆ ಬಹಳ ಪ್ರೀತಿ.

2. ಬಿಹಾರಿನ ಪಾಟ್ನ ನೋಡಿರ್ತೀರಿ…

ಮೂಲ

ಸ್ಕಾಟ್ಲ್ಯಾಂಡಲ್ಲಿರೋ ಪಾಟ್ನ ನೋಡಿ:

ಮೂಲ

ಈ ಎರಡೂ ಪಾಟ್ಣಗಳ್ಗೆ ಖಂಡಿತಾ ಸಂಬಂಧ ಇದೆ. ಹೇಗೆ ಅಂತಿರ? ಸ್ಕಾಟ್ಲ್ಯಾಂಡಲ್ಲಿರೋ ಊರಿಗೆ ಹೆಸರಿಟ್ಟಿರೋದು, ಭಾರತದ, ಬಿಹಾರ್ ರಾಜಧಾನಿ ಪಾಟ್ಣದಿಂದ ಪ್ರೇರಣೆ ಆಗಿ. ಇದರ ಹಿಂದೆ ಒಂದು ಪುಟಾಣಿ ಕಥೆ ಇದೆ. ವಿಲಿಯಮ್ ಫುಲ್ಲಾರ್ಟನ್ ಅನ್ನೋ ವ್ಯಕ್ತಿ ಸ್ಕಾಟ್ಲ್ಯಾಂಡಲ್ಲಿ ಈ ಊರನ್ನ ನಿರ್ಮಾಣ ಮಾಡಿರೊದು ಅಂತ ಹೇಳ್ತಾರೆ. ಆತನ ತಂದೆ ಈಸ್ಟ್ ಇಂಡಿಯ ಕಂಪನಿನಲ್ಲಿ ಕೆಲ್ಸ ಮಾಡ್ತಿದ್ರಂತೆ. ಹಾಗಾಗಿ ಭಾರತದ ಈ ಊರಿನ ಬಗ್ಗೆ ಇದ್ದ ಪ್ರೀತಿಯಿಂದ ವಿಲಿಯಮ್ ಈ ಹೆಸ್ರು ಇಟ್ಟಿರ್ಬೋದು.

3. ಇದು, ಪಶ್ಚಿಮ ಬಂಗಾಳದ ಕ್ಯಾಲ್ಕಟ…

ಮೂಲ

ಅಮೇರಿಕಾದ ಕ್ಯಾಲ್ಕಟ ಇಲ್ನೋಡಿ:

ಮೂಲ

ಅಮೇರಿಕಾನಲ್ಲಿರೋ ಕ್ಯಾಲ್ಕಟ್ಟ ಅನ್ನೋದು ಕಲ್ಲಿದ್ದಲು ತಯಾರು ಮಾಡ್ತಿದ್ದಂಥ ಊರು. ಇದನ್ನ 1870ನೇ ಇಸವಿನಲ್ಲಿ ನಿರ್ಮಾಣ ಮಾಡಿದ್ದು. ಇವತ್ತಿಗೂ ಅಲ್ಲಿ ಕಮ್ಮಿ ಜನ ವಾಸ ಮಾಡ್ತಿದ್ದಾರೆ. ಇನ್ನು ಭಾರತದ ಕ್ಯಾಲ್ಕಟಾಗೆ ಬಂದ್ರೆ, ಅದು ಸಖತ್ ಸುಂದರವಾಗಿರೋ, ವಿಭಿನ್ನ ಸಂಸ್ಕೃತಿಯಿರೋ ಚಂದದ ಊರು.

4. ಲಕ್ನೋ… ನಮ್ಮ ಉತ್ತರಪ್ರದೇಶದ್ದು

ಮೂಲ

ಅಮೇರಿಕಾಲಿರೋ ಲಕ್ನೋ:

ಮೂಲ

ಅಮೇರಿಕಾನಲ್ಲಿರೋ ಲಕ್ನೋನ 'ಕ್ಯಾಸಲ್ ಆಫ್ ಕ್ಲೌಡ್ಸ್' ಅಂತಾನೂ ಕರಿತಾರೆ. ಇಲ್ಲಿ 16 ಕೋಣೆಗಳಿರೋ ಸುಮಾರು 5,500 ಎಕರೆ ವಿಸ್ತೀರ್ಣದಲ್ಲಿ, ಬೆಟ್ಟದ ಮೇಲೆ ಕಟ್ಟಿರೋ ಎಸ್ಟೇಟ್ ಬಂಗಲೆ ಇದೆ. ಭಾರತದ ಉತ್ತರ ಪ್ರದೇಶದಲ್ಲಿರೋ ಲಕ್ನೋಗೆ ತನ್ನದೇ ಆದ ಶ್ರೀಮಂತ ಇತಿಹಾಸ ಇದೆ.

5. ಆಂಧ್ರದ ಹೈದರಾಬಾದ್…

ಮೂಲ

ಇದು, ಪಾಕಿಸ್ತಾನದ್ದು:

ಮೂಲ

ಭಾರತದ ಆಂಧ್ರಪ್ರದೇಶದಲ್ಲಿರೋ ಹೈದರಾಬಾದ್ಗೆ ಆ ಹೆಸರು ಹೇಗೆ ಬಂತು ಗೊತ್ತಾ? ಅಂದಿನ ಹೈದರಾಬಾದ್ ನಗರನ ನಿರ್ಮಾಣ ಮಾಡಿದಂಥ ವ್ಯಕ್ತಿ, ತನ್ನ ಪ್ರಿಯತಮೆಯ ಮೇಲಿನ ಮೋಹದಿಂದ ಈ ಹೆಸರು ಇಡ್ತಾನೆ. ಇನ್ನು ಪಾಕಿಸ್ತಾನದಲ್ಲಿರೊ ಹೈದರಾಬಾದಿಗೆ ಆ ಹೆಸರು ಬಂದಿದ್ದು, ಪ್ರಾಫೆಟ್ ಮೊಹಮ್ಮದ್ ಅವರ ಸಂಬಂಧಿ ಹೈದರ್ ಅಲೀ ಇಂದ. ಒಂದು ಮಾತ್ರ ನಿಜ. ಈ ಎರಡೂ ಊರುಗಳೂ ಶ್ರೀಮಂತವಾದ ಇತಿಹಾಸ, ಗತ ವೈಭವಕ್ಕೆ ಹೆಸರುವಾಸಿ.

6. ತಮಿಳುನಾಡಿನ ಸೇಲಂ ಇದು…

ಮೂಲ

ಸೇಲಂ, ಅಮೇರಿಕಾ:

ಮೂಲ

ಭಾರತದ ತಮಿಳುನಾಡಿನಲ್ಲಿರೋ ಸೇಲಂ ಊರು ಐತಿಹಾಸಿಕವಾಗಿ ತುಂಬಾನೆ ಪ್ರಸಿದ್ದ. ಸುಮಾರು 1 ಮತ್ತೆ 2ನೆ ಶತಮಾನದಲ್ಲೇ ಈ ಊರು ಉಲ್ಲೇಖ ಆಗಿರೋದ್ನ ಅಂದಿನ ಶಿಲಾಶಾಸನಗಳಲ್ಲಿ ಕಾಣ್ಬೋದು. ಇನ್ನು ಅಮೇರಿಕಾದಲ್ಲಿರೋ ಸೇಲಂ ಒಂದು ಹಿಬ್ರೂ. ಶಾಂತಿಗೆ ಮತ್ತೊಂದು ಹೆಸರು.

7. ಇಲ್ಲಿ ಕಾಣ್ತಿರೋದು… ನಮ್ಮ ಗುಜರಾತಲ್ಲಿರೋ ಬರೋಡ.

ಮೂಲ

ಇದು… ಅಮೇರಿಕಾನಲ್ಲಿರೋ ಬರೋಡ:

ಮೂಲ

ಭಾರತದ ಗುಜರಾತಲ್ಲಿ ಬರೋಡ ನಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಬಾಯಲ್ಲಿ ನೀರು ಬರ್ಸೋವಂಥ ವಿಶೇಷ ನವರಾತ್ರಿ ತಿಂಡಿಗಳ್ಗೆ ಪ್ರಸಿದ್ದ. ಮೈಕಲ್ ಹೌಸರ್ ಅನ್ನೋ ವ್ಯಕ್ತಿ ಅಮೆರಿಕಾದಲ್ಲಿ ಕಟ್ಟಿರೋವಂಥ ಬರೋಡ ಊರು ಸುಮಾರು 1.7 ಕಿ.ಮೀ. ಅಡಿ ಇದ್ಯಂತೆ. ಇನ್ನೊಂದ್ ಆಶ್ಚರ್ಯ ಅನ್ಸೋ ವಿಷಯ ಏನಪ್ಪ ಅಂದ್ರೆ, ಆತ ಈ ಊರಿಗೆ ಮೊದ್ಲು 'ಪೊಮೊನ' ಅಂತ ಹೆಸರು ಇಡ್ಬೇಕು ಅಂದ್ಕೊಂಡಿದ್ನಂತೆ. ಆದರೆ ಆ ಹೆಸರು ಈಗಾಗ್ಲೆ ಬೇರೆ ಕಡೆ ಬಳಸ್ಕೊಂಡಿದಾರೆ ಅಂತ ಗೊತ್ತಾದಾಗ ಸಿ. ಹೆಚ್. ಪಿಂಡರ್ ಅನ್ನೋರು ಆತನಿಗೆ ಬರೋಡ ಅನ್ನೋ ಹೆಸರನ್ನ ಇಡೋದಕ್ಕೆ ಸೂಚಿಸ್ತಾರೆ. ಯಾಕಂದ್ರೆ ಪಿಂಡರ್ ಅವರ ಹುಟ್ಟೂರು ಭಾರತದ ಬರೋಡ.

8. ಮಹಾರಾಷ್ಟ್ರಾಲಿರೋ ಥಾಣೆ ಇದು:

ಮೂಲ

ಇಲ್ನೋಡಿ… ಆಸ್ಟೇಲಿಯಾ ಥಾಣೆನ

ಮೂಲ

ಭಾರತದ ಮಹಾರಾಷ್ಟ್ರದಲ್ಲಿರೋ ಥಾಣೆ ಅಂತೂ ಸುಂದರ್ವಾಗಿರೋ ಸಮುದ್ರಗಳಿಗೆ ಫೇಮಸ್. ಇನ್ನು ಆಸ್ಟ್ರೇಲಿಯದಲ್ಲಿರೋ ಥಾಣೆ, ದೊಡ್ಡ ದೊಡ್ಡ ಪಟ್ಟಣಗಳಿಂದ ದೂರದಲ್ಲಿರೋ ಪುಟಾಣಿ ಊರು. ಆದ್ರೆ ಈ ಊರಿಗೆ ಥಾಣೆ ಅನ್ನೋ ಹೆಸರು ಹೇಗೆ ಬಂತು ಅನ್ನೋದು ಮಾತ್ರ ಇವತ್ತಿಗೂ ನಿಗೂಢ.

9. ಇಂದೋರ್, ಮಧ್ಯಪ್ರದೇಶ:

ಮೂಲ

ಇಂದೋರ್, ಅಮೇರಿಕಾ:

ಮೂಲ

ಭಾರತದ ಮಧ್ಯ ಪ್ರದೇಶದಲ್ಲಿರೋ ಇಂದೋರ್ ನಗರ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ತುಂಬಾನೇ ಶ್ರೀಮಂತವಾಗಿರೋ ಊರು. ಇನ್ನು ಅಮೆರಿಕಾದಲ್ಲಿರೋ ಇಂದೋರ್, ಎಂಡೋರ್ ಅನ್ನೋ ಹೀಬ್ರು ಪದದಿಂದ ಪ್ರೇರಣೆ ಪಡ್ಕೊಂಡು ಇಟ್ಟಿರೋ ಹೆಸ್ರು. ಅದರ ಅರ್ಥ ’ವಸಂತಕಾಲ’ ಅಥವ ನೆಲೆನಿಲ್ಲು ಅಂತ.

10. ಇದು… ಬಿಹಾರಲ್ಲಿರೋ ಢಾಕ

ಮೂಲ

ಇದು, ಬಾಂಗ್ಲಾದೇಶದ ರಾಜಧಾನಿ ಢಾಕ.

ಮೂಲ

ಭಾರತದಲ್ಲಿರೋ ಬಿಹಾರದ ಢಾಕ ಅನ್ನೋ ಊರು ನಮಗೆ ಮುಖ್ಯ ಅನ್ಸೋದು ಅಲ್ಲಿರೋ ವಿಧಾನ ಸಭೆ ಕ್ಷೇತ್ರದಿಂದ. ಈ ಕಡೆ ಬಾಂಗ್ಲಾದೇಶದ ರಾಜಧಾನಿಯಾಗಿರೋ ಢಾಕ, ಮೊದ್ಲು ಪೂರ್ವ ಪಾಕಿಸ್ತಾನಕ್ಕೆ ಸೇರಿತ್ತು. ಅಷ್ಟೇ ಅಲ್ಲ. ಈ ಊರಿಗೆ ಸಮೃದ್ಧವಾದ ಇತಿಹಾಸ ಇದೆ ಜೊತೆಗೆ ದೇಶ ವಿಭಜನೆ ಸಮಯದಲ್ಲಿ ಅನುಭವಿಸಿದ ನೋವಿನ ನೆನಪು ಇವತ್ತಿಗೂ ಕಾಡತ್ತೆ.

11. ರಾಜಸ್ಥಾನದ ಬಾಲಿ

ಮೂಲ

ಈ ಬಾಲಿ… ಹೇಳ್ಬೇಕಾ? ಇಂಡೋನೇಷಿಯಾ.

ಮೂಲ

ಭಾರತದಲ್ಲಿ ಬಾಲಿ ಅನ್ನೋದು ರಾಜಸ್ತಾನದ ಪಾಲಿ ಅನ್ನೋ ಜಿಲ್ಲೆಲ್ಲಿರೋ ಪುಟ್ಟ ಊರು. ಆದರೆ ಇಂಡೋನೇಷಿಯಾದ ಬಾಲಿಗೆ ಯಾವ್ ವಿವರಣೆನೂ ಬೇಡ ಅನ್ಸತ್ತೆ. ಸಮುದ್ರತೀರ ಯಾರಿಗೆಲ್ಲಾ ಇಷ್ಟಾನೋ ಅಂಥವರಿಗೆ ಇಷ್ಟ ಆಗೋ ಹಾಲಿಡೇ ಡೆಸ್ಟಿನೇಷನ್ ಈ ಬಾಲಿ.

12. ಇದು… ಪಂಜಾಬಲ್ಲಿರೋ ಫರೀದ್ಕೋಟ್.

ಮೂಲ

ಇದು, ಪಾಕಿಸ್ತಾನದ್ದು:

ಮೂಲ

ಭಾರತದ ಫರೀದ್ ಕೋಟ್, ಪಂಜಾಬ್ ರಾಜ್ಯದಲ್ಲಿರೊ 22 ಜಿಲ್ಲೆಗಳ ಪೈಕಿ ಒಂದು. ಪಾಕಿಸ್ತಾನದ ಫರೀದ್ ಕೋಟ್ ಅನ್ನೋ ಚಿಕ್ಕ ಊರು, ಮುಂಬೈ ಬಾಂಬ್ ದಾಳಿ ಸಮಯದಲ್ಲಿ ಸೆರೆಸಿಕ್ಕಿದ್ದ ಉಗ್ರವಾದಿ ಅಜ್ಮಲ್ ಕಸಬ್ ನ ಹುಟ್ಟುರು ಅನ್ನೋ ಕಾರಣಕ್ಕೆ ಇತ್ತೀಚೆಗೆ ಫೇಮಸ್ ಆಗಿದೆ ಅಷ್ಟೆ.

13. ನಮ್ಮ ಡೆಲ್ಲಿ ನೋಡಿದೀರಿ…

ಮೂಲ

ಅಮೇರಿಕದ ಡೆಲ್ಲಿ ಹೆಂಗಿದೆ ನೋಡಿ:

ಮೂಲ

ಈ ಡೆಲ್ಲಿ ಅನ್ನೋ ಊರು ಒಂಟಾರಿಯೋ, ಕೆನಡಾದಲ್ಲಿ ಒಂದು ಇದೆ. ಆದ್ರೆ ಅಲ್ಲೆಲ್ಲಾ ಆ ಊರುಗಳ್ನ ಡೆಲ್-ಹೈ ಅಂತ ಕರಿತಾರೆ. ಆದ್ರೆ, ಭಾರತದ ರಾಜಧಾನಿ ಡೆಲ್ಲಿ ಮತ್ತೆ ಯುನೈಟೆಡ್ ಸ್ಟೇಟ್ಸ್ ನಲ್ಲಿರೋ ಡೆಲ್ಲಿ ಮಾತ್ರ ಒಂದೇ ಸ್ಪೆಲ್ಲಿಂಗು… ಜೊತೆಗೆ ಒಂದೇ ಥರ ಉಚ್ಚಾರಣೆನೂ ಮಾಡ್ತಾರೆ.

ನಮ್ದೇ ಹೆಸ್ರಿರೋ ನಮ್ಮ ಫ್ರೆಂಡೊಬ್ರು ಸಿಕ್ಕಾಗ ಒಂಥರಾ ಮಜಾ ಸಿಗತ್ತಲ್ಲ… ಇದೂ ಸ್ವಲ್ಪ ಹಾಗೇ ಅಲ್ವಾ?