ನಮ್ಮ ಭಾವನೆಗಳಿಗೂ ನಮ್ಮ ಶರೀರದಲ್ಲಾಗೋ ರಾಸಾಯನಿಕ ಕ್ರಿಯೆಗಳಿಗೂ ನೇರವಾದ ಸಂಬಂಧವಿದೆ. ಹೊಳ್ಳೆಗಳನ್ನು ಬದಲಾಯಿಸಿ ಉಸಿರಾಡೋದ್ರಿಂದ ನಮ್ಮ ಶರೀರದಲ್ಲಾಗೋ ರಾಸಾಯನಿಕ ಕ್ರಿಯೆಗಳೂ ಬದಲಾಗುತ್ತ. ಇದೇ ನಮ್ಮ ಮೂಡ್ ಬದಲಾಗೋದಕ್ಕೆ ಕಾರಣ.

ಆಯುರ್ವೇದದ ಪ್ರಕಾರ, ಯಾವುದಾದ್ರೂ ರೋಗ ಬರೋ ಲಕ್ಷಣಗಳು ಕಂಡ ತಕ್ಷಣ ಸರಿಯಾದ ರೀತೀಲಿ ಉಸಿರಾಡೋದ್ರಿಂದ ರೋಗಗಳನ್ನ ತಡೀಬೋದು.

ಮೂಗಿನ ಹೊಳ್ಳೆಗಳ ಮೂಲಕ ಉಸಿರಾಡೋ ಪ್ರಕ್ರಿಯೆ ಹಿಂದಿನ ಕಾಲದ “ಸ್ವರ ಯೋಗ” ಆಧರಿಸಿದೆ ಅಂತ ಹೇಳ್ತಾರೆ.

ಈ ಉಸಿರಾಟದ ವಿಜ್ಞಾನ ಕಂಡು ಹಿಡಿದು, ಬೆಳೆಸಿರೋ ವಿಜ್ಞಾನಿಗಳು ಕಂಡು ಹಿಡ್ಕೊಂಡಿರೋದೇನು ಅಂದ್ರೆ, ಈ ರೀತಿ ಪರ್ಯಾಯ ಹೊಳ್ಳೆ ಉಪಯೋಗಿಸಿ ಉಸಿರಾಡೋದ್ರಿಂದ ಆಗೋ ಬದಲಾವಣೆ, ನಮ್ಮ ದೇಹದ ಸ್ಥಿತೀನೂ ಬದಲಾಗತ್ತೆ. ಇದರ ಬಗ್ಗೆ ಇನ್ನೊಂದಿಷ್ಟು ವಿಷಯಗಳನ್ನ ಕೊಟ್ಟಿದೀವಿ ನೋಡಿ.

1. ಎಲ್ಲಾ ಮನುಷ್ಯರೂ ದಿನದ ಒಂದಿಷ್ಟು ಸಮಯ ಮಾತ್ರ ಎರಡೂ ಹೊಳ್ಳೆಗಳಲ್ಲಿ ಉಸಿರಾಡೋದು.

ಎಲ್ಲ ಸಮಯದಲ್ಲೂ ಎರಡೂ ಹೊಳ್ಳೆಗಳಲ್ಲಿ ಒಟ್ಟಿಗೆ ಉಸಿರಾಡಕ್ಕಾಗಲ್ಲ.

2. ಒಂದು ಹೊಳ್ಳೆ ಮೇಲುಗೈ ಸಾಧಿಸಿದಾಗ ಇನ್ನೊಂದು ದುರ್ಬಲವಾಗಿರುತ್ತೆ.

3. ಪರ್ಯಾಯ ಹೊಳ್ಳೇಲಿ ಉಸಿರಾಟ ಹೀಗೆ ಮಾಡಿ.

ನೀವು ಯಾವ ಹೊಳ್ಳೇಲಿ ಉಸಿರಾಡ್ತೀರೋ ಆ ಭಾಗದ ಪಕ್ಕೆಲುಬಿನ ಕೆಳಗೆ ಒಂದು ದಿಂಬನ್ನು ಇಟ್ಟು ಅದರಮೇಲೆ ಮಲಗಿ ಉಸಿರಾಡಿ. ನಂತರ ಮಗ್ಗಲು ಬದಲಿಸಿ ಮತ್ತೊಂದು ಹೊಳ್ಳೆಯಿಂದ ಉಸಿರಾಡಿ. ಹೀಗೆ ಮಾಡಕ್ಕೆ ಶುರುಮಾಡಿದ 3 ರಿಂದ 10 ನಿಮಿಷದ ಒಳಗೆ ನೀವೇ ನಿಮ್ಮ ಶರೀರದಲ್ಲಾಗ್ತಿರೋ ಬದಲಾವಣೇನ ಗಮನಿಸ್ಬೋದು.

4. ಬಲಭಾಗದ ಹೊಳ್ಳೆ ಕೆಲಸ ಮಾಡ್ದಾಗ ಸಾಮಾನ್ಯವಾಗಿ ಅಸಿಡಿಕ್ ರಸಗಳು ಉತ್ಪತ್ತಿಯಾಗುತ್ವೆ.

ಶರೀರದಲ್ಲಿ ಜಾಸ್ತಿ ಶಾಖ ಉತ್ಪತ್ತಿಯಾಗುತ್ತದೆ. ಯೋಗಿಗಳು ಧ್ಯಾನ ಮಾಡುವಾಗ, ನೀರು- ಕಾಫಿ ಕುಡಿಯೋವಾಗ, ಮೂತ್ರ ವಿಸರ್ಜನೆಯ ಸಮಯದಲ್ಲಿ ಈ ಹೊಳ್ಳೇನ ಉಪಯೋಗಿಸಲ್ಲ.

5. ಎಡಹೊಳ್ಳೆಗಳು ಮುಖ್ಯವಾಗಿ ಆಲ್ಕಲೈನ್ ರಸಗಳನ್ನ ಉತ್ಪತ್ತಿ ಮಾಡುತ್ವೆ.

ಇದು ನಮ್ಮ ಶರೀರಾನ ತಂಪಾಗಿಡತ್ತೆ. ಯೋಗಿಗಳು ಇದನ್ನ ಸ್ನಾನ ಮಾಡುವಾಗ, ತಿನ್ನೋವಾಗ ಈ ಹೊಳ್ಳೆನ ಉಪಯೋಗಿಸ್ತಾರೆ.

6. ಸಾಧ್ಯವಾದಷ್ಟರ ಮಟ್ಟಿಗೆ ಬೆಳಗಿನ ಹೊತ್ತು ಎಡ ಹೊಳ್ಳೇನ, ಸಂಜೆ ಬಲ ಹೊಳ್ಳೇನ ಉಪಯೋಗಿಸ್ಬೇಕು.

ಬೆಳಗಿನ ಹೊತ್ತು ಸೂರ್ಯನ ಶಾಖ ಹೆಚ್ಚಾಗಿರೋದ್ರಿಂದ ಇದು ನಮ್ಮ ಶರೀರಾನ ತಂಪಾಗಿಡತ್ತೆ. ಹಾಗೇನೇ, ರಾತ್ರಿ ಹೊತ್ತು ಶೀತ ಜಾಸ್ತಿ ಇರೋದ್ರಿಂದ ನಮ್ಮ ದೇಹ ಬೆಚ್ಚಗಿರೋ ತರ ನೋಡ್ಕೊಳತ್ತೆ.

7. ಎರಡೂ ಹೊಳ್ಳೆಗಳು ಒಟ್ಟಿಗೆ ಕೆಲಸ ಮಾಡ್ದಾಗ ನಮ್ಮ ಶರೀರದಲ್ಲಿ ಸಮತೋಲನ ಇರುತ್ತಂತೆ .

ಈ ತರ ಸಾಮಾನ್ಯವಾಗಿ ಸೂರ್ಯೋದಯ ಹಾಗು ಸೂರ್ಯಸ್ತದ ಸಮಯದಲ್ಲೇ ಆಗುತ್ತೆ. ಇದು ಧ್ಯಾನ, ಯೋಗ ಹಾಗು ದೇವರ ಪೂಜೆ ಮಾಡೋದಕ್ಕೆ ಒಳ್ಳೆ ಸಮಯ .

8. ನಮ್ಮ ಉಸಿರಾಟದ ಚಕ್ರ ಚಂದ್ರ ಕುಗ್ಗೋ-ಹಿಗ್ಗೋ ಪ್ರಕ್ರಿಯೆಗೆ

 ನೇರವಾಗಿ ಸಂಬಂಧ ಇದೆ.

9. ಅಮಾವಾಸ್ಯೆ ಮುಂದಿನ ದಿನದ ಸೂರ್ಯೋದಯದಿಂದಲೇ ನಮ್ಮ ಮೂಗಿನ ಎಡ ಹೊಳ್ಳೆ ಕೆಲಸ ಮಾಡೋದಕ್ಕೆ ಶುರು ಮಾಡತ್ತೆ.

ಇದನ್ನ ನೀವು ಅಮಾವಾಸ್ಯೆ ಆದ ಎರಡು ಹಾಗು ಮೂರನೇ ದಿನಗಳಲ್ಲೂ ಗಮನಿಸ್ಬೋದು.

10. ಮೂರು ದಿನ ಸತತವಾಗಿ ಈ ರೀತಿ ಕೆಲಸ ಮಾಡಿದ ನಂತರ, ಉಸಿರಾಟದ ಕ್ರಿಯೆ ಮತ್ತೊಂದು ಹೊಳ್ಳೆಗೆ ಬದಲಾಗುತ್ತೆ.

ಇದು ಚಂದ್ರನ ಕಾಲ ಚಕ್ರಕ್ಕೆ ತಕ್ಕಂತೆ ( 28 ½  ದಿನಗಳು ) ಬದಲಾಗುತ್ತೆ.

11. ನಮ್ಮ ನೈಸರ್ಗಿಕ ಚಕ್ರದಲ್ಲಿ ಅಡಚಣೆಯಾದಾಗ ಮೂಗಿನ ಹೊಳ್ಳೆಗಳು ಸರಿಯಾಗಿ ತೆರೆದ್ಕೊಂಡಿರಲ್ಲ.

ಇದ್ರಿಂದ ನಮ್ಮ ಶರೀರದಲ್ಲಾಗೋ ರಾಸಾಯನಿಕ ಕ್ರಿಯೆಗೆ ತೊಂದರೆಯಾಗಿ, ದೈಹಿಕ ಹಾಗು ಮಾನಸಿಕ ತೊಂದರೆಗಳಾಗೋ ಸಾಧ್ಯತೆ ಹೆಚ್ಚು. ಈ ರೀತಿ ಏರುಪೇರದಾಗ ತಕ್ಷಣ ಎಚ್ಚೆತ್ಕೊಂಡ್ರೆ, ಇದರಿಂದಾಗೋ ದುಷ್ಪರಿಣಾಮಗಳನ್ನ ತಪ್ಪಿಸ್ಬೋದು. ಇದಕ್ಕೊಳ್ಳೆ ಉಪಾಯ ಅಂದ್ರೆ, ಮೇಲೆ ಹೇಳಿರೋ ತರ ಉಸಿರಾಡೋದು. ಯಾವುದೇ ಕಾರಣಕ್ಕೂ ಬಾಯಿಂದ ಉಸಿರಾಡ್ಬೇಡಿ.

12. ಯಾವುದೇ ಶಾರೀರಿಕ ಅಥವಾ ಮಾನಸಿಕ ತೊಂದರೆಗಳಾಗೋ ಲಕ್ಷಣಗಳು ಕಂಡ ತಕ್ಷಣ ಈ ಉಸಿರಾಟದ ಬದಲಾವಣೆ ಪ್ರಕ್ರಿಯೇನ ಪ್ರಾರಂಭಿಸೋದ್ರಿಂದ ಬೇಗ ಚೇತರಿಕೆ ಕಾಣತ್ತೆ.

ಕೆಳಗಿನ ಪಟ್ಟಿಯಲ್ಲಿರುವ ಕೆಲಸಗಳನ್ನು ಮಾಡುವಾಗ ಎಡ ಹೊಳ್ಳೆಯಿಂದ ಉಸಿರಾಡಿದ್ರೆ ಒಳ್ಳೇದು…

ಮನೆ ಕಟ್ಟೋದು, ಹೊಸ ವ್ಯಾಪಾರ ಶುರು ಮಾಡಿದಾಗ, ದಾನ ಧರ್ಮ ಮಾಡೋವಾಗ, ಹಿರಿಯರ ಜೊತೆ ಮಾತೋಡವಾಗ, ನೀರು ಅಥವಾ ಯಾವುದೇ ದ್ರವ ಪದಾರ್ಥಗಳನ್ನ ಕುಡಿಯೋವಾಗ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಜೊತೆ ಮಾತಾಡೋವಾಗ ತೋಟದಲ್ಲಿ ಕೆಲಸ ಮಾಡೋವಾಗ, ಮದುವೆ ಆಗೋವಾಗ, ಹೊಸ ಮನೆಗೆ ಹೋಗೋವಾಗ, ಸಂಗೀತ ಹೇಳೋವಾಗ, ಧ್ಯಾನ ಮಾಡೋವಾಗ, ಹಣ ಕೂಡಿಡೋವಾಗ, ಪವಿತ್ರ ಕಾರ್ಯಗಳನ್ನು / ಪೂಜೆ ಪುನಸ್ಕಾರಗಳನ್ನು ಮಾಡೋವಾಗ, ಪದ್ಯಗಳನ್ನು ಓದಿ, ಬರೆದು ಮಾಡೋವಾಗ, ನೋವು ಗುಣಪಡಿಸೋವಾಗ, ಓದಲು ಕಲಿಯುತ್ತಿರುವಾಗ, ದುಃಖ, ಪ್ರಜ್ಞಾಹೀನಸ್ಥಿತಿಯನ್ನು ಗುಣಪಡಿಸುವಾಗ,ಸಣ್ಣ ಪುಟ್ಟ ಪ್ರಯಾಣ ಮಾಡುವಾಗ, ಯೋಗಾಭ್ಯಾಸ ಮಾಡುವಾಗ, ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರಾರಂಭಿಸುವಾಗ.

ಈ ಕೆಲಸಗಳನ್ನು ಮಾಡೋವಾಗ ಬಲ ಹೊಳ್ಳೆಯಿಂದ ಉಸಿರಾಡೋದ್ರಿಂದ ಹೆಚ್ಚಿನ ಲಾಭವಾಗುತ್ತೆ

ಸ್ನಾನ ಮಾಡುವಾಗ ದೋಣಿಯಲ್ಲಿ ಪ್ರಯಾಣ / ವಿಹಾರ ಮಾಡುವಾಗ, ಪುಸ್ತಕಗಳನ್ನು ಓದುವಾಗ / ಬರೆಯುವಾಗ, ನ್ಯಾಯಾಲಕ್ಕೆ ಸಂಭಂದಿಸಿದ ಕೆಲಸಗಳನ್ನು ಮಾಡುವಾಗ, ಶುದ್ಧಿಮಾಡುವ ಕೆಲಸ ಮಾಡೋವಾಗ, ಚರ್ಚೆ ಮಾಡುವಾಗ, ತಿನ್ನೋವಾಗ, ಬೇರೆಯವರನ್ನು ಪ್ರೇರೇಪಿಸುವಾಗ, ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುವಾಗ, ನಿಮ್ಮ ಭಯ, ಆತಂಕಗಳನ್ನು ದೂರ ಓಡಿಸೋ ಪ್ರಯತ್ನ ಪಡುತ್ತಿರುವಾಗ, ಸಂಗೀತ ಸಂಯೋಜನೆ, ಮಾಡುವುದನ್ನು ಕಲಿಯುತ್ತಿರುವಾಗ, ಮಲಗಿರುವಾಗ, ಧಾರ್ಮಿಕ ಪುಸ್ತಕಗಳನ್ನು ಓದುವಾಗ, ದೂರದ ಪ್ರಯಾಣಗಳನ್ನು ಕೈಗೊಂಡಾಗ, ಹಠ ಯೋಗಗಳನ್ನು ಮಾಡುವಾಗ.

ಪ್ರತಿಯೊಬ್ಬರ ಜೀವನ ಆರಂಭ ಮತ್ತು ಅಂತ್ಯ – ಎರಡೂ ಉಸಿರಾಟದಿಂದಾನೆ ಆಗೋದು. ಸಾಧ್ಯವಾದಷ್ಟೂ ಸರಿಯಾದ ರೀತೀಲಿ ಉಸಿರಾಡಿ ಅದ್ರಿಂದಾಗೋ ಲಾಭ ಪಡ್ಕೊಳಿ.