https://fb-s-a-a.akamaihd.net/h-ak-xpa1/v/t15.0-10/17950931_1510905132256135_2512884265654419456_n.jpg?oh=2becf53522345976a46634b2dce92eb2&oe=597AC205&__gda__=1502464086_b0505e81997c258542879ae7007d8c55

ದಕ್ಷಿಣ ಕನ್ನಡ ಅಂತ ಇವತ್ತು ಕರೀಲಿಕ್ಕಿಲ್ಲ, ಉಡುಪಿ-ಚಿಕ್ಕಮಗಳೂರು ಜಿಲ್ಲೆ ಅಂತ ಮಾಡಿಬಿಟ್ರಲ್ಲ… ಆದ್ರೂ ಮಂಗಳೂರು, ಉಡುಪಿ, ಕುಂದಾಪುರ… ಈ ಥರ ನೋಡೋಕಿಂತ ದಕ್ಷಿಣ ಕನ್ನಡ ಅಂತ ಒಟ್ಟಾರೆ ನೋಡಿದ್ರೇನೇ ಚೆಂದ ಅಲ್ವಾ ಮಾರ್ರೆ, ಬನ್ನಿ ಮತ್ತೆ ಒಂದು ರೌಂಡ್ ಹಾಕಿ ಬರುವ.

1. ಎಲ್ಲಿಗೆ ಹೋದ್ರು ಮೊದಲು ದೇವಸ್ಥಾನ ಮುಖ್ಯ, ಬನ್ನಿ ಉಡುಪಿ ಕೃಷ್ಣನಿಗೆ ಕೈ ಮುಗಿಯುವ

ಇದೆಂತ? ಕೃಷ್ಣ ಒಬ್ಬನೇ ಸಾಕ? ಇಲ್ಲ ಮಾರ್ರೆ, ಸುಮಾರುಂಟು… ಕುಕ್ಕೆ ಸುಬ್ರಮಣ್ಯ, ಕಟೀಲ್ ದುರ್ಗಾ ಪರಮೇಶ್ವರಿ, ಕೊಲ್ಲುರ್ ಮೂಕಾಂಬಿಕೆ, ಕದರಿ ಮಂಜುನಾಥ, ಆನೆಗುಡ್ಡ ಗಣಪ… ಹೇಳ್ತ ಹೋದ್ರೆ ಸುಮಾರುಂಟು… ಸದ್ಯಕ್ಕೆ ಯಾರಿಗಾದ್ರೂ ಜೈ ಅನ್ನಿ!

ಮೂಲ

2. ಬನ್ನಿ ಸ್ವಲ್ಪ ಹೊತ್ತು ಬೀಚಲ್ಲಿ ಆಡಿ ಬರುವ

ಕುಡ್ಲೆ ಬೀಚ್ ಗೋಕರ್ಣ, ತಣ್ಣೀರ್ಬಾವಿ ಬೀಚ್, ಓಂ ಬೀಚ್, ಪಣಂಬೂರ್ ಬೀಚ್, ಉಲ್ಲಾಳ ಬೀಚ್, ಸೋಮೇಶ್ವರ ಬೀಚ್, ಸೂರತ್ಕಲ್ ಬೀಚ್… ಇನ್ನು ಉಂಟು ಸದ್ಯಕ್ಕೆ ಯಾವುದ್ರಲ್ಲಾದ್ರೂ ಆಟಾಡಿ.

ಮೂಲ

3. ಬನ್ನಿ ಆಯಾಸ ಆಗ್ತಾ ಉಂಟಲ, ಎಂತಾರ ತಿಂದು ಬರುವ

ಎಂತ ಬೇಕು? ಮೀನು, ಕುಸುಬಲಕ್ಕಿ, ಗೋಲಿ ಬಜ್ಜಿ, ನೀರ್ ದೋಸೆ, ಬನ್ಸ್, ಕೋಳಿ, ರೊಟ್ಟಿ, ಎರಿಯಪ್ಪ… ಎಂತ ಬೇಕೋ ಹೊಟ್ಟೆ ತುಂಬಾ ತಿನ್ನಿ ಆಯ್ತಾ…

ಮೂಲ

4. ತಿಂದಿದ್ದಾಯ್ತಲಾ, ಬನ್ನಿ ಸ್ವಲ್ಪ ಆಟ ಆಡುವ

ಕ್ರಿಕೆಟ್ಟು ಅಂದ್ರೆ ಇಲ್ಲಿ ಬಾರಿ ಫೇಮಸ್ಸು, ವಾಲಿಬಾಲು ಅಷ್ಟೇ. ನಿಜವಾದ ಗಮ್ಮತ್ತು ಅಂದ್ರೆ ಕಂಬಳ, ಕೋಳಿ ಪಡೆ, ಗಾಳಿಪಟ ಪಂದ್ಯ.

ಮೂಲ

5. ಆಟಾಡಿ ಸುಸ್ತಾಗಿರ್ಕ್, ಬನ್ನಿ ನೀರಾ ಕುಡಿಯುವ

ದಕ್ಷಿಣ ಕನ್ನಡಕ್ಕೆ ಬಂದ್ರೆ ಮುಗೀತ್, ನೀರಾ ಕುಡೀದೇ ಹೋದ್ರೆ ಸರಿ ಆತಿಲ್ಲ.

ಮೂಲ

6. ಹುಲಿವೇಷ ಗೊತ್ತುಂಟಾ? ಇಲ್ಲಿ ನೋಡಿ ಮಾರ್ರೆ

ಡೋಲ್ ಬಡೀತಿದ್ರೆ ಯಾವನಾದ್ರು ಮೈ ಮರ್ತ್ ಕುಣೀತ. ಚಂದ ಮಾಡಿ ಸಿನಿಮಾದಲ್ಲಿ ತೋರ್ಸಿದ್ದು ನಮ್ಮ ರಕ್ಷಿತ್ ಶೆಟ್ಟ್ರೆ… ಬರಿ ಇದೆ ಅಲ್ಲ ನವರಾತ್ರಿ ಟೈಮಲ್ಲಿ ನವರಾತ್ರಿ ವೇಷ ಹಾಕೋದು ಇಲ್ಲಿನ ಪದ್ದತಿ

ಮೂಲ

7. ಕೋಲಾ ಬಗ್ಗೆ ಗೊತ್ತಾ?

ಅಯ್ಯೋ ಕೊಕೊ ಕೋಲಾ ಅಲ್ಲ ಮಾರ್ರೆ, ವರ್ಷಕ್ಕೊಮ್ಮೆ ಇಲ್ಲಿ ಕೋಲಾ ಅಂತ ಹಬ್ಬದ ರೀತಿ ಆಚರಿಸೋದುಂಟು, ಪೂಜಾರಿ ಮೈ ಮೇಲೆ ದೇವರು ಬರೋದು, ಇಷ್ಟೇ ಅಲ್ಲ ನಾಗ ಮಂಡಲ ಹಾಕಿ ನಾಗ ಪೂಜೆ ಮಾಡ್ತಾರೆ… ದೇವರನ್ನು ನಂಬದವ್ರು ಇಲ್ಲಿ ಬಂದು ನೋಡಿದ್ರೆ ನಂಬಿಕೆ ಬರತ್ತೆ.

ಮೂಲ

8. ಎಲ್ಲ ಮುಗೀತ್, ಮುಖ್ಯವಾದ್ ಮ್ಯಾಟ್ರು ಬಿಟ್ಬಿಟ್ಟೆ… ಯಕ್ಷಗಾನ

ಕರ್ನಾಟಕದಲ್ಲಿ ಇದ್ದು ಒಮ್ಮೆ ಯಕ್ಷಗಾನ ನೋಡಿಲ್ಲ ಅಂದ್ರೆ ಸರಿ ಆತಿಲ್ಲ… ಇದ್ರಲ್ಲಿ ಸುಮಾರ್ ರೀತಿ ಇದೆ, ತೆಂಕತಿಟ್ಟು, ಬಡಗುತಿಟ್ಟು ಹೀಗೆ… ಸರಿಯಾಗಿ ನೋಡಿದ್ರೆ ಉಂಟಲ್ಲ ಮೈ ಜುಮ್ ಅನ್ನೋದು ಗ್ಯಾರಂಟಿ.

ಮೂಲ

9. ಹುಡುಗೀರು… ಸಿನೆಮಾದಲ್ಲೆಲ್ಲ ಇಲ್ಲಿನ ಬೆಡಗಿಯರೇ ಹೆಚ್ಚು

ಇಲಿಯಾನ, ದೀಪಿಕಾ, ಜೆನಿಲಿಯಾ, ಅಮೃತ ರಾವ್, ಲಕ್ಷ್ಮಿ ರೈ, ಕಾವ್ಯ ಶೆಟ್ಟಿ… ಅಯ್ಯೋ ಹೆಸರು ಬರೆತಿದ್ರೆ ಜಾಗ ಸಾಲಲ್ಲ, ಒಟ್ಟಾಗಿ ಇಲ್ಲಿ ಚೆಲುವೆಯರೇ ಹೆಚ್ಚು.

ಮೂಲ

10. ಎಂಚಿನ ಸಾವ್ ಮಾರ್ರೆ… ಮಂಡೆ ಬಿಸಿ ಮಾಡ್ಬೇಡ

ಇಲ್ಲಿಗ್ ಬಂದ್ರೆ ಈ ಡೈಲಾಗು ನೀವ್ ಕೇಳೇ ಕೇಳ್ತೀರಾ… ಒಂತರ ಎಲ್ಲ ಕಡೆ ದಕ್ಷಿಣ ಕನ್ನಡ ಜನದ ಈ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ಸು.

ಮೂಲ

ಇಷ್ಟೇ ಸಾಕಾತಿಲ್ಲ… ಒಮ್ಮೆ ಬನ್ನಿ ಅಲಾ ದಕ್ಷಿಣ ಕನ್ನಡಕ್ಕೆ