https://amp.businessinsider.com/images/5ab16de1e72a031a008b45ff-750-563.jpg

ದುಡ್ಡು ಯಾರಿಗೆ ಬೇಡ ಹೇಳಿ? ದುಡ್ಡಿದ್ದೋನೆ ದೊಡ್ಡಪ್ಪ ಅನ್ನೋ ಮಾತು ಕೇಳೇ ಇರ್ತೀವಿ. ಆದರೆ ದುಡ್ಡು ಮಾಡಿ, ಶ್ರೀಮಂತರಾಗೋ ಆಸೆ ಹೊಂದಿರೋರಿಗೆ ನಾವೀಗ ಹೇಳ್ತಿರೋ ಎಷ್ಟೋ ವಿಚಾರ ಗೊತ್ತೇ ಇರಲ್ಲ. ಬಡವ- ಶ್ರೀಮಂತ ಅನ್ನೋದು ಅವರವರು ಪಡಕೊಂಡು ಬಂದಂಗೆ ಅಂತ ಕೆಲವರು ಹೇಳ್ತಾರೆ. ಆದರೆ, ನಾವು ದುಡ್ಡು ಪಡೆಯೋಕೆ ಪುಣ್ಯ ಮಾತ್ರ ಅಲ್ರೀ..ಒಂದಷ್ಟು ಒಳ್ಳೇ ಅಭ್ಯಾಸಗಳು ಕೂಡ ಇರಬೇಕು. ಹಾಗಂತಿರೋದು ಒಂದು ಸಂಶೋಧನೆ. ಅಲ್ಲಿ ಹೇಳಿರೋ ಸತ್ಯಗಳನ್ನೇ ನಿಮ್ಮ ಜೊತೆಗೆ ನಾವು ಹಂಚ್ಕೊತಿರೋದು.

1. ಪ್ರತಿದಿನ ವ್ಯಾಯಾಮ ಮಾಡಿ.

cdn-images-1.medium.com
ಶ್ರೀಮಂತರು ಬಡವರಿಗೆ ಹೋಲಿಸಿಕೊಂಡರೆ, ಪ್ರತಿದಿನ ತಪ್ಪದೇ ಅರ್ಧ ಗಂಟೆ ವ್ಯಾಯಾಮ ಮಾಡ್ತಾರಂತೆ. ದುಡ್ಡಿದೆ. ಹೊತ್ತು ಕಳೆಯೋಲ್ಲ ಅಂತಲ್ಲ. ಅದಕ್ಕಂತಾನೇ ಸಮಯ ಎತ್ತಿಟ್ಟು, ವ್ಯಾಯಾಮ ಮಾಡೋದ್ರಿಂದ ಚುರುಕಾಗಿ ಒಳ್ಳೇ ನಿರ್ಧಾರ ತೊಗೊಳ್ಳೋಕೆ ಸಾಧ್ಯ ಆಗತ್ತಂತೆ.

2. ಸಾಧನೆ ಮಾಡಿರೋ ಒಳ್ಳೆ ವ್ಯಕ್ತಿಗಳ ಜೊತೆ ಸಂಪರ್ಕ ಇಟ್ಕೊಳಿ.

encrypted-tbn0.gstatic.com
ಮೂರು ಹೊತ್ತು ಗೋಳಾಡೋರ ಜೊತೆ ಕಾಲ ಕಳೆಯೋದು ಬಿಡಿ. ಸಾಧನೆ ಮಾಡಿ, ಖುಷಿಯಾಗಿರೋರ ಜೊತೆ ಸಂಬಂಧ ಹೊಂದೋದ್ರಿಂದ ನಿಮಗೂ ಅವಕಾಶಗಳು ಹೆಚ್ಚಾಗತ್ತೆ. ಅವರಿಂದ ನೀವು ಶ್ರೀಮಂತರಾಗೋ ಮಾರ್ಗ ಕಾಣಬೋದು.

3. ಪ್ರತಿದಿನ, ಪ್ರತಿ ವರ್ಷದ ಗುರಿ ನಿಗದಿ ಮಾಡ್ಕೊಂಡು, ಅದು ಸಾಧಿಸಿದ ಹಾಗೆ ಕನಸು ಕಾಣ್ಕೊಳಿ.

knowledge.wharton.upenn.edu
ಕನಸು ಕಾಣೋದು ಅಂದ್ರೆ ಮುಸುಕು ಹಾಕಿ ಮಲಗೋದಲ್ಲ. ಆ ಕನಸು ನನಸಾದ್ರೆ ಹೇಗೆ ಇರಬೋದು ಅನ್ನೋ ಕಲ್ಪನೆ ನಿಮ್ಮನ್ನ ಗುರಿ ಸಾಧಿಸೋಕೆ ಪ್ರೇರೇಪಿಸತ್ತೆ. ಕಂಡ ಕನಸು ನನಸಾಗೋಕೆ ಕಷ್ಟಪಟ್ಟು ಕೆಲಸ ಮಾಡೋ ಶಕ್ತಿ ಬೇಕು. ಒಳ್ಳೇ ಆಲೋಚನೆಯಿಂದ ಆ ಶಕ್ತಿ ಸಿಗತ್ತೆ.

4. ನಿಮ್ಮ ಗೆಲುವಿಗೆ ಪ್ರೇರೇಪಿಸೋ 60 ಪುಸ್ತಕಗಳನ್ನ ಓದಿ.

myclassboard.com
ಓದಿ ಉದ್ಧಾರ ಆದೋರು ಯಾರಿದಾರೆ ಅಂತಾನೋ, ಓದೋಕೆಲ್ಲಿದೆ ಪುರುಸೊತ್ತು ಅಂತಾನೋ ನೀವು ಉಡಾಫೆ ಮಾಡಿದ್ರೆ ಉಪಯೋಗ ಇಲ್ಲ. ಓದಿನಿಂದ ನಿಮ್ಮ ಸಾಮಾನ್ಯ ಜ್ಞಾನ, ವ್ಯವಹಾರ ಕೌಶಲ್ಯ ಜಾಸ್ತಿ ಆಗತ್ತೆ. ದುಡ್ಡು ಮಾಡೋಕೆ ಇದು ಮುಖ್ಯ. ಅದಕ್ಕೇ ಓದಿದ್ರೆ ಶ್ರೀಮಂತರಾಗೋ ಸಾಧ್ಯತೆ ಜಾಸ್ತಿ.

5. ನೀವೇನಾಗಬೇಕು ಅಂತಿದೀರೋ, ಆ ಮಾತನ್ನ ಪದೇ ಪದೇ ನಿಮ್ಮ ಮನಸ್ಸಿನಲ್ಲಿ ಜಪ ಮಾಡಿ.

i2.wp.com
ನಾನು ಪ್ರತಿವಾರ 10 ಗಂಟೆ ಹೆಚ್ಚು ಕೆಲಸ ಮಾಡಿ, ವರ್ಷದ ಕಡೆಗೆ 3 ಲಕ್ಷ ಹೆಚ್ಚು ಸಂಪಾದಿಸ್ತೀನಿ. ನಾನು ಇನ್ನು 5 ವರ್ಷದೊಳಗೆ ಮನೆ ಸಾಲ ತೀರೋ ಹಾಗೆ ಖರ್ಚು ಕಡಿಮೆ ಮಾಡಿ, ದುಡ್ಡು ಉಳಿಸಿ ತೀರಿಸ್ತೀನಿ. ಹೀಗೆ ಸ್ಪಷ್ಟವಾದ ಗುರಿಯನ್ನ ಇಟ್ಕೊಂಡು ಅದನ್ನ ಪದೇಪದೇ ನೆನಸೋದ್ರಿಂದ ನಿಮ್ಮ ನಿರ್ಧಾರ ಗಟ್ಟಿ ಆಗತ್ತೆ.

6. ಸಮಾಜಕ್ಕೆ ಸೇವೆ ಮಾಡಿ.

entertales.com
ಅಯ್ಯೋ ಊರಿಗೆ ಉಪಕಾರ ಮಾಡ್ಕೊಂಡು ಕೂತ್ರೆ ನನ್ನ ಸಂಸಾರ ಯಾರು ನೋಡ್ತಾರೆ ಅನ್ನಬೇಡಿ. ಹತ್ತು ಜನಕ್ಕೆ ಒಳ್ಳೇದು ಮಾಡೋದ್ರಿಂದ, ನಿಮಗೂ ಒಳ್ಳೇ ಜನರ ಸಹವಾಸ ಸಿಗುತ್ತೆ. ಅವರಿಂದ ನೀವು ಕಲಿಯೋ ಪಾಠಗಳು ದಂಡ ಅಲ್ಲ. ನಿಮ್ಮ ಉನ್ನತಿಗೆ ಬೇಕಾಗತ್ತೆ.

7. ನಿಮಗೊಬ್ಬ ಒಳ್ಳೇ ಮಾರ್ಗದರ್ಶಕರನ್ನ ಹುಡ್ಕೊಳಿ.

yourfuturein.it
ಗುರು ಹಿಂದೆ, ಗುರಿ ಮುಂದೆ ಇದ್ರೆ ಏನು ಬೇಕಾರು ಸಾಧಿಸಬೋದು ಅನ್ನೋ ಮಾತು ನೆನಪಿದ್ಯಾ? ನಿಮ್ಮ ಶಕ್ತಿ, ಯುಕ್ತಿ, ಕಷ್ಟ ಸುಖ ಗೊತ್ತಿರೋ ಒಬ್ಬ ಯಶಸ್ವಿ ವ್ಯಕ್ತಿಯನ್ನ ಭೇಟಿ ಮಾಡಿ, ಏನೆಲ್ಲಾ ಮಾಡಬೋದು ಅಂತ ಚರ್ಚೆ ಮಾಡಿ. ಅಂತೋರ ಮಾರ್ಗದರ್ಶನ ನಿಮಗೆ ಬೇಕಾಗತ್ತೆ. ಅವರ ಮಾತಿನಂತೆ ನಡೆದು ಗೆಲುವು ಸಾಧಿಸಿ ಅಷ್ಟೇ..

ಇಷ್ಟು ಮಾಡಿದರೆ ನೀವು ಶ್ರೀಮಂತರಾಗೋಕೆ ಹೆಜ್ಜೆ ಇಟ್ರಿ ಅಂತರ್ಥ.