http://www.healthgoesup.com/wp-content/uploads/2011/04/eye-stroke-1024x420.jpg

ಹಾರ್ಟ್ ಅಟ್ಯಾಕ್ ತರಾನೇ ಸ್ಟ್ರೋಕ್ ಅಥವಾ ಲಕ್ವಾ ಹೊಡೆಯೋದು ಭಾಳ ಭಯ ತರ್ಸೋಂಥ ಖಾಯಿಲೆ. ಎಷ್ಟೋ ಜನ ಲಕ್ವಾ ಹೊಡೆದ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಬಳಲ್ತಾರೆ. ಕೆಲವೊಮ್ಮೆ ಸತ್ತೇ ಹೋಗಬಹುದು ಅಥವಾ ಪೆರಾಲಿಸಿಸ್ ಆಗಿ ನರಳಾಡಬೇಕಾಗುತ್ತೆ.

ಕಾಲದಿಂದ ಕಾಲಕ್ಕೆ ನಮ್ ದೇಹ ಕೊಡೊ ಸಿಗ್ನಲ್ಗಳನ್ನ ಗಮನಿಸ್ಕೊಳ್ತಾ ಇರ್ಬೇಕು. ಇಲ್ಲಿ ಕೆಳಗೆ ಸ್ಟ್ರೋಕ್ ಆಗೋ ಮುಂಚೆ ಈ 6 ಸಿಗ್ನಲ್ ನಮ್ಗೆ ಸಿಗ್ಬೋದು. ಇವನ್ನ ಕಡೆಗಣಿಸದೇ ಆದಷ್ಟು ಬೇಗ ಡಾಕ್ಟರ್ ಹತ್ರ ಹೋದ್ರೆ ಸ್ಟ್ರೋಕಿಂದ ಆಗೋ ತೊಂದರೆ ಕಡಿಮೆ ಮಾಡ್ಕೊಬೋದು.

1. ಅತಿ ಹೆಚ್ಚು ಸುಸ್ತಾಗೋದು

ದೇಹದಲ್ಲಿ ನೀರು, ಹಾರ್ಮೋನ್ ಹಾಗೆ ರಾಸಾಯನಿಕ ಪದಾರ್ಥಗಳ ಸಮತೋಲನ ತುಂಬಾ ಮುಖ್ಯ. ಈ ಸಮತೋಲನದಲ್ಲಿ ಏನಾದರೂ ವ್ಯತ್ಯಾಸ ಆದರೇ ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುತ್ತೆ. ಇನ್ನು ಈ ಹಾರ್ಮೋನ್ ಗಳ ಸಮತೋಲನ ಮಾಡೋದು ಮೆದುಳೇ. ಸ್ಟ್ರೋಕ್ ಆದಾಗ ಮೆದುಳಿನ ಕೆಲವು ಭಾಗಕ್ಕೆ ರಕ್ತ ಸಂಚಾರ ಆಗದಿದ್ದಾಗ ಹಾರ್ಮೋನ್ ಸರಿಯಾಗಿ ಉತ್ಪತ್ತಿ ಆಗಲ್ಲ. ಹೀಗಾದಾಗ ದೇಹಕ್ಕೆ ಅತಿ ಹೆಚ್ಚು ಸುಸ್ತಾಗುತ್ತೆ. ಯಾವುದೇ ಮುನ್ಸೂಚನೆ ಕೊಡದೇ ಹೀಗೆ ಆಗುತ್ತೆ. ಯಾವುದೇ ಕಾರಣ ಇಲ್ಲದೇ ಸುಸ್ತಾಗ್ತಿದೆ ಅಂದರೆ ನೀವು ಎಚ್ಚರ ತೊಗೊಳ್ಳೇಬೇಕು.

ಮೂಲ

2. ಒಂದೇ ಒಂದು ಕಣ್ಣು ಮಂಜಾಗೋದು

ಮೆದುಳಲ್ಲಿ ಎರಡು ಭಾಗಗಳಿವೆ, ಬಲಗಡೆ ಮೆದುಳು ದೇಹದ ಎಡಭಾಗದ ನಿಯಂತ್ರಣ ಮಾಡಿದರೆ, ಎಡಗಡೆ ಮೆದುಳು ದೇಹದ ಬಲಭಾಗವನ್ನ ನಿಯಂತ್ರಿಸುತ್ತೆ. ಎರಡೂ ಭಾಗ ಸರಿಯಾಗಿ ಕೆಲಸ ಮಾಡಿದ್ರೆ ಕಣ್ಣು ಸರಿಯಾಗಿ ಕಾಣುತ್ತೆ. ಒಂದು ಭಾಗದಲ್ಲಿ ಸ್ಟ್ರೋಕ್ ಆದಾಗ, ಒಂದು ಕಣ್ಣಿಗೆ ತೊಂದರೆ ಆಗುತ್ತೆ. ಒಂದು ಕಣ್ಣಲ್ಲಿ ತೊಂದರೆ ಆದಾಗ ದೃಷ್ಟಿಯಲ್ಲಿ ವ್ಯತ್ಯಾಸ ಆಗುತ್ತೆ. ಇನ್ನು ಹೆಚ್ಚು ಟಿ.ವಿ ನೋಡೋದ್ರಿಂದ, ಕಂಪ್ಯೂಟರ್ ಮುಂದೆ ಕೆಲಸ ಮಾಡೋದ್ರಿಂದ ಹೀಗಾಯ್ತು ಅಂತ ತಳ್ಳೀಹಾಕ್ತೀವಿ, ಆದ್ರಿಂದ ಒಂದು ಕಣ್ಣಲ್ಲಿ ಮಾತ್ರ ತೊಂದರೆ ಆದರೆ ನೀವು ಆದಷ್ಟು ಬೇಗ ಡಾಕ್ಟರ್ ಭೇಟಿ ಮಾಡಬೇಕು.

ಮೂಲ

3. ಸದಾ ಒಂದು ಕೈ ಜೋಂ ಹಿಡಿಯೋದು ಅಥವಾ ನಿಶ್ಯಕ್ತಿ ಕಾಣಿಸಿಕೊಳ್ಳೋದು

ಯಾವ ಭಾಗದ ಮೆದುಳಲ್ಲಿ ಸಮಸ್ಯೆ ಆಗಿದೆಯೋ ಅದರ ವಿರುದ್ಧ ಭಾಗದ ಕೈ ಮರಗಟ್ಟುತ್ತೆ ಅಥವಾ ನಿಶ್ಯಕ್ತಿ ಕಾಣಿಸಿಕೊಳ್ಳುತ್ತೆ. ಜೋಂ ಹಿಡಿದು ಅದು ಸ್ವಲ್ಪ ಹೊತ್ತಿನ ನಂತರವೂ ಕಡಿಮೆ ಆಗಿಲ್ಲ ಅಂದರೆ ಅದು ಸ್ಟ್ರೋಕ್ ನ ಲಕ್ಷಣ. ಮಲಗೆದ್ದ ತಕ್ಷಣ ಕೈಯಲ್ಲಿ ಜೋಂ ಇದ್ದು ಸ್ವಲ್ಪ ಸಮಯದ ನಂತರ ಅದು ಕಡಿಮೆ ಆದರೆ ಯೋಚನೆ ಇಲ್ಲ… ಆಗಲಿಲ್ಲವೋ ಎಚ್ಚರ.

ಮೂಲ

4. ಸುಮಾರು ಸಲ ಮಾತು ತೊದಲೊದು ಮತ್ತೆ ತಲೆ ಸುತ್ತೋದು

ಸ್ಟ್ರೋಕ್ ಇಂದ ಮಾತಿನಲ್ಲಿ ಬದವಾವಣೆ ಮತ್ತೆ ದೇಹದ ಸಮತೋಲನೆಯಲ್ಲಿ ವ್ಯತ್ಯಾಸ ಕಾಣುತ್ತೆ. ಕುಡಿಯೋ ಅಭ್ಯಾಸ ಇರೋರಲ್ಲಿ ಇದು ಮತ್ತಿಂದ ಆಗಿರ ಬಹುದು ಅನ್ನಿಸುತ್ತೆ, ಆದ್ರೆ ಸ್ವಲ್ಪ ಸಮಯದ ನಂತರ ಸರಿ ಹೋಗಲಿಲ್ಲ ಅಂದರೆ ಹುಷಾರು. ನಿಮ್ಮ ಬಾಯಿ ಒಂದು ಕಡೆ ಜಾರೋ ಹಾಗೆ ಆದರೆ ಅಥವಾ ನಿಮ್ಮ ಮಾತಲ್ಲಿ ವ್ಯತ್ಯಾಸ ಆದರೆ ಬಾಯಿಯ ನರಕ್ಕೆ ರಕ್ತ ಸಂಚಾರ ಕಡಿಮೆ ಆಗಿದೆ ಅಂತರ್ಥ. ನಮ್ಮ ದೇಹದ ಸಮತೋಲನೆ ಕಾಪಾಡದು ಒಳ ಕಿವಿ. ಒಳ ಕಿವಿಗೆ ಸಂಬಂಧಿಸಿದ ನರಕ್ಕೆ ರಕ್ತ ಸಂಚಾರ ಕಡಿಮೆ ಆದರೆ ತಲೆ ಸುತ್ತು ಬರುತ್ತೆ. ಯಾವುದೇ ಲಕ್ಷಣ ಕಂಡರೂ ಒಮ್ಮೆ ವೈದ್ಯರನ್ನ ಭೇಟಿ ಮಾಡಿ.

ಮೂಲ

5. ಯೋಚಿಸೋಕೂ ಕಷ್ಟ ಆಗೋದು

ಸ್ಟ್ರೋಕ್ ಇನ್ನೇನು ಆಗತ್ತೆ ಅಂದಾಗ ಮೆದುಳಿಗೆ ಆಮ್ಲಜನಕ ಹೋಗ್ತಿಲ್ಲ ಅಂತರ್ಥ. ಯಾವುದೇ ಒಂದು ವಿಷಯದ ಬಗ್ಗೆ ಗಮನ ಹರಿಸೋದೂ ಕಷ್ಟ ಆದ್ರೆ, ಅಂದುಕೊಂಡಿದ್ದು ವ್ಯಕ್ತಪಡಿಸೋಕೆ ಕಷ್ಟ ಆದರೆ, ಮಾತಾಡೋಕೆ ಪದಗಳನ್ನ ಹುಡುಕೋ ಹಾಗಾದ್ರೆ, ಯಾವುದಾದರೂ ವಸ್ತುವನ್ನ ಅಥವಾ ವ್ಯಕ್ತಿನ ಅರ್ಥ ಮಾಡಿಕೊಳ್ಳೋಕೆ ಕಷ್ಟ ಆಗ್ತಾ ಇದ್ದರೆ ಸ್ಟ್ರೋಕ್ ಆಗಿರಬಹುದು ಅಂತರ್ಥ.

ಮೂಲ

6. ಅತಿ ಹೆಚ್ಚು ತಲೆ ನೋವು ಅಥವಾ ಮೈಗ್ರೇನ್ ಬರೋದು

ಕೆಲವೊಮ್ಮೆ ಸ್ಟ್ರೋಕ್ ಆದಾಗ ಏನೂ ಗೊತ್ತಾಗದೇ ಇಲ್ಲ. ಹಲವಾರು ಜನ ಸ್ಟ್ರೋಕ್ ಆದಾಗ ಯಾವುದೇ ನೋವಿಲ್ಲ ಅನ್ನೋದೂ ಇದೆ. ಮೆದುಳಲ್ಲಿ ರಕ್ತ ಸೋರಿರೋದ್ರಿಂದ ಮೈಗ್ರೇನ್ ಆಗಬಹುದು. ಮುಂಚೆ ಎಂದೂ ಕಾಣಿಸದ ನೋವು ಈಗ ಕಾಣಿಸುತ್ತಿದೆ ಅಂತಾದರೆ ನೀವು ಎಚ್ಚರವಹಿಸೋದು ಉತ್ತಮ.

ಮೂಲ

ಕೆಲಸದ ಭರದಲ್ಲಿ ನಮ್ ಮೈ ಕೊಡೊ ಚಿಕ್ಕ ಚಿಕ್ಕ ಸಿಗ್ನಲ್ಗಳನ್ನ ಆದಷ್ಟು ಜಾಗ್ರತೆಯಿಂದ ಆಲಿಸಿ. ಪರಿಸ್ಥಿತಿ ಕೈ ಮೀರೋ ತನಕ ಹೋಗಕ್ಕೆ ಬಿಡ್ಬೇಡಿ.