http://blog.propgod.com/wp-content/uploads/2016/04/Hosur-Road-Elevated-Expressway-Bangalore-Karnataka-700x400.jpg

ನಮ್ ದೇಶದಲ್ಲಿ ಟ್ರಾಫಿಕ್ ದಿನಾ ದಿನಾ ಎಷ್ಟು ಜಾಸ್ತಿ ಆಗ್ತಾ ಇದೆ ಅಂದ್ರೆ, ಎಲ್ಲೆಲ್ಲಿ ಹೊಸ ಹೊಸ ರಸ್ತೆಗಳ್ನ ನಿರ್ಮಾಣ ಮಾಡಿದ್ರೂ ಸಾಲ್ತಾನೇ ಇಲ್ಲ. ಇಂತಾ ಟ್ರಾಫಿಕ್ನ ಸ್ವಲ್ಪನಾದ್ರೂ ಕಮ್ಮಿ ಮಾಡ್ಬೇಕು ಅನ್ನೋದಿಕ್ಕೆ ಹುಟ್ಟುಕೊಂಡ ಹೊಸ ಐಡಿಯಾನೇ ಫೈಓವರ್. ಇತ್ತೀಚೆಗೆ ಭಾರತದ ಎಲ್ಲಾ ಊರಲ್ಲೂ ಫೈಓವರ್ ಬಂದಿದೆ. ಇದನ್ನ ಹೊಸ ತಂತ್ರಜ್ಞಾನ ಉಪಯೋಗ್ಸಿ, ಶಬ್ದ ಮತ್ತೆ ಧೂಳೂ ಕಮ್ಮಿ ಆಗೋ ಹಾಗೆ ಮಾಡಿದಾರೆ. ಡೆಲ್ಲಿ ಮತ್ತೆ ಚೆನ್ನೈ  ಭಾರತದಲ್ಲೇ ತುಂಬಾ ಫ್ಲೈಓವರ್ ಇರೋ ಊರು. ಜೈಪುರ್ ಅಂತೂ ‘ಫ್ಲೈಓವರ್ ನಗರಿ’ ಅಂತಾನೇ ಹೆಸರು ಮಾಡಿದೆ. ನಮ್ಮ ದೇಶದಲ್ಲಿ 10 ಎಲ್ಲಕ್ಕಿಂತ ಚೆನ್ನಾಗಿರೋ ಫೈಓವರ್ ಯವ್ಯಾವ್ದು ಅಂತ ನೋಡೋಣ ಬನ್ನಿ…

1. ಥಾಣೆ ಫ್ಲೈಓವರ್ – ಮುಂಬೈ

‘ನಿದ್ದೆಯಿಲ್ಲದ ನಗರಿ’ ಅಂತ ಕರೆಸ್ಕೊಳೊ ಮುಂಬೈ ಅಲ್ಲಿ ಈಗಾಗ್ಲೇ 44 ಫ್ಲೈಓವರ್ ಇದ್ದು, ಇನ್ನೂ 16 ಕಟ್ಟಕ್ಕೆ ಪ್ಲಾನ್ ನಡೀತಾ ಇದೆ. ಮುಂಬೈಲಿರೋ ಅತ್ಯುತ್ತಮ ಫ್ಲೈಓವರ್ ಅಂದ್ರೆ ಥಾಣೆ ಫ್ಲೈಓವರ್.

2. ಹೆಬ್ಬಾಳ ಫ್ಲೈಓವರ್ – ಬೆಂಗಳೂರು

ನಮ್ ಉದ್ಯಾನನಗರಿ ಬೆಂಗಳೂರಲ್ಲೂ ಸಕತ್ತಾಗಿರೋ ಫ್ಲೈಓವರ್ ಎಲ್ಲಾ ಕಡೆ ಏಳ್ತಾ ಇದೆ. ಅದ್ರಲ್ಲೆಲ್ಲಾ ಸೂಪರ್ ಆಗಿರೋದು, ಹೆಬ್ಬಾಳದ ಡಬಲ್ ರೋಡ್  ಫ್ಲೈಓವರ್. ಇದು ಔಟರ್ ರಿಂಗ್ ರೋಡ್ ಮತ್ತೆ  ಬಳ್ಳಾರಿ ರಸ್ತೆನ ಸೇರಿಸತ್ತೆ.

3. ವಿಶ್ವೇಶ್ವರಯ್ಯ ಫ್ಲೈಓವರ್ – ಹೈದರಾಬಾದ್

ಹೈದರಾಬಾದ್ ಮತ್ತೆ ಸಿಕಂದರಾಬಾದ್ ಸೇರಿಸೋ ಫೈಓವರ್ ಇದು. 11.6 ಕಿ.ಮೀ. ಉದ್ದ ಇರೋ ಈ ಫ್ಲೈಓವರ್ ಭಾರತದಲ್ಲೇ ಅತೀ ದೊಡ್ಡ ಫ್ಲೈಓವರ್ ಅಂತ ಬುಕ್ ಆಫ್ ರಿಕಾರ್ಡ್ಸ್ ಅಲ್ಲಿ ಸೇರಿದೆ.

4. ವರಚ್ಚಾ ಫ್ಲೈಓವರ್ – ಸೂರತ್

ಸೂರತ್ನ ವರಚ್ಚಾ ಪ್ಲೈಓವರ್ ಭಾರತದ ಅತೀ ದೊಡ್ಡ ಫ್ಲೈಓವರ್ಗಳಲ್ಲಿ ಒಂದು

5. AIIMS ಫ್ಲೈಓವರ್ – ಡೆಲ್ಲಿ

ಭಾರತದ ರಾಜಧಾನಿ ಡೆಲ್ಲಿಲಿ ಫ್ಲೈಓವರ್ ಕಟ್ವಾಗ್ಲೂ ಟ್ರಾಫಿಕ್ ತೊಂದ್ರೆ ಆಗ್ಬಾರ್ದು ಅಂತ ಅತ್ಯುತ್ತಮ ತಂತ್ರಜ್ಞಾನ ಬಳಸಿ ಕಟ್ತಾ ಇದಾರೆ. ಡೆಲ್ಲಿಲಿರೋ AIIMS ಫ್ಲೈಓವರ್ ತುಂಬಾ ಚೆನ್ನಾಗಿದೆ.

6. AJC ಬೋಸ್ ಫ್ಲೈಓವರ್ – ಕೋಲ್ಕತ್ತಾ

APC ರಸ್ತೆ ಮತ್ತೆ AJC ಬೋಸ್ ರಸ್ತೆ ಸೇರಿ ಕೋಲ್ಕತ್ತಾದ ಅತೀ ದೊಡ್ಡ ರಸ್ತೆ ಆಗಿದೆ. AJC ಬೋಸ್ ಫ್ಲೈಓವರ್ 1.8 ಕಿಮೀ ಉದ್ದ ಇದ್ದು, ಕೋಲ್ಕತ್ತಾದ ತುಂಬಾ ಮುಖ್ಯವಾದ ಫ್ಲೈಓವರ್ ಪೈಕಿ ಒಂದಾಗಿದೆ.

7. ಲೂಕಾಸ್ ಫ್ಲೈಓವರ್ – ಚೆನ್ನೈ

ಚೆನ್ನೈನೂ ಫ್ಲೈಓವರ್ ನಗರಿ ಅಂತ ಕರೆಸಿಕೊಳ್ಳತ್ತೆ. ಅಣ್ಣಾ ಫ್ಲೈಓವರ್, ಚೆನ್ನೈ ಏರ್ ಪೋರ್ಟ್ ಫ್ಲೈಓವರ್ ಮತ್ತೆ ಲೂಕಾಸ್ ಫ್ಲೈಓವರ್ ತುಂಬಾ ಚೆನ್ನಾಗಿದೆ ಅನ್ನಿಸ್ಕೊಳತ್ತೆ. ಕಟಿಪಾರ ಜಂಕ್ಷನ್ನಲ್ಲಿರೋ ಕ್ಲೋವರ್ಲೀಫ್ ಪ್ಲೈಓವರೂ ಸೂಪರ್ರಾಗಿದೆ.

8. ಮೇಮ್ ನಗರ್ ಜಂಕ್ಷನ್ ಫ್ಲೈಓವರ್ – ಅಹಮದಾಬಾದ್

ಅಹಮದಾಬಾದ್ ಗುಜರಾತ್ ಅಲ್ಲೇ ತುಂಬಾ ಸುಂದರವಾಗಿರೋ ಊರು. ವಿಜ್ಞಾನ ನಗರಿ ಅಂತ ಇದನ್ನ ಬೆಳೆಸ್ತಾ ಇರೋವಾಗ ಇದರ ರಸ್ತೆ, ಫ್ಲೈಓವರ್ ಎಲ್ಲಾ ಬೆಳೆಸಕ್ಕೆ ಪ್ಲಾನ್ ಮಾಡಿದಾರೆ.

9. ಚಿರಿಯಾತಂಡ್ ಫ್ಲೈಓವರ್ – ಪಾಟ್ನಾ

ಪಾಟ್ನಾ ಬಿಹಾರದ್ ರಾಜಧಾನಿ. ಇದು ಭಾರತದ ತುಂಬಾ ಹಳೇ ಊರು ಅಂತ ಫೇಮಸ್ ಆಗಿದೆ. ಇಲ್ಲೂ ಒಳ್ಳೊಳ್ಳೇ ಫ್ಲೈಓವರ್ ಇದೆ.

10. ಯೂನಿವರ್ಸಿಟಿ ಫ್ಲೈಓವರ್ – ಪುಣೆ

ಪುಣೆ ಸೌಂದರ್ಯಕ್ಕೆ ಹೆಸರುವಾಸಿ ಆಗಿರೋ ಊರು. ಇಲ್ಲಿರೋ ಯೂನಿವರ್ಸಿಟಿ ಸರ್ಕಲ್ ಫ್ಲೈಓವರ್ ಪುಣೇಲಿರೋ ಬೆಸ್ಟ್ ಫ್ಲೈಓವರ್.

ಟ್ರಾಫಿಕ್ ಕಮ್ಮಿ ಆಗಿದ್ಯೋ ಇಲ್ವೋ ಅನ್ನೋ ತೀರ್ಮಾನ ಆ ಊರವ್ರಿಗೇ ಬಿಟ್ಟಿದ್ದು. ನಮ್ಮ ಊರು ನಮಗೇ ಗೊತ್ತು. ಏನಂತೀರಾ??