http://www.themysteriousindia.net

ನಮಗೆಲ್ಲ ಗೊತ್ತಿರೋಹಾಗೆ ಕಣ್ಣಿಗೆ ಕಾಣಿಸೋ, ನಮಗೆಲ್ಲ ದಿನ ನೋಡೋದಕ್ಕೆ ಸಿಗೋ ದೇವರು ಅಂದ್ರೆ ಸೂರ್ಯ. ಶಿವನ ಭಕ್ತರು ಸೂರ್ಯನನ್ನ ಶಿವನ ಒಂದು ರೂಪ ಅನ್ನೋಹಾಗೆ ನೋಡಿದ್ರೆ ವೈಷ್ಣವರು ಸೂರ್ಯ ನಾರಾಯಣ ಅಂತ ಪೂಜೆ ಮಾಡ್ತಾರೆ.

ಹಿಂದೂ ಪುರಾಣಗಳ್ಲಲಿ ಸೂರ್ಯನ ಪೂಜೆ ಬಹಳ ಹಿಂದಿನಿಂದಲೂ ಇರೋದನ್ನ ಹೇಳುತ್ತೆ. ಸೂರ್ಯದೇವನ ಹೆಸರಿನಲ್ಲಿ ಎಲ್ಲ ಕಡೆಗಳಲ್ಲೂ ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆ ಬೇರೆ ರೀತಿಯಲ್ಲಿ ಹಬ್ಬ ಆಚರಣೆ ಮಾಡ್ತಾರೆ. ಕರ್ನಾಟಕ ಹಾಗೂ ಆಂಧ್ರದಲ್ಲಿ ಮಕರ ಸಂಕ್ರಮಣ, ತಮಿಳು ನಾಡಿನಲ್ಲಿ ಪೊಂಗಲ್, ಛತ್ ಪೂಜೆ ಅಂತ ಬಿಹಾರದಲ್ಲಿ, ಸಾಂಬ ದಶಮಿ ಅಂತ ಒಡಿಶಾದಲ್ಲಿ (ಸಾಂಬ ಕೃಷ್ಣನ ಮಗ, ಅವನಿಗೆ ಇದ್ದ ಕಾಯಿಲೆ ಸೂರ್ಯ ದೇವನ ಪೂಜೆ ಮಡಿದ ಮೇಲೆ ವಾಸಿಯಾಗಿದ್ದಂತೆ, ಅದರ ನೆನಪಿನಲ್ಲಿ ಈ ಹಬ್ಬ ಆಚರಿಸ್ತಾರೆ). ಇನ್ನು ರಥ ಸಪ್ತಮಿ ಎಲ್ಲರಿಗೂ ಗೊತ್ತೇ ಇದೆ. 

ಸೂರ್ಯನ ಬಗ್ಗೆ ಇಷ್ಟೆಲ್ಲಾ ಉಲ್ಲೇಖ ಇದ್ರೂ, ಇವನಿಗಾಗಿ ಕಟ್ಟಿಸಿರೋ ದೇವಸ್ಥಾನಗಳು ಬರಿ ಬೆರಳೆಣಿಕೆಯಷ್ಟು. ನಮ್ಮ ಭಾರತದಲ್ಲಿರೋ ಸೂರ್ಯನ 11 ದೇವಸ್ಥಾನಗಳಬಗ್ಗೆ ತಿಳ್ಕೊಳೋಣ.

1. ಕೋನಾರ್ಕ್ ಸೂರ್ಯ ದೇವಾಲಯ , ಒಡಿಶಾ.

ಇದು 13 ನೇ ಶತಮಾನದ ಕಾಲದ್ದು, ರಥದ ಆಕಾರದಲ್ಲಿ ಈ ದೇವಸ್ಥಾನ ಇದೆ. ಇದು ಇದರ ಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ. ಈ ಗೋಡೆಯಮೇಲಿನ ಕೆತ್ತನೆಗಳು ಮನುಷ್ಯನ ಜೀವನ ವಯಸ್ಸಿಗೆ ಅನುಗುಣವಾಗಿ ಹೇಗೆ ಬದಲಾಗುತ್ತೆ ಅನ್ನೋದನ್ನ ತೋರ್ಸುತ್ತೆ.  ಈ ರಥದ ಚಕ್ರವೇ ಗಡಿಯಾರ ಮಾಡೋದಕ್ಕೆ ಸ್ಫೂರ್ತಿಯಂತೆ.

https://www.hlimg.com

2. ಮೊಧೇರಾ ಸೂರ್ಯ ದೇವಸ್ಥಾನ , ಗುಜರಾತ್.

ಈ ದೇವಸ್ಥಾನ ಇರೋದು ಗುಜರಾತ್ ನ ಮೊಧೇರಾ ಅನ್ನೋ ಹಳ್ಳಿಯಲ್ಲಿದೆ. ಇಲ್ಲಿ ಪುಷ್ಪಾವತಿ ನದಿ ಹರಿಯುತ್ತೆ.  ಇಲ್ಲಿದ್ದ ಚಿನ್ನದ ಮೂರ್ತಿಯನ್ನು ಮೊಹಮ್ಮದ್ ಘಜ್ನಿ ತೆಗದುಕೊಂಡು ಹೋಗಿದ್ದಾನಂತೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿರಣ ಇಲ್ಲಿನ ವಿಗ್ರಹದ ಮೇಲೆ ಬೀಳುವುದು ಒಂದು ವಿಶೇಷ. ಈ ದೇವಸ್ಥಾನದ ಮುಂಭಾಗದಲ್ಲಿ ಸೂರ್ಯ ಕುಂಡ ಅನ್ನೋ ದೊಡ್ಡ ಕಲ್ಯಾಣಿ , ಸರೋವರ ಇದೆ.

https://www.esamskriti.com

3. ಮಾರ್ತಾಂಡ ಸೂರ್ಯ ದೇವಸ್ಥಾನ, ಅನಂತನಾಗ್, ಕಾಶ್ಮೀರ.

ಕಾಶ್ಮೀರ ಶಿಲ್ಪಕಲಾ ಪದ್ದತಿಯಲ್ಲಿರೋ ಈ ದೇವಸ್ಥಾನ ಕಟ್ಟಿಸಿದ್ದು 8 ನೇ ಶತಮಾನದಲ್ಲಂತೆ. ಇಸ್ಲಾಂ ದೊರೆ ಸಿಖಂದರ್ ಬಟ್ಶಿಖಾನ್ ಅನ್ನೋವ್ನು 15 ನೇ ಶತಮಾನದಲ್ಲಿ ಇದನ್ನು ಹಾಳುಮಾಡಿದ ಅಂತ ಇತಿಹಾಸ ಹೇಳುತ್ತೆ. ಈ ದೇವಸ್ಥಾನ ಭಾರತದ ಬೇರೆ ಯಾವುದೇ ದೇವಸ್ಥಾನಗಳಿಗಿಂತ ತುಂಬಾ ಭಿನ್ನವಾಗಿದೆ.

https://upload.wikimedia.org

4. ಬ್ರಹ್ಮಣ್ಯದೇವ ದೇವಸ್ಥಾನ, ಉನ್ನಾವ್ , ಮಧ್ಯಪ್ರದೇಶ.

ಈ ಹಳ್ಳಿ ಇರೋದು ಗ್ವಾಲಿಯರ್ ಹತ್ತಿರ. ಈ ದೇವಸ್ಥಾನದಲ್ಲಿ ಸೂರ್ಯ ದೇವತೆಯ ವಿಗ್ರಹವು ಕಪ್ಪು ಫಲಕಗಳಿಂದ ಮುಚ್ಚಿದ ಇಟ್ಟಿಗೆ ವೇದಿಕೆ ಮೇಲಿದೆ.ಸೂರ್ಯನ 21 ಹಂತಗಳನ್ನು ಪ್ರತಿನಿಧಿಸುವ ತ್ರಿಕೋನಗಳನ್ನು ದೇವಾಲಯದ ಗೋಡೆಯಮೇಲೆ ಕೆತ್ತಿದ್ದಾರಂತೆ. ಚರ್ಮದ ಕಾಯಿಲೆ ಇದ್ದವರು ಈ ದೇವಸ್ಥಾನದಲ್ಲಿ ಬೇಡಿಕೊಂಡರೆ ಬೇಗ ಪರಿಹಾರ ಸಿಗುತ್ತಂತೆ.

https://pilgrimaide.com

5. ದಕ್ಷಿಣಾರ್ಕ ದೇವಸ್ಥಾನ, ಗಯಾ, ಬಿಹಾರ್.

ಇಲ್ಲಿನ ದೇವಸ್ಥಾನದಲ್ಲಿ ಸೂರ್ಯನ್ ಚಿತ್ರ  ಗ್ರಾನೈಟ್ ಮೇಲೆ ಕೆಟ್ಟಿದೆ. ಇದರಲ್ಲಿರೋ ವಿಶೇಷತೆ ಅಂದ್ರೆ ಸೂರ್ಯ ಇರೋದು ಇರಾನಿ ಶೈಲಿಯಲ್ಲಿ. ಜಾಕೆಟ್ ಧರಿಸಿ, ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು, ಎತ್ತರದ ಷೂ ಧರಿಸಿದ್ದಾನೆ. ಇದರ ಮುಂದೆ ಇರೋ ಕೊಳದಲ್ಲಿ ಪಿತೃಕಾರ್ಯಗಳನ್ನ ಮಾಡ್ತಾರೆ. ವಾರಂಗಳ್ ರಾಜ ಪ್ರತಾಪ ರುದ್ರ 13 ನೇ ಶತಮಾದಲ್ಲಿ ಇದನ್ನ ಕಟ್ಟಿಸಿದ್ದಂತೆ. 

https://upload.wikimedia.or

6. ಸೂರ್ಯ ದೇವಸ್ಥಾನ, ಸೂರ್ಯ ಪಹಾರ್, ಅಸ್ಸಾಂ.

ತುಲನಾತ್ಮಕವಾಗಿ ಇದು ಆಧುನಿಕ ರಚನೆ ಅಂತಾನೆ ಹೇಳಬಹುದು, ಈ ದೇವಸ್ಥಾನದಲ್ಲಿ ವೃತ್ತಾಕಾರದ ಕಲ್ಲಿನ ಟ್ಯಾಬ್ಲೆಟ್ ಅನ್ನು ಹೊಂದಿದ್ದು, ಸೂರ್ಯನ 12 ಚಿತ್ರ ಹಾಗೂ ಸೂರ್ಯನ ತಂದೆ ಕಶ್ಯಪರನ್ನೂ ಒಳಗೊಂಡಿದೆ. ಸೂರ್ಯ ಪಹಾರ್ ಅನ್ನು ಪುರಾತತ್ತ್ವ ಶಾಸ್ತ್ರದ ಅವಶೇಷಗಳ ವಾಸ್ತವ ಗ್ಯಾಲರಿ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಕಲಾತ್ಮಕ ಅರ್ಹತೆಯನ್ನು ಹೊಂದಿರುವ ಕಲ್ಲಿನ ವರ್ಣಚಿತ್ರಗಳನ್ನು ಹೊಂದಿದೆ.

http://cdn.findmessages.com

7. ನವಲಾಖ ದೇವಸ್ಥಾನ, ಘುಮ್ಲಿ, ಗುಜರಾತ್.

ಘುಮ್ಲಿಯ ನವಲಾಖ ದೇವಸ್ಥಾನ 11 ನೇ ಶತಮಾನದಲ್ಲಿ ಜೆತ್ವಾ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿದೆ. ಇದು  ಸೂರ್ಯನಿಗೆ ಸಮರ್ಪಿತವಾಗಿದೆ ಮತ್ತು ಗುಜರಾತಿನ ಹಳೆಯ ಸೂರ್ಯ ದೇವಾಲಯ ಇದು. ಇದರ ನೆಲೆ ತುಂಬಾ ದೊಡ್ಡದಾಗಿದ್ದು, ದೇವಸ್ಥಾನ ಪೂರ್ವಾಭಿಮುಖವಾಗಿದೆ. ಮೊದಲಿಗೆ ಈ ದೇವಸ್ಥಾನಕ್ಕೆ ಸುಂದರವಾದ ಕಮಾನು ಇತ್ತಂತೆ, ಈಗ ಅದು ಹಾಳಾಗಿದೆ.  ಇದನ್ನ ಕೆಟ್ಟೋದಕ್ಕೆ 9 ಲಕ್ಷ ಖರ್ಚಾಗಿದ್ದಂತೆ, ಅದಕ್ಕೆ ಇದನ್ನ ನವಲಕ್ಷ / ನವಲಾಖ ದೇವಸ್ಥಾನ ಅಂತ ಕರೀತಾರಂತೆ. 

http://temples.s3.amazonaws.com

8. ಸೂರ್ಯನಾರ್ ಕೋವಿಲ್, ಕುಂಭಕೋಣಂ,ತಮಿಳುನಾಡು.

ಇದನ್ನ ಕುಲೋತ್ತುಂಗ ಚೋಳ ಕಟ್ಟಿಸಿದ್ದಂತೆ. ಇದು ದ್ರಾವಿಡ ಶೈಲಿಯಲ್ಲಿದೆ. ಈ ದೇವಸ್ಥಾನದ ವಿಶೇಷ ಅಂದ್ರೆ ಇಲ್ಲಿ ಸೂರ್ಯದೇವನ ಎರಡೂ ಕೈಗಳಲ್ಲಿ ಕಮಲಗಳಿವೆ. ಎಡಭಾಗದಲ್ಲಿ ಉಷಾದೇವಿ, ಬಲಭಾಗದಲ್ಲಿ ಪ್ರದ್ಯುಶಾದೇವಿ ಇದ್ದಾರೆ. ಅಷ್ಟೇ ಅಲ್ಲದೆ ಇತರೆ 8 ಗ್ರಹಗಳೂ ಯಾವುದೇ ವಾಹನ ಇಲ್ಲದೆ ಜೊತೆಯಲ್ಲಿರೋದು ವಿಶೇಷ.

https://www.trawell.in

9. ಕಟರ್ಮಲ್ ಸೂರ್ಯ ದೇವಾಲಯ, ಉತ್ತರಾಖಂಡ್.

ಕೋನಾರ್ಕ್ ನಂತರ ಇದನ್ನೇ ಸೂರ್ಯನ ಪ್ರಮುಖ ದೇವಾಲಯ ಅಂತಾರೆ. ಇದನ್ನ 9 ನೇ ಶತಮಾದಲ್ಲಿ ಕಟ್ಟಿದ್ದಂತೆ. ಇದರ ಒಳಗಡೆ 45 ಚಿಕ್ಕ ಚಿಕ್ಕ ಗುಡಿಗಳೂ ಇವೆಯಂತೆ.

https://i.ytimg.com

10. ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ, ಅರಸವಳ್ಳಿ, ಆಂಧ್ರ ಪ್ರದೇಶ.

ಇದನ್ನ ರಾಜ ದೇವೇಂದ್ರ ವರ್ಮಾ 7 ನೇ ಶತಮಾನದಲ್ಲಿ ಕಟ್ಟಿಸಿದ್ದಂತೆ. ಇಲ್ಲಿ ಸೂರ್ಯದೇವನ ಜೊತೆ ಉಷಾ, ಛಾಯಾ ಹಾಗೂ ಪದ್ಮಿನಿ ಇದ್ದಾರೆ. ವರ್ಷದಲ್ಲಿ ಎರಡುಸಲ ಉತ್ತರಾಯಣ ಹಾಗೂ ದಕ್ಷಿಣಾಯಣ ಎರಡೂ ಶುರುವಾಗೋ ಸಮದಲ್ಲಿ ಇಲ್ಲಿ ಸೂರ್ಯನ ಕಿರಣಗಳು ದೇವರ ವಿಗ್ರಹದ ಪದಗಳ ಮೇಲೆ ಬೀಳುತ್ತಂತೆ.

http://www.kostalife.com

11. ವಿವಾಸ್ವನ್ ಸೂರ್ಯ ದೇವಾಲಯ, ಗ್ವಾಲಿಯರ್, ಮಧ್ಯ ಪ್ರದೇಶ.

ಇದನ್ನ G D ಬಿರ್ಲಾ 1988 ರಲ್ಲಿ ಕಟ್ಟಿಸಿದ್ದು. ಕೋನಾರ್ಕ್ ಸೂರ್ಯ ದೇವಸ್ಥಾನದಿಂದ ಪ್ರೇರಣೆಗೊಂಡು ಅದೇ ಮಾದರಿಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಬಳಸಿ ಕಟ್ಟಿಸಿದ್ದಾರೆ.

https://4.bp.blogspot.com

ನಿಮಗೆಷ್ಟು ಗೊತ್ತಿತ್ತು ?